ಮಕ್ಕಳು ಓದಿ ತಾಂದೆ,ತಾಯಂದಿರನ್ನು ಚೆನ್ನಾಗಿ ನೋಡಿಕೊಳ್ಳಿ:ಎನ್ ಮಂಜೇಗೌಡ

ಕೊಳ್ಳೇಗಾಲ:‌ ಪ್ರತಿಯೊಬ್ಬ ಮಕ್ಕಳು ಉತ್ತಮವಾಗಿ ಓದಿ ಮುಂದೆ ಬಂದು ತಾಂದೆ,ತಾಯಂದಿರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯರಾದ ಎನ್ ಮಂಜೇಗೌಡ ತಿಳಿಹೇಳಿದರು.

ಕೊಳ್ಳೇಗಾಲದ ಒಕ್ಕಲಿಗರ ಜಿ ವಿ ಗೌಡರ ಸ್ಮಾರಕ ಶಾಲಾ ಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ತಂದೆ,ತಾಯಿ ನಿಮ್ಮನ್ನು ಓದಿಸಲು ಬಹಳ ಕಷ್ಟಪಟ್ಟಿರುತ್ತಾರೆ,ಹಾಗಾಗಿ‌ ಅವರ ಕನಸುಗಳನ್ನು ನನಸು ಮಾಡಬೇಕು, ಚೆನ್ನಾಗಿ ಓದಿ ಜೀವನದಲ್ಲಿ ಮುಂದೆ ಬರಬೇಕು ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.

ಪ್ರಸ್ತುತ ಸನ್ನಿವೇಶದಲ್ಲಿ ಖಾಸಗಿ ಶಾಲೆಗಳನ್ನು ನಡೆಸುವುದು ಬಹಳ ಕಷ್ಟದ ಕೆಲಸ. ಅದರಲ್ಲೂ ಮಾಜಿ ಶಾಸಕರಾದ ನರೇಂದ್ರ ಅವರು ಬಹಳ ಕಡಿಮೆ ಫೀಸು ತೆಗೆದುಕೊಂಡು ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದಾರೆ ಅದರ ಸದುಪಯೋಗವಾಗಲಿ ಎಂದು ಮಂಜೇಗೌಡ ಹೇಳಿದರು.

ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಶಾಸಕ ಎ ಆರ್ ಕೃಷ್ಣಮೂರ್ತಿ ಅವರು ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಗೌರವಾಧ್ಯಕ್ಷರು ಹಾಗೂ ಹನೂರಿನ ಮಾಜಿ ಶಾಸಕರಾದ ಆರ್ ನರೇಂದ್ರ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಡಾ. ಡಿ ತಿಮ್ಮಯ್ಯ, ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಸಿ.ಜಿ ಗಂಗಾಧರ್ ಹಾಗೂ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಮೈಸೂರು ಜಿಲ್ಲಾ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಸೇರಿದಂತೆ ಸಂಸ್ಥೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮಕ್ಕಳು ಓದಿ ತಾಂದೆ,ತಾಯಂದಿರನ್ನು ಚೆನ್ನಾಗಿ ನೋಡಿಕೊಳ್ಳಿ:ಎನ್ ಮಂಜೇಗೌಡ Read More

ಕೊಳ್ಳೇಗಾಲ ದಿಂದ ಉದಕ ಮಂಡಲಕ್ಕೆ ಕೆ ಎಸ್ ಆರ್ ಟಿ ಸಿ ಬಸ್ ಪ್ರಾರಂಭ

ಕೊಳ್ಳೇಗಾಲ: ಕೊಳ್ಳೇಗಾಲ ದಿಂದ ಊಟಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಪುನರಾರಂಭ ವಾಗಿದ್ದು,ಪ್ರಯಾಣಿಕರು ಸಂತಸ‌‌ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಕಳೆದ 15 ವರ್ಷಗಳಿಂದ ನಿರಂತರವಾಗಿ ಕೊಳ್ಳೇಗಾಲ- ಊಟಿ ಮಾರ್ಗವಾಗಿ ಸಂಚರಿಸುತ್ತಿದ್ದ ಬಸ್ಸು ಕಾರಣಾಂತರಗಳಿಂದ ಹಾಗೂ ಕರ್ನಾಟಕ ಸರ್ಕಾರ ಮಹಿಳೆಯರಿಗೆ ಉಚಿತ ಪ್ರಯಾಣ ಆರಂಭಿಸಿದ್ದರಿಂದ ಈ ಮಾರ್ಗದ ಬಸ್ ಸಂಚಾರವನ್ನು ಸ್ಥಗಿತ ಗೊಳಿಸಲಾಗಿತ್ತು.

