ಪಾರ್ಕ್ ಗಳನ್ನ ಅಭಿವೃದ್ಧಿ ಪಡಿಸಿ; ಪುಂಡರ ಹಾವಳಿ ತಪ್ಪಿಸಿ-ಶ್ರೀ ವತ್ಸ‌ ಸೂಚನೆ

ಮೈಸೂರು:ಪಾರ್ಕ್ ಗಳನ್ನು ಅಭಿವೃದ್ಧಿ ಪಡಿಸಿ ಇಲ್ಲಿಗೆ ಬರುವ ಪುಂಡರ ಹಾವಳಿ ತಪ್ಪಿಸಿ ಎಂದು ಅಧಿಕಾರಿಗಳಿಗೆ ಶಾಸಕ ಟಿ.ಎಸ್.ಶ್ರೀ ವತ್ಸ‌ ಸೂಚಿಸಿದರು.

ವಾರ್ಡ್ ನಂಬರ್ 61ರ ಸುತ್ತಮುತ್ತ ವಿದ್ಯಾರಣ್ಯಪುರಂ ಭಾಗಗಳಲ್ಲಿ ಇಂದು ಕೃಷ್ಣರಾಜ ಕ್ಷೇತ್ರದ ಶಾಸಕ ಟಿ. ಎಸ್. ಶ್ರೀವತ್ಸ ರವರು ಅಧಿಕಾರಿಗಳೊಂದಿಗೆ ಪಾದಯಾತ್ರೆ ಮಾಡಿ ಸ್ಥಳೀಯರ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸುವ ಕೆಲಸ ಮಾಡಿದರು.

ಉದ್ಯಾನವನಗಳ ಸುತ್ತ ಗಿಡಗಳನ್ನು ಹಾಕಿಸುವುದು ಮತ್ತು ಬೆಳಗಿನ ಸಮಯದಲ್ಲಿ ಮಕ್ಕಳು ಕ್ರಿಕೆಟ್ ಆಡುವುದರ ಮೂಲಕ ಅಕ್ಕಪಕ್ಕದ ಮನೆಗಳಿಗೆ ತೊಂದರೆಯಾಗುತ್ತಿದೆ ಹಾಗೂ ರಾತ್ರಿಯ ಸಮಯದಲ್ಲಿ ಪುಂಡ ಹುಡುಗರು ಮಧ್ಯಪಾನ ಮಾಡುತ್ತಿದ್ದಾರೆ ಎಂದು ಶಾಸಕರಿಗೆ ಸ್ಥಳೀಯ ನಿವಾಸಿಯಾದ ರಂಗರಾಜುರವರು ದೂರಿದರು.

ಮತ್ತೊಬ್ಬ ನಿವಾಸಿ ಪದ್ಮಮ್ಮನವರು ನಗರಪಾಲಿಕೆ ವತಿಯಿಂದ ಇರುವ ಮಳಿಗೆಗಳು ಶಿಥಿಲವಾಗಿದ್ದು, ಈ ಜಾಗಗಳಲ್ಲಿ ಪುಂಡ ಯುವಕರು ಅಸಭ್ಯ ವರ್ತನೆ ಮಾಡುತ್ತಾರೆ ಕೂಡಲೇ ಇದನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದರು.

ಪಾದಯಾತ್ರೆ ಸಂಧರ್ಭದಲ್ಲಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ರೆಡ್ಡಿ,ಇಂಜಿನಿಯರ್ ಚೇತನ್,ಅರೋಗ್ಯಾಧಿಕಾರಿ ಶಿವಪ್ರಸಾದ್,ಶಾಸಕರ ಅಪ್ತ ಸಹಾಯಕ ಆದಿತ್ಯ, ವಾರ್ಡ ಉಸ್ತುವಾರಿ ಜೋಗಿಮಂಜು,ನಗರಪಾಲಿಕೆ ಮಾಜಿ ಸದಸ್ಯ ಜಗದೀಶ್, ವಾರ್ಡ್ ಅಧ್ಯಕ್ಷ ಶಿವಪ್ರಸಾದ್,ಶಿವಲಿಂಗ ಸ್ವಾಮಿ,
ಕಿಶೋರ್ ,ವಾಸು,ಶ್ರೀಧರ ಭಟ್,
ಮಹದೇವ್,ಮಂಗಳ,ಮಹದೇವಣ್ಣ,ಕಿಶೋರ್, ಪ್ರದೀಪ್,ಮತ್ತಿತರರು ಹಾಜರಿದ್ದರು.

