ಮುಷ್ಕರಕ್ಕೆ ಮುಂದಾಗಿದ್ದಸಾರಿಗೆ ನೌಕರರಿಗೆ ಶಾಕ್:ಎಸ್ಮಾ‌ಜಾರಿ

ಬೆಂಗಳೂರು: ಸಾರಿಗೆ ಬಂದ್‌ ಮಾಡಿ ಮುಷ್ಕರಕ್ಕೆ ಮುಂದಾಗಿದ್ದ ಸಾರಿಗೆ ನೌಕರರ‌ ಸಂಘಟನೆಗಳಿಗೆ ಸರ್ಕಾರ ಶಾಕ್‌ ನೀಡಿದೆ, ಪ್ರತಿಭಟನೆ ನಿಷೇಧಿಸಿ ಕಾರ್ಮಿಕ ಇಲಾಖೆ ಎಸ್ಮಾ ಜಾರಿ ಮಾಡಿದೆ.

ಮುಷ್ಕರ ನಡೆಸದಂತೆ ಸಾರಿಗೆ ನೌಕರರಿಗೆ ವಾರ್ನ್ ಮಾಡಲಾಗಿದೆ.

ಆ.5 ರಂದು ಬಸ್ ನಿಲ್ಲಿಸಿ ಮುಷ್ಕರ ನಡೆಸಲು ಸಾರಿಗೆ ಸಂಘಟನೆಗಳು ಮುಂದಾಗಿದ್ದವು. ಜನಸಾಮಾನ್ಯರಿಗೆ ಸಾರಿಗೆ ಸೇವೆ ಓದಗಿಸುವುದು ಅಗತ್ಯವಾಗಿದೆ, ಈ ಹಿನ್ನೆಲೆಯಲ್ಲಿ ಕರ್ನಾಟಕ ಅಗತ್ಯ ಸೇವಾ ನಿರ್ವಹಣಾ ಕಾಯಿದೆ 2013 ರಡಿ ಎಸ್ಮಾ ಜಾರಿ ಮಾಡಲಾಗಿದೆ.

ಇಂದಿನಿಂದ 6 ತಿಂಗಳು ನೌಕರರು ಯಾವುದೇ ಮುಷ್ಕರದಲ್ಲಿ ಭಾಗಿಯಾಗದಂತೆ ಎಸ್ಮಾ ಜಾರಿಗೊಳಿಸಲಾಗಿದೆ.

ಜು.1 ರಿಂದ ಡಿ.31ರ ವರೆಗೆ ನಿಗಮದಲ್ಲಿ‌ ಮುಷ್ಕರ ನಿರ್ಬಂಧಿಸಿ ಕೆಎಸ್‌ಆರ್‌ಟಿಸಿ ಕಾರ್ಮಿಕ ಇಲಾಖೆ ಅಧಿಸೂಚನೆ ಹೊರಡಿಸಲಾಗಿದೆ.

ಸರ್ಕಾರದ ಅಧಿಸೂಚನೆಯ ಪ್ರತಿಯನ್ನು ಎಲ್ಲಾ ಘಟಕ, ಕಾರ್ಯಾಗಾರ, ಕಚೇರಿ ಮತ್ತು ಬಸ್‌ ನಿಲ್ದಾಣಗಳ ಸೂಚನಾ ಫಲಕದಲ್ಲಿ ಪ್ರಕಟಿಸುವ ಮೂಲಕ ಈ ವಿಚಾರವನ್ನು ಎಲ್ಲಾ ನೌಕರರ ಗಮನಕ್ಕೆ ತರಲಾಗುವುದು ಎಂದು ಇಲಾಖೆ ತಿಳಿಸಿದೆ.

