ಹುಣಸೂರು ಬಸ್ ನಿಲ್ದಾಣದಲ್ಲಿದ್ದ ವಾಹನ ನಿಲುಗಡೆ‌ ಶೆಡ್ ಏಕಾಏಕಿ ತೆರವು:ಆಕ್ರೋಶ

ಹುಣಸೂರು: ಹುಣಸೂರು ನಗರದ ಹೊಸ ಬಸ್ ನಿಲ್ದಾಣದ ಒಳಭಾಗದಲ್ಲಿ ವಾಹನ ನಿಲುಗಡೆ ಪ್ರದೇಶದಲ್ಲಿರುವ ಶೆಡ್ ತೆರವುಗೊಳಿಸುತ್ತಿದ್ದು, ಯಾವ ಕಾರಣಕ್ಕಾಗಿ ಈ ಶೆಡ್ ತೆರವುಗೊಳಿಸುತ್ತಿದ್ದಾರೆ ಎಂಬ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಆಗ್ರಹಿಸಿದ್ದಾರೆ

ಇದು ಸಾರ್ವಜನಿಕ ಸ್ವತ್ತು,ಇದನ್ನು ಉಳಿಸುವ ನಿಟ್ಟನಲ್ಲಿ ನಾವು ಹೋರಾಟ ಮಾಡುತ್ತೇವೆ‌ ಎಂದು ಎಚ್ಚರಿಸಿದರು.

ಬಹಳ ವರ್ಷಗಳಿಂದ ಇದ್ದ ಶೆಡ್ಡನ್ನು ಏಕಾಏಕಿ ತೆರವುಗೊಳಿಸಲಾಗಿದೆ. ಸರ್ಕಾರದಿಂದ ಲಕ್ಷಾಂತರ ಹಣ ಖರ್ಚು ಮಾಡಿ ಈ ಶೆಡ್ ನಿರ್ಮಿಸಲಾಗಿತ್ತು.ಈಗ ಶೆಡ್ ತರವುಗೊಳಿಸುವ ಮೂಲಕ ಸರ್ಕಾರಕ್ಕೆ ನಷ್ಟವುಂಟಾಗಿದೆ ಇದನ್ನೆಲ್ಲ ಹೇಳುವವರು ಕೇಳುವವರು‌ ಯಾರು ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಸ್ ನಿಲ್ದಾಣದ‌ ಅಧಿಕಾರಿಗಳು ಯಾವ ಆದೇಶದ ಅನ್ವಯ ಈ ಶೆಡ್ಡನ್ನು ತೆರವುಗೊಳಿಸುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಕೊಡಿಸ ಬೇಕೆಂದು ಹಿರಿಯ ಅಧಿಕಾರಿಗಳನ್ನು ಅವರು ಒತ್ತಾಯಿಸಿದರು.

ಹುಣಸೂರು ಉಪವಿಭಾಗ ಕೇಂದ್ರವಾಗಿರುವುದರಿಂದ 6 ತಾಲ್ಲೂಕುಗಳಿಂದ ಜನ ಬಂದು ಹೋಗುವ ಪ್ರದೇಶವಾಗಿದೆ.ಎಷ್ಟೋ ಮಂದಿ ಈ ಶೆಡ್ ನಲ್ಲಿ ವಾಹನ ನಿಲ್ಲಿಸಿ ಕೆಲಸ ಮುಗಿದ ನಂತರ ತೆಗೆದುಕೊಂಡು ಹೋಗುತ್ತಿದ್ದರು.

ಸರ್ಕಾರಿ ಶಾಲೆಗಳು ಶಿಥಿಲಗೊಂಡು ಬೀಳುವ ಸ್ಥಿತಿಯಲ್ಲಿದ್ದರೂ ದುರಸ್ಥಿಪಡಿಸಲು ಹಿಂದೇಟು ಹಾಕುತ್ತಿರುವ ಈ ಸಂದರ್ಭದಲ್ಲಿ ಖಾಸಗಿ ವಾಹನಗಳ ನಿಲುಗಡೆಗಾಗಿ ಅಗತ್ಯವಿರುವ ಶೆಡ್ಡನ್ನು ತೆರವುಗೊಳಿಸುತ್ತಿರುವುದು ಎಷ್ಟರಮಟ್ಟಿಗೆ ಸರಿ ಕೂಡಲೇ ಶೆಡ್ ತೆರವುಗೊಳಿಸುವುದನ್ನು ಹಾಗೂ ಪದಾರ್ಥಗಳನ್ನು ಸಾಗಿಸುವುದನ್ನು ನಿಲ್ಲಿಸಬೇಕು ಎಂದು ಚಲುವರಾಜು ಒತ್ತಾಯಿಸಿದರು.

