ಮದುವೆ ಆಗುವಂತೆ ಯುವತಿ ಮನೆಗೆ ನುಗ್ಗಿ ಪ್ರಿಯಕರ ದಾಂಧಲೆ

ಮೈಸೂರು: ಮದುವೆ ಆಗಲು ನಿರಾಕರಿಸಿದ ಯುವತಿಯ ಬೆತ್ತಲೆ ವಿಡಿಯೋ ಇಟ್ಟುಕೊಂಡು ಪ್ರಿಯಕರ ಬ್ಲಾಕ್ ಮೇಲ್ ಮಾಡಿ ಮನೆಗೆ ನುಗ್ಗಿ ಪೀಠೋಪಕರಣಗಳನ್ನ ಧ್ವಂಸಗೊಳಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಈ ಘಟನೆ ಎನ್.ಆರ್.ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ನೊಂದ ಯುವತಿ ಪ್ರಿಯಕರ ತೇಜಸ್ ಎಂಬಾತನ ವಿರುದ್ದ ದೂರು ನೀಡಿದ್ದು,ಪ್ರಕರಣ ದಾಖಲಾಗಿದೆ.

ನೊಂದ ಯುವತಿ ಹಾಗೂ ತೇಜಸ್ 10 ನೇ ತರಗತಿಯಿಂದ ಒಟ್ಟಿಗೆ ಓದುತ್ತಿದ್ದರು, ಕಾಲೇಜಿಗೆ ಬಂದಾಗ ಇಬ್ಬರ ನಡುವೆ ಪ್ರೀತಿ ಶುರುವಾಗಿದ್ದು,ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.

ತೇಜಸ್ ಕ್ಯಾರೆಕ್ಟರ್ ಸರಿ ಇಲ್ಲ ಎಂಬ ಮಾಹಿತಿ ಮನೆಯವರಿಗೆ ಗೊತ್ತಾಗಿದೆ.ಆದರೂ ತೇಜಸನ್ನೇ ಮದುವೆ ಆಗುವುದಾಗಿ ಪಟ್ಟು ಹಿಡಿದ ಯುವತಿ ಮನೆಯವರನ್ನ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾಳೆ.

ಈ ವೇಳೆ ಎರಡೂ ಮನೆಯವರು ಕುಳಿತು ಮಾತುಕತೆ ನಡೆಸಿ ನಿಶ್ಚಯ ಮಾಡಿಕೊಂಡಿದ್ದಾರೆ.

ನಂತರ ಈ ಪ್ರೇಮಿಗಳು ಸಿನಿಮಾ,ಪಾರ್ಕ್,ಹೋಟೆಲ್ ಗಳನ್ನ ಸುತ್ತಿದ್ದಾರೆ.ಈ ಮಧ್ಯೆ ವಿಧ್ಯಾಭ್ಯಾಸ ಮುಗಿಸಿದ ಯುವತಿ ಖಾಸಗಿ ಕಂಪನಿಯಲ್ಲಿ ಕೆಲಸ ಪಡೆದಿದ್ದಾಳೆ.

ಕಂಪನಿಗೆ ಬಂದ ತೇಜಸ್ ನನ್ನ ಹೆಂಡತಿ ಎಂದು ಹೇಳಿಕೊಂಡು ಯುವತಿಯ ಕೊಲೀಗ್ ಗಳನ್ನ ಪರಿಚಯಿಸಿಕೊಂಡಿದ್ದಾನೆ.

ಕೆಲಸದ ಒತ್ತಡದಲ್ಲಿ ತೇಜಸ್ ಜೊತೆ ಮಾತನಾಡುವುದು ಯುವತಿಗೆ ಸಾಧ್ಯವಾಗಿಲ್ಲ.ಹೀಗಾಗಿ ತೇಜಸ್ ಅನುಮಾನಗೊಂಡು ಬೇರೆ ಯಾರನ್ನಾದ್ರೂ ಮದುವೆ ಆಗ್ತೀಯ ಅಂತ ಪ್ರಶ್ನಿಸುತ್ತಾ ಮಾನಸಿಕವಾಗಿ ಹಿಂಸೆ ನೀಡಿದ್ದಾನೆ.

ಇದರಿಂದ ಬೇಸತ್ತ ಯುವತಿ ತೇಜಸ್ ನಿಂದ ದೂರ ಆಗಲು ಯತ್ನಿಸಿದ್ದಾಳೆ.ನನ್ನನ್ನೇ ಮದುವೆ ಆಗುವಂತೆ ಪಟ್ಟು ಹಿಡಿದು ಕಂಪನಿ ಬಳಿ ಬಂದು ಕಿರುಕುಳ ನೀಡಿದ್ದಾನೆ.ಮದುವೆ ಆಗದಿದ್ದರೆ ಮನೆಯವರನ್ನ ಕೊಲ್ಲುವುದಾಗಿ ಬೆದರಿಕೆ ಕೂಡಾ ಹಾಕಿದ್ದಾನೆ.

ಹೆದರಿದ ಯುವತಿ ಹೇಳಿದಂತೆ ಕೇಳಿದ್ದಾಳೆ.ವಾಟ್ಸಾಪ್ ನಲ್ಲಿ ವಿಡಿಯೋ ಕಾಲ್ ಮಾಡಿ ಬೆತ್ತಲೆ ದೇಹ ತೋರಿಸುವಂತೆ ಬೆದರಿಕೆ ಹಾಕಿದ್ದಾನೆ.ಮನೆಯವರಿಗೆ ತೊಂದರೆ ಆಗುತ್ತದೆ ಎಂದು ತೇಜಸ್ ಹೇಳಿದಂತೆ ಬೆತ್ತಲೆಯಾಗಿದ್ದಾಳೆ.

