ಕೆಪಿಪಿ ಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ‌ ಸ್ಮಾರ್ಟ್ ಟಿವಿ ಕೊಡುಗೆ

ಹುಣಸೂರು: ಕರ್ನಾಟಕ ರಾಜ್ಯ ಪ್ರಜಾ ಪಾರ್ಟಿ ರೈತ ಪರ್ವದ ವತಿಯಿಂದ‌ ಹೊನ್ನಿಕೊಪ್ಪಲು‌‌‌ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ‌ ಸ್ಮಾರ್ಟ್ ಟಿವಿಯನ್ನು ಕೊಡುಗೆಯಾಗಿ ನೀಡಲಾಯಿತು.

79‌ ನೆ‌ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ
ಕೆಪಿಪಿ ರೈತಪರ್ವ ರಾಜ್ಯಾಧ್ಯಕ್ಷ ಶಿವಣ್ಣ ಅವರ ನೇತೃತ್ವದಲ್ಲಿ ಸುಮಾರು 30 ಸಾವಿರ ರೂ ಮೌಲ್ಯದ ಟಿವಿಯನ್ನು ಮಕ್ಕಳ ಶೈಕ್ಷಣಿಕ ಉದ್ದೇಶಕ್ಕಾಗಿ ಕೊಡುಗೆಯಾಗಿ ನೀಡಿ‌ ಮಾದರಿಯಾಗಿದ್ದಾರೆ.

ಈ ವೇಳೆ ತಾಲೂಕು ಪ್ರಜಾ ಪಾರ್ಟಿ ರೈತ ಪರ್ವ ಅಧ್ಯಕ್ಷ ಚೆಲುವರಾಜು, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಸಿದ್ದರಾಜು, ಉಪಾಧ್ಯಕ್ಷೆ ಪಾರ್ವತಿ, ಶಾಲೆಯ ಮುಖ್ಯ ಶಿಕ್ಷಕರಾದ ಎನ್ ಕೆ ರಮೇಶ್, ಶಾಲೆಯ ಸಹ ಶಿಕ್ಷಕರಾದ ಗಿರೀಶ್ ಕುಮಾರ್ ಕೆ.ಎಸ್, ರವಿಕುಮಾರ್, ಕುಮಾರಿ ರೇಖಾ ಹಾಗೂ ಪೋಷಕರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

ಈ‌ ಸಂದರ್ಭದಲ್ಲಿ ಶೈಕ್ಷಣಿಕ ಉದ್ದೇಶಕ್ಕಾಗಿ ನೀಡಿರುವ ಟಿವಿಯನ್ನು ಪಡೆದು ಪ್ರಜಾ ಪಾರ್ಟಿ ರಾಜ್ಯ ಅಧ್ಯಕ್ಷ ಶಿವಣ್ಣ ಹಾಗೂ ತಾ.ಅಧ್ಯಕ್ಷ ಚೆಲುವ ರಾಜು ಅವರಿಗೆ ಶಾಲೆಯ ಪರವಾಗಿ ಅಭಿನಂದಿಸಲಾಯಿತು.

ಕೆಪಿಪಿ ಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ‌ ಸ್ಮಾರ್ಟ್ ಟಿವಿ ಕೊಡುಗೆ Read More

ಹುಣಸೂರಿನಿಂದ ಮೋರ್ ಸೂಪರ್ ಮಾರ್ಕೆಟ್ ಎತ್ತಂಗಡಿಗೆ ಕೆಪಿಪಿ ಆಗ್ರಹ

ಹುಣಸೂರು: ಹುಣಸೂರಿನ ನಗರಸಭೆ ಜಾಗದಲ್ಲಿ ಯಾರೊ ಖಾಸಗಿ ವ್ಯಕ್ತಿ ವಾಣಿಜ್ಯ ಕಟ್ಟಡ ನಿರ್ಮಿಸಿದ್ದು, ಈ ಕಟ್ಟಡದಲ್ಲಿ ಇತ್ತೀಚೆಗೆ ಮೋರ್ ಸೂಪರ್ ಮಾರ್ಕೆಟ್ ತೆರೆದಿರುವುದರಿಂದ ಸ್ಥಳೀಯ ಸಣ್ಣ,ಪುಟ್ಟ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತಿದೆ.

ಮೋರ್ ಎಂಬ ಸೂಪರ್ ಮಾರ್ಕೆಟ್ ತೆರೆಯಲು ಸಂಬಂಧಪಟ್ಟ ಪ್ರಾಧಿಕಾರದಿಂದ ಲೈಸೆನ್ಸ್ ತೆಗೆದುಕೊಳ್ಳದೆ ಆಕ್ರಮವಾಗಿ ಪ್ರಾರಂಭ ಮಾಡಿದ್ದಾರೆ ಎಂದು‌ ಕರ್ನಾಟಕ ಪ್ರಜಾಪಾರ್ಟಿ (ರೈತಪರ್ವ) ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಆರೋಪಿಸಿದ್ದಾರೆ.