ಒಂದು ವೇಳೆ ಶೆಡ್ ತೆರವುಗೊಳಿಸುವುದನ್ನು ತಡೆಹಿಡಿಯದಿದ್ದರೆ ಲೋಕಾಯುಕ್ತರಿಗೆ ಹಾಗೂ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುವುದು ಎಂದು ಎಚ್ಚರಿಸಿದರು.

ಇಲ್ಲಿದ್ದ ಶೆಡ್ ಚೆನ್ನಾಗಿಯೇ ಇತ್ತು ಗ್ರಾಮಾಂತರ ಪ್ರದೇಶಗಳ ಜನ ಇಲ್ಲಿ ವಾಹನ ನಿಲ್ಲಿಸಿ ಹೋಗುತ್ತಿದ್ದರು.ಇದೀಗ ಟೆಂಡರ್ ಕರೆಯದೆಯೇ ಶೆಡ್ ತೆರವುಗಳಿಸಲಾಗಿದೆ ಇದರಲ್ಲಿ ಯಾರು ಶಾಮೀಲಾಗಿದ್ದಾರೊ ಅವರ‌ ವಿರುದ್ಧ ಕ್ರಮ ಜರುಗಿಸಬೇಕು, ಶೆಡ್ ಇದೇ ಸ್ಥಳದಲ್ಲಿ ಆಗಬೇಕು ಎಂದು ಕೆ ಎಸ್ ಆರ್ ಟಿ ಸಿ ಹಿರಿಯ ಅಧಿಕಾರಿಗಳನ್ನು ಚಲುವರಾಜು ಆಗ್ರಹಿಸಿದರು.

ಹುಣಸೂರು ಬಸ್ ನಿಲ್ದಾಣದಲ್ಲಿದ್ದ ವಾಹನ ನಿಲುಗಡೆ‌ ಶೆಡ್ ಏಕಾಏಕಿ ತೆರವು:ಆಕ್ರೋಶ Read More

ದ್ವಿಚಕ್ರ ವಾಹನಗಳ ಪಾರ್ಕಿಂಗ್ ಸ್ಥಳವಾಗಿದೆ ಹುಣಸೂರು ಬಸ್ ನಿಲ್ದಾಣ!

ಹುಣಸೂರು: ಹುಣಸೂರು ಬಸ್ ನಿಲ್ದಾಣ ಕೆಎಸ್ಆರ್ಟಿಸಿ ಬಸ್ ಗಳು ನಿಲುಗಡೆ ಮಾಡಲು ಇರುವುದೊ ಅಥವಾ ದ್ವಿಚಕ್ರ ವಾಹನಗಳನ್ನು ಪಾರ್ಕಿಂಗ್ ಮಾಡಲು ಇರುವುದಾ ಎಂಬ ಸಂಶಯ ಬರುವಂತಾಗಿದೆ.

ಏಕೆಂದರೆ ಬೆಳಗಿನಿಂದ ರಾತ್ರಿವರೆಗೂ ಹುಣಸೂರು ಬಸ್ ನಿಲ್ದಾಣದಲ್ಲಿ ನೂರಾರು ದ್ವಿಚಕ್ರ ವಾಹನಗಳು ಪಾರ್ಕಿಂಗ್ ಮಾಡಲಾಗಿರುತ್ತದೆ,ಜತೆಗೆ ಅಲ್ಲೇ ಸಮೀಪದಲ್ಲೇ ಸಣ್ಣ ವಾಹನಗಳು ಕೂಡಾ ಬಸ್ ನಿಲ್ದಾಣದ ಮುಂದುಗಡೆ ಪಾರ್ಕಿಂಗ್ ಮಾಡಲಾಗಿರುತ್ತದೆ ಇದನ್ನು ಹೇಳುವವರು ಕೇಳುವವರು ಯಾರು ಇಲ್ಲವೆ?.

