ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಸಾಮೂಹಿಕ ಸೀಮಂತ!

ಮೈಸೂರು: ವಿಜಯನಗರದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶ್ರೀ ದುರ್ಗಾ ಫೌಂಡೇಶನ್ ಮತ್ತು ಕೆ ವಿ ಕೆ ಫೌಂಡೇಶನ್ ವತಿಯಿಂದ 50ಕ್ಕೂ ಹೆಚ್ಚು ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ ನೆರವೇರಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ
ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಯ ಉಪಾಧ್ಯಕ್ಷರಾದ ಡಾ. ಪುಷ್ಪ ಅಮರನಾಥ್ ಅವರು ಮಾತನಾಡಿ,ನಿಜಕ್ಕೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ನನ್ನ ಸೌಭಾಗ್ಯ ಎಂದು ನುಡಿದರು.

ಅರಿಶಿನ,ಕುಂಕುಮ, ಬಳೆ ಇಟ್ಟು ಬಾಗಿನ ಕೊಡುವ ನಮ್ಮ ಸಂಪ್ರದಾಯ ತುಂಬಾ ಒಳ್ಳೆಯದು ಎಂದು ಹೇಳಿದರು.

ಭಾಗಿನ ಕೊಡುವವರದು ಹಾಗೂ ತೆಗೆದು ಕೊಳ್ಳುವವರದು ಇಬ್ಬರದೂ ಸೌಭಾಗ್ಯ, ನಿಮಗೆ ಜನಿಸುವ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಿ ಎಂದು ಕಿವಿ ಮಾತು ಹೇಳಿದರು.

ಖುಷಿ ವಿನು ಮತ್ತು ಶ್ರೀ ದುರ್ಗಾ ಫೌಂಡೇಶನ್ ನ ರೇಖಾ ಅವರು ಮಹಿಳೆಯರಿಗಾಗಿ ಇಂತಹ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ ಎಂದು ಪುಷ್ಪಾ ಅಮರ ನಾಥ್ ಮೆಚ್ಚುಗೆ‌ ವ್ಯಕ್ತಪಡಿಸಿದರು.

ಸೀಮಂತ ಮಾಡಿಕೊಂಡ ಎಲ್ಲಾ ಮಹಿಳೆಯರಿಗೂ ತಾಯಿ ಚಾಮುಂಡೇಶ್ವರಿ ಒಳಿತು ಮಾಡಲಿ ಎಂದು ಅವರು ಶುಭ ಹಾರೈಸಿದರು.

ಸೌಮ್ಯ ಅನಿಲ್ ಚಿಕ್ಕಮಾದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಬಸವರಾಜ್,ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್, ಇಂದಿರಾ ಗಾಂಧಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ರವಿ ಮಂಚೇಗೌಡನ ಕೊಪ್ಪಲು, ಮುಖಂಡರಾದ ಜಿ ರಾಘವೇಂದ್ರ, ಕೆವಿಕೆ ಫೌಂಡೇಶನ್ ಅಧ್ಯಕ್ಷರಾದ ಖುಷಿ ವಿನು,ಕಾವ್ಯ,ಮಂಜುಳಾ
ಮತ್ತಿತರರು ‌ಹಾಜರಿದ್ದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಸಾಮೂಹಿಕ ಸೀಮಂತ! Read More

ಚಾಮುಂಡೇಶ್ವರಿ ವರ್ಧಂತಿ: ಪೌರಕಾರ್ಮಿಕರು,ತೃತಿಯ ಲಿಂಗಿಗಳಿಗೆ ಬಾಗಿನ

ಮೈಸೂರು: ಶ್ರೀ ದುರ್ಗಾ ಫೌಂಡೇಶನ್ ಹಾಗೂ ಕೆ ವಿ ಕೆ ಫೌಂಡೇಶನ್ ವತಿಯಿಂದ ಚಾಮುಂಡೇಶ್ವರಿ ವರ್ಧಂತಿ ಅಂಗವಾಗಿ
ಪೌರಕಾರ್ಮಿಕ ಮಹಿಳೆಯರು,
ತೃತೀಯಲಿಂಗಗಳಿಗೆ ಬಾಗಿನ ವಿತರಿಸಲಾಯಿತು.