ಪಾರ್ಕ್ ಗಳನ್ನ ಅಭಿವೃದ್ಧಿ ಪಡಿಸಿ; ಪುಂಡರ ಹಾವಳಿ ತಪ್ಪಿಸಿ-ಶ್ರೀ ವತ್ಸ‌ ಸೂಚನೆ Read More

ಹಿರಿಯರ ಮಾರ್ಗದರ್ಶನದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವೆ:ಹೊಯ್ಸಳ

ಮೈಸೂರು: ಯುವ ಕಾಂಗ್ರೆಸ್ ಸಂಘಟನೆಗೆ ಪಕ್ಷದ ಹಿರಿಯರ ಮಾರ್ಗದರ್ಶನದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವೆ ಎಂದು
ಕೃಷ್ಣರಾಜ ಬ್ಲಾಕ್ ಕ್ಷೇತ್ರದ ಯುವ ಅಧ್ಯಕ್ಷ ಹೊಯ್ಸಳ ತಿಳಿಸಿದರು.

ತಮ್ಮ ಗೆಲುವಿಗೆ ಸಹಕರಿಸಿದ ಮಾಜಿ ಶಾಸಕ ಎಂ ಕೆ ಸೋಮಶೇಖರ್ ಅವರಿಗೆ ಸನ್ಮಾನಿಸಿ ಅವರು ಮಾತನಾಡಿದರು.

ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಹೊಯ್ಸಳ ರವರು 1708 ಮತ ಪಡೆಯುವ ಮೂಲಕ ಜಯಗಳಿಸಿದ್ದಾರೆ.

ಈ ಚುನಾವಣೆ 2024ರ ಸೆಪ್ಟೆಂಬರ್ ನಲ್ಲಿ ನಡೆದಿತ್ತು, ಅದಕ್ಕೂ ಮೊದಲು ಯುವ ಕಾಂಗ್ರೆಸ್ ಸದಸ್ಯತ್ವ ಅಭಿಯಾನ ನಡೆಸಲಾಗಿತ್ತು, ರಾಜ್ಯದ್ಯಂತ ಏಕಕಾಲದಲ್ಲಿ ಸದಸ್ಯತ್ವ ಅಭಿಯಾನ ಹಾಗೂ ಚುನಾವಣೆ ನಡೆಸಲಾಗಿತ್ತು.ಆದರೆ ಫಲಿತಾಂಶ ಈಗ ಪ್ರಕಟವಾಗಿದೆ.

ಹಾಗಾಗಿ ಹೊಯ್ಸಳ ಅವರು ತಮ್ಮ
ಗೆಲುವಿಗೆ ಸಹಕರಿಸಿದ ಎಂ ಕೆ ಸೋಮಶೇಖರ್ ಅವರಿಗೆ ಸನ್ಮಾನಿಸಿ ಧನ್ಯವಾದ ತಿಳಿಸಿದರು.

ಈ ಚುನಾವಣೆಯಲ್ಲಿ ಕ್ಷೇತ್ರದ ಹಿಂದುಳಿದ ವರ್ಗದ ಉಪಾಧ್ಯಕ್ಷರಾಗಿ
ರಾಕೇಶ, ಮಹಿಳಾ ಉಪಾಧ್ಯಕ್ಷರಾಗಿ ಹೇಮಾ, ಪ್ರಧಾನ ಕಾರ್ಯದರ್ಶಿ ಮಲ್ಲೇಶ್,
ಹೇಮಂತ್ ಕುಮಾರ್, ಅಲ್ಪಸಂಖ್ಯಾತ ಉಪಾಧ್ಯಕ್ಷ ಜುಹೆಬ್
ಅವರು ಆಯ್ಕೆಯಾಗಿದ್ದಾರೆ.