ಇದನ್ನ ರೆಕಾರ್ಡ್ ಮಾಡಿಕೊಂಡ ತೇಜಸ್ ಬ್ಲಾಕ್ ಮೇಲ್ ಮಾಡುತ್ತಾ ಮದುವೆ ಆಗುವಂತೆ ಒತ್ತಾಯಿಸಿದ್ದಾನೆ.ಮದುವೆ ಆಗದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಕಿ ಮರ್ಯಾದೆ ತೆಗೆಯುವುದಾಗಿ ಹೆದರಿಸಿದ್ದಾನೆ.

ಯುವತಿಯ ತಂದೆ ಆಸ್ಪತ್ರೆಗೆ ತೆರಳಿದ್ದ ವೇಳೆ ಮನೆಗೆ ನುಗ್ಗಿದ ತೇಜಸ್ ಟಿವಿ ಎತ್ತಿ ಹಾಕಿ,
ಅಡುಗೆ ಸಿಲಿಂಡರ್ ಕೂಡಾ ಎತ್ತಿಹಾಕಿ,ಪೋಠೋಪಕರಣಗಳನ್ನ ಧ್ವಂಸ ಮಾಡಿದ್ದಾನೆ.ತಡೆಯಲು ಬಂದ ತಾಯಿ ಮೇಲೆ ಹಲ್ಲೆ ನಡೆಸಿ ದಾಂಧಲೆ ಮಾಡಿ ಕೊಲೆ ಬೆದರಿಕೆ ಹಾಕಿ ಹೋಗಿದ್ದಾನೆ.

ತೇಜಸ್ ನ ಈ‌ ದಾಂಧಲೆಯಿಂದ ಬೆದರಿದ ಯುವತಿ ಎನ್.ಆರ್.ಠಾಣೆಗೆ ತೆರಳಿ ತೇಜಸ್ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡು ತಮಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾಳೆ.

ಮದುವೆ ಆಗುವಂತೆ ಯುವತಿ ಮನೆಗೆ ನುಗ್ಗಿ ಪ್ರಿಯಕರ ದಾಂಧಲೆ Read More

ವ್ಯಕ್ತಿಗೆ 30 ಲಕ್ಷ ರೂ. ವಂಚಿಸಿದ ಯುವತಿ

ಮೈಸೂರು: ಟ್ರೇಡಿಂಗ್ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಕತರ್ನಾಕ್ ಯುವತಿಯೊಬ್ಬಳು 30 ಲಕ್ಷ ರೂ. ವಂಚನೆ ಮಾಡಿದ ಪ್ರಕರಣ ನಡೆದಿದೆ.

ರಾಜಕುಮಾರ್ ಎಂಬವರು ಮೋಸಕ್ಕೊಳಗಾದ ವ್ಯಕ್ತಿ. ಲಾವಣ್ಯ ಎಂಬಾಕೆ ವಿರುದ್ದ ಆರೋಪ ಮಾಡಿರುವ ರಾಜಕುಮಾರ್ ದೂರು ಕೊಟ್ಟಿದ್ದು ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಲವಾಲ ಗ್ರಾಮದ ಲಾವಣ್ಯ ಟ್ರೇಡಿಂಗ್ ಹೆಸರಿನಲ್ಲಿ ಹಣದ ಆಸೆ ತೋರಿಸಿ 30ಲಕ್ಷ ಹಣ ಪಡೆದು ಪರಾರಿಯಾಗಿದ್ದಾಳೆ ಎಂದು ದೂರಲಾಗಿದೆ.

ಕೆಲ ತಿಂಗಳ ಹಿಂದೆ ಆನ್ಲೈನ್ ಮೂಲಕ ರಾಜಕುಮಾರ್ ಹಣ ಕಳುಹಿಸಿದ್ದರಂತೆ ಈ ಹಿಂದೆ ಲಾವಣ್ಯ ಅಕ್ಕ ಶ್ರುತಿ ಟ್ರೇಡಿಂಗ್ ಹೆಸರಲ್ಲಿ ಹಣ ಪಡೆದು ಮೋಸ ಮಾಡಿ ಜೈಲು ಪಾಲಾಗಿದ್ದರು.

ಶ್ರುತಿಗೂ ಹಣ ಕೊಟ್ಟಿದ್ದ ರಾಜಕುಮಾರ್ ಆಕೆಯ ತಂಗಿ ಎಂದು ನಂಬಿ ಹಣ ಕೊಟ್ಟು ಮತ್ತೆ ಮೋಸ ಹೋಗಿದ್ದಾರೆ.

ಲಾವಣ್ಯ ಹಲವಾರು ಜನರ ಬಳಿ ಇದೇ ರೀತಿ ಹಣ ಪಡೆದು ಮೋಸ ಮಾಡಿದ್ದಾಳೆ ಎಂದು ರಾಜಕುಮಾರ್ ಆರೋಪಿಸಿದ್ದಾರೆ.

ವ್ಯಕ್ತಿಗೆ 30 ಲಕ್ಷ ರೂ. ವಂಚಿಸಿದ ಯುವತಿ Read More