ಸಾಂಸ್ಕೃತಿಕ ನಗರಿಯಲ್ಲಿ ಹೆಚ್ಚಿದಬೀದಿ ನಾಯಿಗಳು:ದಾಳಿಗೆ ಮುದ್ದು ಬೆಕ್ಕು ಬಲಿ

ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಇತ್ತೀಚೆಗೆ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದ್ದು ಜನ‌ ಹೊರಗೆ ಬರಲು ಹೆದರುವಂತಾಗಿದೆ.

ಸರ್ವೋಚ್ಛ ನ್ಯಾಯಾಲಯ ದೇಶಾದ್ಯoತ ಕೇಳಿರುವ ಬೀದಿ ನಾಯಿಗಳ ಭೀಕರತೆ ಅಂಕಿ ಅಂಶಕ್ಕೆ ಮೈಸೂರು ನಗರವನ್ನೂ ಸೇರಿಸುವ ಪ್ರಮೇಯ ಒದಗಿ ಬಂದಿದೆ.

ಅದರಲ್ಲೂ ಕುವೆಂಪು ನಗರ ‘ಕೆ ‘ ಬ್ಲಾಕಿನಲ್ಲಿ, ಸುಮಾರು 25 ಕ್ಕೂ ಹೆಚ್ಚು ಭೀಭತ್ಸ ಬಿದಿನಾಯಿಗಳು ರಾಜಾರೋಷವಾಗಿ ಬೊಗಳುತ್ತಾ ಅಲೆಯುತ್ತಲೇ ಇರುತ್ತವೆ.

ವೃದ್ಧರು, ಮಕ್ಕಳನ್ನು ಆಟವೆಂಬಂತೆ ಕಚ್ಚುತ್ತಾ ಹೋಗುತ್ತವೆ ಕೋಳಿ, ಬೆಕ್ಕುಗಳಿಗಂತೂ ಇವುಗಳ ದಾಳಿಯಿಂದ ಉಳಿಗಾಲ ಇಲ್ಲದಂತಾಗಿದೆ.

ಮಧ್ಯೆ ರಾತ್ರಿ ಇವುಗಳ ಸ್ಟ್ರೀಟ್ ವಾರ್ ನಿಂದಾಗಿ, ಮಕ್ಕಳು – ರೋಗಿಗಳ ನಿದ್ರೆಯೇ ಮಾಯವಾಗಿಹೋಗಿದೆ.

ಮೊನ್ನೆ ನಗರದ ಹಿರಿಯ ಸಮಾಜ ಸೇವಕರಾದ ಡಾ ಕೆ ರಘುರಾಮ್ ವಾಜಪೇಯಿ ಯವರ ಮನೆಯಲ್ಲಿ 16 ವರ್ಷಗಳಿಂದ ಪ್ರೀತಿಯ ಮುದ್ದುಮಗಳಾಗಿ ಬೆಳೆದಿದ್ದ ಕಾಳಿ ಎಂಬ ಪೂರ್ಣ ಕರಿ ವರ್ಣ ದ ಬೆಕ್ಕನ್ನು ನಾಯಿಗಳು ದಾಳಿ ನಡೆಸಿ ಕೊಂದಿವೆ.

ಕುವೆಂಪು ನಗರದಲ್ಲಿ
ನಾಯಿಗಳ ಅಟ್ಟಹಾಸಕ್ಕೆ ಬೆಕ್ಕುಗಳ ಸಂತಾನವೇ ನಿರ್ಮೂಲವಾಗುತ್ತಿದ್ದು, ಇಲಿ – ಹೆಗ್ಗಣ -ಹಾವು ಗಳ ಕಾಟ ಹೆಚ್ಚಾಗಿದೆ.

ನಾಯಿಗಳಿಗೆ ಒಂದು ವೇಳೆ ಯಾರಾದರೂ ಹೊಡೆದು ಪೆಟ್ಟಾದರೆ ತಕ್ಷಣ ಪ್ರಾಣಿಪ್ರಿಯರು ಬಂದು ಕ್ಯಾತೆ ತೆಗೆಯುತ್ತಾರೆ.ಆದರೆ ಮಕ್ಕಳು,ಬೆಕ್ಕುಗಳ ಮೇಲೆ ನಾಯಿಗಳು ಮಾರಣಾಂತಿಕ ದಾಳಿ ನಡೆಸಿದಾಗ ಏನನ್ನೂ ಕೇಳುವುದಿಲ್ಲ.

