ಅಣ್ಣನ ಮಗನ ಮೇಲೆ ಗುಂಡಿನ ದಾಳಿ ನಡೆಸಿದ ಚಿಕ್ಕಪ್ಪ!

ಕೊಡಗು: ಆಸ್ತಿ ವಿಚಾರಕ್ಕೆ ಅಣ್ಣನ ಮಗನ ಮೇಲೆ ಚಿಕ್ಕಪ್ಪ ಗುಂಡಿನ ದಾಳಿ ನಡೆಸಿರುವ ಘಟನೆ ಕೊಡಗಿನ ವಿರಾಜಪೇಟೆ ತಾಲ್ಲೂಕಿನ ಕಾವಾಡಿಯಲ್ಲಿ ನಡೆದಿದೆ.

ಮಾಚಿಮಂಡ ಅಪ್ಪಚ್ಚು ಎಂಬಾತ ತನ್ನ ಅಣ್ಣನ ಮಗ ಬ್ರಿಜೇಶ್‌ ಎಂಬುವವರ ಮೇಲೆ ಗುಂಡು ಹಾರಿಸಿದ್ದಾನೆ.

ಆಸ್ತಿ ವಿಷಯಕ್ಕೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ಹೋಗಿ ಆತ ಗುಂಡಿನ ದಾಳಿ ನಡೆಸಿದ್ದಾನೆ.

ಗಂಭೀರ ಗಾಯಗೊಂಡಿರುವ ಬ್ರಿಜೇಶ್‌ ಅವರನ್ನು ವಿರಾಜಪೇಟೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾಫಿ ಕೊಯ್ಯಲು ಬಂದಾಗ ಈ ಘಟನೆ ನಡೆದಿದ್ದು, ಅಪ್ಪಚ್ಚು ಪುತ್ರ ಅಮೃತ್‌ ಎಂಬಾತ ಕೂಡ ಬಿಜ್ರೇಶ್ ಅವರ ತಂದೆ ಮಾಚಿಮಂಡ ರತನ್‌ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ‌

ಅಣ್ಣನ ಮಗನ ಮೇಲೆ ಗುಂಡಿನ ದಾಳಿ ನಡೆಸಿದ ಚಿಕ್ಕಪ್ಪ! Read More

ಸ್ನಾನಕ್ಕೆ‌ ಹೋದ‌ ಇಬ್ಬರು‌ ವಿದ್ಯಾರ್ಥಿಗಳು ನೀರುಪಾಲು

ಕೊಡಗು: ಹೇರೂರು ಸಮೀಪದ ಹಾರಂಗಿ ಹಿನ್ನೀರಿನಲ್ಲಿ ಸ್ನಾನ ಮಾಡಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು ನೀರುಪಾಲಾದ ಘಟನೆ ನಡೆದಿದೆ.

ಮಡಿಕೇರಿ ಕಾಲೇಜುವೊಂದರ ವಿದ್ಯಾರ್ಥಿಗಳಾದ ಚಂಗಪ್ಪ ಹಾಗೂ ತರುಣ್‌ ತಿಮ್ಮಯ್ಯ ಎಂಬುವರು ಮೃತಪಟ್ಟ ವಿದ್ಯಾರ್ಥಿಗಳು.

ಒಟ್ಟು ಮೂವರು ವಿದ್ಯಾರ್ಥಿಗಳು ಸ್ನಾನಕ್ಕಾಗಿ ನೀರಿಗೆ ಇಳಿದಿದ್ದಾರೆ, ಚಂಗಪ್ಪ ಹಾಗೂ ತರುಣ್‌ ತಿಮ್ಮಯ್ಯ ಮುಳುಗಿದ್ದಾರೆ.ಇನ್ನೊಬ್ಬ ವಿದ್ಯಾರ್ಥಿ ಬಚಾವಾಗಿದ್ದಾನೆ.

