ಯುವತಿ‌ ಜೊತೆ ಚಕ್ಕಂದ‌ವಾಡಿ ವಿಡಿಯೋ ವೈರಲ್: ಯುವಕನ ವಿರುದ್ಧ ಎಫ್ಐಆರ್

ಮೈಸೂರು: ಕೆ.ಆರ್.ನಗರ ಶಾಸಕ ರವಿಶಂಕರ್ ಅವರ ಆಪ್ತರೆಂದು ಹೇಳಲಾದ ಲೋಹಿತ್ ವಿರುದ್ದ ಪ್ರಕರಣ ದಾಖಲಾಗಿದೆ.

ಲೋಹಿತ್ ಕುರಿತಾದುದು ಎನ್ನಲಾದ ವಿಡಿಯೋದಲ್ಲಿರುವ ಯುವತಿಯ ತಂದೆ ಸೈಬರ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕು
ಲೋಹಿತ್ ಶಾಸಕ ರವಿಶಂಕರ್ ಅವರ ಆಪ್ತರಲ್ಲಿ ಒಬ್ಬ ಎಂದು ಹೇಳಲಾಗಿದೆ.

ಮಾಯಿಗೌಡನಹಳ್ಳಿ ಗ್ರಾಮದ ಸೋಮೇಗೌಡ ಎಂಬವರ ಮೂಲಕ‌ ದೂರು ನೀಡಲಾಗಿದೆ.

ಹಾಡ್ಯ ಗ್ರಾಮದ‌ ಯುವತಿ ಜೊತೆ ಚಕ್ಕಂದವಾಡುವ ವಿಡಿಯೋ ವೈರಲ್ ಆಗಿದೆ.
ಲೋಹಿತ್ @ ರಾಜಿ ಎಂಬಾತನ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ಮೂರು ತಿಂಗಳ ಹಿಂದೆ ಯುವತಿಗೆ ಬೇರೊಬ್ಬರ ಜೊತೆ ವಿವಾಹ ಮಾಡಿಕೊಡಲಾಗಿತ್ತು.ಆದರೆ
ವೈಯ್ಯಕ್ತಿಕ ಲಾಭಕ್ಕಾಗಿ ವಿಡಿಯೋ ಹರಿಬಿಟ್ಟಿದ್ದಾರೆಂದು ಯುವತಿ ತಂದೆ ದೂರು ನೀಡಿದ್ದಾರೆ.

ಜಮೀನಿನ ವಿಚಾರಕ್ಕೆ ಲೋಹಿತ್ ದ್ವೇಷ ಮಾಡುತ್ತಿದ್ದ.ಮಗಳ ಜೊತೆಗಿನ ಖಾಸಗಿ‌ ವಿಡಿಯೋ ಮಾಡಿಕೊಂಡು ಹರಿಬಿಟ್ಟಿದ್ದಾನೆ.
ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ
ತಕ್ಷಣ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಯುವತಿ ಹೆಸರಿನಲ್ಲಿ ತಂದೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಾಗಿರುವುದು ಗೊತ್ತಾದ ಕೂಡಲೆ ಲೋಹಿತ್ ತಲೆಮರೆಸಿ ಕೊಂಡಿರುವುದಾಗಿ‌ ತಿಳಿದುಬಂದಿದೆ.

ಯುವತಿ‌ ಜೊತೆ ಚಕ್ಕಂದ‌ವಾಡಿ ವಿಡಿಯೋ ವೈರಲ್: ಯುವಕನ ವಿರುದ್ಧ ಎಫ್ಐಆರ್ Read More

ಸಾಲಿಗ್ರಾಮದಲ್ಲಿ ಸರ್ಕಾರಿ ಶಾಲೆ ಕಟ್ಟಡ ಕೆಡವಿದವರ ವಿರುದ್ಧ ಕ್ರಮಕ್ಕೆ ಕೆಪಿಪಿ ಆಗ್ರಹ

ಹುಣಸೂರು: ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಬೇಕು ಎಂಬುದು ಕೇವಲ ಭಾಷಣಗಳಿಗೆ ಸೀಮಿತವಾದಂತಿದೆ.

ಏಕೆಂದರೆ ಎಷ್ಟೋ ಸರ್ಕಾರಿ ಶಾಲೆಗಳು ಕುಸಿಯುತ್ತಿವೆ, ಇನ್ನು ಕೆಲವೆಡೆ ಖಾಸಗಿ ವ್ಯಕ್ತಿಗಳು ದುರುಪಯೋಗಪಡಿಸಿದ್ದಾರೆ ಆದರೆ ಇದನ್ನೆಲ್ಲ ಕೇಳುವವರು ಹೇಳುವವರು ಯಾರು ಇಲ್ಲದಂತಾಗಿದೆ, ಹಾಗಾಗಿಯೇ ಸರ್ಕಾರಿ ಶಾಲೆಗಳು ಇನ್ನು ಅಭಿವೃದ್ಧಿಯಾಗದೆ ಹಾಗೆ ಉಳಿಯುತ್ತಿವೆ.