ನೀಲಗಿರಿ ಜಿಲ್ಲೆಯಲ್ಲಿ ಟೀ ಎಸ್ಟೇಟ್ ಗಳಲ್ಲಿ ವಾಸಿಸುತ್ತಿರುವ ಕನ್ನಡ ಜನತೆಯ ಕೋರಿಕೆಯ ಮೇರೆಗೆ ಕರ್ನಾಟಕ ಸರ್ಕಾರ ಮತ್ತೆ ಈ ಮಾರ್ಗದ ಬಸ್ ಸಂಚಾರವನ್ನು ಪುನರಾರಂಭಿಸಿದೆ.

ಕೊಳ್ಳೇಗಾಲ ಶಾಸಕ ಎ. ಆರ್. ಕೃಷ್ಣಮೂರ್ತಿ ಅವರು ಬಸ್ ಸಂಚಾರಕ್ಕೆ ಚಾಲನೆ ನೀಡಿದರು.ಈ ವೇಳೆ ಜನತೆ ಸಂತಸ ವ್ಯಕ್ತಪಡಿಸಿದರು.

ಕೊಳ್ಳೇಗಾಲ ದಿಂದ ಉದಕ ಮಂಡಲಕ್ಕೆ ಕೆ ಎಸ್ ಆರ್ ಟಿ ಸಿ ಬಸ್ ಪ್ರಾರಂಭ Read More

ಕ್ಷುಲ್ಲಕ ವಿಚಾರಕ್ಕೆ ಕೌಟುಂಬಿಕ ಕಲಹ:ತಂಗಿಯ ಕೊಂದ ಅಣ್ಣ

(ವರದಿ: ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ, ಜ.2: ಕ್ಷುಲ್ಲಕ ವಿಚಾರಕ್ಕೆ ಕೌಟುಂಬಿಕ ಕಲಹ ನಡೆದು ಅಣ್ಣನೇ ತನ್ನ ಸಹೋದರಿಯ ಕುತ್ತಿಗೆ ಕೊಯ್ದು ಹತ್ಯೆ ಮಾಡಿರುವ ಘಟನೆ ಪಟ್ಟಣದ ಈದ್ದಾ ಮೊಹಲ್ಲಾದಲ್ಲಿ ನಡೆದಿದೆ.

ಪಟ್ಟಣದ ಈದ್ಗಾ ಮೊಹಲ್ಲಾದ ಸೈಯದ್ ಪಾಷಾ ಅವರ ನಾಲ್ಕನೇ ಮಗಳು ಐಮನ್ ಬಾನು (23) ಕೊಲೆಯಾದ ಯುವತಿ. ಈಕೆಯ ಅಣ್ಣ ಫರ್ಮನ್ ಪಾಷಾ ಕೊಲೆ ಮಾಡಿದ ಆರೋಪಿ.

ರಾತ್ರಿ ಅಣ್ಣ,ತಂಗಿ ಜಗಳವಾಡಿದ್ದಾರೆ‌ ಅದನ್ನು ಬಿಡಿಸಲು ಬಂದ ತಂದೆ, ಅತ್ತಿಗೆ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಘಟನೆ ಸಂಬಂಧ ಆರೋಪಿಯನ್ನು ಕೊಳ್ಳೇಗಾಲ ಪಟ್ಟಣ ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಸೈಯದ್ ಪಾಷಾ ಅವರಿಗೆ ಮೂರು ಹೆಣ್ಣು ಎರಡು ಗಂಡು ಒಟ್ಟು ಐದು ಮಕ್ಕಳು. ದೂರುದಾರರ ಹಿರಿಯ ಮಗ ಸೈಯದ್ ರೋಶನ್ ಅವರು ರಾತ್ರಿ ಮಗು ಮಲಗಿಕೊಳ್ಳುವ ವಿಚಾರ ಎತ್ತಿದ್ದಾರೆ.ಆಗ ಆರೋಪಿ ಫರ್ಮನ್ ಪಾಷಾ ನಾನು ಊಟ ಮಾಡುವವರೆಗೆ ಮಗು ಮಲಗಿಕೊಳ್ಳುವುದು ಬೇಡ ಎಂದು ತಗಾದೆ ತೆಗೆದಿದ್ದಾನೆ.

