ಕೆಆರ್ ಪೊಲೀಸ್ ಠಾಣೆಯಲ್ಲಿಕೃಷ್ಣ ಜನ್ಮಾಷ್ಟಮಿ

ಮೈಸೂರು: ಮೈಸೂರಿನ ಅಗ್ರಹಾರದಲ್ಲಿರುವ ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು.

ಠಾಣೆಯ ವೃತ್ತ ನಿರೀಕ್ಷಕರಾದ
ಧನರಾಜ್ ನೇತೃತ್ವದಲ್ಲಿ ಸ್ಥಳೀಯ ನಾಗರಿಕರ ಜೊತೆ ಸೇರಿ ಠಾಣೆಯಲ್ಲಿರುವ ಶ್ರೀ ಕೃಷ್ಣ ಪರಮಾತ್ಮನ ವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು.

ನಂತರ ಠಾಣೆಯ ಸಿಬ್ಬಂದಿಗಳು ಮತ್ತಿತರರಿಗೆ ಪ್ರಸಾದ ವ್ಯವಸ್ಥೆ ಮಾಡಿಸಲಾಯಿತು.

ಈ ಸಂದರ್ಭದಲ್ಲಿ ಸಬ್ ಇನ್ಸ್ಪೆಕ್ಟರ್ ವಿನೋದ್,ಮುಖ್ಯ ಪೇದೆ ಶ್ರೀನಿವಾಸ್ ಪ್ರಸಾದ್, ರಾಜಶೇಖರ್, ಅರುಣ್ ಕುಮಾರ್ ಮತ್ತು ಸಿಬ್ಬಂದಿ ವರ್ಗದವರು ಹಾಗೂ ಸ್ಥಳೀಯ ಮುಖಂಡರಾದ ಜಿ ರಾಘವೇಂದ್ರ, ನಜರ್ಬಾದ್ ನಟರಾಜ್,ರಮೇಶ್ ರಾಮಪ್ಪ, ಹರೀಶ್ ನಾಯ್ಡು, ರವಿಚಂದ್ರ,ರುದ್ರ ಮೂರ್ತಿ, ನಾಗೇಶ್, ಎಸ್.ಎನ್ ರಾಜೇಶ್, ರಾಕೇಶ್ ಮತ್ತಿತರರು ಹಾಜರಿದ್ದರು.

ಕೆಆರ್ ಪೊಲೀಸ್ ಠಾಣೆಯಲ್ಲಿಕೃಷ್ಣ ಜನ್ಮಾಷ್ಟಮಿ Read More

ಮಧ್ಯರಾತ್ರಿ ರಸ್ತೆಯಲ್ಲಿ ಹುಟ್ಟುಹಬ್ಬ ಆಚರಣೆ ಮಾಡಿದ್ದ ಯುವಕರು ವಶಕ್ಕೆ

ಮೈಸೂರು: ಮಧ್ಯರಾತ್ರಿ ಸಮಯದಲ್ಲಿ ರಸ್ತೆಯಲ್ಲಿ ಹುಟ್ಟುಹಬ್ಬ ಆಚರಣೆ ಮಾಡಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡಿದ ಯುವಕರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

ಹೀಗೆ ಕಿರಿಕಿರಿ ವುಂಟು ಮಾಡಿದ್ದ ಮೂರ್ನಾಲ್ಕು ಹುಡುಗರನ್ನು ಕೆ.ಆರ್.ಠಾಣೆ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.ಜತೆಗೆ‌ ಮತ್ತೆ ಇಂತಹ ಕೆಲಸ ಮಾಡದಂತೆ ತಾಕೀತು ಮಾಡಿದ್ದಾರೆ.

ಈ ಯುವಕರು ಮೈಸೂರಿನ ಬಸವೇಶ್ವರ ರಸ್ತೆ 10ನೇ ಕ್ರಾಸ್ ನಲ್ಲಿ ಮಧ್ಯರಾತ್ರಿ ನಡುರಸ್ತೆಯಲ್ಲೇ
ಕೇಕ್ ಕಟ್ ಮಾಡಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು.