ಇದೆಲ್ಲ ಪೀಠಿಕೆ ಅಷ್ಟೇ. ಕೆಆರ್ ನಗರ ತಾಲೂಕು ಸಾಲಿಗ್ರಾಮದಲ್ಲಿ ಚೆನ್ನಾಗಿ ನಡೆಯುತ್ತಿದ್ದ ಸರಕಾರಿ ಶಾಲೆಯನ್ನೇ ಖಾಸಗಿ ವ್ಯಕ್ತಿಯೊಬ್ಬರು ಕೆಡವಿದ್ದಾರೆ, ಇದು ನಿಜಕ್ಕೂ ಅಕ್ಷಮ್ಯ ಅಪರಾಧ.

ಸರ್ಕಾರಿ ಶಾಲೆಗಳು ನಡೆಯುವುದೇ ಕಷ್ಟ. ಪೋಷಕರು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಾರೆ,ಅಂತದ್ದರಲ್ಲೂ ಅಲ್ಲೋ ಇಲ್ಲೋ ಒಂದೊಂದು ಸರ್ಕಾರಿ ಶಾಲೆಗಳು ಚೆನ್ನಾಗಿ ನಡೆಯುತ್ತಿದ್ದರೂ ಇಂತಹ ಖಾಸಗಿ ದುರುಳರಿಂದಾಗಿ ಶಾಲೆಗಳು ಮುಚ್ಚಿ ಹೋಗುವ ಸ್ಥಿತಿಗೆ ಬಂದಿದೆ.

ಸಾಲಿಗ್ರಾಮ ಪೊಲೀಸ್ ಠಾಣೆ ಹಿಂಭಾಗದಲ್ಲೇ ಸರ್ಕಾರಿ ಕನ್ನಡ ಶಾಲೆ ಇದೆ, ಸಮೀಪದ ಖಾಸಗಿ ವ್ಯಕ್ತಿ ತಮ್ಮ ಮನೆ ಸರಿ ಮಾಡಿಕೊಳ್ಳಲು ಈ ಶಾಲೆಯ ಕಟ್ಟಡ ಕೆಡವಿರುವುದು ಎಷ್ಟು ಸರಿ?.

ಇದೆಲ್ಲ ಗೊತ್ತಿದ್ದರೂ ಶಾಸಕರು,ಬಿಇಒ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆಯೇ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಆಕ್ರೋಶದಿಂದ ಪ್ರಶ್ನಿಸಿದ್ದಾರೆ.

ಭಾನುವಾರ ಶಾಲೆಯ ಕಟ್ಟಡವನ್ನು ಕೆಡವಿದ್ದು ವಿಷಯ ತಿಳಿಯುತ್ತಿದ್ದಂತೆ ತಮ್ಮ ಪಕ್ಷದ ಸದಸ್ಯರೊಂದಿಗೆ ಸಾಲಿಗ್ರಾಮಕ್ಕೆ ತೆರಳಿದ ಚೆಲುವರಾಜು ಸರ್ಕಾರಿ ಶಾಲೆ ಕಟ್ಟಡ ಕೆಡ ವಿರುವುದನ್ನು ತೀವ್ರವಾಗಿ ಖಂಡಿಸಿದರು.

ಪೊಲೀಸ್ ಠಾಣೆಯಲ್ಲಿ ಈ ಕುರಿತು ವಿಚಾರಿಸಿದಾಗ ಪೊಲೀಸ್ ಅಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೂ ಮಾಹಿತಿ ನೀಡಿದ್ದೇವೆ ಈಗಾಗಲೇ ವ್ಯಕ್ತಿಗೆ ಸೇರಿದ ಜೆಸಿಬಿ ಮತ್ತು ಟ್ರಾಕ್ಟರ್ ಗಳನ್ನು ವಶಕ್ಕೆ ಪಡೆದಿದ್ದೇವೆ ಎಂದು ತಿಳಿಸಿದರೆಂದು ಚಲುವರಾಜು ವರ್ಷಿಣಿ ನ್ಯೂಸ್ ವೆಬ್ ಪೋರ್ಟಲ್ ಗೆ ಮಾಹಿತಿ ನೀಡಿದರು.

ಶಾಲಾ ಕಟ್ಟಡ ಕೆಡವಿದ ಖಾಸಗಿ ವ್ಯಕ್ತಿಯ ಮೇಲೆ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಈ ಶಾಲೆಯನ್ನು ಕೂಡಲೇ ದುರಸ್ತಿ ಮಾಡಿ ಮೊದಲಿನಂತೆ ಶಾಲೆ ನಡೆಯಬೇಕು ಇಲ್ಲದೆ ಹೋದಲ್ಲಿ ಸಾಲಿಗ್ರಾಮದಲ್ಲಿ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ಚೆಲುವರಾಜು ಕಠಿಣ ಎಚ್ಚರಿಕೆ ನೀಡಿದ್ದಾರೆ.

