ಲಡ್ಡು ಪ್ರಸಾದಕ್ಕೆ ಪ್ರಾಣಿಯ ಕೊಬ್ಬು ಬಳಕೆ:ವಿಶ್ವ ಪ್ರಸನ್ನ ಶ್ರೀ ಖಂಡನೆ

ಅಯೋಧ್ಯೆ: ಲಡ್ಡು ಪ್ರಸಾದವನ್ನ ಕಲಬೆರಕೆ ತುಪ್ಪ ಹಾಗೂ ಪ್ರಾಣಿಯ ಕೊಬ್ಬಿನ ಮಿಶ್ರಣದಿಂದ ತಯಾರಿಸಿದ್ದಾರೆ ಇದು ಮಹಾ ಅಪಚಾರ ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನ ಸ್ವಾಮೀಜಿ ಬೇಸರ ಪಟ್ಟಿದ್ದಾರೆ.

ಅಯೋಧ್ಯೆಯಲ್ಲಿ ತಿರುಪತಿ ಲಡ್ಡು ವಿವಾದದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಸಾದದಲ್ಲಿ ಮೀನಿನ ಎಣ್ಣೆ, ಹಂದಿಯ ಕೊಬ್ಬು, ಹಸುವಿನ ಕೊಬ್ಬು ಬಳಸಿದ್ದಾರೆ, ಇದು ಹಿಂದೂ ಸಮಾಜಕ್ಕೆ ಬಗೆದಿರುವ ದೊಡ್ಡ ಅಪಚಾರ ಜತೆಗೆ ಇದು ದೇವರಿಗೂ ಬಗೆದಿರುವ ಅಪಚಾರ. ಸರ್ಕಾರವೇ ಈ ಕೃತ್ಯ ನಡೆಸಿದೆ ಎಂದು ಖಂಡಿಸಿದರು.

ತಿರುಪತಿಯ ಶ್ರೀನಿವಾಸ ದೇವರು, ಗೋವಿನ ರಕ್ಷಣೆಗೆ ಅವತರಿಸಿದವ,ಅಂತಹ ಶ್ರೀನಿವಾಸ ದೇವರಿಗೆ ಹಸುವಿನ ಕೊಬ್ಬಿನ ಪ್ರಸಾದ ನೀಡಿದ್ದೀರಿ. ಇದು ಬಹುದೊಡ್ಡ ಅಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಂದೂಗಳ ಧಾರ್ಮಿಕ ಶ್ರದ್ಧೆಯ ಮೇಲಿನ ಹಲ್ಲೆ ಇದಾಗಿದೆ, ಉಪಯೋಗಕ್ಕೆ ಅನರ್ಹವಾದ ತುಪ್ಪವನ್ನು ದೇವಾಲಯಕ್ಕೆ ಬಳಸಿದ್ದಾರೆ ಇಂತಹ ತುಪ್ಪ ತಯಾರಿಸುವ ಅಡ್ಡಗಳನ್ನು ಕಂಡುಹಿಡಿದು ತನಿಖೆ ನಡೆಸುವುದು ಸರ್ಕಾರದ ಕರ್ತವ್ಯ ಎಂದು ಹೇಳಿದರು.

ಧಾರ್ಮಿಕ ಶ್ರದ್ಧಾ ಕೇಂದ್ರಗಳು, ಸರ್ಕಾರದ ಹಿಡಿತದಲ್ಲಿ ಇರಬಾರದು,ಇವು ಹಿಂದೂ ಸಮಾಜದ ಕೈಯಲ್ಲಿರಬೇಕು, ಸರ್ವೋಚ್ಚ ನ್ಯಾಯಾಲಯದ ತೀರ್ಪು ಹೀಗೆಯೇ ಹೇಳಿದೆ. ತಡ ಮಾಡದೆ ಸರ್ಕಾರದ ಸ್ವಾಧೀನದಿಂದ ದೇಗುಲ ಮುಕ್ತಗೊಳಿಸಿ, ಹಿಂದೂಗಳ ಸಂಸ್ಥೆಗೆ ತಿರುಪತಿ ದೇವಾಲಯದ ಆಡಳಿತ ನೀಡಿ ಎಂದು ವಿಶ್ವಪ್ರಸನ್ನ ಶ್ರೀ ಆಗ್ರಹಿಸಿದರು.