ಮಧ್ಯರಾತ್ರಿ ರಸ್ತೆಯಲ್ಲಿ ಹುಟ್ಟುಹಬ್ಬ ಆಚರಣೆ ಮಾಡಿದ್ದ ಯುವಕರು ವಶಕ್ಕೆ Read More

ಅಕ್ರಮ ಸಂಬಂಧ: ಪತಿಯ ಬಲಿ ಪಡೆದ ಪಾಪಿ ಪತ್ನಿ

ಮೈಸೂರು: ಪತ್ನಿಯ ಅಕ್ರಮ ಸಂಬಂಧಕ್ಕೆ ಪತಿ ಬಲಿಯಾದ ಘಟನೆ ಮೈಸೂರಿನ ಕೆ.ಆರ್.ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಈ ಘಟನೆ ಕಾಕರವಾಡಿಯಲ್ಲಿ ನಡೆದಿದ್ದು,ಪತ್ನಿಯ ಕುತಂತ್ರದಿಂದ ಪತಿ ಮಹಮದ್ ಷಫಿ ಬಲಿಯಾಗಿದ್ದಾರೆ.

ಪತ್ನಿ ಶಬ್ರೀನ್ ತಾಜ್ ಹಾಗೂ ಪ್ರಿಯಕರ
ಅನ್ವರ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಮಹಮದ್ ಷಫಿ ಹಾಗೂ ಶಬ್ರೀನ್ ತಾಜ್ 16 ವರ್ಷಗಳ ಹಿಂದೆ ಮದುವೆ ಅಗಿದ್ದರು.ದಂಪತಿಗೆ 12 ವರ್ಷದ ಮಗಳಿದ್ದಾಳೆ.

ರೇಡಿಯೇಟರ್ ಕೆಲಸ ಮಾಡುತ್ತಿದ್ದ ಮಹಮದ್ ಷಫಿ ಹಾಗೂ ಪತ್ನಿ ನಡುವೆ ಐದಾರು ವರ್ಷಗಳಿಂದ ಅನ್ಯೋನ್ಯತೆ ಇರಲಿಲ್ಲ.

ಗಾರ್ಮೆಂಟ್ಸ್ ನಲ್ಲಿ ಶಬ್ರೀನ್ ತಾಜ್ ಕೆಲಸ ಮಾಡುತ್ತಿದ್ದಳು.ಪ್ರತಿದಿನ ಆಟೋದಲ್ಲಿ ಅನ್ವರ್ ಗಾರ್ಮೆಂಟ್ಸ್ ಫ್ಯಾಕ್ಟರಿಗೆ ಕರೆದೊಯ್ಯುತ್ತಿದ್ದ.ಈ ವೇಳೆ ಇಬ್ಬರ ನಡುವೆ ಸ್ನೇಹ ಬೆಳೆದು ಪ್ರೀತಿಗೆ ತಿರಿಗಿದೆ.

ಈ ವಿಚಾರ‌ ತಿಳಿದು ಪತಿ ಹಲಾಟೆ ಮಾಡಿದ್ದಾರೆ.ಹಿರಿಯರು ಇಬ್ಬರ ನಡುವೆ ಸಂಧಾನ ನಡೆಸಿದ್ದಾರೆ.ಪತಿ ಇದ್ದರೆ ಅಕ್ರಮ ಸಂಬಂಧಕ್ಕೆ ತೊಂದರೆ ಆಗುತ್ತದೆ ಎಂದು ನಿರ್ಧರಿಸಿದ ಶಬ್ರೀನ್ ತಾಜ್ ಪತಿಯನ್ನ ಮುಗಿಸಲು ಸ್ಕೆಚ್ ಹಾಕಿದ್ದಾಳೆ.

ಈ‌ ವಿಚಾರವನ್ನು ಪ್ರಿಯಕರನಿಗೂ ತಿಳಿಸಿ ಶಬ್ರೀನ್ ತನ್ನ ತಾಯಿ ಮನೆಗೆ ತೆರಳಿದ್ದಾಳೆ.ಈ ವೇಳೆ ಪತಿ ಮಹಮದ್ ಷಫಿ ಮನೆಗೆ ಬಂದು ಮಲಗಿದ್ದ.

ಈ ವಿಚಾರವನ್ನ ಪ್ರಿಯಕರನಿಗೆ ತಿಳಿಸಿದ್ದಾರೆ.ಆಟೋವನ್ನ ದೂರದಲ್ಲಿ ನಿಲ್ಲಿಸಿ ಮನೆಗೆ ಪ್ರವೇಶಿಸಿದ ಪಾಪಿ ಅನ್ವರ್ ಮಲಗಿದ್ದ ಷಫಿಯ ಕುತ್ತಿಗೆಯನ್ನ ಮೊಬೈಲ್ ಚಾರ್ಜರ್ ನಿಂದ ಬಿಗಿದು ಕೊಂದು ಏನೂ ತಿಳಿಯದಂತೆ ಹೊರಬಂದಿದ್ದಾನೆ.

