ಕುಂದಾಪುರ ಜಾನಪದದ ತವರು-ಡಾ ಜಾನಪದ ಎಸ್ ಬಾಲಾಜಿ

ಕುಂದಾಪುರ: ಕುಂದಾಪುರ ಜಾನಪದದ ತವರು ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಹಾಗೂ ಭಾರತ ಸರ್ಕಾರದ ಐಸಿಸಿಆರ್ ಸದಸ್ಯ ಡಾ ಜಾನಪದ ಎಸ್ ಬಾಲಾಜಿ ಬಣ್ಣಿಸಿದರು.

ಹಾಲಾಡಿಯ ರಾಜೀವ್ ಶೆಟ್ಟಿ ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಕನ್ನಡ ಜಾನಪದ ಪರಿಷತ್ ಅಂಗ ಸಂಸ್ಥೆ ಜಾನಪದ ಯುವ ಬ್ರಿಗೇಡ್ ಉಡುಪಿ ಜಿಲ್ಲಾ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

ಕುಂದಾಪುರದ ಗ್ರಾಮೀಣ ಭಾಗಗಳಲ್ಲಿ ಮೂಲ ಜಾನಪದ ಸಂಸ್ಕೃತಿ ಜೀವಂತವಾಗಿದೆ, ಅಳಿವಿನ ಅಂಚಿನಲ್ಲಿರುವ ಮೂಲ ಜಾನಪದ ಕಲೆಗಳನ್ನು ದಾಖಲಿಕಾರಣದ ಮೂಲಕ ಜಾನಪದ ಯುವ ಬ್ರಿಗೇಡ್ ಉಡುಪಿ ಜಿಲ್ಲಾ ಘಟಕ ಜಾನಪದ ಸಂರಕ್ಷಣೆ ಕಾರ್ಯದಲ್ಲಿ ತೊಡಗಲಿದೆ ಎಂದು ತಿಳಿಸಿದರು.

ಯುವಜನರು ಸ್ಥಳೀಯ ಜಾನಪದ ಕಲೆಯನ್ನು ಅನುಕರಣೆ ಮಾಡಿ ಅದನ್ನೇ ಅಭ್ಯಾಸ ಮಾಡಬೇಕೆಂದು ಡಾ.ಬಾಲಾಜಿ ಸಲಹೆ ನೀಡಿದರು.

ಹಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಅಶೋಕ್ ಶೆಟ್ಟಿ ಮಾತನಾಡಿ, ನಶಿಸಿಹೋಗುವ ಜಾನಪದ ಕಲೆಗಳನ್ನು ಪುನರ್ಜೀವ ಕೊಡುವ ಕಾರ್ಯ ಜಾನಪದ ಯುವ ಬ್ರಿಗೇಡ್ ಮೂಲಕ ಆಗುತ್ತಿರುವುದು ಉತ್ತಮ ಬೆಳವಣಿಗೆ ಎಂದು ತಿಳಿಸಿದರು.

ಕನ್ನಡ ಜಾನಪದ ಪರಿಸರ ರಾಜ್ಯ ಮಹಿಳಾ ಘಟಕ ಸಂಚಾಲಕಿ ಡಾ ಭಾರತಿ ಮರವಂತೆ ಮಾತನಾಡಿ ಕನ್ನಡ ಜಾನಪದ ಪರಿಷತ್ ಮೂಲಕ ಯುವಜನರಲ್ಲಿ ಜಾನಪದ ಜಾಗೃತಿ ಮೂಡಿಸುವ ಕಾರ್ಯ ರಾಜ್ಯಾದ್ಯಂತ ಪ್ರಾರಂಭವಾಗಿದೆ, ಸ್ಥಳೀಯ ಜನಪದ ಸಂಪ್ರದಾಯ ಕಲೆಗಳನ್ನು ತರಬೇತಿ ಹಾಗೂ ದಾಖಲೀಕರಣದ ಮೂಲಕ ಯುವಜನರಿಗೆ ತಿಳಿಸಲಾಗುತ್ತಿದೆ ಎಂದು ಹೇಳಿದರು.