ಸ್ನಾನಕ್ಕೆ‌ ಹೋದ‌ ಇಬ್ಬರು‌ ವಿದ್ಯಾರ್ಥಿಗಳು ನೀರುಪಾಲು Read More

18 ಲಕ್ಷ ಮೌಲ್ಯದ 70 ಕ್ವಿಂಟಾಲ್ ಕಾಫಿ ಕಳ್ಳತನ:ಐದು ಮಂದಿ ಅರೆಸ್ಟ್

ಕೊಡಗು: 18 ಲಕ್ಷ ಮೌಲ್ಯದ 70 ಕ್ವಿಂಟಾಲ್ ಕಾಫಿ ಕಳ್ಳತನ ಮಾಡಿದ್ದ ಐದು ಮಂದಿಯನ್ನು ಕೊಡಗು ಜಿಲ್ಲೆ, ಕುಶಾಲನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸುನೀಲ್, ರಾಜು, ಶರತ್, ದಿನೇಶ್, ಜಿತೇಂದ್ರ ಬಂಧಿತಆರೋಪಿಗಳಾಗಿದ್ದು,ಅವರಿಂದ 6,495ಕೆಜಿ ಕಾಫಿ, ಮೂರು ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಕೂಡ್ಲೂರಿನ ಉಮಾಕಾಫಿ ವರ್ಕ್ಸ್ ನಲ್ಲಿ ಕಳ್ಳತನವಾಗಿತ್ತು.

ಐವರು ಆರೋಪಿಗಳು 18 ಲಕ್ಷ ಮೌಲ್ಯದ 70 ಕ್ವಿಂಟಲ್ ಕಾಫಿ ಕಳ್ಳತನ ಮಾಡಿದ್ದರು. ಈ ಕುರಿತು ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

18 ಲಕ್ಷ ಮೌಲ್ಯದ 70 ಕ್ವಿಂಟಾಲ್ ಕಾಫಿ ಕಳ್ಳತನ:ಐದು ಮಂದಿ ಅರೆಸ್ಟ್ Read More

ಮಹಿಳೆ ಮೇಲೆ ಹಲ್ಲೆ ನಡೆಸಿ ಕರಿಮಣಿ ಸರ ದೋಚಿದ್ದವನಿಗೆ ಕಠಿಣ ಶಿಕ್ಷೆ

ಕೊಡಗು: ಮಹಿಳೆಯ ಮನೆಗೆ ನುಗ್ಗಿ ಹಲ್ಲೆ ಮಾಡಿ ಮಾಂಗಲ್ಯ ಸರ ದೋಚಿದ್ದ ಅಪರಾಧಿಗೆ ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಿದೆ.

ಕೊಡಗು ಜಿಲ್ಲೆ,ಮಡಿಕೇರಿಯ ಐ ಡಿಬಿಐ ಬ್ಯಾಂಕ್ ಎದುರಿಗಿನ ಮನೆಯಲ್ಲಿ ವಾಸವಾಗಿದ್ದ ಒಂಟಿ ಮಹಿಳೆ ಮನೆಗೆ ನುಗ್ಗಿ ಹಲ್ಲೆ ಮಾಡಿ, ಚಿನ್ನದ ಕರಿಮಣಿ ಸರ, ಉಂಗುರ ದೋಚಿದ್ದ ಆರೋಪಿಗೆ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷ ಕಠಿಣ ಶಿಕ್ಷೆ ವಿಧಿಸಿದೆ.

15 ಸಾವಿರ ದಂಡ ಕೂಡಾ ವಿಧಿಸಿದ್ದು, ಒಂದು ವೇಳೆ ದಂಡದ ಮೊತ್ತವನ್ನು ಪಾವತಿಸದಿದ್ದಲ್ಲಿ 3 ತಿಂಗಳ ಅಧಿಕ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಇಬ್ಬನಿ ರೆಸಾರ್ಟ್ ನಲ್ಲಿ ಕೆಲಸ ಮಾಡಿಕೊಂಡಿದ್ದ ರಾಜಸ್ಥಾನ ಮೂಲದ ವಿಕಾಸ್ ಜೋರ್ಡಿಯಾ (35) ಎಂಬಾತ ಶಿಕ್ಷೆಗೊಳಗಾದ ಆರೋಪಿ.

5-11-2023 ರಂದು ಮಡಿಕೇರಿ ನಗರದ ಐಡಿಬಿಐ ಬ್ಯಾಂಕ್ ಎದುರು ಮನೆಯಲ್ಲಿ ಒಂಟಿಯಾಗಿ ಸಾಕಮ್ಮ ಪ್ರಭಾಕರ್ ಎಂಬ ಮಹಿಳೆ ವಾಸವಿದ್ದರು.

