ಪ್ರಾಣಿ ಪಕ್ಷಿ ಸಂಕುಲ ಉಳಿಸಲು ನಟ ಪ್ರಜ್ವಲ್ ದೇವರಾಜ್ ಕರೆ

ಮೈಸೂರು, ಮಾ.6: ಮನುಷ್ಯನ ಒಡನಾಡಿಯಾಗಿರುವ ಪ್ರಾಣಿ ಪಕ್ಷಿಗಳ ಜೀವ ಸಂಕುಲವನ್ನುಳಿಸಲು ಸಮಾಜದಲ್ಲಿರುವ ಸಹೃದಯಿ ನಾಗರಿಕರು ಮುಂದಾಗಬೇಕೆಂದು ಖ್ಯತ ನಟ ಪ್ರಜ್ವಲ್ ದೇವರಾಜ್ ಕರೆ ನೀಡಿದ್ದಾರೆ.

ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಹಮ್ಮಿಕೊಂಡಿರುವ
2 ತಿಂಗಳ ಮೂಕ ಸ್ಪಂದನೆ ‘ನೀರುಣಿಸಿ-ಜೀವವನ್ನುಳಿಸಿ ವಿಶೇಷ ಅಭಿಯೋಜನೆಯನ್ನು ನಗರದ ಚಾಮುಂಡಿಪುರಂ ನಲ್ಲಿರುವ ಟ್ರಸ್ಟ್ ಕಚೇರಿಯಲ್ಲಿ ಮೂಕ ಸ್ಪಂದನ ಅಭಿಯಾನದ ಸಾಮಗ್ರಿಗಳನ್ನು ಬಿಡುಗಡೆಗೊಳಿಸಿ ಪ್ರಜ್ವಲ್ ಮಾತನಾಡಿದರು.

ಬೇಸಿಗೆಯ ರಣಬಿಸಿಲಿನ ತಾಪಮಾನದ ತೀವ್ರತೆಯಿಂದಾಗಿ ಪ್ರಾಣಿ ಪಕ್ಷಿಸಂಕುಲ ಬಳಲುತ್ತವೆ. ಕುಡಿಯುವ ನೀರು ಆಹಾರಕ್ಕಾಗಿ ಪರಿತಪಿಸುತ್ತವೆ. ಆದ್ದರಿಂದ ಪರಿಸರ ರಕ್ಷತಿ ರಕ್ಷಿತಃ ಪರಿಸರ ಸ್ನೇಹಿ ತಂಡ ಹಾಗೂ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್
2ತಿಂಗಳ ಕಾಲ ಮೂಕ ಸ್ಪಂದನೆ ಎಂಬ ‘ನೀರುಣಿಸಿ-ಜೀವವನ್ನುಳಿಸಿ, ಅಭಿಯೋಜನೆಯನ್ನು ಮೈಸೂರು ನಗರದ ಸುತ್ತಮುತ್ತ ಪ್ರದೇಶಗಳಲ್ಲಿ ರೂಪಿಸುತ್ತಿರುವುದು ಅತ್ಯುತ್ತಮ ಕೆಲಸ ಎಂದು ತಿಳಿಸಿದರು.

ಬೇಸಿಗೆ ಆರಂಭಗೊಂಡಿದ್ದು ಪ್ರಾಣಿ ಪಕ್ಷಿಗಳು ತಮ್ಮ ಅಸ್ಥಿತ್ವಕ್ಕಾಗಿ ಹೋರಾಟ
ನಡೆಸಬೇಕಿದೆ, ಜನವಸತಿ ಮತ್ತು ಜನಸಂಖ್ಯೆಗನುಗುಣವಾಗಿ ಮೊಬೈಲ್ ಮತ್ತು ಇತರೆ ತರಂಗದಿಂದಾಗಿ ಹಾಗೂ ಅಗತ್ಯ ನಾಗರೀಕ ಸವಲತ್ತುಗಳ ನೆರಳಿನಡಿ ಈಗಾಗಲೇ ಸಂತತಿ ಕ್ಷೀಣಿಸುತ್ತಿದೆ, ಹಲವಾರು ಪಕ್ಷಿಗಳು ನಶಿಸಿ ಹೋಗುತ್ತಿವೆ. ಅಳಿದು ಉಳಿದಿವೆಯೇನೋ ಎಂಬಂತಿರುವ ಜನತೆಯ ಮಧ್ಯೆಯೇ ಬದುಕಿ ಬೆರೆತು ಜೀವಿಸುವ ಪ್ರಾಣಿಪಕ್ಷಿ ಸಂಕುಲ ಆಹಾರ ನೀರಿಗಾಗಿ ಪರಿತಪಿಸುವಂತಾಗಿದೆ.