ಮುಷ್ಕರಕ್ಕೆ ಮುಂದಾಗಿದ್ದಸಾರಿಗೆ ನೌಕರರಿಗೆ ಶಾಕ್:ಎಸ್ಮಾ‌ಜಾರಿ Read More

ದೀಪಾವಳಿ‌ ರಜೆ: ಕೆ ಎಸ್ ಆರ್ ಟಿ ಸಿ ಯಿಂದ2000 ಹೆಚ್ಚುವರಿ‌ ಬಸ್

ಬೆಂಗಳೂರು: ಈ ವಾರಾಂತ್ಯದಲ್ಲಿ ದೀಪಾವಳಿ ಮತ್ತು ನವೆಂಬರ್ 1 ಕನ್ನಡ ರಾಜ್ಯೋತ್ಸವ ಸೇರಿ ಸಾಲು ಸಾಲು ರಜೆಗಳು ಬಂದಿರುವುದರಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಕೆ ಎಸ್ ಆರ್ ಟಿ ಸಿ 2000 ಬಸ್ ಗಳನ್ನು ಹೆಚ್ಚುವರಿಯಾಗಿ‌‌ ಓಡಿಸಲಿದೆ.

ಅಕ್ಟೋಬರ್ 30 ರಿಂದ ನವೆಂಬರ್ 1 ರವರೆಗೆ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಶಿವಮೊಗ್ಗ, ದಾವಣಗೆರೆ, ಮೈಸೂರು, ಮಡಿಕೇರಿ, ಹಾಸನ ಸೇರಿದಂತೆ ರಾಜ್ಯದ ಎಲ್ಲಾ ಪ್ರಮುಖ ನಗರಗಳಿಗೂ ಮತ್ತು ನೆರೆ ರಾಜ್ಯಗಳಾದ ತಮಿಳುನಾಡು, ಕೇರಳ, ಮಧುರೈ, ಚೆನ್ನೈ ಮತ್ತಿತರ ರಾಜ್ಯಗಳಿಗೂ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕೆ ಎಸ್ ಆರ್ ಟಿ ಸಿ ವ್ಯವಸ್ಥಾಪಕರು ತಿಳಿಸಿದ್ದಾರೆ.

ಪ್ರಯಾಣಿಕರು ಈ ಟಿಕೆಟ್ ಬುಕಿಂಗ್ ಅನ್ನು www.ksrtc.karnataka. gov.in ವೆಬ್ಸೈಟ್ನಲ್ಲಿ ಬುಕಿಂಗ್ ಮಾಡಬಹುದು.

ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಬುಕಿಂಗ್ ಮಾಡಿದರೆ ಶೇ.5 ರಷ್ಟು ರಿಯಾಯಿತಿ ನೀಡಲಾಗುವುದು ಹಾಗೂ ಹೋಗಿ ಬರುವ ಟಿಕೆಟ್‌ ಒಟ್ಟಿಗೆ ಬುಕ್ ಮಾಡಿದರೆ ವಾಪಸು‌ ಪ್ರಯಾಣ‌ ದರದಲ್ಲಿ ಶೇ 10 ರಷ್ಟು ರಿಯಾಯಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

ದೀಪಾವಳಿ‌ ರಜೆ: ಕೆ ಎಸ್ ಆರ್ ಟಿ ಸಿ ಯಿಂದ2000 ಹೆಚ್ಚುವರಿ‌ ಬಸ್ Read More

ಅಧಿಕಾರಿಗಳ ಕಿರುಕುಳ: ಬಸ್ ಚಾಲಕ ಆತ್ಮಹತ್ಯೆ

ಬಾಗಲಕೋಟ: ಅಧಿಕಾರಿಗಳ ಕಿರುಕುಳದಿಂದ ಮನನೊಂದು ಕೆಎಸ್ಆರ್ ಟಿ ಸಿ ಬಸ್ ಚಾಲಕ ಕಂ ನಿರ್ವಾಹಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಬೀಳಗಿಯಲ್ಲಿ ನಡೆದಿದೆ.

ಶ್ರೀಶೈಲ್ ವಿಭೂತಿ (45) ಆತ್ಮಹತ್ಯೆ ಮಾಡಿಕೊಂಡ ಬಸ್ ಚಾಲಕ.

ಬೀಳಗಿಯಲ್ಲಿರುವ ತಮ್ಮ ನಿವಾಸದಲ್ಲೇ ಶ್ರೀಶೈಲ್ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೇಲಧಿಕಾರಿಗಳ ಕಿರುಕುಳದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬ ಆರೋಪ ಮಾಡಿದೆ.

ಬೀಳಗಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಅಧಿಕಾರಿಗಳ ಕಿರುಕುಳ: ಬಸ್ ಚಾಲಕ ಆತ್ಮಹತ್ಯೆ Read More