ಸ್ಥಳೀಯ ಶಾಸಕರ ಕುಮ್ಮಕ್ಕಿನಿಂದಲೇ ಇಂತಹ ಕೃತ್ಯಗಳು ನಡೆಯುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ ಇದಕ್ಕೆ ಸಂಬಂಧಪಟ್ಟ ಶಾಸಕರೇ ಉತ್ತರಿಸಬೇಕಿದೆ.

ಇದೆಲ್ಲ ಏನೇ ಆಗಲಿ ಸರ್ಕಾರಿ ಶಾಲೆಗಳನ್ನು ಉಳಿಸುವುದು ಬೆಳೆಸುವುದು ನಮ್ಮ ನಾಡಿನ ಎಲ್ಲರ ಕರ್ತವ್ಯವಾಗಿದೆ. ಸರ್ಕಾರಿ ಶಾಲೆಗಳನ್ನು ಕೆಡುವುವರು ಯಾರೇ‌ ಆಗಿರಲಿ ಎಲ್ಲರೂ ಸೇರಿ ಖಂಡಿಸಬೇಕಿದೆ.

ಶಿಕ್ಷಣ ಸಚಿವರು ಕೂಡ ತಕ್ಷಣ ಇತ್ತ ಗಮನ ಹರಿಸಿ ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲೇಬೇಕಿದೆ.

ಸಾಲಿಗ್ರಾಮದಲ್ಲಿ ಸರ್ಕಾರಿ ಶಾಲೆ ಕಟ್ಟಡ ಕೆಡವಿದವರ ವಿರುದ್ಧ ಕ್ರಮಕ್ಕೆ ಕೆಪಿಪಿ ಆಗ್ರಹ Read More

ಗದ್ದೆಗೆ ನೀರು ಬಿಡುವ ವಿಚಾರಕ್ಕೆ ಕ್ಯಾತೆ; ಗುದ್ದಲಿಯಿಂದ ಹಲ್ಲೆ:ಎಫ್ಐಆರ್

ಕೆ.ಆರ್.ನಗರ: ಗದ್ದೆಗೆ ನೀರುಬಿಡುವ ವಿಚಾರದಲ್ಲಿ ಕ್ಯಾತೆ ತೆಗೆದ ಇಬ್ಬರು ವ್ಯಕ್ತಿಗಳು ಗುದ್ದಲಿಯಿಂದ ಹಲ್ಲೆ ನಡೆಸಿದ ಘಟನೆ ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕುಮಾರ್ ಎಂಬವರು ಒಳಗಾಗಿ ಗಾಯಗೊಂಡಿದ್ದಾರೆ.

ಹಲ್ಲೆ ನಡೆಸಿದ ಹರೀಶ್ ಹಾಗೂ ಮಹೇಶ್ ಎಂಬುವರ ವಿರುದ್ದ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಒಂದು ಎಕರೆ ಗದ್ದೆ ಕುಮಾರ್ ಗೆ ಸೇರಿದ್ದು,ಪಕ್ಕದ ಜಮೀನನ್ನು ರಾಂಪುರದ ಹರೀಶ್ ಭೋಗ್ಯಕ್ಕೆ ಪಡೆದಿದ್ದಾರೆ,
ದೊಡ್ಡಕಾಲುವೆಯಿಂದ ಜಮೀನಿಗೆ ನೀರು ಹಾದುಹೋಗುವ ಬದುವನ್ನ ಕುಮಾರ್ ಕೆತ್ತುತ್ತಿದ್ದಾಗ ಹರೀಶ್ ಬಂದು ಕ್ಯಾತೆ ತೆಗೆದಿದ್ದಾರೆ.

ಆಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.ಕೈಯಲ್ಲಿ ಹಿಡಿದಿದ್ದ ಗುದ್ದಲಿಯಿಂದ ಕುಮಾರ್ ಮೇಲೆ ಹರೀಶ್ ಹಲ್ಲೆ ನಡೆಸಿದ್ದಾರೆ,ಈ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.

ಹರೀಶ್ ಗೆ ಮಹೇಶ್ ಸಾಥ್ ನೀಡಿದ್ದಾರೆಂದು ಹಲ್ಲೆಗೊಳಗಾದ ಕುಮಾರ್ ಪತ್ನಿ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಹರೀಶ್ ಹಾಗೂ ಮಹೇಶ್ ವಿರುದ್ದ ದೂರು ನೀಡಿದ್ದಾರೆ.