ಈ ಭೂಮಂಡಲದಲ್ಲಿ ಸರ್ವಜೀವಿಗಳಿಗೂ ಸಮಬಾಳು ಸ್ವತಂತ್ರ ಇರಬೇಕು ಮಾನವೀಯ ದೃಷ್ಟಿಯಿಂದ ಅವುಗಳ ಬಗ್ಗೆ ಕಾಳಜಿವಹಿಸಬೇಕೆಂದು ಅವರು ಕಳಕಳಿಯಿಂದ ಮನವಿ ಮಾಡಿದರು.

ಸಮಾಜಮುಖಿ ಟ್ರಸ್ಟ್ ನ ಈ ಸೇವಾ ಕಾರ್ಯ ನಿಜಕ್ಕೂ ಶ್ಲಾಘನೀಯ ಇವರ ಈ ಕೆಲಸ ಯಶಸ್ವಿಗೊಳ್ಳಲಿ ಸಾರ್ವಜನಿಕರು ಈ ಸೇವಾ ಕಾರ್ಯಕ್ಕೆ ಕೈ ಜೋಡಿಸಲಿ ಎಂದು ಹೇಳಿದರು

ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ್ ಅಯ್ಯಂಗಾರ್ ಮಾತನಾಡಿ,ನಮ್ಮ ಈ ಅಭಿಯಾನಕ್ಕೆ ಸಾರ್ವಜನಿಕರು ಕೈಜೋಡಿಸಬೇಕು ಎಂದು ಕೋತಿದತು.

ನಗರದ ಪ್ರತಿಯೊಂದು ವಾರ್ಡ್‌ ನಲ್ಲಿ ಪ್ರಾಣಿ ಮತ್ತು ಪಕ್ಷಿಗಳಿಗೆ ನೀರಿನ ತೊಟ್ಟಿ ಹಾಗೂ ಮರಗಳಿಗೆ ನೀರಿನ ತಟ್ಟೆ ಹಾಗೂ ಆಹಾರದ ತಟ್ಟೆ ನೆಡಲಾಗುವುದು ಹಾಗೆಯೇ ಸುತ್ತಮುತ್ತ ಇರುವವರಿಗೆ ಪ್ರತಿನಿತ್ಯ ಪ್ರಾಣಿ ಪಕ್ಷಿಗಳಿಗೆ ಆಹಾರ ನೀಡುವಂತೆ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.

ಎಲ್ಲರೂ ಅವರವರ ಮನೆಗಳ ತಾರಸಿಯ ಮೇಲೆ, ಮರಗಳ ಕೆಳಗೆ, ಮನೆಯ ಮುಂದಿನ ರಸ್ತೆಯ ಇಕೆಲಗಳಲ್ಲಿ ಪ್ರಾಣಿ
ಪಕ್ಷಿಗಳ ಬಾಯಿಗೆ ಎಟುಕುವಂತೆ ಮಣ್ಣಿನ ಬಟ್ಟಲು ಅಥವಾ ಸಣ್ಣ ಸಿಮೆಂಟ್ ತೊಟ್ಟಿಗಳನ್ನಿಟ್ಟು ಅದರಲ್ಲಿ ಶುದ್ಧ ನೀರನ್ನು ತುಂಬಿಡಬೇಕು. ಆಹಾರ ಧಾನ್ಯ ಮಿತವಾಗಿಟ್ಟು ಅವುಗಳನ್ನು ಸಲುಹಬೇಕು ಎಂದು ವಿಕ್ರಮ್ ಅಯ್ಯಂಗಾರ್ ಕೋರಿದರು.

ಪ್ರಾಣಿ ಪಕ್ಷಿ ಸಂಕುಲವನ್ನುಳಿಸಿಕೊಳ್ಳುವುದು
ನಾಗರಿಕ ಸಮಾಜದಲ್ಲಿರುವ ನಮ್ಮಗಳ ಆದ್ಯ ಕರ್ತವ್ಯವೆಂದು ಭಾವಿಸಬೇಕು. ನಮ್ಮೊಟ್ಟಿಗಿರುವ ಜೀವರಾಶಿಗಳನ್ನೂ ರಕ್ಷಿಸಿ ಅವುಗಳ ಬಗೆಗೆ ಅನುಕಂಪ ತೋರಬೇಕಾದ್ದು ಪ್ರತಿಯೊಬ್ಬ ನಾಗರಿಕರ ಕರ್ತವಾಗಬೇಕಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಪರಿಸರ ಪ್ರೇಮಿ ಪ್ರದೀಪ್ ಗೌಡ,ಅಮಿತ್ ಕುಮಾರ್, ಮಹಾನ್ ಶ್ರೇಯಸ್, ಸಚಿನ್ ನಾಯಕ್, ಮತ್ತಿತರರು ಹಾಜರಿದ್ದರು.

