ಮಾಹಿತಿ ಕೇಳಲು ಹೋದರೆ ಗೂಂಡಾ ವರ್ತನೆ:ಪಿಡಿಒ ವಿರುದ್ಧ ಕ್ರಮಕ್ಕೆ ಆಗ್ರಹ

(ವರದಿ:ಸಿದ್ದರಸಜು,ಕೊಳ್ಳೇಗಾಲ)

ಕೊಳ್ಳೇಗಾಲ: ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೇಳಲು ಹೋದರೆ ಕುಣಗಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಗೂಂಡಾವರ್ತನೆ ತೋರುತ್ತಿದ್ದಾರೆ ಎಂದು ಪಟ್ಟಣದ ಸುರೇಶ್
ಆರೋಪಿಸಿದ್ದಾರೆ.

ಪಟ್ಟಣದ ಭೀಮನಗರದ ಎನ್. ಸುರೇಶ್ ಅವರು ಕುಣಗಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಮೇಲೆ ಕ್ರಮಕ್ಕೆ ಆಗ್ರಹಿಸಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಲಿಖಿತ ದೂರು ನೀಡಿದ್ದಾರೆ.

ಕುಣಗಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ನರೇಗಾ ಯೋಜನೆಯ ಒಂದು ಕಾಮಗಾರಿಯ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಕುಣಗಳ್ಳಿ ಗ್ರಾಮ ಪಂಚಾಯಿತಿ ಕಚೇರಿಗೆ ಏಪ್ರಿಲ್ 17, 2025 ರಂದು ಕೊಳ್ಳೇಗಾಲದಲ್ಲಿರುವ ಪ್ರಧಾನ ಅಂಚೆ ಕಚೇರಿಯಿಂದ ರಿಜಿಸ್ಟರ್ ಪೋಸ್ಟ್ ಮೂಲಕ ಮಾಹಿತಿ ಹಕ್ಕು ಅರ್ಜಿಯನ್ನು ಕುಣಗಳ್ಳಿ ಗ್ರಾಮ ಪಂಚಾಯಿತಿಯ ಅಂಚೆ ಕಚೇರಿಗೆ ರವಾನಿಸಲಾಗಿತ್ತು.

ಸದರಿ ಅಂಚೆ ಕಚೇರಿಯಯವರು ರಿಜಿಸ್ಟರ್ ಪೋಸ್ಟ್‌ ಅನ್ನು ಕುಣಗಳ್ಳಿ ಗ್ರಾಮ ಪಂಚಾಯಿತಿ ಕಚೇರಿಗೆ ರವಾನಿಸಿ ಸಹಿ ಪಡೆದುಕೊಂಡಿದ್ದರು.

ಆದರೆ ನಾನು ಸಲ್ಲಿಸಿದ ಮಾಹಿತಿ ಹಕ್ಕು ಅರ್ಜಿಯ ಬಗ್ಗೆ ಕುಣಗಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಚೈತ್ರ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ನನಗೆ ಯಾವುದೇ ರೀತಿಯ ಮಾಹಿತಿ ಹಕ್ಕು ಅರ್ಜಿ ರಿಜಿಸ್ಟರ್ ಪೋಸ್ಟ್ ಮೂಲಕ ಬಂದಿಲ್ಲ, ಒಮ್ಮೆ ಪರಿಶೀಲಿಸಿ ಸಿಕ್ಕ ನಂತರ ತಮಗೆ ಮಾಹಿತಿ ನೀಡುತ್ತೇನೆ ಎಂದು ತಿಳಿಸಿದ್ದರು ಎಂದು ಸುರೇಶ್ ಹೇಳಿದ್ದಾರೆ.

ಈ ವಿಷಯದ ಬಗ್ಗೆ ಕುಣಗಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಚನ್ನೇಶ್ ಅವರನ್ನು ಕೂಡ ದೂರವಾಣಿ ಮೂಲಕ ಸಂಪರ್ಕಿಸಿದಾಗ ಇದೇ ಉತ್ತರವನ್ನು ನೀಡಿದ್ದರು.