ಇದೇ ಸಂದರ್ಭದಲ್ಲಿ ಎನ್ ಎಸ್ ಯು ಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಾಗೇಶ್ ಕರಿಯಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ರೋಹಿತ್ ಸಿಂಗ್ ಮತ್ತಿತರರು ಹಾಜರಿದ್ದರು.

ಹಿರಿಯರ ಮಾರ್ಗದರ್ಶನದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವೆ:ಹೊಯ್ಸಳ Read More

ಕೃಷ್ಣರಾಜ ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಮೊದಲ ಆದ್ಯತೆ:ಜೋಗಿಮಂಜು

ಮೈಸೂರು: ಮೈಸೂರಿನ ಕೃಷ್ಣರಾಜ ಕ್ಷೇತ್ರದಲ್ಲಿ ಬಿಜೆಪಿ ಸಂಘಟನೆಗೆ ಮೊದಲ ಆದ್ಯತೆ ನೀಡಲಾಗಿದೆ ಎಂದು ‌ನಗರ ಉಪಾಧ್ಯಕ್ಷ ಹಾಗೂ ವಾರ್ಡ್ ಉಸ್ತುವಾರಿ ಜೋಗಿಮಂಜು
ತಿಳಿಸಿದರು.

ಸಂಘಟನಾ ಪರ್ವದ ಅಂಗವಾಗಿ ಕೃಷ್ಷರಾಜಕ್ಷೇತ್ರದ ಭಾಜಪ ಘಟಕದಿಂದ ಪ್ರತಿ ಬೂತ್ ವ್ಯಾಪ್ತಿಯಲ್ಲಿ ಬೂತ್ ಅಧ್ಯಕ್ಷರು ,ಕಾರ್ಯದರ್ಶಿಗಳು ಹಾಗೂ ಪೇಜ್ ಪ್ರಮುಖರನ್ನು ನೇಮಕ ಮಾಡುವ ನಿಟ್ಟಿನಲ್ಲಿ ನಡೆಯುತ್ತಿರುವ ಕಾರ್ಯಕ್ರಮದ‌‌ ವೇಳೆ ಜೋಗಿ ಮಂಜು ಮಾತನಾಡಿದರು.

ಗುರುವಾರ ಕ್ಷೇತ್ರದ ವಾರ್ಡ್ ನಂಬರ್ 61 ರ ವಿದ್ಯಾರಣ್ಯ ಪುರಂ ವ್ಯಾಪ್ತಿಯ ಸೂಯೆಜ್ ಫಾರಂ ರಸ್ತೆಯಲ್ಲಿ ಇರುವ ಗುರುಸಿದಲಿಂಗೇಶ್ವರ ಮಠದಲ್ಲಿ ಸುಮಾರು 10 ಜನ ಬೂತ್ ಅಧ್ಯಕ್ಷರುಗಳನ್ನು ಚುನಾವಣೆ ಮಾಡುವ ಮೂಲಕ ಅಯ್ಕೆ ಮಾಡಿ ಅವರಿಗೆ ಸಂವಿಧಾನದ ಪೀಠಿಕೆ ಯನ್ನು ಕೊಟ್ಟು ಕಮಲದ ಗುರುತಿನ ಬಾವುಟವನ್ನು ಹಸ್ತಾಂತರ ಮಾಡುವ ಮೂಲಕ ಅಯ್ಕೆ ಮಾಡಲಾಯಿತು.

