ಸಿದ್ದಾರ್ಥನಗರದ ಫುಡ್ ಸ್ರ್ಟೀಟ್ ಬಳಿಕನ್ನಡ ರಾಜ್ಯೋತ್ಸವ ಆಚರಣೆ
ಮೈಸೂರು: ಮೈಸೂರಿನ ಸಿದ್ದಾರ್ಥ ನಗರದ ಲಲಿತಮಹಲ್ ರಸ್ತೆ ಫುಡ್ ಸ್ರ್ಟೀಟ್ ವ್ಯಾಪಾರಿಗಳ ಸಂಘ,ವಿಷ್ಣುಸೇನಾ ಸಮಾನ ಮನಸ್ಕರ ಗುಂಪು ಮತ್ತು
ಕರ್ನಾಟಕ ಯುವ ರಕ್ಷಣಾ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸಲಾಯಿತು.


ಅಂಗಡಿ ಮುಂದೆ ಧ್ವಜ ಸ್ತಂಬ ನೆಟ್ಟು ತಾಯಿ ಭುವನೇಶ್ವರಿ ಭಾವಚಿತ್ರವನ್ನು ಇರಿಸಿ ಪೂಜೆ ನೆರವೇರಿಸಲಾಯಿತು.

ಧ್ವಜ ಸ್ತಂಭದ ಸುತ್ತ ಸ್ವಚ್ಛಪಡಿಸಿ ಬಣ್ಣ ಬಣ್ಣದ ರಂಗೋಲಿ ಹಾಕಿ ಅಲಂಕರಿಸಲಾಗಿತ್ತು.

ಈ ವೇಳೆ ನೂರಾರು ಕನ್ನಡಾಭಿಮಾನಿಗಳು ಆಗಮಿಸಿದ್ದರು.ನಂತರ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾಬಾ ದೇವರಾಜ್ ಅವರು ಕನ್ನಡ ಧ್ವಜಾರೋಹಣ ನೆರವೇರಿಸಿದರು.

ಇದೇ ಸಂದರ್ಭದಲ್ಲಿ ನಟ ಪುನೀತ್ ರಾಜಕುಮಾರ್ ಅವರ ಭಾವಚಿತ್ರಕ್ಕೂ ಅಭಿಮಾನಿಗಳು ನಮನ ಸಲ್ಲಿಸಿದರು.

ಇದೇ ವೇಳೆ ಡಾಬಾ ದೇವರಾಜ್,ರವಿ,ವಿಜಯ್ ಕುಮಾರ್ ಮತ್ತು ದೀಪಿಕಾ ಮತ್ತಿತರರನ್ನು ಸನ್ಮಾನಿಸಿ ಗೌರವಿಸಲಾಯಿತು.