ಗದ್ದೆಗೆ ನೀರು ಬಿಡುವ ವಿಚಾರಕ್ಕೆ ಕ್ಯಾತೆ; ಗುದ್ದಲಿಯಿಂದ ಹಲ್ಲೆ:ಎಫ್ಐಆರ್ Read More

ಗಾಂಜಾ ಮಾರಾಟ: ಪೊಲೀಸರ ದಾಳಿ-6 ಕೆಜಿ ಒಣ ಗಾಂಜಾ ಗೂಡ್ಸ್ ಆಟೋ ವಶ

ಮೈಸೂರು,ಏ.3: ಮೈಸೂರಿನ ಸೆನ್ ಕ್ರೈಂ ಹಾಗೂ ಕೆ ಆರ್ ನಗರ ಠಾಣೆ ಪೊಲೀಸರು ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ನಡೆಸಿ, 6 ಕೆಜಿ ಒಣ ಗಾಂಜಾ ಮತ್ತು ಗೂಡ್ಸ್ ಆಟೋ ವಶಪಡಿಸಿಕೊಂಡಿದ್ದಾರೆ.

ಮೈಸೂರು ಜಿಲ್ಲೆ ಕೆ ಆರ್ ನಗರ ತಾಲೂಕಿನ ಮುಸ್ಲಿಂ ಬ್ಲಾಕ್ ವಾರ್ಡ್ 20 ರಲ್ಲಿ ಮೈಸೂರಿನ ಸೆನ್ ಕ್ರೈಂ ಠಾಣೆಯ ಡಿವೈಎಸ್ಪಿ ಎನ್.ರಘು ನೇತೃತ್ವದಲ್ಲಿ ದಾಳಿ ನಡೆಸಲಾಯಿತು.

ದಾಳಿ ವೇಳೆ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿ ಪರಾರಿಯಾಗಿಬಿಟ್ಟಿದ್ದಾನೆ.ಆದರೆ ಸ್ಥಳದಲ್ಲಿ ಸಿಕ್ಕಿದ 6 ಕೆಜಿ ಒಣ ಗಾಂಜಾ ಮತ್ತು ಗೂಡ್ಸ್ ಆಟೋ ಮತ್ತಿತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಕೆ ಆರ್ ನಗರ ಠಾಣೆ ಇನ್ಸ್ಪೆಕ್ಟರ್ ಶಿವಪ್ರಕಾಶ್, ಪೊಲೀಸ್ ಸಿಬ್ಬಂದಿ ಪರಶುರಾಮ ಗೌಡ, ಸೆನ್ ಠಾಣೆಯ ಪಿಎಸ್ಐ ಸುರೇಶ್ ಬೋಪಣ್ಣ, ಮೋಹನ್, ಮಹೇಶ್‌ಕುಮಾರ್, ಅಭಿಷೇಕ್, ಮಹೇಶ್, ಪಾಲ್ಗೊಂಡಿದ್ದರು.

ಕೆ ಆರ್ ನಗರ ಪೊಲೀಸರು ಪ್ರಕರಣ ದಾಖಲಾಗಿಸಿದ್ದಾರೆ.

ಗಾಂಜಾ ಮಾರಾಟ: ಪೊಲೀಸರ ದಾಳಿ-6 ಕೆಜಿ ಒಣ ಗಾಂಜಾ ಗೂಡ್ಸ್ ಆಟೋ ವಶ Read More

ಚುಂಚನಕಟ್ಟೆ ಧನುಷ್ಕೋಟಿ ಜಲಪಾತೋತ್ಸವಕ್ಕೆ‌ ಚಾಲನೆ

ಮೈಸೂರು: ಕೆ ಆರ್‌ ನಗರ ತಾಲೂಕು ಚುಂಚನಕಟ್ಟೆ ಚುಂಚನಕಟ್ಟೆ ಧನುಷ್ಕೋಟಿ ಜಲಪಾತೋತ್ಸವಕ್ಕೆ‌ ಚಾಲನೆ ಅದ್ದೂರಿ ಚಾಲನೆ ದೊರೆಯಿತು.

ಶನಿವಾರ ರಾತ್ರಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋಧ್ಯಮ ಇಲಾಖೆ
ಆಯೋಜಿಸಿದ್ದ ಚುಂಚನಕಟ್ಟೆ ಜಲಪಾತೋತ್ಸವ ಕಾರ್ಯಕ್ರಮವನ್ನು ಜಿಲ್ಲಾ ಉಸ್ತವಾರಿ ಸಚಿವರಾದ ಡಾ. ಹೆಚ್ ಸಿ ಮಹದೇವಪ್ಪ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಸಚಿವರು,ನಮ್ಮ ನಾಡು ನುಡಿ, ಜನರ ಆಚಾರ ವಿಚಾರ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಇಂತಹ ಉತ್ಸವಗಳನ್ನು ಆಚರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೆ ಆರ್ ನಗರ ಕ್ಷೇತ್ರದ ಮೇಲೆ ಹೆಚ್ಚು ಪ್ರೀತಿ. ಇಲ್ಲಿನ ಶ್ರೀರಾಮ ಸಕ್ಕರೆ ಕಾರ್ಖಾನೆ ಯನ್ನು ಖಾಸಗಿಯವರಿಗೆ ವಹಿಸಿ ಉತ್ತಮವಾಗಿ ನಡೆಸುವ ಉದ್ದೇಶವನ್ನು ಸರ್ಕಾರ ಹೊಂದಿದೆ ಎಂದು ತಿಳಿಸಿದರು.