ಬೂತ್ ಅಧ್ಯಕ್ಷರುಗಳಾಗಿ ಹರಿಯಪ್ಪ,ಮಹದೇವಣ್ಣ,ಅನೂಪ್,ನಳಿನಿ,ಮಂಗಳ,ವೀಣಾ ಪದ್ಮರಾಜ್,ರಾಮು,ನರೇಂದ್ರ ರಾವ್ ಸಿಂಧೆ,ಶಿವಲಿಂಗಸ್ವಾಮಿ,ನರೇಶ್ ಅವರನ್ನು ಬೂತ್ ನವರು ಸೂಚಿಸಿ ಅನುಮೋದನೆ ಮಾಡಿ ನಂತರ ಸಂವಿಧಾನ ಪೀಠಿಕೆ ಯನ್ನು ಓದಿಸುವ ಮೂಲಕ ಅಧ್ಯಕ್ಷರು ಗಳಾಗಿ ಅಯ್ಕೆ ಮಾಡಲಾಯಿತು.

ಈ ಸಂಧರ್ಭದಲ್ಲಿ ಕ್ಷೇತ್ರದ ಅಧ್ಯಕ್ಷ ಗೋಪಾಲ ರಾಜ ಅರಸ್, ವಾರ್ಡಿನ ಅಧ್ಯಕ್ಷ ಶಿವಪ್ರಸಾದ್,ನಗರ ಯುವಮೊರ್ಚಾ ಅಧ್ಯಕ್ಷ ರಾಕೇಶ್ ಗೌಡ,ಮಾಜಿ ನಗರಪಾಲಿಕೆ ಸದಸ್ಯ ಜಗದೀಶ್, ಜರಾಮ್,ಕಿಶೋರ್ ಜೈನ್,ಚಂದ್ರಶೇಖರ್,ಶ್ರೀಧರ್ ಭಟ್, ವಾಸು,ಅಪ್ಪಾಜಿ,ಸಂತೋಷ್ ಕ್ರೇಜಿ ಮತ್ತಿತರರು ಹಾಜರಿದ್ದರು.

ಕೃಷ್ಣರಾಜ ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಮೊದಲ ಆದ್ಯತೆ:ಜೋಗಿಮಂಜು Read More

ವಿವಿಧ ಅಭಿವೃಧ್ದಿ ಕಾಮಗಾರಿಗೆ ಶ್ರೀವತ್ಸ ಚಾಲನೆ

ಮೈಸೂರು: ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಅವರು ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ಗುರುವಾರ ಬೆಳಗ್ಗೆ ಚಾಮುಂಡಿಬೆಟ್ಟದ ರಸ್ತೆಯಲ್ಲಿರುವ ವೀರ ಮಡಿವಾಳ ದೋಭಿ ಘಾಟ್‌ನಲ್ಲಿ ಶಾಸಕರ ಅನುದಾನದಲ್ಲಿ ಮಡಿವಾಳ ಸಮಾಜದ ಅನುಕೂಲಕ್ಕಾಗಿ ಶೆಲ್ಟರ್ ಅಳವಡಿಸಿ ಹೊಸದಾಗಿ ಕಟ್ಟಿಗಳನ್ನು ನಿರ್ಮಿಸಲು ೧೦ ಲಕ್ಷ ರೂಗಳ ಕಾಮಗಾರಿಗೆ ಚಾಲನೆ ನೀಡಿದರು.

ನಂತರ ವಿದ್ಯಾರಣ್ಯಪುರಂನಲ್ಲಿ ೫೦ ಲಕ್ಷ ವೆಚ್ಚದ ೨ ಮತ್ತು ೪ನೇ ರಸ್ತೆಯ ಅಡ್ಡರಸ್ತೆ ಅಭಿವೃದ್ದಿಗೆ ಮತ್ತು ಸುಮಾರು ೧.೫ ಕೋಟಿ ವೆಚ್ಚದ ರಾಮಾನುಜ ೯ನೇ ಮತ್ತು ೧೦ನೇ ಅಡ್ಡರಸ್ತೆ ಹಾಗೂ ಬಿಬಿ ಗಾರ್ಡನ್ ರಸ್ತೆ ಅಭಿವೃದ್ದಿ, ರಾಮಾನುಜ ಮುಖ್ಯರಸ್ತೆ(ಕಂಸಾಳೆ ಮಹದೇವಯ್ಯ ವೃತ್ತದಿಂದ ರಾಮಾನುಜ ೮ನೇ ಅಡ್ಡರಸ್ತೆರವರೆಗೆ)
ಮರು ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿದರು.