ಈ ವಿಷಯದ ಬಗ್ಗೆ ಅರ್ಜಿ ಸಲ್ಲಿಸಿದ್ದ 30 ದಿನಗಳ ನಂತರ ಪಂಚಾಯಿತಿ ಪಿಡಿಒ ಚನ್ನೇಶ್ ಮತ್ತು ಕಾರ್ಯದರ್ಶಿ ಚೈತ್ರ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದಾಗ ನನ್ನ ಕರೆಯನ್ನು ಸ್ವೀಕರಿಸದೆ ನಿರ್ಲಕ್ಷ್ಯತೆಯನ್ನು ತೋರಿದರೆಂದು ಅವರು ದೂರಿದ್ದಾರೆ.

ನಾನು ಈ ಅರ್ಜಿ ಸಲ್ಲಿಸಿದ್ದ ವಿಷಯದ ಬಗ್ಗೆ ಅನುಮಾನ ಬಂದು ನಾನು ಅಂಚೆ ಕಚೇರಿಯಿಂದ ನೀಡಿದ್ದ ರಶೀತಿಯನ್ನು ಕುಣಗಳ್ಳಿ ಅಂಚೆ ಕಚೇರಿಗೆ ತೆಗೆದುಕೊಂಡು ಹೋಗಿ ಈ ರಿಜಿಸ್ಟರ್ ಪೋಸ್ಟ್ ಪಂಚಾಯಿತಿಗೆ ತಲುಪಿದೆಯೋ, ಇಲ್ಲವೋ ಎಂದು ವಿಚಾರಿಸಿದಾಗ ನಾನು ಕಳುಹಿಸಿದ್ದ ಮಾಹಿತಿಹಕ್ಕು ರಿಜಿಸ್ಟರ್ ಪೋಸ್ಟ್ ಏಪ್ರಿಲ್ 21, 2025 ರಂದು ಕುಣಗಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸ್ವೀಕೃತಗೊಂಡಿರುವುದು ಖಚಿತವಾಗಿದೆ.

ಆದರೆ ಈ ರಿಜಿಸ್ಟರ್ ಪೋಸ್ಟ್‌ ಅನ್ನು ಅಲ್ಲಿನ ಗುಮಾಸ್ತೆಯಾಗಿ ಕೆಲಸ ನಿರ್ವಹಿಸುವ ಕೆಂಚಮ್ಮ ಎಂಬುವವರು ಸ್ವೀಕರಿಸಿದ್ದಾರೆ ಎಂದು ಹೆಬ್ಬೆರಳಿನ ಮುದ್ರೆ ಹಾಕಿ ಅವರ ಹೆಸರು ಬರೆದು ಮೊಬೈಲ್ ಸಂಖ್ಯೆ: 6362654331 ಎಂದು ನಮೂದಿಸಲಾಗಿದೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಪಂಚಾಯಿತಿ ಕಚೇರಿಯಲ್ಲಿ ವಿಚಾರಿಸಲು ತೆರಳು ಈ ವಿಷಯದ ಬಗ್ಗೆ ಪಿ.ಡಿ.ಒ. ಚನ್ನೇಶ್ ಬಳಿ ನಾನು ನಿಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಂದು ನರೇಗಾ ಯೋಜನೆಯ ಕಾಮಗಾರಿಯ ಬಗ್ಗೆ ಮಾಹಿತಿ ಹಕ್ಕು ಅರ್ಜಿಯನ್ನು ರಿಜಿಸ್ಟರ್ ಪೋಸ್ಟ್ ಮೂಲಕ ಕಳುಹಿಸಿದ್ದೆ ಆದರೆ ಈವರೆಗೆ ನನಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ತಿಳಿಸಿದೆ. ಇದಕ್ಕೆ ಪಿ.ಡಿಒ.ಅವರು ಉತ್ತರಿಸಿ ನಮ್ಮ ಗ್ರಾಮ ಪಂಚಾಯಿತಿಗೆ ಯಾವುದೇ ಅರ್ಜಿ ಬಂದಿಲ್ಲ ಎಂದರು.