ಆರೋಪಿ ಬಹುದಿನಗಳಿಂದ ಹೊಂಚು ಹಾಕಿ ಮನೆಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ ನಡೆಸಿ, ತೀವ್ರವಾಗಿ ಗಾಯಗೊಳಿಸಿ ಕತ್ತಿನಲ್ಲಿದ್ದ ಚಿನ್ನದ ಕರಿಮಣಿ ಸರ ಮತ್ತು ಉಂಗುರವನ್ನು ದೋಚಿ ಪರಾರಿಯಾಗಿದ್ದ.

ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡಿದ್ದ ಪೊಲೀಸರು 6-11-2023 ರಂದು ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.

ಪ್ರಕರಣದ ತನಿಖಾಧಿಕಾರಿಯಾಗಿದ್ದ ಮಡಿಕೇರಿ ನಗರ ಪೊಲೀಸ್ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಹೆಡ್ ಕಾನ್ಸ್ ಟೇಬಲ್ ಗಳಾದ ಎ.ವಿ. ಕಿರಣ್ ಮತ್ತು ಡಿ. ಹೆಚ್. ಸುಮಿತಾ ಹಾಗೂ ಸಿಬ್ಬಂದಿ ಪ್ರಕರಣಕ್ಕೆ ಸಂಭಂಧಿಸಿದಂತೆ ತನಿಖೆ ಕೈಗೊಂಡು 2-01-2024 ರಂದು ಮಡಿಕೇರಿಯ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಜಿ. ಪ್ರಶಾಂತಿ ಅವರು ಆರೋಪ ಸಾಬೀತು ಆದ ಹಿನ್ನೆಲೆಯಲ್ಲಿ ದಿನಾಂಕ ಆರೋಪಿ ವಿಕಾಸ್ ಜೋರ್ಡಿಯಾನನಿಗೆ ಕಠಿಣ ಶಿಕ್ಷೆ ವಿಧಿಸಿದ್ದಾರೆ.

ಮಹಿಳೆ ಮೇಲೆ ಹಲ್ಲೆ ನಡೆಸಿ ಕರಿಮಣಿ ಸರ ದೋಚಿದ್ದವನಿಗೆ ಕಠಿಣ ಶಿಕ್ಷೆ Read More

ಕಾಂಗ್ರೆಸ್ ಶಾಸಕರ ವಿರುದ್ಧ ಎಫ್‌ಐಆರ್ ದಾಖಲಿಸಲು ಆಗ್ರಹಿಸಿ ಬಿಜೆಪಿ ಪ್ರತಿಭಟನೆ

ಕೊಡಗು,ಏ.5: ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಆಗ್ರಹಿಸಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದರು.

ಶಾಸಕರಾದ ಪೊನ್ನಣ್ಣ, ಮಂಥರ್‌ಗೌಡ ವಿರುದ್ಧ ಎಫ್‌ಐಆರ್ ದಾಖಲು ಮಾಡುವಂತೆ ಒತ್ತಾಯಿಸಿ ಕುಶಾಲನಗರ ತಾಲ್ಲೂಕು ಆಸ್ಪತ್ರೆ ಆವರಣದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿತು.

ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಸಂಸದ ಯದುವೀರ್ ಒಡೆಯರ್, ಮಾಜಿ ಸಂಸದ ಪ್ರತಾಪ್ ಸಿಂಹ, ಮಾಜಿ ಶಾಸಕರಾದ ಕೆ.ಜಿ.ಬೋಪಯ್ಯ, ಪ್ರೀತಂಗೌಡ ಹಾಗೂ ನೂರಾರು ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಈ ವೇಳೆ ಮಾತನಾಡಿದ ವಿಜಯೇಂದ್ರ, ಸೋಷಿಯಲ್ ಮೀಡಿಯಾದಲ್ಲಿ ಕಾಂಗ್ರೆಸ್ ಶಾಸಕರನ್ನು ಪ್ರಶ್ನಿಸಲೇ ಬಾರದಾ ಎಂದು ಪ್ರಶ್ನಿಸಿದರು.

ಬಿಜೆಪಿ ಕಾರ್ಯಕರ್ತರು ಎದೆಗುಂದಬೇಡಿ ಆತ್ಮಹತ್ಯೆ ಮಾಡಿಕೊಳ್ಳಬೇಡಿ, ರಣಹೇಡಿ, ಕೊಲೆಗಡುಕ ಸರ್ಕಾರದ ವಿರುದ್ಧ ಹೋರಾಡಿ ಎಂದು ಕರೆ ನೀಡಿದರು.