ಆನಂತರ ನಂ ೫೨ರ ವ್ಯಾಪ್ತಿಯಲ್ಲಿ ೨.೧೦ ಲಕ್ಷ ವೆಚ್ಚದ ವಸಂತ್ ಮಹಲ್ ಆವರಣದಲ್ಲಿರುವ ಡಯಟ್ ಸಂಸ್ಥೆಗೆ ಹಾಲಿ ಇರುವ ಮೇಲ್ಪಟ್ಟ ಜಲ ಸಂಗ್ರಹಗಾರದಿಂದ ಹೆಚ್.ಡಿ.ಪಿ.ಇ ಕೊಳವೆ ಮಾರ್ಗದ ಮೂಲಕ ನೀರು ಸರಬರಾಜು ಮಾಡುವ ಕಾಮಗಾರಿಗೆ ಮತ್ತು ವಾರ್ಡ್ ನಂ.೫೦ರ ವ್ಯಾಪ್ತಿಯಲ್ಲಿ ೧೮.೧೦ ಲಕ್ಷ ವೆಚ್ಚದ ಸುಣ್ಣದಕೇರಿ ೮ನೇ ಕ್ರಾಸ್ ನಲ್ಲಿರುವ ಮೈಸೂರು ಮಹಾನಗರ ಪಾಲಿಕೆಯ ವಸತಿ ಗೃಹ ಸಂ.೨,೩,೪೩,೪೪,೪೫ ಹಾಗೂ ವಾರ್ಡ್ ನಂ ೪೯ರ ವ್ಯಾಪ್ತಿಯ ಬಸವೇಶ್ವರ ೩ನೇ ಅಡ್ಡರಸ್ತೆಯಲ್ಲಿ ವಸತಿ ಗೃಹ ಸಂ.೨೧೩೨ರ ದುರಸ್ಥಿ ಕಾಮಗಾರಿಗಳಿಗೆ ಶ್ರೀವತ್ಸ ಚಾಲನೆ ನೀಡಿದರು.

ಈ ವೇಳೆ ನಗರ ಪಾಲಿಕೆ ಮಾಜಿ ಸದಸ್ಯರಾದ ಛಾಯಾದೇವಿ ಬಿ.ವಿ.ಮಂಜುನಾಥ್,
ಜಗದೀಶ್ ವಾರ್ಡ್ ಅಧ್ಯಕ್ಷರಾದ ಹೊಯ್ಸಳ, ಆಟೋ ಮಂಜು, ಶಿವಪ್ರಸಾದ್, ಮಂಜುನಾಥ್ ಹಾಗೂ ವಾರ್ಡಿನ ಪ್ರಮುಖರಾದ ಎನ್. ಪ್ರದೀಪ್ ಕುಮಾರ್ ಬಾಲಕೃಷ್ಣ,ನಿಶಾಂತ್,ಕಿಶೋರ್, ಗೋಕುಲ್ ಗೋವರ್ಧನ್, ಪ್ರಸನ್ನ, ಚಂದ್ರಶೇಖರ್, ಕಿಶೋರ್ ಜೈನ್,ನಂದೀಶ, ಜೋಗಪ್ಪ, ಕೃಷ್ಣನಾಯಕ, ಅನಿಲ್ ಮತ್ತಿತರರು ಹಾಜರಿದ್ದರು.