ಹೀಗೆ ನೂರಾರು ದ್ವಿಚಕ್ರ ವಾಹನಗಳು ಬಸ್ ನಿಲ್ದಾಣದ ಒಳಗೆ ನಿಂತರೆ ಗ್ರಾಮಾಂತರ ಪ್ರದೇಶಗಳಿಗೆ ಹುಣಸೂರು ಬಸ್ ನಿಲ್ದಾಣದಿಂದ ಹೋಗಲು ಮತ್ತು ಬಸ್ ನಿಲ್ದಾಣದ ಒಳಗೆ ಬರಲು ಬಸ್ ಚಾಲಕರಿಗೆ ತೊಂದರೆ ಆಗುತ್ತದೆ ಎಂಬ ಸಾಮಾನ್ಯ ಪರಿಜ್ಞಾನ ಕೂಡ ಈ ವಾಹನ ಸವಾರರಿಗೆ ಇಲ್ಲದಿರುವುದು ದುರ್ದೈವ.

ಹೀಗೆ ಅಡ್ಡದಿಡ್ಡಿಯಾಗಿ ವಾಹನಗಳನ್ನು ಬೇಕಾಬಿಟ್ಟಿ ಪಾರ್ಕಿಂಗ್ ಮಾಡಿ ಹೋಗಿಬಿಟ್ಟರೆ ನಿಲ್ದಾಣದಿಂದ ಹೊರಡುವ ಮತ್ತು ಒಳಗೆ ಬರುವ ಬಸ್ ಗಳು ಹೇಗೆ ಸಂಚರಿಸಬೇಕು ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಪ್ರಶ್ನಿಸಿದ್ದಾರೆ.

ಇಲ್ಲೇ ಸುತ್ತಮುತ್ತಲ ಅಂಗಡಿಗಳವರು ವಿವಿಧ ಕಚೇರಿಗೆ ಹೋಗುವವರು ಇಲ್ಲಿ ತಮ್ಮ ದ್ವಿಚಕ್ರ ವಾಹನಗಳನ್ನ ಪಾರ್ಕಿಂಗ್ ಮಾಡಿ ಹೋಗುತ್ತಿರಬಹುದು ಎಂಬ ಸಂಶಯ ಕಾಡುತ್ತಿದೆ ಕೂಡಲೇ ಕೆ ಎಸ್ ಆರ್ ಟಿ ಸಿ ಹಿರಿಯ ಅಧಿಕಾರಿಗಳು ಮತ್ತು ಬಸ್ ನಿಲ್ದಾಣದ ಅಧಿಕಾರಿಗಳು ಇದರ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಇಲ್ಲವೇ ಬಸ್ ನಿಲ್ದಾಣದ ಆವರಣದ ಒಂದು ಭಾಗದಲ್ಲಿ ಸ್ಥಳಾವಕಾಶ ಮಾಡಿ ಪಾರ್ಕಿಂಗ್ ಮಾಡಲು ಅವಕಾಶ ಕೊಟ್ಟು ಅವರಿಂದ ದಿನಕ್ಕೆ ಇಷ್ಟು ಎಂದು ಬಾಡಿಗೆ ಪಡೆದರೆ ಬಸ್ ನಿಲ್ದಾಣದ ಅಭಿವೃದ್ಧಿಗೊ ಹಣ ಸಿಗುತ್ತದೆ ಆ ಬಗೆಯಾದರೂ ಚಿಂತನೆ ಮಾಡಬಹುದು. ಇಲ್ಲದಿದ್ದರೆ ಹೀಗೆ ಬೇಕಾಬಿಟ್ಟಿ ವಾಹನಗಳನ್ನು ನಿಲ್ಲಿಸಿದರೆ ಬಸ್ ಚಾಲಕರಿಗೆ ಮತ್ತು ಸಾರ್ವಜನಿಕರಿಗೆ ಓಡಾಡಲು ತೊಂದರೆ ಆಗುತ್ತದೆ ಎಂಬ ಸಾಮಾನ್ಯ ಪರಿಜ್ಞಾನ ಬೇಡವೇ ಎಂದು ಚೆಲುವರಾಜು ಕಿಡಿಕಾರಿದ್ದಾರೆ.