ಇದಕ್ಕೆ ಮೃತ ಐಮನ್ ಬಾನು ಎಲ್ಲಾ ಇವನು ಹೇಳಿದ ಹಾಗೆ ನಡೆಯಬೇಕು ಮಲಗಿಕೊಳ್ಳಲಿ ಬಿಡು ಎಂದು ಹೇಳಿದ್ದಾಳೆ ಈ ವೇಳೆ ಸಣ್ಣದಾಗಿ ಗಲಾಟೆ ಶುರುವಾಗಿ ಜೋರಾಗಿದೆ. ಈ ವೇಳೆ ಕೋಪದಲ್ಲಿ ಸಹೋದರಿ ಐಮನ್ ಬಾನು ಮೇಲೆ ಫರ್ಮನ್ ಪಾಷಾ ಹಲ್ಲೆ ಮಾಡಿ ಕುತ್ತಿಗೆಯನ್ನು ಚಾಕುವಿನಿಂದ ಕೊಯ್ದು ಕೊಲೆ ಮಾಡಿದ್ದಾನೆ.

ಈ ವೇಳೆ ಜಗಳ ಬಿಡಿಸಲು ಬಂದ ಅತ್ತಿಗೆ ತಸ್ಲಿಮ್ ತಾಜ್ ಳ ಕುತ್ತಿಗೆಗೂ ಚಾಕುವಿನಿಂದ ಕುಯ್ದು ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಹಾಗೂ ತಡೆಯಲು ಬಂದ ತಂದೆ ಸೈಯದ್ ಪಾಷಾ ಮೇಲೂ ಹಲ್ಲೆ ನಡೆಸಿ ಕೈ ಮುರಿದಿದ್ದಾನೆ. ಗಾಯಗೊಂಡ ತಸ್ಲಿಮ್ ತಾಜ್, ಸೈಯದ್ ಪಾಷಾ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರು ಹಾಗೂ ಚಾಮರಾಜನಗರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಐಮನ್ ಬಾನು ಮೃತದೇಹವನ್ನು ಕೊಳ್ಳೇಗಾಲ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಪಟ್ಟಣ ಪೊಲೀಸ್ ಠಾಣೆಯ ಪಿಎಸ್‌ಐ ವರ್ಷಾ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.

ಈ ಸಂಬಂಧ ಮೃತಳ ಹಿರಿಯ ಸಹೋದರ ಸೈಯದ್ ರೋಷನ್ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪಟ್ಟಣ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಕ್ಷುಲ್ಲಕ ವಿಚಾರಕ್ಕೆ ಕೌಟುಂಬಿಕ ಕಲಹ:ತಂಗಿಯ ಕೊಂದ ಅಣ್ಣ Read More

ಕೆರೆಗೆ ಕಾರು ಉರುಳಿ ಯುವಕ,ಯುವತಿ ಸಾವು*; ಒಬ್ಬ ಬಚಾವ್

(ವರದಿ: ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಕೆರೆಗೆ ಕಾರು ಉರುಳಿ ಇಬ್ಬರು ಮೃತಪಟ್ಟು ಒಬ್ಬ ಬಚಾವ್ ಆದ ಘಟನೆ ತಡರಾತ್ರಿ ಕೊಳ್ಳೇಗಾಲ ತಾಲೂಕಿನ ಕುಂತೂರು ಬಳಿ ನಡೆದಿದೆ.

ಮೈಸೂರಿನ ಕುವೆಂಪುನಗರದ ಊರ್ಜಿತ್ (21) ಹಾಗೂ ಶುಭ (20) ಮೃತ ದುರ್ದೈವಿಗಳು. ಇವರ ಸ್ನೇಹಿತ ಮನ್ವಿತ್ (21) ಪ್ರಾಣಪಾಯದಿಂದ ಪಾರಾಗಿದ್ದಾರೆ.