ವಿವಿಧ ಅಭಿವೃಧ್ದಿ ಕಾಮಗಾರಿಗೆ ಶ್ರೀವತ್ಸ ಚಾಲನೆ Read More

ಕರ್ತವ್ಯ ಭವನಕ್ಕೆ ಸಾರ್ವಜನಿಕರಿಗೆಮುಕ್ತ ಪ್ರವೇಶ- ಟಿ.ಎಸ್ ಶ್ರೀ ವತ್ಸ

ಮೈಸೂರು: ಕ್ಷೇತ್ರದ ಜನತೆ ನನ್ನನ್ನು ವಿಧಾನಸಭೆಗೆ ಆರಿಸಿ ಕಳಿಸುವ ಮೂಲಕ ನನಗೆ ಹೆಚ್ಚಿನ ಜವಬ್ದಾರಿ ಕೊಟ್ಟಿದ್ದಾರೆ ಅವರ ಕೆಲಸವನ್ನು ಕರ್ತವ್ಯದ ರೀತಿಯಲ್ಲಿ ಸೇವೆ ಮಾಡುವುದು ನನ್ನ ಧರ್ಮ ಎಂದು ಶಾಸಕ ಟಿ.ಎಸ್.ಶ್ರೀವತ್ಸ ತಿಳಿಸಿದರು.

ಕೆ.ಅರ್.ಕ್ಷೇತ್ರದ ಶಾಸಕ ಟಿ.ಎಸ್‌. ಶ್ರೀ ವತ್ಸ ಅವರ ಸಾರ್ವಜನಿಕ ಸಂಪರ್ಕ ಕಚೇರಿಯನ್ನು ಅಗ್ರಹಾರದ ಬಳಿ ಇರುವ ವಲಯ ಕಚೇರಿಯಲ್ಲಿ ಪ್ರಾರಂಭಿಸಲಾಗಿದ್ದು ಈ ಸಂದರ್ಭದಲ್ಲಿ ಅವರು ಮಾತನಾಡಿದರು.

ನನ್ನ ಕಚೇರಿಯು ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ ಯಾವುದೆ ಕೆಲಸವಿದ್ದರು ಈ ಕಚೇರಿಗೆ ಬರಬೇಕೆಂದು ಮನವಿ ಮಾಡಿದರು.

ಕಚೇರಿ ಉದ್ಘಾಟನೆ ಸಂಧರ್ಭದಲ್ಲಿ ಬಂದು ಶುಭ ಹಾರೈಸಿದ ಮಠಾಧಿಶರುಗಳಿಗೆ, ಸಾರ್ವಜನಿಕರಿಗೆ, ನನ್ನ ಮತದಾರರಿಗೆ, ಅಧಿಕಾರಿಗಳಿಗೆ,ಕಾರ್ಯಕರ್ತರಿಗೆ, ನನ್ನ ಹಿತೈಶಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಈ ವೇಳೆ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಗಳಾದ ಗಿರೀಧರ,ಕೇಬಲ್ ಮಹೇಶ್, ನಗರ ಉಪಾಧ್ಯಕ್ಷ ಜೋಗಿಮಂಜು,ರಾಜ್ಯ ಕಾರ್ಯಕಾರಿಣಿ ಸದಸ್ಯ ಶೀನಿವಾಸ್,ನಗರ ಯುವಮೊರ್ಚಾ ಅಧ್ಯಕ್ಷ ರಾಕೇಶ್ ಗೌಡ,ಕೆ.ಅರ್ ಯುವ ಮೊರ್ಚಾ ಅಧ್ಯಕ್ಷ ನಿಶಾಂತ್,ರವಿ,
ಲಖನ್,ಸತ್ಯಾನಂದ ವಿಟ್ಟು,ರಂಜನ್,ಶರತ್ ಭಂಡಾರಿ ಮತ್ತಿತರರು ಹಾಜರಿದ್ದರು.

ಕರ್ತವ್ಯ ಭವನಕ್ಕೆ ಸಾರ್ವಜನಿಕರಿಗೆಮುಕ್ತ ಪ್ರವೇಶ- ಟಿ.ಎಸ್ ಶ್ರೀ ವತ್ಸ Read More

ಕಂಸಾಳೆ ಮಹದೇವಯ್ಯ ವೃತ್ತ ಸರಿಪಡಿಸಲು ತೇಜಸ್ವಿ ಮನವಿ

ಮೈಸೂರು: ಮೈಸೂರಿನ ಕೃಷ್ಣ ರಾಜ ಕ್ಷೇತ್ರದಲ್ಲಿರುವ ಕಂಸಾಳೆ ಮಹದೇವಯ್ಯ ವೃತ್ತ ಅನೇಕ ತಿಂಗಳಿಂದ ಶಿಥಿಲವಾಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಗಮನಿಸಿಲ್ಲ ಎಂದು ಕನ್ನಡ ಚಳುವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