ಹೀಗೆ ದ್ವಿಚಕ್ರವಾಹನ ಅಡ್ಡಾದಿಡ್ಡಿ ನಿಲ್ಲಿಸಿದ್ದರ ಬಗ್ಗ ಪ್ರಶ್ನೆ ಮಾಡಿದ್ದಕ್ಕೆ ಹೋಂ ಗಾರ್ಡ್ ಒಬ್ಬರಿಗೆ ವಾಹನ ಸವಾರ ಹಲ್ಲೆ ಮಾಡಿದ ಉದಾಹರಣೆ ಕೂಡ ಇದೆ. ಹೀಗೆ ಗಲಾಟೆಗೆ ಅವಕಾಶ ಮಾಡಿಕೊಡುವ ಬದಲು ನ್ಯಾಯ ರೀತಿಯಲ್ಲಿ ಪಾರ್ಕಿಂಗ್ ಗೆ ದ್ವಿಚಕ್ರ ವಾಹನ ಸವಾರರಿಂದ ಹಣ ಪಡೆಯುವುದರಿಂದ ಸರ್ಕಾರಕ್ಕೆ ಹಣ ಬರುತ್ತದೆ ಎಂದು ಚಲುವರಾಜು ಅವರು ಸಲಹೆ ನೀಡಿದ್ದಾರೆ.

ದ್ವಿಚಕ್ರ ವಾಹನಗಳ ಪಾರ್ಕಿಂಗ್ ಸ್ಥಳವಾಗಿದೆ ಹುಣಸೂರು ಬಸ್ ನಿಲ್ದಾಣ! Read More

ಬಸ್ ನಿಲ್ದಾಣ ಜೆ.ಕೆ ಮೈದಾನಕ್ಕೆ ಸ್ಥಳಾಂತರ ವಾಗಲಿ:ಸಂದೇಶ್

ಮೈಸೂರು: ಬೆಂಗಳೂರಿನ ಮೆಜಸ್ಟಿಕ್ ರೀತಿ ರೈಲ್ವೆ ನಿಲ್ದಾಣದ ಬಳಿ ಬಸ್ ನಿಲ್ದಾಣ ಇರುವಂತೆ ಮೈಸೂರಿನ ರೈಲ್ವೆ ನಿಲ್ದಾಣದ ಬಳಿ ಜೆಕೆ ಮೈದಾನ ದಲ್ಲಿ ಬಸ್ ನಿರ್ಮಾಣ ಮಾಡಿದರೆ ನಿಜಕ್ಕು ಎಲ್ಲರಿಗೂ ಒಳಿತಾಗಲಿದೆ ಎಂದು ‌ಸಾಮಾಜಿಕ ಹೋರಾಟಗಾರ ಸಂದೇಶ್ ಮನವಿ ಮಾಡಿದ್ದಾರೆ.

ಬನ್ನಿಮಂಟಪ ದಲ್ಲಿ ನೂತನ ಕೆ.ಎಸ್ .ಅರ್ .ಟಿ .ಸಿ ಬಸ್ ನಿಲ್ದಾಣ ನಿರ್ಮಾಣ ಕ್ಕೆ ತಯಾರಿ ಮಾಡಿ ಡಿಪಿಆರ್ ಸಲ್ಲಿಕೆ ಯಾಗಿರುವ ವರದಿ ಗಮನಿಸಿದ್ದೇನೆ, ಬಸ್ ನಿಲ್ದಾಣ ಪೂರ್ತಿಯಾಗಿ ಸ್ಥಳಾಂತರ ವಾಗದೆ ಹಳೆಯ ಬಸ್ ನಿಲ್ದಾಣವು ಅಲ್ಲೆ ಕಾರ್ಯ ನಿರ್ವಹಿಸುವುದ ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಅರ್ಧ ಕೆಲಸ ಮಾಡದೆ, ಯೋಜನ ಬದ್ದವಾಗಿ ಬೆಂಗಳೂರಿನ ಮೆಜಸ್ಟಿಕ್ ರೀತಿ ರೈಲ್ವೆ ನಿಲ್ದಾಣದ ಬಳಿ ಇರುವಂತೆ ಮೈಸೂರಿನ ರೈಲ್ವೆ ನಿಲ್ದಾಣದ ಬಳಿ ಇರುವ ಜೆಕೆ ಮೈದಾನ ದಲ್ಲಿ ಬಸ್ ನಿರ್ಮಾಣ ಮಾಡಿದರೆ ಶ್ಲಾಘನೀಯ ಎಂದು ಮಾಧ್ಯಮ ಪ್ಕಟಣೆಯಲ್ಲಿ ಸಂದೇಶ್ ತಿಳಿಸಿದ್ದಾರೆ.