ನಾಯಿಗಳ ಹಾವಳಿ ಒಂದು ಪ್ರದೇಶಕ್ಕೆ ಸೀಮಿತವಾಗಿಲ್ಲ,ಇಡೀ ನಗರದಲ್ಲಿ ಇದೇ ಕತೆ,ವ್ಯತೆ.

ಮೈಸೂರು ನಗರಪಾಲಿಕೆ ಅಧಿಕಾರಿಗಳು ನಾಯಿಗಳ ಹಾವಳಿ ತಡೆಯಲು ತಕ್ಷಣ ಕಾರ್ಯಪ್ರವೃತ್ತರಾಗಬೇಕಿದೆ.ಕನಿಷ್ಟ ಅವುಗಳನ್ನು ಹಿಡಿದು ಸಂತಾನಹರಣ ಶಸ್ತ್ರ ಚಿಕಿತ್ಸೆ ಯನ್ನಾದರೂ ಮಾಡಿಸಿದರೆ ಅವುಗಳ ಸಂತತಿ ಕಡಿಮೆ ಯಾಗಬಹುದು.

ಮೈಸೂರು ನಗರಪಾಲಿಕೆ ಸುಪ್ರೀಂ ಕೋರ್ಟ್ ಮಾರ್ಗ ದರ್ಶನವನ್ನಾದರೂ ಪಾಲಿಸಲಿ ಎಂದು ಡಾ ಕೆ ರಘುರಾಮ್ ವಾಜಪೇಯಿ ಅವರು ಮನವಿ ಮಾಡಿದ್ದಾರೆ.

ಸಾಂಸ್ಕೃತಿಕ ನಗರಿಯಲ್ಲಿ ಹೆಚ್ಚಿದಬೀದಿ ನಾಯಿಗಳು:ದಾಳಿಗೆ ಮುದ್ದು ಬೆಕ್ಕು ಬಲಿ Read More

ಆದಿಚುಂಚನಗಿರಿ ಮಹಿಳಾ ಒಕ್ಕಲಿಗ ಸಮಾಜ ಸಂಘದ ವಾರ್ಷಿಕೋತ್ಸವ

ಮೈಸೂರು: ಮೈಸೂರಿನ ಕುವೆಂಪುನಗರ
ಆದಿಚುಂಚನಗಿರಿ ಮಹಿಳಾ ಒಕ್ಕಲಿಗ ಸಮಾಜ ಸಂಘದ ವಾರ್ಷಿಕೋತ್ಸವ ಸಮಾರಂಭ ವಿಶೇಷವಾಗಿ ನೆರವೇರಿತು.

ಸವಿತ ಗೌಡ ಅವರ ಅಧ್ಯಕ್ಷತೆಯಲ್ಲಿ ಖಾಸಗಿ ಹೋಟಲ್ ನಲ್ಲಿ ಸಂಘದ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿ ಮೈಸೂರ್ ಸಿಟಿ ಕೊಆಪರೇಟಿವ್ ಬ್ಯಾಂಕಿನ ಮಾಜಿ ಅಧ್ಯಕ್ಷೆ
ರಾಜೇಶ್ವರಿ, ಪದಾಧಿಕಾರಿಗಳಾದ ರಾಜೇಶ್ವರಿ, ಲತಾ ರಮೇಶ, ಸವಿತ ಜಗದೀಶ,ಸರೋಜ, ಸುನಂದ, ಗಿರಿಜಾ,ಲಕ್ಷ್ಮಿ,ವಿಜಯ, ಮಮತ, ಉಮ, ಜಾಹ್ನವಿ ದಿನೇಶ್ ಭಾಗವಹಿಸಿದ್ದರು.

ಆದಿಚುಂಚನಗಿರಿ ಮಹಿಳಾ ಒಕ್ಕಲಿಗ ಸಮಾಜ ಸಂಘದ ವಾರ್ಷಿಕೋತ್ಸವ Read More

ಒಕ್ಕಲಿಗ ಮಹಿಳಾ ಸಮಜದಲ್ಲಿ ಸುಗ್ಗಿ-ಸಂಭ್ರಮ

ಮೈಸೂರು: ಮೈಸೂರಿನ ಕುವೆಂಪು ನಗರದಲ್ಲಿರುವ ಆದಿಚುಂಚನಗಿರಿ ಒಕ್ಕಲಿಗ ಮಹಿಳಾ ಸಮಜದಲ್ಲಿ ಮಹಿಳೆಯರು ಸಡಗರದಿಂದ ಸುಗ್ಗಿ-ಸಂಭ್ರಮ ಆಚರಿಸಿದರು.