ವೃತ್ತದ ಕಲ್ಲುಗಳು ಉರುಳಿ ಬಿದ್ದರೂ ಕೇಳುವವರೆ ಇಲ್ಲದಂತಾಗಿದೆ, ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಅವರು‌ ಖಂಡಿಸಿದ್ದಾರೆ.

ಕೂಡಲೇ ಸಂಬಂಧಪಟ್ಟ ಇಲಾಖೆಯು ದುರಸ್ತಿ ಕಾರ್ಯ ಮಾಡಬೇಕು ಇಲ್ಲ ವಾದಲ್ಲಿ ಪ್ರತಿಭಟನೆ ಮಾಡುವುದಾಗಿ ತೇಜಸ್ವಿ ನಾಗಲಿಂಗ ಸ್ವಾಮಿ ಎಚ್ಚರಿಸಿದ್ದಾರೆ.

ಕಂಸಾಳೆ ಮಹದೇವಯ್ಯ ವೃತ್ತ ಸರಿಪಡಿಸಲು ತೇಜಸ್ವಿ ಮನವಿ Read More

ಶ್ರೀವತ್ಸ ಜನುಮ ದಿನ:ನೂರೊಂದು ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ

ಮೈಸೂರು: ಕೆ. ಆರ್. ಕ್ಷೇತ್ರದ. ಶಾಸಕರಾದ ಟಿ ಎಸ್ ಶ್ರೀವತ್ಸ ಅವರಿಗೆ ಜನುಮ ದಿನದ ಸಂಭ್ರಮ.

ಅವರ ಹುಟ್ಟು ಹಬ್ಬದ ಪ್ರಯುಕ್ತ ಸೋಮವಾರ ಬೆಳಿಗ್ಗೆ ಅಗ್ರಹಾರದ ನೂರೊಂದು ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿಲಾಯಿತು.

ಶಾಸಕರಿಗೆ ಆರೋಗ್ಯ, ಆಯಸ್ಸು ಕೊಟ್ಟು ಇನ್ನೂ ಹೆಚ್ಚಾಗಿ ಜನಸೇವೆ ಮಾಡಲು ಶಕ್ತಿ ನೀಡಲಿ ಎಂದು ಅಭಿಮಾನಿಗಳು ಪ್ರಾರ್ಥಿಸಿದರು.ಇದೇ ವೇಳೆ ಅನ್ನ ಪ್ರಸಾದ ಕೂಡಾ ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ಕೆ.ಆರ್ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಗೋಪಾಲ್ ರಾಜೇ ಆರಸ್, ಮಾಜಿ ಮೇಯರ್ ಶಿವಕುಮಾರ್. ರೂಪ, ಸೌಮ್ಯಾ, ಉಮೇಶ್, ಪ್ರದೀಪ್ ಕುಮಾರ್, ಪ್ರಸಾದ್, ಪಚ್ಚು,ಗಿರಿ,ವಿಶ್ವ,ಜೋಗಿಮಂಜು, ಬಿಲ್ಲಯ್ಯ,ಗೋಕುಲ್,ರಾಜೇಶ,ಹರಿಶ್, ಮನೋಜ್,ವಿನಯ್,ಕಿಶೋರ್,ಕೀರ್ತಿಸಂದೀಪ,ಬಾಲಕೃಷ್ಣ,ಚಂದ್ರು,ಜಗದೀಶ್,ಮದು, ಮಹಿಳಾ ಕಾರ್ಯಕರ್ತರಾದ ಹೇಮಾ, ಕಾವೇರಿ,ನಂದಾ ಸಿಂಗ್,ರೇಖಾ, ಅನ್ನಪೂರ್ಣ, ಲತಾ, ನಾಗಶ್ರೀ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

