ಕುರುಬಗೇರಿ ಅರಳಿಕಟ್ಟೆಯಲ್ಲಿ ನಾಗರಕಲ್ಲು ಪ್ರತಿಷ್ಠಾಪನೆ
ಮೈಸೂರು: ಶ್ರೀ ಕೃಷ್ಣದೇವರಾಯ ಸಂಘ ಹಾಗೂ ಈಶ್ವರ ಸೇವಾ ಸಮಿತಿ ವತಿಯಿಂದ ಕುರುಬಗೇರಿ ಅರಳಿಕಟ್ಟೆಯಲ್ಲಿ ನಾಗರಕಲ್ಲು ಪ್ರತಿಷ್ಠಾಪನೆ ನೆರವೇರಿಸಲಾಯಿತು.

ಪೂಜಾ ಕಾರ್ಯಕ್ಕೆ ಶಾಸಕ ಹರೀಶ್ ಗೌಡ ಚಾಲನೆ ನೀಡಿ,ನಂತರ ಭಕ್ತಾದಿಗಳಿಗೆ ಪ್ರಸಾದವನ್ನು ವಿತರಿಸಿದರು.
ನಂತರ ಹರೀಶ್ ಗೌಡ ಮಾತನಾಡಿ,
ದೇವಾಲಯಗಳು ಭಕ್ತಿ, ನೆಮ್ಮದಿ ನೀಡುವ ಧಾರ್ಮಿಕ ಕೇಂದ್ರಗಳು. ಭಕ್ತರು ತಮ್ಮ ನೆಚ್ಚಿನ ದೇವರು, ದೇವಾಲಯಗಳಿಗೆ ಹೋಗಿ ಇಷ್ಟಾರ್ಥ ಸಿದ್ಧಿಗಾಗಿ ಪೂಜೆ ಸಲ್ಲಿಸಿ ಭಕ್ತಿ ಸರ್ಮಿಸುವುದು ಅನಾದಿ ಕಾಲದಿಂದಲೂ ನಡೆದು ಬಂದಿದೆ ಎಂದು ಹೇಳಿದರು.
ಈಗಲೂ ಸಹ ನೆಚ್ಚಿನ ದೇಗುಲಗಳಿಗೆ ಹೋಗಿ ಪೂಜೆ ಸಲ್ಲಿಸುವುದು ವಾಡಿಕೆ. ಭಕ್ತರ ನೆಚ್ಚಿನ ದೇಗುಲಗಳಲ್ಲಿ ಅರಳಿ ಕಟ್ಟೆ ಗಣಪತಿ ದೇಗುಲವೂ ಒಂದು. ಗಣಪತಿ ದೇವಾಲಯ ಹಲವು ವೈಶಿಷ್ಟ್ಯ ಹಾಗೂ ಐತಿಹಾಸಿಕ ಹಿನ್ನೆಲೆ ಹೊಂದಿದೆ,ಈ ದೇವಾಲಯಕ್ಕೆ ಅಪಾರ ಸಂಖ್ಯೆ ಭಕ್ತರಿದ್ದಾರೆ ಎಂದು ಹೇಳಿದರು
ಈ ಸಂದರ್ಭದಲ್ಲಿ ನಗರ ಪಾಲಿಕೆ ಮಾಜಿ ಸದಸ್ಯರಾದ ಪ್ರಶಾಂತ್ ಗೌಡ, ಸೋಮಣ್ಣ, ಮಂಜುನಾಥ್, ಕೆಂಪರಾಜು, ಜಗದೀಶ್, ನಾಗೇಶ್, ರಾಜೇಶ್, ಲೋಕೇಶ್, ಹೇಮಂತ್, ನವೀನ್ ,ಹರ್ಷ ಮುಂತಾದವರು ಉಪಸ್ಥಿತರಿದ್ದರು
ಕುರುಬಗೇರಿ ಅರಳಿಕಟ್ಟೆಯಲ್ಲಿ ನಾಗರಕಲ್ಲು ಪ್ರತಿಷ್ಠಾಪನೆ Read More