ಪಶು ಸಂಗೋಪನೆ ಹಾಗೂ ರೇಷ್ಮೆ ಸಚಿವ ಕೆ ವೆಂಕಟೇಶ್ ಅವರು ಮಾತನಾಡಿ ಈ ವರ್ಷ ಉತ್ತಮ ಮಳೆಯಾಗಿ ಕೆರೆ ಕಟ್ಟೆಗಳು ಡ್ಯಾಂ ಗಳು ತುಂಬಿವೆ. ಜನರು ಸಮೃದ್ಧಿಯಿಂದ ಜೀವನ ನಡೆಸಲು ಸಾಧ್ಯವಾಗಿದೆ ಎಂದು ಹೇಳಿದರು.

ನಾವು ಗಗನಚುಕ್ಕಿ ಭರಚುಕ್ಕಿ ಜಲಪಾತೋತ್ಸವ ಮಾಡಿದೆವು.ಈಗ ಚುಂಚನಕಟ್ಟೆ ಯಲ್ಲಿ ಹಮ್ಮಿಕೊಳ್ಳಲಾಗಿದೆ. ಇಂತಹ ಉತ್ಸವಗಳ ಮೂಲಕ ಜನರಿಗೆ ಉತ್ತಮ ಮನರಂಜನೆ ನೀಡಲಾಗುತ್ತದೆ. ಸಾರ್ವಜನಿಕರು ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳಿ.ಇಲ್ಲಿನ ಶಾಸಕ ಡಿ ರವಿಶಂಕರ್ ಅವರು ಕ್ಷೇತ್ರದಲ್ಲಿ ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆ ಆರ್ ನಗರ ಶಾಸಕ ಡಿ ರವಿಶಂಕರ್ ಮಾತನಾಡಿ ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿ ಆಯ್ಕೆಯಾದ ಸಂದರ್ಭದಿಂದ ತಾಲ್ಲೂಕಿನ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ,ಶ್ರೀರಾಮ ಸಕ್ಕರೆ ಕಾರ್ಖಾನೆ ಯನ್ನು ನೊಂದಣಿ ಮಾಡಿಸಿ ಮುಂದಿನ ಜನವರಿಯಿಂದ ಪ್ರಾರಂಭವಾಗುವಂತೆ‌ ಮಾಡಲಾಗುತ್ತದೆ, ಕಪ್ಪಡಿಯ ಸೇತುವೆಯನ್ನು 25 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಕೆ ಹರೀಶ್ ಗೌಡ, ಜಿಲ್ಲಾಧಿಕಾರಿ ಜಿ ಲಕ್ಷ್ಮೀಕಾಂತ ರೆಡ್ಡಿ, ಜಿ.ಪಂ ಸಿಇಒ ಕೆ ಎಂ ಗಾಯತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಚುಂಚನಕಟ್ಟೆ ಧನುಷ್ಕೋಟಿ ಜಲಪಾತೋತ್ಸವಕ್ಕೆ‌ ಚಾಲನೆ Read More

ನ. 30ರಿಂದ ಡಿ.1ರ ವರೆಗೆ‌ ಚುಂಚನಕಟ್ಟೆ ಜಾಲಪಾತೋತ್ಸವ

ಮೈಸೂರು: ಜಿಲ್ಲೆಯ ಸಾಲಿಗ್ರಾಮ ತಾಲೂಕಿನ ಪ್ರಸಿದ್ಧ ಪ್ರವಾಸಿತಾಣ ಚುಂಚನಕಟ್ಟೆ ಜಾಲಪಾತದಲ್ಲಿ ಮೈಸೂರು ಜಿಲ್ಲಾಡಳಿತದಿಂದ ನ. 30ರಿಂದ ಡಿ.1ರ ವರೆಗೆ ಜಲಪಾತೋತ್ಸವ ಹಮ್ಮಿಕೊಳ್ಳಲಾಗಿದೆ.

ಇದರ ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಯೋಜನೆ ಮಾಡಲಾಗಿದೆ ಎಂದು ಕೆ. ಆರ್ ನಗರದ ಶಾಸಕ ಡಿ. ರವಿಶಂಕರ್ ತಿಳಿಸಿದರು.