ಮೂಲತಃ ಯಳಂದೂರು ತಾಲೂಕು ಗಣಿಗನೂರು ಗ್ರಾಮದವರಾದ ಶುಭ ಅವರು ಮೈಸೂರಿನ ಟೆಕ್ನೋ ಟಾಕ್ಸ್ ಕಂಪನಿಯಲ್ಲಿ ಟೆಲಿಕಾಲಾಗಿ ಕೆಲಸ ಮಾಡುತ್ತಿದ್ದರು. ಊರ್ಜಿತ್ ಗೋಲ್ಡ್ ಕಂಪನಿಯಲ್ಲಿ ಗೋಲ್ಡ್ ರಿಕವರ್ ಆಗಿ ಕೆಲಸ ಮಾಡುತ್ತಿದ್ದರು. ಮನ್ವಿತ್ ಲಯನ್ಸ್ ರೆಸ್ಟೋರೆಂಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಈ ಮೂವರು ಸ್ನೇಹಿತರು ತಡರಾತ್ರಿ ಮೈಸೂರಿನಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಕಾರಿನಲ್ಲಿ ತೆರಳುತ್ತಿದ್ದರು. ಮುಂಜಾನೆ 2.30 ರ ಸಮಯದಲ್ಲಿ ಕುಂತೂರು ಗ್ರಾಮದ ಬಳಿ ನಿದ್ದೆಯ ಮಂಪರಿನಲ್ಲಿ ತಿರುವಿನಲ್ಲಿ ಆಯತಪ್ಪಿ ಕಾರು ಕೆರೆಗೆ ಉರುಳಿ ಬಿದ್ದಿದೆ.

ಕೆರೆಯಲ್ಲಿ ನೀರು ತುಂಬಿದ್ದರಿಂದ ಉಸಿರುಗಟ್ಟಿ ಕಾರಿನಲ್ಲಿದ್ದ ಊರ್ಜಿತ್ ಹಾಗೂ ಶುಭ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಚಾಲನೆ ಮಾಡುತ್ತಿದ್ದ ಮನ್ವಿತ್ ಕಾರಿನ ಗಾಜು ಒಡೆದು ಹೇಗೋ ಹೊರಬಂದು ಕಾರಿನ ಮೇಲೆ ನಿಂತು ಕಾಪಾಡುವಂತೆ ಕೂಗಿಕೊಂಡಿದ್ದಾರೆ.

ಅವರ ಕೂಗು ಕೇಳಿದ ದಾರಿಹೋಕರು ಕೂಡಲೇ ಸಮೀಪದ ಮಾಂಬಳ್ಳಿ ಪೊಲೀಸ್ ಠಾಣೆಗೆ ವಿಚಾರ ಮುಟ್ಟಿಸಿದ್ದಾರೆ.

ತಕ್ಷಣ ಸ್ಥಳಕ್ಕೆ ಧಾವಿಸಿದ ಯಳಂದೂರು ಸಿಪಿಐ ಶ್ರೀಕಾಂತ್, ಮಾಂಬಳ್ಳಿ ಪಿಎಸ್ಐ ಕರಿಬಸಪ್ಪ ಪೇದೆ ಶಿವಕುಮಾರ್ ಮತ್ತು ಸಿಬ್ಬಂದಿ ಕೂಡಲೇ ಅಗ್ನಿಶಾಮಕ ದಳದವರಿಗೆ ಕರೆ ಮಾಡಿ ಬೋಟ್ ತರಿಸಿ ಕಾರಿನ ಮೇಲೆ ನಿಂತಿದ್ದ ಮನ್ವಿತ್ ನನ್ನು ರಕ್ಷಿಸಿದ್ದಾರೆ, ನಂತರ ಕಾರಿನಲ್ಲಿ ಸಾವನ್ನಪ್ಪಿದ್ದ ಇಬ್ಬರ ದೇಹಗಳನ್ನು ಹೊರ ತೆಗೆಸಿ ಚಾಮರಾಜನಗರ ಸಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಿದ್ದಾರೆ.

ಈ ಸಂಬಂಧ ಮಾಂಬಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕೆರೆಗೆ ಕಾರು ಉರುಳಿ ಯುವಕ,ಯುವತಿ ಸಾವು*; ಒಬ್ಬ ಬಚಾವ್ Read More