ಚಾಮುಂಡಿ ಬೆಟ್ಟದ ಪಾದದಲ್ಲಿ ಪೌರಕಾರ್ಮಿಕ ಮಹಿಳೆಯರಿಗೆ ಹಾಗೂ ತೃತೀಯಲಿಂಗಗಳಿಗೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮಿ ಅವರು ಸೀರೆ, ಕುಂಕುಮ, ಅರಿಶಿಣ, ಬಳೆ ಸಹಿತ ಬಾಗಿನ ವಿತರಿಸಿ ಶುಭ ಕೋರಿದರು.

ಈ ವೇಳೆ ನಾಗಲಕ್ಷ್ಮಿ ಅವರು ಸಮಸ್ತ ನಾಡಿನ ಜನತೆಗೆ ಚಾಮುಂಡೇಶ್ವರಿ ವರ್ಧಂತಿ ಶುಭಾಶಯ ಕೋರಿದರು.

ವಿಶೇಷವಾಗಿ ಮಹಿಳೆಯರಿಗೆ ಚಾಮುಂಡೇಶ್ವರಿ ತಾಯಿ ಹೆಚ್ಚು ಶಕ್ತಿ ನೀಡಲಿ, ಪೌರಕಾರ್ಮಿಕರು ಹಾಗೂ ತೃತೀಯ ಲಿಂಗಗಳನ್ನು ಗುರುತಿಸಿ ಬಾಗಿನ ನೀಡುವ ಸೌಭಾಗ್ಯ ಕಲ್ಪಿಸಿಕೊಟ್ಟ ಶ್ರೀ ದುರ್ಗಾ ಫೌಂಡೇಶನ್ ಹಾಗೂ ಕೆ ವಿ ಕೆ ಫೌಂಡೇಶನ್ ಗಳಿಗೆ ಧನ್ಯವಾದ ತಿಳಿಸಿದರು,

ಈ ಸಂದರ್ಭದಲ್ಲಿ ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್, ಕೆವಿಕೆ ಫೌಂಡೇಶನ್ ಅಧ್ಯಕ್ಷರಾದ ಖುಷಿವಿನು, ಸವಿತಾ ಘಾಟ್ಕೆ, ಜಯಶ್ರೀ ಶಿವರಾಂ, ಚಿಕ್ಕಮಂಗಳೂರು
ಮುರಾಜಿ ಶಾಲೆಯ ಪ್ರಾಂಶುಪಾಲರಾದ ದೀಪ, ಅಶ್ವಿನಿ ಗೌಡ, ಸುಶೀಲ, ಸರಸ್ವತಿ ಹಲಸಗಿ, ರಾಣಿ ಪ್ರಭ ಮತ್ತಿತರರು ಹಾಜರಿದ್ದರು.

ಚಾಮುಂಡೇಶ್ವರಿ ವರ್ಧಂತಿ: ಪೌರಕಾರ್ಮಿಕರು,ತೃತಿಯ ಲಿಂಗಿಗಳಿಗೆ ಬಾಗಿನ Read More

ಕೆವಿಕೆ ಫೌಂಡೇಶನ್ ನಿಂದಬಿ ಸರೋಜಾದೇವಿ ಅವರಿಗೆ ಸಂತಾಪ

ಮೈಸೂರು: ಕೆವಿಕೆ ಫೌಂಡೇಶನ್ ವತಿಯಿಂದ ಮೈಸೂರಿನ ಆರ್ ಟಿ ಒ ವೃತ್ತದಲ್ಲಿ ಅಭಿನಯ ಶಾರದೆ, ಕನ್ನಡ ಚಿತ್ರರಂಗದ ಹಿರಿಯ ನಟಿ ಬಿ ಸರೋಜಾದೇವಿ ಅವರಿಗೆ
ಸಂತಾಪ ಸಲ್ಲಿಸಲಾಯಿತು.