ನಗರದ ಜಲದರ್ಶಿನಿಯಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಚುಂಚನಕಟ್ಟೆಯಲ್ಲಿ ಕಾವೇರಿ ತಾಯಿ 65 ಅಡಿ ಎತ್ತರದಿಂದ ಭೋರ್ಗರೆಯುತ್ತಾ ಮನಮೋಹಕ ಜಲಪಾತ ಸೃಷ್ಟಿಸುತ್ತಾಳೆ. ಶ್ರೀರಾಮನು ತನ್ನ ವನವಾಸ ಕಾಲದಲ್ಲಿ ಪತ್ನಿ ಸೀತಾದೇವಿಯೊಡನೆ ಇಲ್ಲಿಗೆ ಬಂದಿದ್ದ ಎಂಬ ಇತಿಹಾಸವಿದೆ ಎಂದು ತಿಳಿಸಿದರು.

ಇಲ್ಲಿ ವಿಶೇಷವೆಂದರೆ ಶ್ರೀರಾಮನ ಬಲಬದಿಗೆ ಸೀತಾದೇವಿ ವಿಗ್ರಹವಿದೆ. ಕರ್ನಾಟದಲ್ಲೇ ಹೆಸರುವಾಸಿಯಾದ ದನಗಳ ಜಾತ್ರೆ ಜನವರಿಯಲ್ಲಿ ನಡೆಯುತ್ತದೆ ಎಂದು ವಿವರಿಸಿದರು.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅವರ ನೇತೃತ್ವದಲ್ಲಿ ಜಲಪಾತೋತ್ಸವ ಜರುಗಲಿದೆ.ರಾಜ್ಯ ಹಣಕಾಸು ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ 50 ಲಕ್ಷ ರೂ ವೆಚ್ಚದಲ್ಲಿ ನಡೆಯಲಿದೆ.

ಅಂದಾಜು 20 ಸಾವಿರ ಜನರು ಸೇರಲಿದ್ದಾರೆ. ಜಲಪಾತೋತ್ಸವಕ್ಕೆ ಬರುವ ಜನರ ಅನುಕೂಲಕ್ಕಾಗಿ ಹೆಚ್ಚಿನ ಬಸ್‌ ಸೌಲಭ್ಯ ಹಾಗೂ ಆರೋಗ್ಯ ತಪಾಸಣಾ ಕೇಂದ್ರ ತೆರೆಯಲಾಗುವುದು ಎಂದು ರವಿಶಂಕರ್ ತಿಳಿಸಿದರು.

ಎರಡು ದಿನಗಳ‌‌‌ ಕಾಲ ವಿವಿಧ ಹೆಸರಾಂತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಯೋಜನೆ ಮಾಡಲಾಗಿದೆ.‌ ಶನಿವಾರ ಸಂಜೆ 6.30ಕ್ಕೆ ಶ್ರೀರಾಮ ದೇವಸ್ಥಾನದ ಆವರಣದಲ್ಲಿ ಮುಖ್ಯಮಂತ್ರಿ‌ ಸಿದ್ದರಾಮಯ್ಯ ಅವರ ಉಪಸ್ಥಿತಿಯಲ್ಲಿ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಜಲಪಾತೋತ್ಸವದ ಉದ್ಘಾಟನೆ ಮಾಡಲಿದ್ದಾರೆ.

ಅದೇ ದಿನ ಸಂಜೆ 4.30ಕ್ಕೆ ಬಸವಯ್ಯ ಮತ್ತು ತಂಡದಿಂದ ಜನಪದ ಝೇಂಕಾರ, ಸಂಜೆ 5 ಕ್ಕೆ ಡಾ.ಕಾ.ರಾಮೇಶ್ವರಪ್ಪ ತಂಡದಿಂದ ಕನ್ನಡ ಗೀತಗಳ ಡಿಂಡಿಮ, ರಾತ್ರಿ 7.30 ಕ್ಕೆ ಸಂಗೀತ ನಿರ್ದೇಶಕ ಹಾಗೂ ಗಾಯಕ ರಘು ದೀಕ್ಷಿತ್‌ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು‌ ಮಾಹಿತಿ ನೀಡಿದರು.

ಭಾನುವಾರ ಸಂಜೆ 4.30ಕ್ಕೆ ರಶ್ಮಿ ತಂಡದವರಿಂದ ಜನಪದ ಗೀತೆಗಳು, 5ಕ್ಕೆ ಯು.ರಾಜೇಶ್‌ ಪಡೆಯಾರ್‌ ಹಾಗೂ ರಶ್ಮಿ ಚಿಕ್ಕಮಗಳೂರು ಮತ್ತು ತಂಡದಿಂದ ಸಿ.ಅಶ್ವಥ್‌ ಗೀತೆಗಳ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಕಾರ್ಯಕ್ರಮ,