ಸಾಹಿತಿ ಮಂಜುನಾಥ್ ಕಾಮತ್ ಮಾತನಾಡಿ,ಇಂದಿನ ದಿನಗಳಲ್ಲಿ ಜಾನಪದ ಯುವ ಬ್ರಿಗೇಡ್ ಅಗತ್ಯತೆ ಬಹಳಷ್ಟಿದೆ ಯುವ ಜನರ ಮೂಲಕ ಸಂಸ್ಕೃತಿ ಉಳಿಸುವ ಕನ್ನಡ ಜಾನಪದ ಪರಿಷತ್ ಪ್ರಯತ್ನ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಶ್ಲಾಘಿಸಿದರು.

ಜಾನಪದ ಯುವ ಬ್ರಿಗೇಡ್ ಜಿಲ್ಲಾ ಸಂಚಾಲಕರಾಗಿ ವಿನಯ್, ಸಹ ಸಂಚಾಲಕರಾಗಿ ಶರತ್ ಪೂಜಾರಿ, ಬೈಂದೂರ್ ಸಂಚಾಲಕರಾಗಿ ದರ್ಶನ್ ಪೂಜಾರಿ, ಸ್ವಸ್ಟಿಕ್ ಬಂಡಾರಿ, ಪ್ರಕೃತಿ ಸಾಲಿಗ್ರಾಮ, ಸೌಪರ್ಣಿಕ ಅವರು ಪದವಿ ಸ್ವೀಕರಿಸಿದರು.

ಹಾಲಾಡಿ ಚಂಡೆ ತಂಡ ಹಾಗೂ ಕಾಲೇಜಿನ ವಿದ್ಯಾರ್ಥಿಗಳಿಂದ ಜನಪದ ಕಾರ್ಯಕ್ರಮ ಹಾಗೂ ಯಕ್ಷಗಾನ ಪ್ರದರ್ಶನ ನಡೆಯಿತು.

ಗ್ರಾಮ ಪಂಚಾಯತ್ ಸದಸ್ಯರಾದ ಗುರುಪ್ರಸಾದ್ ಶೆಟ್ಟಿ, ಜನಾರ್ಧನ್ ಹಾಲಾಡಿ,ಪುನೀತ್ ಪೂಜಾರಿ, ಕಾಲೇಜಿನ ಉಪನ್ಯಾಸಕರಾದ ಪ್ರಕಾಶ್, ಚಂದ್ರಶೇಖರ, ಗಣಪತಿ ಹೆಗಡೆ, ಕುಮಾರ್, ಕಲಾವಿದ ಗುಂಡು ಪೂಜಾರಿ, ಜಾನಪದ ಯುವ ಬ್ರಿಗೇಡ್ ರಾಜ್ಯ ಸಂಚಾಲಕ ಅಭಿ ಶೆಟ್ಟಿ, ಕರಾವಳಿ ವಿಭಾಗ ಸಂಚಾಲಕ ಸಂದೇಶ್ ನಾಯಕ, ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕ ಸಂಪತ್ ಕುಮಾರ್ ಉಪಸ್ಥಿತರಿದ್ದರು.

ಕುಂದಾಪುರ ಜಾನಪದದ ತವರು-ಡಾ ಜಾನಪದ ಎಸ್ ಬಾಲಾಜಿ Read More

ಜಲ ಜಾನಪದೊತ್ಸವ ವಿಶಿಷ್ಟ ಕಾರ್ಯಕ್ರಮ:ಡಾ ಜಾನಪದ ಎಸ್ ಬಾಲಾಜಿ

ಕುಂದಾಪುರ: ಜಲ ಜಾನಪದೊತ್ಸವ ಜನಪದ ಪರಿಷತ್ತಿನ ವಿಶಿಷ್ಟ ಕಾರ್ಯಕ್ರಮ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ ಜಾನಪದ ಎಸ್ ಬಾಲಾಜಿ ತಿಳಿಸಿದರು.