ಲಡ್ಡು ಪ್ರಸಾದಕ್ಕೆ ಪ್ರಾಣಿಯ ಕೊಬ್ಬು ಬಳಕೆ:ವಿಶ್ವ ಪ್ರಸನ್ನ ಶ್ರೀ ಖಂಡನೆ Read More

ತಿರುಪತಿ ಲಡ್ಡು ತಯಾರಿಕೆಗೆ ಕೊಬ್ಬು ಬಳಕೆ:ಮನುಷ್ಯ ಜಾತಿಗೇ ಅವಮಾನ-ಕಾಮತ್

ಮೈಸೂರು: ತಿರುಪತಿ ಪ್ರಸಾದ ಲಡ್ಡು ತಯಾರಿಕೆಗೆ ಕೊಬ್ಬು ಬಳಸಿದ ವಿಷಯ ಕೇಳಿ ಬಹಳ ಬೇಸರವಾಗಿದೆ, ಇದು ಮನುಷ್ಯ ಜಾತಿಗೇ ಅವಮಾನ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾದ್ಯಕ್ಷ ಕೆ ಮಹೇಶ ಕಾಮತ್ ಹೇಳಿದ್ದಾರೆ.

ಸನಾತನ ಹಿಂದೂ ಧರ್ಮದ ಪ್ರಸಿದ್ದ ದೇವಾಲಯಕ್ಕೆ ಹೇರಳವಾಗಿ ಕಾಣಿಕೆ ಬರುತ್ತಿದ್ದರೂ ಇಂತಹ ನೀಚ ಕೃತ್ಯ ಮಾಡಿರುವುದು ಅಸಹ್ಯ ಎನಿಸುತ್ತಿದೆ.

ಈ ವರದಿ ನೋಡಿ ಕರ್ನಾಟಕ ಸರ್ಕಾರ ಎಲ್ಲಾ ದೇವಸ್ಥಾನದಲ್ಲಿ ಖಡ್ಡಾಯವಾಗಿ ನಂದಿನಿ ತುಪ್ಪ ಉಪಯೋಗಿಸಬೇಕೆಂದು ಆಜ್ಞೆ ಹೊರಡಿಸಿದೆ,ಎಲ್ಲಾ ದೇವಸ್ಥಾನಗಳಿಗೆ ಆರೋಗ್ಯ ಇಲಾಖೆಯವರು ಬೇಟಿ ಕೊಟ್ಟು ಖದ್ದಾಗಿ ಪರಿಶೀಲಿಸಿ ವರದಿಯನ್ನ ಸಾರ್ವಜನಿಕವಾಗಿ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಇಂತಹ ಯಾವುದಾದರೂ ಲೋಪ ಕಂಡುಬಂದರೆ ಈ ಕೂಡಲೇ ದೇವಸ್ಥಾನದ ಆಡಳಿತ ಮಂಡಳಿಯ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು.

ಒಂದು ಕಾಲದಲ್ಲಿ ನಂದಿನಿ ತುಪ್ಪವೂ ನಕಲಿಯಾಗಿ ಸಿಗುತ್ತಿತ್ತು ಹಾಗೂ ಹಲವು ಕಡೆ ಬಹಳಷ್ಟು ಆಹಾರ ಪದಾರ್ಥ, ಹಾಲು ಹಾಗೂ ಇತರ ಪದಾರ್ಥಗಳು ನಕಲಿಯಾಗಿರುವುದನ್ನ ಕೇಳಿರುತ್ತೇವೆ ಆದ್ದರಿಂದ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಈ ಕೂಡಲೇ ಎಲ್ಲಾ ದೇವಸ್ಥಾನಕ್ಕೆ ಬೇಟಿ ಕೊಟ್ಟು ಸರಿಯಾದ ಮಾಹಿತಿ ಸಂಗ್ರಹಿಸಬೇಕು ಹಾಗೂ ನಕಲಿ ವಸ್ತು ತಯಾರಿಕಾ ಘಟಕದ ಮೇಲೆ ನಿಗಾ ಇರಿಸಿ ತಪ್ಪಾಗಿದ್ದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಕೆ ಮಹೇಶ ಕಾಮತ್ ಕೋರಿದ್ದಾರೆ.

ತಿರುಪತಿ ಲಡ್ಡು ತಯಾರಿಕೆಗೆ ಕೊಬ್ಬು ಬಳಕೆ:ಮನುಷ್ಯ ಜಾತಿಗೇ ಅವಮಾನ-ಕಾಮತ್ Read More