ಸಂಜೆ 6.30ಕ್ಕೆ ಪುಪ್ಪಾವತಿ ಖ್ಯಾತಿಯ ನಟಿ ನಿಮಿಕಾ ರತ್ನಾಕರ್‌ ಹಾಗೂ ಕಿರುತೆರೆ ನಟಿ ಅಗ್ನಿಸಾಕ್ಷಿ ಖ್ಯಾತಿಯ ಪ್ರಿಯಾಂಕ ಅವರಿಂದ ಸ್ಯಾಂಡಲ್​ವುಡ್‌ ನೈಟ್ಸ್‌, ರಾತ್ರಿ 7.30ಕ್ಕೆ ಸಂಗೀತ ನಿರ್ದೇಶಕ ಹಾಗೂ ಗಾಯಕ ಮಣಿಕಾಂತ್‌ ಕದ್ರಿ ಮತ್ತು ಹಂಸಿಕಾ ಅಯ್ಯರ್‌ ತಂಡದವರಿಂದ ಸಂಗೀತ ಸಂಜೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಶಾಸಕರು ಕೃಷ್ಣರಾಜ ನಗರದಲ್ಲಿರುವ ಶ್ರೀರಾಮ ಸಕ್ಕರೆ ಕಾರ್ಖಾನೆ ಮರು ಪ್ರಾರಂಭದ ಕುರಿತು ಮಾತನಾಡಿ, ಕಳೆದ ಅಧಿವೇಶನದಲ್ಲಿ ಈ ವಿಷಯ ಚರ್ಚೆಯಾಗಿದೆ. ಶ್ರೀರಾಮ ಸಕ್ಕರೆ ಕಾರ್ಖಾನೆ ಜನವರಿಯೊಳಗೆ ನೋಂದಣಿ ಮಾಡಿ, ‌ಮುಂದಿನ ವರ್ಷದಿಂದ ಕಬ್ಬು ಅರೆಯಲಾಗುವುದು. ಕಾರ್ಖಾನೆ ಮರು ಪ್ರಾರಂಭದ ಬಗ್ಗೆ ಸಕ್ಕರೆ ಸಚಿವ ಶಿವಾನಂದ ಪಾಟೀಲ್‌ ಪತ್ರದ ಮೂಲಕ ಆದೇಶ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದರು.

ನಿರಾಣಿ ಶುಗರ್ಸ್ಸ್‌ ಕಾರ್ಖಾನೆ ಮರು ಪ್ರಾರಂಭಕ್ಕೂ ಮನವಿ ಮಾಡಿದ್ದೇವೆ, ಪಾಂಡವಪುರ ಸಕ್ಕರೆ ಕಾರ್ಖಾನೆ ಅವ್ಯವಸ್ಥೆ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ನ. 30ರಿಂದ ಡಿ.1ರ ವರೆಗೆ‌ ಚುಂಚನಕಟ್ಟೆ ಜಾಲಪಾತೋತ್ಸವ Read More

ಪ್ರಾಚೀನ ಸಂಸ್ಕೃತಿ, ಸಂಪ್ರದಾಯಗಳ ಉಳಿವಿಗೆ ಜಾತ್ರೆ, ಉತ್ಸವ ಸಹಕಾರಿ:ಖಂಡ್ರೆ

ಮೈಸೂರು: ನಮ್ಮ ಪ್ರಾಚೀನ ಸಂಸ್ಕೃತಿ, ಸಂಪ್ರದಾಯಗಳ ಉಳಿವಿಗೆ ಜಾತ್ರೆ, ಉತ್ಸವ, ಧಾರ್ಮಿಕ ಮಹೋತ್ಸವಗಳು ಸಹಕಾರಿ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದರು.

ಕೆ.ಆರ್. ನಗರದಲ್ಲಿ ನಡೆದ ಮಲೆ ಮಹದೇಶ್ವರ ಸ್ವಾಮಿ 54ನೇ ಉತ್ಸವದಲ್ಲಿ ಭಾಗಿಯಾದ ನಂತರ ಮಾಧ್ಯಮಗಳ ಜೊತೆ ಮಾತನಾಡಿದರು.

ಕಾರ್ತೀಕ ಮಾಸ ಬೆಳಕಿನ ಹಬ್ಬ, ನಮ್ಮೆಲ್ಲರಲ್ಲೂ ಇರುವ ಅಜ್ಞಾನವೆಂಬ ಅಂಧಕಾರವನ್ನು ತೊಡದುಹಾಕಿ, ಸುಜ್ಞಾನವೆಂಬ ಬೆಳಕನ್ನು ಹಚ್ಚುವ ಮಾಸ ಕಾರ್ತೀಕ. ಈ ಮಾಸದಲ್ಲಿ ವಿವಿಧ ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆ, ಅರ್ಚನೆ, ಲಕ್ಷ ದೀಪೋತ್ಸವ ಮತ್ತು ಉತ್ಸವಗಳು ನಡೆಯುತ್ತವೆ. ಧಾರ್ಮಿಕ ವಿಚಾರಗಳ ವಿನಿಮಯ ಆಗುತ್ತದೆ. ಸಹಬಾಳ್ವೆಯ ಮಹತ್ವ ಸಾರುತ್ತವೆ ಎಂದು ಹೇಳಿದರು.