ಅದೇ ರಾತ್ರಿ ಮಹಮದ್ ಷಫಿ ಮನೆಯವರಿಗೆ ಫೋನ್ ಮಾಡಿ ಪ್ರಜ್ಞೆತಪ್ಪಿ ಬಿದ್ದು ಮೃತಪಟ್ಟಿರುವುದಾಗಿ ತಿಳಿಸಲಾಗಿದೆ.

ಮನೆಗೆ ಬಂದ ಷಫಿ ಕಡೆಯವರು ಇವರ ಮಾತನ್ನ ನಂಬಿದ್ದಾರೆ.ಮೃತದೇಹಕ್ಕೆ ಸಂಪ್ರದಾಯವಾಗಿ ಸ್ನಾನ ಮಾಡಿಸುವ ವೇಳೆ ಕುತ್ತಿಗೆಯಲ್ಲಿ ಗಾಯದ ಗೆರೆ ಕಾಣಿಸಿದ್ದು ತಕ್ಷಣ ಕೆ.ಆರ್.ಠಾಣೆ ಪೊಲೀಸರಿಗೆ ಸುದ್ದಿ ತಿಳಿಸಿದ್ದಾರೆ.

ಮೃತದೇಹ ಪರಿಶೀಲಿಸಿದ ಪೊಲೀಸರಿಗೆ ಕೊಲೆಯಾಗಿರುವುದು ಗೊತ್ತಾಗಿದೆ.ಕೂಡಲೇ ನಡೆದ ಸಂಪೂರ್ಣ ಮಾಹಿತಿ ಕಲೆಹಾಕಿದಾಗ ಪತ್ನಿಯೇ ಸ್ಕೆಚ್ ಹಾಕಿ ಮಹಮದ್ ಷಫಿಯನ್ನ ಪ್ರಿಯಕರನ ಮೂಲಕ ಕೊಂದ ರಹಸ್ಯ ಬಯಲಾಗಿದೆ.ಇದೀಗ ಪಾಪಿಗಳಿಬ್ಬರೂ ಕಂಬಿ ಎಣಿಸುತ್ತಿದ್ದಾರೆ.

ಅಕ್ರಮ ಸಂಬಂಧ: ಪತಿಯ ಬಲಿ ಪಡೆದ ಪಾಪಿ ಪತ್ನಿ Read More

ಅಧಿಕಾರ ವಹಿಸಿಕೊಂಡ ಕೆಆರ್ ಠಾಣೆ ನೂತನ ಸರ್ಕಲ್ ಇನ್ಸ್ಪೆಕ್ಟರ್ ಧನರಾಜ್

ಮೈಸೂರು: ಮೈಸೂರಿನ ಅಗ್ರಹಾರದ ಕೆಆರ್ ಪೊಲೀಸ್ ಠಾಣೆಯ ನೂತನ ಸರ್ಕಲ್ ಇನ್ಸ್ಪೆಕ್ಟರ್ ಆಗಿ ಧನರಾಜ್ ಅಧಿಕಾರವಹಿಸಿಕೊಂಡಿದ್ದಾರೆ.

ನೂತನ ಸರ್ಕಲ್ ಇನ್ಸ್ಪೆಕ್ಟರ್ ಆಗಿ ಅಧಿಕಾರ ವಹಿಸಿಕೊಂಡ ಧನರಾಜ್ ಅವರನ್ನು ಹಲವಾರು ಮುಖಂಡರು ಅಭಿನಂದಿಸಿದರು.

ಚಾಮುಂಡೇಶ್ವರಿ ಕ್ಷೇತ್ರದ ಕೆಪಿಸಿಸಿ ಸದಸ್ಯ ನಜರ್ ಬಾದ್ ನಟರಾಜ್, ಕೆಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ, 47ನೇ ವಾರ್ಡ್ ನ ರಮೇಶ್ ರಾಮಪ್ಪ, 28ನೇ ವಾರ್ಡ್ ನ ಪ್ರಕಾಶ್, ನಿವೃತ್ತ ಪೊಲೀಸ ಅಧಿಕಾರಿ ಶ್ರೀನಿವಾಸ್, ಕನಕ ಮೂರ್ತಿ, ಪ್ರಭು ಮತ್ತಿತರರು ಹೂಗುಚ್ಛ ನೀಡಿ ಶಾಲು ಹೊದಿಸಿ ಸನ್ಮಾನಿಸಿ ಶುಭ ಕೋರಿದರು.

ಅಧಿಕಾರ ವಹಿಸಿಕೊಂಡ ಕೆಆರ್ ಠಾಣೆ ನೂತನ ಸರ್ಕಲ್ ಇನ್ಸ್ಪೆಕ್ಟರ್ ಧನರಾಜ್ Read More