ಶಾಸಕ ಭೈರತಿ ಬಸವರಾಜು ಬಂಧನಕ್ಕೆ ಆಮ್ ಆದ್ಮಿ ಪಕ್ಷ ಅಗ್ರಹ

ಬೆಂಗಳೂರು: ಬೆಂಗಳೂರಿನ ಪ್ರಮುಖ ಪ್ರದೇಶದ ರಿಯಲ್ ಎಸ್ಟೇಟ್ ವ್ಯಾಜ್ಯದಲ್ಲಿ ಕೊಲೆ ಆರೋಪಿಯಾದ ಕೆ.ಆರ್.ಪುರಂ ಶಾಸಕ ಭೈರತಿ ಬಸವರಾಜ್ ರನ್ನು ಕೂಡಲೇ ಬಂಧಿಸಿ ವಿಚಾರಣೆ ಗೊಳಪಡಿಸಬೇಕೆಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.

ಈ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತರನ್ನು ಇಂದು ಪಕ್ಷದ ನಿಯೋಗದೊಂದಿಗೆ ಭೇಟಿ ಮಾಡಿ ದೂರು ಸಲ್ಲಿಸಿದ ರಾಜ್ಯಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಮಾತನಾಡಿ,ಕಳೆದ ಅನೇಕ ವರ್ಷಗಳಿಂದ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಕೊಂಡಿರುವ ಶಾಸಕರು ಇದೀಗ ನೇರವಾಗಿ ಕೊಲೆಯಂತಹ ಗಂಭೀರ ಪ್ರಕರಣದಲ್ಲಿ ಭಾಗಿಯಾಗಿರುವುದು ಶಾಂತಿಪ್ರಿಯ ಬೆಂಗಳೂರಿನ ನಾಗರಿಕರು ತಲೆತಗ್ಗಿಸುವಂತಹ ವಿಷಯವಾಗಿದೆ ಎಂದು ಹೇಳಿದರು.

ಶಾಸಕರು ಸಾಕ್ಷಿಗಳನ್ನು ನಾಶಪಡಿಸುವ ಮೊದಲೇ ಬಂಧಿಸಿ, ಬೆಂಗಳೂರು ಪೊಲೀಸ್ ಇಲಾಖೆಯವರು ಕೊಲೆಗೀಡಾದ ವ್ಯಕ್ತಿಯ ಸಂಬಂಧಿಗಳಿಗೆ ನ್ಯಾಯ ದೊರಕಿಸಿ ಕೊಡಬೇಕು ಹಾಗೂ ಎಷ್ಟೇ ದೊಡ್ಡ ಪ್ರಭಾವಶಾಲಿಗಳಾಗಿದ್ದರು ಸಹ ಕಾನೂನಿನ ಮುಂದೆ ಎಲ್ಲರೂ ಸರಿಸಮಾನರೆಂಬುದನ್ನು ಈ ಮೂಲಕ ಸಾಬೀತು ಮಾಡಬೇಕು ಎಂದು ತಿಳಿಸಿದರು.

ಕೊಲೆಗೀಡಾದ ವ್ಯಕ್ತಿಯು ಈ ಹಿಂದೆ ಕೋಟ್ಯಾಂತರ ರೂ ಬೆಲೆಬಾಳುವ ಜಮೀನಿನ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಆರೋಪಿಗಳಿಂದ ಪ್ರಾಣ ಬೆದರಿಕೆ ಇತ್ತೆಂದು ಅವರ ಸಂಬಂಧಿಗಳು ತಿಳಿಸಿದ್ದಾರೆ. ಶಾಸಕರ ಒತ್ತಡದಿಂದ ಪೊಲೀಸರು ಯಾವುದೇ ಕ್ರಮ ತೆಗೆದುಕೊಳ್ಳಲು ಮುಂದಾಗಿಲ್ಲ ಎಂದು ದೂರಿದರು.

ಈಗ ಹಾಡಹಗಲೇ ಒಬ್ಬ ವ್ಯಕ್ತಿ ಕೊಲೆಯಾಗಿದೆ. ಬೆಂಗಳೂರಿನ ನಾಗರಿಕರು ಬೆಚ್ಚಿ ಬೀಳುವಂತಹ ಈ ಘಟನೆಯಿಂದ ಪೊಲೀಸ್ ಇಲಾಖೆ ತಲೆತಗ್ಗಿಸುವಂತಾಗಿದೆ. ಈಗಲಾದರೂ ಶಾಸಕ ಬೈರತಿ ಬಸವರಾಜ್ ರನ್ನು ಬಂಧಿಸಿ ಬೆಂಗಳೂರಿನ ಶಾಂತಿಯನ್ನು ಕಾಪಾಡಬೇಕು ಎಂದು ಸೀತಾರಾಮ್ ಗುಂಡಪ್ಪ ಆಗ್ರಹಿಸಿದರು.