ಮಲೆ ಮಹದೇಶ್ವರ ಸ್ವಾಮಿಯವರು ಜನಪದರ ದೇವರು, ಅವರು ಹುಲಿಯ ಮೇಲೆ ಸಂಚಾರ ಮಾಡುತ್ತಿದ್ದರು ಎಂದು ಕೇಳಿದ್ದೇವೆ. ಆದರೆ ಅವರ ಮನಸ್ಸು ಮಲ್ಲಿಗೆಯಷ್ಟೇ ಮೃದುವಾಗಿತ್ತು. ಹೀಗಾಗಿಯೇ ಅವರು ಮಲ್ಲಿಗೆ ಮಾದಪ್ಪನಾಗಿ ಜನರ ಹೃದಯದಲ್ಲಿ ನೆಲೆಸಿದ್ದಾರೆ ಎಂದು ತಿಳಿಸಿದರು.

ದೈವಾಂಶ ಸಂಭೂತರಾದ ಮಹದೇಶ್ವರಸ್ವಾಮಿಯವರು ಬೆಟ್ಟದ ಸರಣಿಯ ರಮಣೀಯತೆಗೆ ಮನಸೋತು ಮಹದೇಶ್ವರ ಬೆಟ್ಟದಲ್ಲಿಯೇ ನೆಲೆಸಿದರು. ಸುದೀರ್ಘ ತಪಸ್ಸು ಮಾಡಿ ಸಿದ್ಧಿಯನ್ನು ಪಡೆದರು,ಇಂದಿಗೂ ತಮ್ಮ ತಪಃಶಕ್ತಿಯಿಂದ ಜನರ ಕಲ್ಯಾಣ ಮಾಡುತ್ತಿದ್ದಾರೆ ಎಂದು ಈಶ್ವರ ಖಂಡ್ರೆ ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕ ರವಿಶಂಕರ್ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಾಚೀನ ಸಂಸ್ಕೃತಿ, ಸಂಪ್ರದಾಯಗಳ ಉಳಿವಿಗೆ ಜಾತ್ರೆ, ಉತ್ಸವ ಸಹಕಾರಿ:ಖಂಡ್ರೆ Read More

ಸಾಲ ಭಾದೆಯಿಂದ ರೈತ ಆತ್ಮಹತ್ಯೆ

ಕೆ.ಆರ್.ನಗರ: ಸಾಲ ಭಾದೆ ತಾಳಲಾರದೆ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆ ಆರ್ ನಗರ ತಾಲೂಕು ಕಸಬಾ ಹೋಬಳಿ ಕನುಗನಹಳ್ಳಿ ಗ್ರಾಮದಲ್ಲಿ ನಡೆದಿದೆ

ಗ್ರಾಮದ ದಿವಂಗತ ರಾಜೇಗೌಡ ಅವರ ಮಗ ಪ್ರಭಾಕರ್ (65 ) ಆತ್ಮಹತ್ಯೆ ಮಾಡಿಕೊಂಡ ರೈತ.

ಬಿತ್ತನೆ ಬೀಜ ಕೆಡ ದಂತೆ ಉಪಯೋಗಿಸುವ ಕಾಳು ಮಾತ್ರೆಯನ್ನು ಸೇವಿಸಿ ಪ್ರಭಾಕರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅವರು ತಿಪ್ಪೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 1 ಲಕ್ಷ ಬೆಳೆ ಸಾಲ ಪಡೆದಿದಗದರು. ಕೆನರಾ ಬ್ಯಾಂಕಿನಲ್ಲಿ ಚಿನ್ನಾಭರಣ ಸಾಲ ಮತ್ತು ಕೈ ಸಾಲ 3 ಲಕ್ಷದಷ್ಟು ಪಡೆದಿದ್ದರು.

ಇತ್ತೀಚೆಗೆ ಎರಡು ಎಕರೆ ಜಮೀನಿನಲ್ಲಿ ಬೆಳೆದಿದ್ದ ಭತ್ತದ ಬೆಳಗೆ ಬೆಂಕಿ ರೋಗ ಬಿದ್ದು ನಾಶವಾಗಿದ್ದು ಸಾಲ ತೀರಿಸುವುದು ಹೇಗೆ ಎಂಬ ಚಿಂತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತ ರೈತನ ಕುಟುಂಬದವರು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಮೃತ ರೈತ ಪ್ರಭಾಕರ್ ಮಗ ವಿಜಯ್ ಕುಮಾರ್ ಅವರು ಕೆ ಆರ್ ನಗರ ಪೋಲಿಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ಸಾಲ ಭಾದೆಯಿಂದ ರೈತ ಆತ್ಮಹತ್ಯೆ Read More