ಸಿದ್ದರಾಮಯ್ಯ ಕೊಲೆಗಡುಕ ಮುಖ್ಯಮಂತ್ರಿ. 16 ಬಜೆಟ್ ಮಂಡಿಸಿದ ಸಿಎಂ ಅಂತೆ, ಇವರ ಯೋಗ್ಯತೆಗೆ ಕೊಲೆಗಡುಕರ ಬೆಂಬಲವಾಗಿ ನಿಂತಿದ್ದಾರೆ. ಪೊಲೀಸ್ ಇಲಾಖೆ ಸರ್ಕಾರದ ಕೈಗೊಂಬೆ ಆಗಿದೆ. ಪೊಲೀಸ್ ಅಧಿಕಾರಿಗಳೇ ಬಹಳ ದಿನ ಕಾಂಗ್ರೆಸ್ ದರ್ಬಾರ್ ನಡೆಯಲ್ಲ. ಯೂನಿಫಾರ್ಮ್ ಗೆ ಗೌರವ ಕೊಟ್ಟು ನಡೆದುಕೊಳ್ಳಿ. ಪೊಲೀಸರು ಕಾನೂನು ಪ್ರಕಾರ ನಡೆಯದೇ ಇದ್ದರೆ, ಪೊಲೀಸ್ ಠಾಣೆಗೆ ನುಗ್ಗಿ ಜನ ಬೆಂಕಿ ಹಚ್ಚುತ್ತಾರೆ ಹುಷಾರ್ ಎಂದು ಎಚ್ಚರಿಸಿದರು.

ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣ ಸಿಬಿಐ ತನಿಖೆ ಆಗಬೇಕು. ನಮಗೆ ಪೊಲೀಸರ ಮೇಲೆ ನಂಬಿಕೆ ಇಲ್ಲ. ಪೊಲೀಸ್ ಠಾಣೆಗೆ ಮುತ್ತಿಗೆ ಹಾಕೋಣ ಇದು ಭಂಡ ಸರ್ಕಾರ ಪೊಲೀಸರಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ವೇಳೆ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ತಳ್ಳಾಟ-ನೂಕಾಟ ನಡೆಯಿತು.

ಡಿವೈಎಸ್‌ಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು.

ಕಾಂಗ್ರೆಸ್ ಶಾಸಕರ ವಿರುದ್ಧ ಎಫ್‌ಐಆರ್ ದಾಖಲಿಸಲು ಆಗ್ರಹಿಸಿ ಬಿಜೆಪಿ ಪ್ರತಿಭಟನೆ Read More

ತುಲಾ ಸಂಕ್ರಮಣ:ಕಾವೇರಿ ತೀರ್ಥೋದ್ಭವ-ಶ್ರೀರಂಗನಾಥ ಸ್ವಾಮಿಗೂ ಅಭಿಷೇಕ ಪೂಜೆ

(ವರದಿ:ಜಿ.ಎ.ನಾಗರಾಜ್ ಶ್ರೀರಂಗಪಟ್ಟಣ)

ಸೂರ್ಯನು ತುಲಾ ರಾಶಿಗೆ ಪ್ರವೇಶಿಸುವ ಕಾಲದಲ್ಲಿ ಕಾವೇರಿಯ ಉಗಮಸ್ಥಳವಾದ ತಲಕಾವೇರಿಯಲ್ಲಿ ಅಕ್ಟೋಬರ್‌ 18 ರ ನಸುಕಿನ ಜಾವ 12.59ಕ್ಕೆ ಕಾವೇರಿಯು ತೀರ್ಥರೂಪದಲ್ಲಿ ಉದ್ಭವವಾಗಿದ್ದಾಳೆ.

ಈ ಸಮಯದಲ್ಲಿ ಭಕ್ತರು ಪುಣ್ಯ ಸ್ನಾನವನ್ನು ಮಾಡಿ ಪುನೀತರಾಗಿದ್ದಾರೆ.