ಕೇವಲ ಒಂದು ಅರ್ಜಿ ಮುಖಾಂತರ ಅನುಮತಿ ಪಡೆದು ಈ ಸೂಪರ್ ಮಾರ್ಕೆಟ್ ತೆರೆಯಲಾಗಿದೆ,ಇಲ್ಲಿ ಕಟ್ಟಡ‌ ನಿರ್ಮಾಣ ಮಾಡಿರುವುದೇ ಅಕ್ರಮ. ವಾಣಿಜ್ಯ ಮಳಿಗೆಯಲ್ಲಿ ಈ ಅಕ್ರಮ ಕಟ್ಟಡಕ್ಕೆ ಸಂಬಂಧಪಟ್ಟಂತೆ ಹುಗಾನೂರಿನ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.

ಈ ಕಟ್ಟಡದ ಲೈಸೆನ್ಸ್ ಈಗಾಗಲೇ ರದ್ದುಪಡಿಸಲಾಗಿದ್ದರೂ ಮಳಿಗೆಯನ್ನು ತೆರೆದು ವ್ಯಾಪಾರ ವಹಿವಾಟು ಪ್ರಾರಂಭಿಸಿರುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ.

ಈ ಕಟ್ಟಡದ ತೀರ್ಮಾನವು ಇನ್ನು ಬಾಕಿ ಇದೆ ಆದ್ದರಿಂದ ನ್ಯಾಯಾಲಯದ ಆದೇಶ ಬರುವವರೆಗೂ ಈ ಕಟ್ಟಡದಲ್ಲಿ ಯಾವುದೇ ಮಳಿಗೆಯನ್ನು ತೆರೆಯಲು ಅನುಮತಿ ಕೊಡಬಾರದು ಹಾಗೂ ಮೋರ್ ಸೂಪರ್ ಮಾರ್ಕೆಟ್ ವ್ಯಾಪರವನ್ನು ಸ್ಥಗಿತಗೊಳಿಸಬೇಕೆಂದು ಚೆಲುವರಾಜು ಆಗ್ರಹಿಸಿದ್ದಾರೆ.

ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿ ಈ ಮಳಿಗೆಯನ್ನು ತೆರೆಯಲು ಅನುಮತಿ ಕೊಟ್ಟರುವ ಅಧಿಕಾರಿಗಳ ಮೇಲೆ ಹಾಗೂ ಮೋರ್ ಸೂಪರ್ ಮಾರ್ಕೆಟ್ ರದ್ದುಪಡಿಸಿ ಇದರ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಕರ್ನಾಟಕ ಪ್ರಜಾಪಾರ್ಟಿ (ರೈತಪರ್ವ)ದ ಪರವಾಗಿ ತಾಲೂಕು ಅಧ್ಯಕ್ಷ ಚೆಲುವರಾಜು ಮೈಸೂರು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಈ ಮೋರ್ ಒಂದು ಮಾಯಾಜಾಲ ಇದ್ದಂತೆ. ಜನರನ್ನು ಮರುಳು ಮಾಡುತ್ತಿದೆ.ಹೊರಗೆ ಬೇರೆ ಅಂಗಡಿಗಳಲ್ಲಿ ಕಡಿಮೆ ಬೆಲೆಗೆ ವಸ್ತುಗಳು,ದಿನಸಿ, ಮನೆಗೆ ಬೇಕಾದ ಸಾಮಾನುಗಳು ಸಿಗುತ್ತವೆ.ಆದರೆ ಮೋರ್ ನಲ್ಲಿ ಎಲ್ಲವೂ ದುಬಾರಿ.ಈ ಸೂಪರ್ ಮಾರ್ಕೆಟ್ ಇಲ್ಲೇ ಮುಂದುವರಿದರೆ ಗ್ರಾಮೀಣ ಭಾಗದ ಬಡ ರೈತರು ವ್ಯಾಪಾರಗಾರರ ಹೊಟ್ಟೆ ಮೇಲೆ ಹೊಡೆದಂತಾಗುತ್ತದೆ.

ತಕ್ಷಣ ಸರ್ಕಾರ ಹಾಗೂ ಸ್ಥಳೀಯ ಜನಪ್ರತಿನಿಧಿಗಳು,ಅಧಿಕಾರಿಗಳು ಎಚ್ಚತ್ತುಕೊಂಡು ಮೋರ್ ಸೂಪರ್ ಮಾರ್ಕೆಟ್ ಓಡಿಸಬೇಕು ಎಂದು ಚಲುವರಾಜು ಆಗ್ರಹಿಸಿದ್ದಾರೆ.