ಶ್ರೀವತ್ಸ ಜನುಮ ದಿನ:ನೂರೊಂದು ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ Read More

ಕೆ ಸಿ ಲೇಔಟ್ ನಲ್ಲಿ ನಾಗರೀಕರ ಕುಂದುಕೊರತೆ ಆಲಿಸಿದ ಶಾಸಕ ಶ್ರೀವತ್ಸ

ಮೈಸೂರು: ಕೃಷ್ಣರಾಜ ಕ್ಷೇತ್ರದ ಶಾಸಕ ಟಿ ಎಸ್ ಶ್ರೀವತ್ಸ ಅವರು ವಾರ್ಡ್ ನಂ 52 ರ ವ್ಯಾಪ್ತಿಯ ಕೆ‌ ಸಿ ಲೇಔಟ್ ನಲ್ಲಿ ಪಾದಯಾತ್ರೆ ಮಾಡಿ ನಾಗರೀಕರ ಕುಂದುಕೊರತೆ ಆಲಿಸಿದರು.

ಕೆ ಸಿ ಲೇಔಟ್ ದೊಡ್ಡ ಉದ್ಯಾನದಲ್ಲಿ ಆಗಬೇಕಾದ ಅಭಿವೃದ್ಧಿ ಕೆಲಸಗಳು, ಮಳೆ ನೀರು ಹರಿವು ತೊಂದರೆ, ಒಳಚರಂಡಿ ಹೂಳು ತೆಗೆಯುವ ಕಾರ್ಯ, ಮತ್ತು ರಾತ್ರಿ ವೇಳೆ ಬೀದಿ ನಾಯಿಗಳ ಕಾಟ ಸೇರಿದಂತೆ ಹಲವಾರು ಸಮಸ್ಯೆಗಳನ್ನ ಸಾರ್ವಜನಿಕರು ಶಾಸಕರಲ್ಲಿ ತೋಡಿಕೊಂಡರು.

ಇದಕ್ಕೆ ಸ್ಪಂದಿಸಿದ ಶ್ರೀವತ್ಸ ಎಲ್ಲಾ ಸಮಸ್ಯೆಗಳನ್ನು ಬಗೆ ಹರಿಸಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.

ನಗರ ಪಾಲಿಕೆ ಮಾಜಿ ಸದಸ್ಯರಾದ ಛಾಯಾ ನವೀನ್,ಬಿಜೆಪಿ ಮುಖಂಡರಾದ ಪ್ರಸನ್ನ, ನವೀನ್,ಗೋಕುಲ್ ಗೋವರ್ಧನ್, ಹರೀಶ್, ಹೊಯ್ಸಳ,ಸಂತೋಷ್,ಶೇಖರ್, ವಿಜಯ ಲಕ್ಷ್ಮಿ,ಪದ್ಮ
ಕೆ. ಸಿ ಬಡಾವಣೆ ನಿವಾಸಿಗಳ ಸಂಘದ ವಿಶ್ವನಾಥ್, ದರ್ಮೆಂದ್ರ,ನಿಂಗೆಗೌಡ, ವೆಂಕಟೇಶ್, ಕೃಷ್ಣ,ಪ್ರದೀಪ್ ಕುಮಾರ್, ಮಧು, ಕಿಶೋರ್ ಮತ್ತಿತರರು ಹಾಜರಿದ್ದರು.

ನಗರಪಾಲಿಕೆಯ ಹಿರಿಯ ಅಧಿಕಾರಿಗಳು, ಕಾರ್ಯಪಾಲಕ ಅಭಿಯಂತರರು, ಆರೋಗ್ಯ ಅಧಿಕಾರಿಗಳು ಶಾಸಕರಿಗೆ ಸಾಥ್ ನೀಡಿದರು.

ಕೆ ಸಿ ಲೇಔಟ್ ನಲ್ಲಿ ನಾಗರೀಕರ ಕುಂದುಕೊರತೆ ಆಲಿಸಿದ ಶಾಸಕ ಶ್ರೀವತ್ಸ Read More