ಸೌರಮಂಡಲದ ರಾಜನಾದ ಸೂರ್ಯನು ಕನ್ಯಾರಾಶಿಯಿಂದ ತುಲಾ ರಾಶಿಯನ್ನು ಪ್ರವೇಶಿಸುವ ದಿನವೇ ತುಲಾ ಸಂಕ್ರಮಣ. ಈ ಬಾರಿ ಅಕ್ಟೋಬರ್‌ 17ರಂದು ಬೆಳಗ್ಗೆ 7.41ಕ್ಕೆ ತುಲಾ ರಾಶಿಯನ್ನು ಪ್ರವೇಶಿಸಿದ್ದಾನೆ.

ವರ್ಷಕ್ಕೊಂದು ಬಾರಿ ಸೂರ್ಯನು ತುಲಾ ರಾಶಿಯನ್ನು ಪ್ರವೇಶಿಸುವ ದಿನವನ್ನು ತುಲಾ ಸಂಕ್ರಮಣ ಎಂದು ಕರೆಯುತ್ತಾರೆ. ಈ ದಿನವೇ ಕಾವೇರಿಯು ತನ್ನ ಉಗಮಸ್ಥಾನದಲ್ಲಿ ತೀರ್ಥರೂಪಿಣಿಯಾಗಿ ಭಕ್ತರಿಗೆ ದರ್ಶನವನ್ನು ನೀಡುತ್ತಾಳೆ.

ಹಾಗಾಗಿ ಈ ದಿನವನ್ನು ಕಾವೇರಿ ಸಂಕ್ರಮಣ, ಕಾವೇರಿ ಸಂಕ್ರಾಂತಿಯೆಂದೂ ಕರೆಯುತ್ತಾರೆ.
ಕಾವೇರಿಯ ಉಗಮಸ್ಥಳವಾದ ಕೊಡಗಿನಲ್ಲಿ ತುಲಾ ಸಂಕ್ರಾಂತಿಯಂದು ವಾರ್ಷಿಕ ಕಾವೇರಿ ಸಂಕ್ರಮಣ ಜಾತ್ರೆ ನಡೆಯುತ್ತದೆ.

ಈ ಉತ್ಸವವು ಅಕ್ಟೋಬರ್‌ 17ರಿಂದ ನವೆಂಬರ್‌ 17ರವರೆಗೆ ನಡೆಯುತ್ತದೆ. ಕೊಡಗಿನ ಭಾಗಮಂಡಲದಲ್ಲಿರುವ ಭಗಂಡೇಶ್ವರ ದೇವಸ್ಥಾನದಿಂದ ಸುಮಾರು ಎರಡು ಕಿ.ಮೀ ಬೆಟ್ಟದ ಮೇಲಿರುವ ತಲಕಾವೇರಿಯೇ ಉಗಮಸ್ಥಾನ.

ತೀರ್ಥೋದ್ಭವದ ಮಹತ್ವ:
ತೀರ್ಥೋದ್ಭವದ ಸಮಯದಲ್ಲಿ ತಲಕಾವೇರಿಯಲ್ಲಿ ಸ್ನಾನ ಮಾಡಿ, ತೀರ್ಥವನ್ನು ಸಂಗ್ರಹಿಸಿಟ್ಟರೆ ಪುಣ್ಯ ಪ್ರಾಪ್ತಿಯಾಗುವುದು ಎಂಬುದು ಭಕ್ತರ ನಂಬಿಕೆ.

ಕಾವೇರಿ ತುಲಾ ಸಂಕ್ರಮಣವು ಒಂದು ತಿಂಗಳ ಕಾಲ ನಡೆಯಲಿದ್ದು ಈ ಸಮಯದಲ್ಲಿ ಇಲ್ಲಿ ಬಂದು ಪವಿತ್ರ ಸ್ನಾನ ಮಾಡಿದರೆ ಪಾಪ ಪರಿಹಾರವಾಗಿ ಪುಣ್ಯ ಪ್ರಾಪ್ತಿಯಾಗುವುದು ಎಂದು ಹಿರಿಯರು ಹೇಳುತ್ತಾರೆ.

ಕಾವೇರಿ ತೀರ್ಥೋದ್ಭವಕ್ಕೂ ಮುನ್ನ ಪಿಂಡ ಪ್ರದಾನ ಕಾರ್ಯಗಳು ನಡೆಯುತ್ತದೆ. ಪಿಂಡ ಪ್ರದಾನ ಕಾರ್ಯವನ್ನು ಕಾವೇರಿ, ಕನ್ನಿಕೆ, ಸುಜೋತಿ ನದಿಗಳ ಸಂಗಮ ಸ್ಥಳದಲ್ಲಿ ಮಾಡಲಾಗುತ್ತದೆ.