ಹುಣಸೂರಿನಿಂದ ಮೋರ್ ಸೂಪರ್ ಮಾರ್ಕೆಟ್ ಎತ್ತಂಗಡಿಗೆ ಕೆಪಿಪಿ ಆಗ್ರಹ Read More

ಚಿಲಕುಂದ ಸ ‌ಹಿ ಪ್ರಾ ಶಾಲೆ‌ ಮಕ್ಕಳಿಗೆ ಕೆಪಿಪಿ ರೈತಪರ್ವ‌ ದಿಂದ ನೋಟ್ ಬುಕ್ ವಿತರಣೆ

ಹುಣಸೂರು: ಹುಣಸೂರು ತಾಲೂಕು ಚಿಲಕುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ವತಿಯಿಂದ ನೋಟ್ ಬುಕ್, ಪೆನ್ಸಿಲ್ ಮತ್ತು ಪೆನ್ನುಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.

ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಅಧ್ಯಕ್ಷ ಶಿವಣ್ಣ ಮತ್ತು ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಅವರ ನೇತೃತ್ವದಲ್ಲಿ ಎಲ್ಲ ಪದಾಧಿಕಾರಿಗಳ ಸಹಮತದಲ್ಲಿ ಸರ್ಕಾರಿ ಶಾಲೆಗಳ ಸುಮಾರು ಸಾವಿರ ಮಕ್ಕಳಿಗೆ ನೋಟ್ ಬುಕ್ ಮತ್ತು ಲೇಖನಿ ಸಾಮಗ್ರಿಗಳನ್ನು ಕೊಡುವ ಗುರಿಯನ್ನು ಹೊಂದಲಾಗಿದ್ದು ಈಗಾಗಲೇ 600 ವಿದ್ಯಾರ್ಥಿಗಳಿಗೆ ಇವುಗಳನ್ನು ನೀಡಲಾಗಿದೆ.

ಇಂದು ಚಿಲಕುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಮತ್ತು ಲೇಖನಿ ಸಾಮಗ್ರಿಗಳನ್ನು ವಿತರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಹುಣಸೂರು ತಾಲೂಕು ತಾಸಿಲ್ದಾರ್ ಮಂಜುನಾಥ್, ಬಿಇಒ ಮಹದೇವ್, ಹುಣಸೂರು ಡಿ ವೈ ಎಸ್ ಪಿ ಗೋಪಾಲಕೃಷ್ಣ, ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮುನಿಯಪ್ಪ, ನಗರಸಭೆ ಆಯುಕ್ತರಾದ ಮಾನಸ‌ ಪಾಲ್ಗೊಂಡಿದ್ದರು.

ಈ ವೇಳೆ ತಹಸಿಲ್ದಾರ್ ಮಂಜುನಾಥ್ ಅವರು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವದ ಕಾರ್ಯವನ್ನು ಶ್ಲಾಘಿಸಿದರು.

ಇದೇ ವೇಳೆ ಶಾಲೆಯ 115 ಮಕ್ಕಳಿಗೂ ಉಪ್ಪಿಟ್ಟು ಮತ್ತು ಕೇಸರಿ ಬಾತ್ ಅನ್ನು ಊಟಕ್ಕೆ ಬಡಿಸಲಾಯಿತು ಮಕ್ಕಳು ಅತ್ಯಂತ ಸಂಭ್ರಮದಿಂದ ಪಾಲ್ಗೊಂಡರು.

ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಕಾರ್ಯದರ್ಶಿ ಹಾಗೂ ವಕೀಲರಾದ ಮಂಜು, ಮಡಿವಾಳ ಸಂಘದ ತಾಲೂಕು ಅಧ್ಯಕ್ಷ ರವಿ, ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ, ಚಿಲಕುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ರಮಾದೇವಿ ಜಿ, ಶಿಕ್ಷಕರುಗಳಾದ ಪುಷ್ಪಲತಾ, ಸುಶೀಲ, ನಜತ್ ಬಾನು, ಸಂತೋಷ್, ಹರೀಶ್ ಸೀರಿದಂತೆ ಅನೇಕರು ಹಾಜರಿದ್ದರು.

ಇದೇ ವೇಳೆ ಶಾಲೆಯ ಶಿಕ್ಷಕಿಯರು ಮತ್ತು ಎಲ್ಲಾ ಮಹಿಳೆಯರಿಗೆ ಕರ್ನಾಟಕ ಪ್ರಜಾ ಪಾರ್ಟಿ ರೈತಪರ್ವ ತಾಲೂಕು ಅಧ್ಯಕ್ಷ ಚೆಲುವರಾಜು ಮತ್ತು ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಅವರು ಮಹಿಳಾ ದಿನಾಚರಣೆಯ ಶುಭ ಕೋರಿದರು.

ಚಿಲಕುಂದ ಸ ‌ಹಿ ಪ್ರಾ ಶಾಲೆ‌ ಮಕ್ಕಳಿಗೆ ಕೆಪಿಪಿ ರೈತಪರ್ವ‌ ದಿಂದ ನೋಟ್ ಬುಕ್ ವಿತರಣೆ Read More