ಬಿ.ಸರೋಜಾದೇವಿ ಅವರ ಭಾವಚಿತ್ರ ಹಿಡಿದು,ಮೌನಾಚರಣೆ ಮಾಡುವ ಮೂಲಕ ಸಂತಾಪ ಸಲ್ಲಿಸಲಾಯಿತು

ಈ ವೇಳೆ ಮಾತನಾಡಿದ ಕೆ ವಿ ಕೆ ಫೌಂಡೇಶನ್ ಅಧ್ಯಕ್ಷರಾದ ಖುಷಿ ವಿನು
ಕನ್ನಡದ ಹಿರಿಯ ನಟಿ ಬಿ.ಸರೋಜಾದೇವಿ ಅವರ ನಿಧನವಾರ್ತೆ ನೋವುಂಟುಮಾಡಿದೆ ಎಂದು ಸಂತಾಪ ವ್ಯಕ್ತಪಡಿಸಿದರು.

ಕನ್ನಡ ಚಿತ್ರರಂಗ ಸೇರಿದಂತೆ ತಮಿಳು, ತೆಲುಗು ಮತ್ತು ಹಿಂದಿಯ ಸುಮಾರು 200 ಚಿತ್ರಗಳಲ್ಲಿ ನಟಿಸಿ, ಅಭಿನಯ ಸರಸ್ವತಿ ಎಂದೇ ಖ್ಯಾತರಾಗಿದ್ದರು.
ಸರೋಜಾದೇವಿ ಎಂದಾಕ್ಷಣ ಕಿತ್ತೂರು ಚೆನ್ನಮ್ಮ, ಬಬ್ರುವಾಹನ, ಅಣ್ಣತಂಗಿ ಮುಂತಾದ ಚಿತ್ರಗಳಲ್ಲಿನ ಅವರ ಮನೋಜ್ಞ ಅಭಿನಯ ಕಣ್ಣಮುಂದೆ ಬರುತ್ತದೆ ಎಂದು ಬಣ್ಣಿಸಿದರು.

ಸದಭಿರುಚಿ ಚಿತ್ರಗಳ‌ ಮೂಲಕ ಹಲವು ದಶಕಗಳ‌ ಕಾಲ ಸಿನಿಪ್ರಿಯರನ್ನು ರಂಜಿಸಿದ್ದ ಅವರ ಅಗಲಿಕೆ ಭಾರತೀಯ ಚಿತ್ರರಂಗಕ್ಕಾದ ಬಹುದೊಡ್ಡ ನಷ್ಟ. ಸರೋಜಾದೇವಿಯವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಖುಷಿವಿನು
ಪ್ರಾರ್ಥಿಸಿದರು.

ರೇಖಾ ಶ್ರೀನಿವಾಸ್,ಕೇಬಲ್ ಮಹೇಶ್, ಅಪೂರ್ವ ಸುರೇಶ್, ನೀಲಾ,ನಗರ ಪಾಲಿಕೆ ಮಾಜಿ ಸದಸ್ಯರಾದ ಜಗದೀಶ್, ಜಿ ರಾಘವೇಂದ್ರ, ಎಸ್ ಎನ್ ರಾಜೇಶ್, ಜತ್ತಿ ಪ್ರಸಾದ್, ಪುರುಷೋತ್ತಮ್, ಸುಚೇಂದ್ರ, ಹರೀಶ್ ನಾಯ್ಡು ಕಿರಣ್ ಮತ್ತಿತರರು ಸಂತಾಪ ಸಭೆಯಲ್ಲಿ ಭಾಗವಹಿಸಿದ್ದರು.

ಕೆವಿಕೆ ಫೌಂಡೇಶನ್ ನಿಂದಬಿ ಸರೋಜಾದೇವಿ ಅವರಿಗೆ ಸಂತಾಪ Read More

ಶರಣೆ ಅಕ್ಕಮಹಾದೇವಿ ವಚನ ಸರ್ವ ಕಾಲಕ್ಕೂ ಪ್ರಸ್ತುತ:ಮಡ್ಡಿಕೆರೆ ಗೋಪಾಲ್

ಮೈಸೂರು: 12ನೆ ಶತಮಾನದ ಮಹಾನ್ ಶಿವಶರಣೆ ಅಕ್ಕಮಹಾದೇವಿ ಮಹಿಳೆಯರ ಸ್ವಾಭಿಮಾನದ ಸಂಕೇತ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್ ತಿಳಿಸಿದರು.