ಶಾಸಕ ಭೈರತಿ ಬಸವರಾಜು ಬಂಧನಕ್ಕೆ ಆಮ್ ಆದ್ಮಿ ಪಕ್ಷ ಅಗ್ರಹ Read More

ಡಾ ಜಾನಪದ ಎಸ್ ಬಾಲಾಜಿ ಅವರ ಜಾನಪದ ಸೇವೆ ಅನುಕರಣೀಯ:ರಿಯಾಜ್ ಪಾಷ

ಬೆಂಗಳೂರು: ಡಾ ಜಾನಪದ ಎಸ್ ಬಾಲಾಜಿ ಅವರ ಜಾನಪದ ಸೇವೆ ಅನುಕರಣಿಯ ಎಂದು ಕನ್ನಡ ಜಾನಪದ ಪರಿಷತ್ ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಡಾ ರಿಯಾಜ್ ಪಾಷ ತಿಳಿಸಿದರು.

ಬೆಂಗಳೂರಿನ ಕೆ ಆರ್ ಪುರಂ ನಲ್ಲಿ ಹಮ್ಮಿಕೊಂಡಿದ್ದ ಕನ್ನಡ ಜಾನಪದ ಪರಿಷತ್ ಕೆ.ಆರ್ ಪುರಂ ವಿಧಾನಸಭಾ‌ ಕ್ಷೇತ್ರದ ಪದಗ್ರಹಣ, ಜಾನಪದ ಶಿವರಾತ್ರಿ ಹಾಗೂ ಸಂಕ್ರಾಂತಿ ಸಂಭ್ರಮವನ್ನು ಉದ್ಘಾಟಿಸಿ ಡಾ. ರಿಯಾಸ್ ಭಾಷಾ ಮಾತನಾಡಿದರು.

ಇದೇ ವೇಳೆ ಡಾ. ಬಾಲಾಜಿ‌ ಅವರ ಸಾಧನೆ, ಜಾನಪದ ಪ್ರೇಮವನ್ನು ಶ್ಲಾಘಿಸಲಾಯಿತು.

ಕನ್ನಡ ಜಾನಪದ‌ ಪರಿಷತ್
ದಶಮಾನೋತ್ಸವ ಆಚರಿಸಿಕೊಳ್ಳಲು ಕಾರಣಕರ್ತರಾದ ಡಾ.ಜಾನಪದ ಎಸ್ ಬಾಲಾಜಿಯವರಿಗೆ ಇದರ ಎಲ್ಲಾ‌ ಯಶಸ್ಸು ಸಲ್ಲಬೇಕು ಎಂದು ಡಾ.ರಿಯಾಜ಼್ ಪಾಷ ಹೇಳಿದರು.

ಕೆ ಆರ್ ಪುರಂ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸಾಲಿಮಠ ಮಾತನಾಡಿ ಕೆ ಆರ್ ಪುರಂ ವಿಧಾನಸಭಾ ಕ್ಷೇತ್ರದಲ್ಲಿ ಜನಪದ ಜಾಗೃತಿ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲು ರೂಪುರೇಷೆ ಮಾಡಿರುವುದಾಗಿ ತಿಳಿಸಿದರು.

ಶ್ರೀ ಕೃಷ್ಣಮೂರ್ತಿಯವರಿಗೆ ಗೌರವ ಅಧ್ಯಕ್ಷರಾಗಿ ಜಿಲ್ಲಾಧ್ಯಕ್ಷರು ಪದಪತ್ರ ನೀಡಿದರು.

ಕನ್ನಡ ಜಾನಪದ ಪರಿಷತ್ ಬೆಂಗಳೂರು ಕೇಂದ್ರ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಡಾ.ರತ್ನಕುಮಾರಿ ಜಿ.ಎಂ, ಅಜಿತ್ ಕುಮಾರ್ ಮತ್ತಿತರರು ಹಾಜರಿದ್ದರು.

ಡಾ ಜಾನಪದ ಎಸ್ ಬಾಲಾಜಿ ಅವರ ಜಾನಪದ ಸೇವೆ ಅನುಕರಣೀಯ:ರಿಯಾಜ್ ಪಾಷ Read More