ನಂತರ ಸಂಗಮಸ್ಥಾನದಲ್ಲಿ ಮಿಂದು, ತಲಕಾವೇರಿಯ ಉಗಮಸ್ಥಾನಕ್ಕೆ ತೆರಳಿ, ತೀರ್ಥೋದ್ಭವ ಆದ ನಂತರ ಸ್ನಾನ ಕೊಳದಲ್ಲಿ ಪುಣ್ಯ ಸ್ನಾನ ಮಾಡಲಾಗುತ್ತದೆ. ಹೀಗೆ ಮಾಡುವುದರಿಂದ ಗತಿಸಿದ ಹಿರಿಯರಿಗೆ ಸದ್ಗತಿ ದೊರೆಯುವುದು ಹಾಗೂ ಪಾಪಕರ್ಮಗಳು ಪರಿಹಾರವಾಗುವುದು ಎಂಬ ನಂಬಿಕೆ ಇದೆ.

ಪುಣ್ಯಕಾಲದಲ್ಲಿ ಉದ್ಭವವಾದ ತೀರ್ಥವನ್ನು ಕೊಡವರು ಪುಣ್ಯ ತೀರ್ಥವಾಗಿ ಸಂಗ್ರಹಿಸುತ್ತಾರೆ. ಹುಟ್ಟುವ ಮಗುವಿಗೂ ಈ ತೀರ್ಥವನ್ನು ಕೊಡುತ್ತಾರೆ. ಹಬ್ಬ ಹರಿದಿನಗಳಲ್ಲಿ ಇದೇ ತೀರ್ಥವನ್ನು ಬಳಸುತ್ತಾರೆ. ಕೊನೆಗೆ ಪ್ರಾಣತ್ಯಜಿಸುವ ಸಂದರ್ಭದಲ್ಲೂ ಬಾಯಿಗೆ ಇದೇ ತೀರ್ಥವನ್ನು ನೀಡಿ ಸ್ವರ್ಗಪ್ರಾಪ್ತಿಯಾಗಲೆಂದು ಹಾರೈಸುತ್ತಾರೆ.

ಇತ್ತ ಶ್ರೀರಂಗಪಟ್ಟಣದಲ್ಲಿ ಶ್ರೀಮನ್ನಾರಾಯಣ ಸಂಬೂತನಾದ ವೈಕುಂಠಾಧಿಪತಿ ಶ್ರೀರಂಗನಾಥ ಸ್ವಾಮಿಗೆ ಅಷ್ಟ ತೀರ್ಥೋದ್ಭವದೊಂದಿಗೆ ಶ್ರೀರಂಗಪಟ್ಟಣದ 7 ನದಿಗಳಲ್ಲಿ ಅಭಿಷೇಕ ಪೂಜೆ ಪುನಸ್ಕಾರಗಳನ್ನು ಮಾಡಲಾಗುತ್ತದೆ.

ನಂತರ ತನ್ನ ಸ್ವಸ್ಥಾನವಾದ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಆನಂತರ ಸಂಧ್ಯಾ ಕಾಲದ ಪೂಜೆ ಮಾಡಿ ಶ್ರೀಮನ್ ನಾರಾಯಣನಿಗೆ ಪೂಜೆ ಸಂಪನ್ನಗೊಳ್ಳುತಗತದೆ.

ಜಿ ಬಿ ಹೊಳೆ ಕ್ಷೇತ್ರದಲ್ಲಿ ದೇವರು ಮಿಂದು ಏಳುವ ಸಂದರ್ಭದಲ್ಲಿ ಭಕ್ತರೂ ಕೂಡ ನದಿಯಲ್ಲಿ ತೀರ್ಥ ಸ್ನಾನ ಮಾಡಿ ಪುನೀತರಾಗುತ್ತಾರೆ.

ತುಲಾ ಸಂಕ್ರಮಣ:ಕಾವೇರಿ ತೀರ್ಥೋದ್ಭವ-ಶ್ರೀರಂಗನಾಥ ಸ್ವಾಮಿಗೂ ಅಭಿಷೇಕ ಪೂಜೆ Read More