ಮೈಸೂರು: ಆಧುನಿಕ ಕುಟುಂಬ ವ್ಯವಸ್ಥೆಯಲ್ಲಿನ ಬದಲಾವಣೆಯಿಂದ ಯುವ ಪೀಳಿಗೆಯಲ್ಲಿ ಹಿರಿಯರ ಬಗ್ಗೆ ಗೌರವ ಕಡಿಮೆಯಾಗುತ್ತಿದೆ ಎಂದು ಜೆಡಿಎಸ್ ಕಾರ್ಯಧ್ಯಕ್ಷ ಪ್ರಕಾಶ್ ಪ್ರಿಯ ದರ್ಶನ್ ಅಭಿಪ್ರಾಯಪಟ್ಟರು.
ಕುವೆಂಪು ನಗರದಲ್ಲಿರುವ ಬೆಳಕು ವಾತ್ಸಲ್ಯದಾಮದ ಹಿರಿಯ ನಾಗರಿಕರಿಗೆ ವಿಜಯದಶಮಿ ಅಂಗವಾಗಿ ಎಸ್ ಪ್ರಕಾಶ್ ಪ್ರಿಯದರ್ಶನ್ ಸ್ನೇಹ ಬಳಗದಿಂದ ಸೀರೆ ಹಾಗೂ ಹಣ್ಣು ವಿತರಿಸಿ ವಿಜಯದಶಮಿ ಶುಭ ಕೋರಿ ಅವರು ಮಾತನಾಡಿದರು.
ಮಕ್ಕಳಿಗೆ ಹಿರಿಯರ ಬಗ್ಗೆ ಗೌರವ ಹಾಗೂ ಕರ್ತವ್ಯದ ಬಗ್ಗೆ ಶಾಲೆ, ಕಾಲೇಜು ದಿನಗಳಲ್ಲಿ ಮನವರಿಕೆ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಹಿರಿಯ ನಾಗರಿಕರು ಜೀವಿತಾವಧಿಯ ಕೊನೇ ಕ್ಷಣದವರೆಗೂ ನೆಮ್ಮದಿಯಿಂದ ಬದುಕುವಂತಹ ವಾತಾವರಣವನ್ನು ಎಲ್ಲ ಕುಟುಂಬಗಳಲ್ಲಿಯೂ ಕಲ್ಪಿಸಿಕೊಡಬೇಕು ಎಂದು ಪ್ರಕಾಶ್ ಪ್ರಿಯ ದರ್ಶನ್ ಸಲಹೆ ನೀಡಿದರು.
ಪ್ರೊ. ಪ್ರೇಮಕುಮಾರಿ, ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್, ಯುವ ಮುಖಂಡ ಮಹಾನ್ ಶ್ರೇಯಸ್, ಎಸ್ ಎನ್ ರಾಜೇಶ್,ವೀರಭದ್ರ ಸ್ವಾಮಿ, ಮಹೇಶ್, ಶ್ರೀಧರ್, ಯಶ್ವಂತ್ ಕುಮಾರ್, ನವನೀತ್ ಕುಮಾರ್,ಎಸ್.ಪಿ. ಅಕ್ಷಯ್ ಪ್ರಿಯಾದರ್ಶನ್, ಹರ್ಷಿತ್ ಎಸ್ ನಾಗೇಶ್, ಚಂದನ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.
ಹಿರಿಯರ ಬಗ್ಗೆ ಗೌರವ ಇರಲಿ: ಪ್ರಕಾಶ್ ಪ್ರಿಯದರ್ಶನ್ Read More