ಸಂಘದ ವತಿಯಿಂದ ಸವಿತ ಗೌಡ ರವರ ಅಧ್ಯಕ್ಷತೆಯಲ್ಲಿ ಸುಗ್ಗಿ-ಸಂಭ್ರಮವನ್ನು ವಿಶೇಷವಾಗಿ ಆಚರಣೆ ಮಾಡಲಾಯಿತು.

ಸಂಘದ ಸದಸ್ಯರು ಜಾನಪದ ನೃತ್ಯ, ಕೋಲಾಟ ಮತ್ತು ಸುಗ್ಗಿ ಹಾಡುಗಳನ್ನು ಹಾಡಿ ಸಂಭ್ರಮಿಸಿದರು.

ಲಕ್ಷ್ಮಿ ಜಯರಾಮ, ರತ್ನ ನರೇಶ, ಮೀನಾಕ್ಷಿ, ಎಸ್‌. ಸುವರ್ಣ ಧನ್ಯಕುಮಾರ್ ಹಾಡುವ ಮೂಲಕ ಸುಗ್ಗಿ-ಸಂಭ್ರಮಕ್ಕೆ ಮೆರಗು ನೀಡಿದರು.

ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಗೀತಾ ಕುಮಾ‌ರ್, ಮಂಗಳ, ಅಶ್ವಿನಿ, ರೇಣುಕಾ, ಹೇಮ, ಸುವರ್ಣ ಗಣೇಶ್, ವಿಜಯ ಮಂಜುನಾಥ ಮತ್ತಿತರರು ಉಪಸ್ಥಿತರಿದ್ದರು.

ಒಕ್ಕಲಿಗ ಮಹಿಳಾ ಸಮಜದಲ್ಲಿ ಸುಗ್ಗಿ-ಸಂಭ್ರಮ Read More

ಗಜಮುಖ ಯುವಕರ ಬಳಗದಿಂದ ಶ್ರೀ ರಾಮನಿಗೆ ವಿಶೇಷ ಪೂಜೆ, ಅನ್ನದಾನ

ಮೈಸೂರು: ಮೈಸೂರಿನ ಕುವೆಂಪುನಗರ ಎಂ ಬ್ಲಾಕ್ ನಲ್ಲಿ ಅಯೋಧ್ಯ ರಾಮ ಮಂದಿರ ಮೊದಲ ವಾರ್ಷಿಕೋತ್ಸವ ಪ್ರಯುಕ್ತ ಯ ಗಜಮುಖ ಯುವಕರ ಬಳಗದಿಂದ ಶ್ರೀ ರಾಮನಿಗೆ ವಿಶೇಷ ಪೂಜೆ ಹಾಗೂ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಮಾಡಲಾಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಟಿ ಎಸ್ ಶ್ರೀವತ್ಸ ಅವರು ಮಾತನಾಡಿ,
2024 ರಲ್ಲಿ ಅಯೋಧ್ಯೆಯಲ್ಲಿ ರಾಮ ದೇವಾಲಯದ ನಿರ್ಮಾಣ ಪೂರ್ಣಗೊಂಡು ಲಕ್ಷಾಂತರ ಜನರು ರಾಮನ ದರ್ಶನ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.

ಅಯೋಧ್ಯೆಯಲ್ಲಿನ ರಾಮ ಮಂದಿರವು ಹಿಂದೂ ಧರ್ಮಿಯರ ಜೀವಾಳವಾಗಿದೆ. ಇಂದಿಗೆ ಅಯೋಧ್ಯೆಯ ಬಾಲ ರಾಮನ ಪ್ರತಿಷ್ಠಾಪನೆಯಾಗಿ ದೇಶಾದ್ಯಾಂತ ಸಂಭ್ಮದಿಂದ ಮೊದಲ ವಾರ್ಷಿಕೋತ್ಸವ ಆಚರಿಸಲಾಗುತ್ತಿದೆ ಎಂದು ಶ್ರೀವತ್ಸ ಹೇಳಿದರು.

ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಗೋಪಾಲರಾಜ್ ಅರಸ್, ರಾಜಗೋಪಾಲ್,
ಗಜಮುಖ ಯುವಕರ ಬಳಗ ಅಧ್ಯಕ್ಷರಾದ
ಹೇಮಂತ್, ರಾಜೇಶ್, ಸುಮಿತ್ರ ,ಮಂಜುಳಾ, ಚೇತನ್, ಮಂಜು, ರಾಜು, ರಾಘವೇಂದ್ರ, ಕೆಂಚಪ್ಪ ,ಲಿಂಗರಾಜು, ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.