ಹೀಗೆ ಮಾಡಿದರೆ ಯೋಜನ ಬದ್ದವಾಗಿರುತ್ತದೆ ಮತ್ತು ನಗರದ ಭವಿಷ್ಯದ ದೃಷ್ಠಿಯಿಂದಲೂ ಉಪಯುಕ್ತವಾಗಿರುತ್ತದೆ.

ಬಡ ಕಾರ್ಮಿಕರು ಹೆಚ್ಚಾಗಿ ರೈಲನ್ನೆ ಆಶ್ರಯಿಸಿದ್ದಾರೆ,

ಮೈಸೂರಿನ ರೈಲ್ವೆ ನಿಲ್ದಾಣ ದಿಂದ
ಬನ್ನಿಮಂಟಪ 3 ಕಿ.ಮಿ ದೂರದಲ್ಲಿದೆ ಹೋಸದಾಗಿ ನಿರ್ಮಿಸಲು ಹೊರಟಿರುವ ಬಸ್ ನಿಲ್ದಾಣ ಬೇರ ಬೇರೆ ಊರುಗಳಿಂದ ಮೈಸೂರಿಗೆ ಪ್ರಯಾಣ ಮಾಡಿ ಆಗಮಿಸುವ ಪ್ರಯಾಣಿಕರು ಮತ್ತೆ ಆಟೊ ಹತ್ತಿ ಅಥವಾ ಬಸ್ ಗೆ ಕಾದುಕುಳಿತು ಅಲ್ಲಿಗೆ ಪ್ರಯಾಣ ಮಾಡಬೇಕಾಗುತ್ತದೆ ಇದು ಜನ ಸಾಮಾನ್ಯರಿಗೆ ಹೊರೆ ಜತೆಗೆ ಸಮಯ ವ್ಯರ್ಥ ವಲ್ಲದೆ ಮತ್ತಿನೇನೂ ಅಲ್ಲ ಎಂದು ಸಂದೇಶ್ ಹೇಳಿದ್ದಾರೆ.

ಜಿಲ್ಲಾಡಳಿತ ಮತ್ತು ಸಂಬಂದಪಟ್ಟ ಅಧಿಕಾರಿಗಳು ವೈದ್ಯಕೀಯ ಇಲಾಖೆ ಅದೀನದಲ್ಲಿರುವ ಸ್ವತ್ತನ್ನು ಪಡೆಯುವತ್ತ‌ ಗಮನ ಹರಿಸಬೇಕಿದೆ.

ರೈಲ್ವೆ ನಿಲ್ದಾಣದ ಎದುರು ಇರುವ ಜೆ.ಕೆ ಮೈದಾನಕ್ಕೆ, ಗ್ರಾಮಾಂತರ ಬಸ್ ನಿಲ್ದಾಣ ಅಥವ ನಗರ ಬಸ್ ನಿಲ್ದಾಣ ನಿರ್ಮಿಸಿದರೆ ಜನ ಸಾಮಾನ್ಯರಿಗೆ ಅನೂಕೂಲ ವಾಗುತ್ತದೆ ಎಂದು ಸಂದೇಶ್ ಸಲಹೆ ನೀಡಿದ್ದಾರೆ.

ಬಸ್ ನಿಲ್ದಾಣ ಜೆ.ಕೆ ಮೈದಾನಕ್ಕೆ ಸ್ಥಳಾಂತರ ವಾಗಲಿ:ಸಂದೇಶ್ Read More