ನಂತರ ಪೋಸ್ಟ್ ಡೆಲವರಿ ಆಗಿರುವ ಬಗ್ಗೆ ಸಾಕ್ಷಿ ಸಮೇತ ಆಧಾರ ತೋರಿಸಿದೆ. ಅದಕ್ಕೆ ನೀವು ಇನ್ನೊಮ್ಮೆ ಅರ್ಜಿ ಹಾಕಿ ಆ ಅರ್ಜಿ ನಮಗೆ ದೊರೆತಿಲ್ಲ ಎಂದು ಹೇಳಿದರು.

ಇದಕ್ಕೆ ನಾನು ನನ್ನ ಅರ್ಜಿಯ ಪೋಸ್ಟ್ ನಿಮ್ಮ ಗ್ರಾಮ ಪಂಚಾಯಿತಿ ಕಚೇರಿಯ ಸಿಬ್ಬಂದಿ ಕೆಂಚಮ್ಮ ಎಂಬವರು ಸಹಿ ಮಾಡಿ ರಿಜಿಸ್ಟರ್ ಪೋಸ್ ತೆಗೆದುಕೊಂಡಿದ್ದಾರೆ ಎಂದಾಗ ಕೆಂಚಮ್ಮ ಎಂಬ ಸಿಬ್ಬಂದಿ ನಾನು ಯಾವುದೇ ಸಹಿ ಮಾಡಿ ಪೋಸ್ಟ್ ತೆಗೆದುಕೊಂಡಿಲ್ಲ ಎಂದಿದ್ದಾರೆ.

ನಂತರ ಪಿ.ಡಿ.ಒ. ರವರು ನಿಮಗೆ ಒಂದು ಸಲ ಹೇಳಿದರೆ ಅರ್ಥವಾಗುವುದಿಲ್ಲವೇ ನಿಮಗೆ ಮಾಹಿತಿ ಬೇಕಿದ್ದರೆ ಮತ್ತೊಮ್ಮೆ ಅರ್ಜಿ ಕೊಡು ಇಲ್ಲವಾದಲ್ಲಿ ನೀನು ಏನು ಮಾಡಿಕೊಳ್ಳುತ್ತೀಯೋ ಮಾಡಿಕೊ ನೀನು ಯಾರು ಎಂದು ನನಗೆ ಗೊತ್ತು ಎಂದು ಧಮ್ಕಿ ಹಾಕುದರೆಂದು ಸುರೇಶ್ ಆರೋಪಿಸಿದ್ದಾರೆ.

ಮುಂದೆ ಪರಣಾಮ ನೆಟ್ಟಗಿರುವುದಿಲ್ಲ, ನಾನು ನಿನಗೆ ಏನು ಬೇಕಾದರೂ ಮಾಡಿಬಿಡುತ್ತೇನೆ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಎಲ್ಲಾ ಅಧಿಕಾರಿಗಳು ನನ್ನ ಜೊತೆ ಚೆನ್ನಾಗಿದ್ದಾರೆ. ಮುಂದೆ ಯಾವುದೇ ಮಾಹಿತಿ ಕೇಳಿದರೂ ನನ್ನನ್ನು ಏನನ್ನು ಮಾಡಿಕೊಳ್ಳಲಾಗುವುದಿಲ್ಲ ಎಂದು ಮಾನಸಿಕವಾಗಿ ನಿಂದಿಸಿದ್ದಾರೆ.

ಹಾಗಾಗಿ ಪಿ.ಡಿ.ಒ ಚನ್ನೇಶ್ ವಿರುದ್ಧ ಸೂಕ್ತಕ್ರಮ ಕೈಗೊಂಡು ನನ್ನ ಮಾಹಿತಿ ಹಕ್ಕು ಅರ್ಜಿ ಕಾಣೆಯಾಗಿರುವ ವಿಚಾರದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತಕ್ರಮ ಕೈಗೊಳ್ಳಬೇಕೆಂದು ಸುರೇಶ್ ಮನವಿ ಮಾಡಿದ್ದಾರೆ.

ಮಾಹಿತಿ ಕೇಳಲು ಹೋದರೆ ಗೂಂಡಾ ವರ್ತನೆ:ಪಿಡಿಒ ವಿರುದ್ಧ ಕ್ರಮಕ್ಕೆ ಆಗ್ರಹ Read More