ಗಜಮುಖ ಯುವಕರ ಬಳಗದಿಂದ ಶ್ರೀ ರಾಮನಿಗೆ ವಿಶೇಷ ಪೂಜೆ, ಅನ್ನದಾನ Read More

ರಾಷ್ಟ್ರಕವಿ ಕುವೆಂಪು ಪುಣ್ಯ ಸ್ಮರಣೆ

ಮೈಸೂರು: ಮೈಸೂರಿನ ಹೂಟಗಳ್ಳಿ ಕೆ ಎಚ್ ಬಿ ಬಡಾವಣೆಯಲ್ಲಿ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ರಾಷ್ಟ್ರಕವಿ ಕುವೆಂಪು ಪುಣ್ಯಸ್ಮರಣೆ ಹಮ್ಮಿಕೊಳ್ಳಲಾಯಿತು.

ರಾಷ್ಟ್ರಕವಿ ಕುವೆಂಪು ವೃತ್ತದಲ್ಲಿ ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಪೂಜೆ ಮಾಡಲಾಯಿತು.

ನಂತರ ಕುವೆಂಪು ಅವರನ್ನು ಸ್ಮರಿಸಿ ಅವರಂತೆ ಸಾಧನೆ ಮಾಡಬೇಕೆಂದು ಯುವಜನತೆಗೆ ಕರೆ ನೀಡಲಾಯಿತು.

ಈ‌ ವೇಳೆ ಸಾರ್ವಜನಿಕರಿಗೆ ಸಿಹಿ ವಿತರಿಸಿ,ಕುವೆಂಪು ಅವರ ಗುಣಗಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳಾದ ದಾಸೇಗೌಡ, ನಾಗೇಶ್, ಸುರೇಶ್, ಸಿ ಬಿ ದೇವರಾಜ್,ಮೋಹನ್, ಗಿರೀಶ್, ಶಂಕರ್ ಲಿಂಗಯ್ಯ, ಪ್ರಕಾಶ್, ಚಂದ್ರು, ರಕ್ತದಾನಿ ಮಂಜು ಹಾಗೂ ಸಂಘದ ಸದಸ್ಯರು ಹಾಜರಿದ್ದರು.

ರಾಷ್ಟ್ರಕವಿ ಕುವೆಂಪು ಪುಣ್ಯ ಸ್ಮರಣೆ Read More

ಕುವೆಂಪು ನಗರದಲ್ಲಿ ಜನರ ಮನಸೂರೆಗೊಂಡ ಸುಗಮ ಸಂಗೀತ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2024ರ ಪ್ರಯುಕ್ತ ಜಿಲ್ಲಾಡಳಿತ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದೆ.

ಇದಕ್ಕಾಗಿ ದಸರಾ ಉಪಸಮಿತಿಗಳನ್ನು ರಚನೆ‌ಮಾಡಿದ್ದು,ಮೈಸೂರಿನ ವಿವಿಧ ಭಾಗಗಳಲ್ಲೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

ಕುವೆಂಪುನಗರದ ಗಾನಭಾರತಿಯಲ್ಲಿ ಪ್ರಖ್ಯಾತ ಗಾಯಕರಾದ ಮೈಸೂರು ಮಹಾಲಿಂಗು, ಪ್ರಿಯಾ ಹಾಗೂ ಕುಮಾರಿ ಚಿನ್ಮಯಿ ಅವರು ಸುಗಮ ಸಂಗೀತ ಕಾರ್ಯಕ್ರಮ ನಡೆಸಿ ಜನರ ಮನಸ್ಸು ಸೂರೆಗೊಂಡರು.

ಇವರಿಗೆ ಪಕ್ಕ ವಾದ್ಯದಲ್ಲಿ ರಿದಮ್ ಪ್ಯಾಡ್ ದತ್ತ,ತಬಲ ಕಿರಣ್ ಹಾಗೂ ಕೀಬೋರ್ಡ್ ರಾಜೇಶ್ ಅವರು ಯಶಸ್ವಿಯಾಗಿ ನಡೆಸಿಕೊಟ್ಟರು.

ಕುವೆಂಪು ನಗರದಲ್ಲಿ ಜನರ ಮನಸೂರೆಗೊಂಡ ಸುಗಮ ಸಂಗೀತ Read More