ಕುಂದಾಪುರ ನಗರದಲ್ಲಿ ಕರ್ನಾಟಕ ಸರ್ಕಾರದ ಡಾಕ್ಟರ್ ಶಿವರಾಮ ಕಾರಂತರ ಟ್ರಸ್ಟ್ ಸದಸ್ಯರಾಗಿ ಆಯ್ಕೆಯಾದ ಪ್ರಯುಕ್ತ ರಂಗೋಲಿ ವಿದ್ವಾಂಸರು ಡಾ ಭಾರತಿ ಮರವಂತೆ ಅವರನ್ನು ಅಭಿನಂದಿಸಿ ಬಾಲಾಜಿ ಮಾತನಾಡಿದರು.

2020ರಲ್ಲಿ ಮೊದಲ ಬಾರಿಗೆ ಗೋಕರ್ಣದ ಸಮುದ್ರ ತೀರದಲ್ಲಿ ಗೋಕರ್ಣದ ದೇಗುಲದ ಸಂಯುಕ್ತ ಆಶ್ರಯದಲ್ಲಿ ಮೊದಲನೇ ಜಲ ಜನಪದ ಉತ್ಸವವನ್ನು ಆಯೋಜಿಸಲಾಗಿತ್ತು, 2023 ರಲ್ಲಿ ಡಾ ಭಾರತಿ ಮರುವಂತೆ ಅವರ ನೇತೃತ್ವದಲ್ಲಿ ಮರುವಂತೆ ಕಡಲ ತೀರದಲ್ಲಿ ವಿಶೇಷವಾದ ಜಲಜನಪದೋತ್ಸವವನ್ನು
ಯಶಸ್ವಿಯಾಗಿ ಆಯೋಜಿಸಲಾಗಿತ್ತು ಎಂದು ಹೇಳಿದರು.

ಇವರು ರಂಗೋಲಿ ಮಾಡಿದ ಸಂಶೋಧನೆಗಳಿಗೆ ಕ್ರಿಯಾಶೀಲತೆಗೆ ಮೆಚ್ಚಿ ಸರ್ಕಾರ ಇವರಿಗೆ ಶಿವರಾಮ ಕೊರಂಟೈನ್ ಟ್ರಸ್ಟ್ ಸದಸ್ಯರಾಗಿ ಮಾಡಿದೆ, ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಜವಾಬ್ದಾರಿ ನೀಡಲಿ ಎಂದು ಜನಪದ ಎಸ್ ಬಾಲಾಜಿ ಹಾರೈಸಿದರು.

ರಾಮನಗರ ಜಿಲ್ಲಾಧ್ಯಕ್ಷ ಕೆ ಸಿ ಕಾಂತಪ್ಪ ಮಾತನಾಡಿ ಡಾ ಭಾರತಿ ಮರವಂತೆ ಅವರು ರಂಗೋಲಿಯ ಕ್ಷೇತ್ರದಲ್ಲಿ ಮಾಡಿದ ಸಾಧನೆ ಇತರ ಯುವ ಜನರಿಗೆ ಅನುಕರಣೀಯ, ಇವರನ್ನು ಮಾದರಿಯಾಗಿ ಯುವಕರು ರಂಗೋಲಿಯಲ್ಲಿ ಹೊಸ ಪ್ರಯತ್ನ ನಡೆಸಲಿ ಎಂದು ಸಲಹೆ ನೀಡಿದರು.

ಕನ್ನಡ ಜಾನಪದ ಪರಿಷತ್ ಧಾರವಾಡ ಜಿಲ್ಲಾ ಘಟಕದ ಕಾರ್ಯದರ್ಶಿ ಎಂ ಸದಾನಂದ ಜಾನಪದ ಯುವ ಬ್ರಿಗೇಡ್ ರಾಜಾಜಿನಗರ ಸಾಹಸಂಚಾಲಕ ಇಮ್ರಾನ್ ಪಾಷಾ ಉಪಸ್ಥಿತರಿದ್ದರು.

ಜಲ ಜಾನಪದೊತ್ಸವ ವಿಶಿಷ್ಟ ಕಾರ್ಯಕ್ರಮ:ಡಾ ಜಾನಪದ ಎಸ್ ಬಾಲಾಜಿ Read More