ಮೈಸೂರಿನ ತ್ಯಾಗರಾಜ ರಸ್ತೆಯಲ್ಲಿರುವ ಅಕ್ಕನ ಬಳಗ ಶಾಲೆಯಲ್ಲಿ ಕೆ ವಿ ಕೆ ಫೌಂಡೇಶನ್ ವತಿಯಿಂದ
ಅಕ್ಕಮಹಾದೇವಿ ಜಯಂತಿ ಅಂಗವಾಗಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿ ಮಾತನಾಡಿದ ಅವರು,ಅಕ್ಕನ ವಚನಗಳಲ್ಲಿ ಸಾಮಾಜಿಕ ಮತ್ತು ವೈಜ್ಞಾನಿಕ ಚಿಂತನೆಯ ವಿಷಯಗಳಿದ್ದು ಅವು ಸರ್ವಕಾಲಕ್ಕೂ ಪ್ರಸ್ತುತವಾಗಿವೆ ಎಂದು ಹೇಳಿದರು.

ಅಕ್ಕನ ವಚನಗಳನ್ನು ನಮ್ಮ ಮಕ್ಕಳಿಗೆ ಕಲಿಸಿದರೆ ಅವುಗಳನ್ನು ಮುಂದಿನ ಜನಾಂಗಕ್ಕೂ ಪರಿಚಯಿಸಿದಂತಾಗುತ್ತದೆ ಮತ್ತು ಆಚರಣೆಗೆ ಮಹತ್ವ ಬರುತ್ತದೆ ಎಂದು ಸಲಹೆ ನೀಡಿದರು.

ಕೆವಿಕೆ ಫೌಂಡೇಶನ್ ಅಧ್ಯಕ್ಷರಾದ ಖುಷಿ ವಿನು
ಮಾತನಾಡಿ,ಪ್ರಪಂಚದ ಇತಿಹಾಸದಲ್ಲಿ ಅಕ್ಕಮಹಾದೇವಿಯಂತಹ ವ್ಯಕ್ತಿತ್ವದ ಮಹಿಳೆ ಬೇರೆ ಎಲ್ಲಿಯೂ ಸಿಗುವುದಿಲ್ಲ. ವಿಶ್ವಕ್ಕೆ ಒಬ್ಬಳೇ ಅಕ್ಕಮಹಾದೇವಿ ಎಂದು ಹೇಳಿದರು.

ಸಾಧಕರುಗಳಾದ ಸುಗುಣಾವತಿ,ನಾಗರತ್ನ ಆರ್,ಉಮಾದೇವಿ,ಜೂಲಿಯಟ್
ರಂಜಿತ,ಸುಶೀಲ ಅವರನ್ನು ಈ ವೇಳೆ
ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಚಂದ್ರಶೇಖರ್, ನಿವೃತ್ತ ಪೊಲೀಸ್ ಅಧಿಕಾರಿ ಡಾಕ್ಟರ್ ಹೆಚ್ ಎಲ್ ಶಿವಬಸಪ್ಪ, ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್, ಸತ್ಯಸಾಯಿ ಸುರಕ್ಷಾ ಕೇಂದ್ರ ಅಧ್ಯಕ್ಷೆ ಸರಸ್ವತಿ ಹಲಸಗಿ,
ಗೃಹ ರಕ್ಷಕೀಯರ ಘಟಕ ಅಧಿಕಾರಿ ಕಾಮಾಕ್ಷಿ ಪಿ ಎಲ್,ಪುಷ್ಪಲತಾ,ಕೋಮಲ,ಸವಿತಾ ಘಾಟ್ಗೆ , ಪುಷ್ಪಲತಾ, ಸುಜಾತಾ, ಸುವರ್ಣಮ್ಮ,ಜ್ಯೋತಿ ಮತ್ತಿತರರು ಹಾಜರಿದ್ದರು,

ಶರಣೆ ಅಕ್ಕಮಹಾದೇವಿ ವಚನ ಸರ್ವ ಕಾಲಕ್ಕೂ ಪ್ರಸ್ತುತ:ಮಡ್ಡಿಕೆರೆ ಗೋಪಾಲ್ Read More