ಸಚಿವ ಸ್ಥಾನದಿಂದ ಅಮಿತ್ ಶಾ ವಜಾಗೊಳಿಸಿ-ನಜರ್ಬಾದ್ ನಟರಾಜ್
ಮೈಸೂರು: ದೇಶದಲ್ಲಿ ಉಗ್ರರ ದಾಳಿ ತಡೆಯುವಲ್ಲಿ ವಿಫಲವಾಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್ ಆಗ್ರಹಿಸಿದ್ದಾರೆ.
ಗುರುವಾರ ಸಿದ್ದಾರ್ಥ ನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ ಅಪರ ಜಿಲ್ಲಾಧಿಕಾರಿ ಶಿವರಾಜ್ ಮೂಲಕ ಅಮಿತ್ ಶಾ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ರಾಷ್ಟ್ರಪತಿಗೆ ಮನವಿ ಸಲ್ಲಿಸಿ ನಜರ್ಬಾದ್ ನಟರಾಜ್ ಮಾತನಾಡಿದರು.
ಕಾಶ್ಮೀರದ ಕಹಿ ಘಟನೆ ಮರೆಯುವ ಮುನ್ನವೇ ನವದೆಹಲಿಯ ಕೆಂಪು ಕೋಟೆಯ ಕೂಗಳತೆ ದೂರದಲ್ಲಿ ಉಗ್ರರು ಬಾಂಬ್ ಸ್ಫೋಟಿಸಿ, ಅಮಾಯಕ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ, ಈ ಘಟನೆಯನ್ನು ಕಾಂಗ್ರೆಸ್ ಖಂಡಿಸುತ್ತೇದೆ ಎಂದು ಹೇಳಿದರು.
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ದೇಶದ ಮೇಲೆ ಉಗ್ರರ ದಾಳಿಯಾಗುತ್ತಿದೆ. ಇದೀಗ ದೇಶದ ರಾಜಧಾನಿಯಲ್ಲೇ ಉಗ್ರರ ದಾಳಿಯಾಗಿದ್ದು, ಅಮಿತ್ ಶಾ ಅವರು ಸಚಿವರಾಗಿ ತಮ್ಮ ಜವಾಬ್ದಾರಿ ನಿಭಾಯಿಸುವಲ್ಲಿ ವಿಫಲರಾಗಿ ದ್ದಾರೆ ಎನ್ನುವುದನ್ನು ಸಾಬೀತು ಪಡಿಸಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಲೋಕೇಶ್, ಎಸ್ ಎನ್ ರಾಜೇಶ್, ನಿತೀಶ್ ಕುಮಾರ್, ಮಂಜು ಮತ್ತಿತರರು ಹಾಜರಿದ್ದರು.
ಸಚಿವ ಸ್ಥಾನದಿಂದ ಅಮಿತ್ ಶಾ ವಜಾಗೊಳಿಸಿ-ನಜರ್ಬಾದ್ ನಟರಾಜ್ Read More