ಪ್ರಾಣಿ ಪಕ್ಷಿ ಸಂಕುಲ ಉಳಿಸಲು ನಟ ಪ್ರಜ್ವಲ್ ದೇವರಾಜ್ ಕರೆ Read More

ಫೆ.26 ರಂದು ಶಿವರಾತ್ರಿ ಉತ್ಸವ: ಮಹಿಳೆಯರಿಗೆ ರಂಗೋಲಿ ಸ್ಪರ್ಧೆ

ಮೈಸೂರು: ಮಹಾಶಿವರಾತ್ರಿ ಪ್ರಯುಕ್ತ ಮಹಿಳೆಯರಿಗೆ ರಂಗೋಲೆ ಸ್ಪರ್ಧೆ
ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಸಮೃದ್ಧಿ ಟ್ರಸ್ಟ್, ಕೆ ಎಂ ಪಿ ಕೆ ಚಾರಿಟೇಬಲ್ ಟ್ರಸ್ಟ್ ಹಾಗೂ ಜೆಸಿಐ ಮೈಸೂರು ಕಿಂಗ್ಸ್ ಲೇಡೀಸ್ ವಿಂಗ್ಸ್ ವತಿಯಿಂದ
ವಿಶ್ವೇಶ್ವರ ನಗರದಲ್ಲಿರುವ ಮಹರ್ಷಿ ಪಬ್ಲಿಕ್ ಶಾಲೆಯಲ್ಲಿ ಫೆ. 26 ರಂದು ಬೆಳಗ್ಗೆ 9 ಗಂಟೆಗೆ ಈ ಎಲ್ಲಾ ಕಾರ್ಯಕ್ರಮ ಆಯೋಜಿಸಲಾಗಿದೆ.

ವಿಶೇಷವಾಗಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಿದ್ದು, ಸ್ಪರ್ಧೆಯಲ್ಲಿ ಭಾಗವಹಿಸುವವರು ಮೊಬೈಲ್ 9591350267 ಸಂಪರ್ಕಿಸಿ ಸ್ಪರ್ಧೆಗೆ ಹೆಸರು ನೋಂದಾಯಿಸಬಹುದು ಎಂದು ಸಮೃದ್ಧಿ ಟ್ರಸ್ಟ್ ಅಧ್ಯಕ್ಷೆ ಸಹನಗೌಡ ತಿಳಿಸಿದ್ದಾರೆ.

ಫೆ.26 ರಂದು ಶಿವರಾತ್ರಿ ಉತ್ಸವ: ಮಹಿಳೆಯರಿಗೆ ರಂಗೋಲಿ ಸ್ಪರ್ಧೆ Read More

ಶಿಕ್ಷಣ ಪ್ರತಿ ಮಗುವಿಗೆ ಸಿಗಬೇಕಾದ ಮೂಲಭೂತ ಹಕ್ಕು : ಟಿ ಎಸ್ ಶ್ರೀವತ್ಸ

ಮೈಸೂರು: ಶಿಕ್ಷಣ ಎನ್ನುವುದು ಪ್ರತಿಯೊಂದು ಮಗುವಿಗೆ ಸಿಗಬೇಕಾದ ಮೂಲಭೂತ ಹಕ್ಕು ಎಂದು ಶಾಸಕರಾದ ಟಿ ಎಸ್ ಶ್ರೀವತ್ಸ ತಿಳಿಸಿದರು.

ಕೆ ಎಂ ಪಿ ಕೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿಶ್ವೇಶ್ವರ ನಗರದಲ್ಲಿರುವ ಮಹರ್ಷಿ ಪಬ್ಲಿಕ್ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ಅಕ್ಷರಭ್ಯಾಸ ಕಾರ್ಯಕ್ರಮದಲ್ಲಿ ಶ್ರೀವತ್ಸ ಮಾತನಾಡಿದರು.

ಸಾಮೂಹಿಕ ವಿವಾಹವನ್ನ ಸರಳ ರೀತಿಯಲ್ಲಿ ಸರ್ಕಾರದ ವತಿಯಿಂದ ತಂದಿರುವ ಸಪ್ತಪದಿ ಯೋಜನೆಯಂತೆ ಅಕ್ಷರಭ್ಯಾಸ ಕಾರ್ಯಕ್ರಮವನ್ನ ಶಿಕ್ಷಣ ಇಲಾಖೆ ವತಿಯಿಂದ ರಾಜ್ಯದ ಎಲ್ಲಾ ಶಾಲೆಗಳಲ್ಲೂ ಹಮ್ಮಿಕೊಳ್ಳುವಂತೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು ಪೋಷಕರ ಕರ್ತವ್ಯ, ಮಕ್ಕಳಿಗೆ ಶಿಕ್ಷಣದ ಜೊತೆಯಲ್ಲೆ ಕಲೆ, ಕ್ರೀಡೆ, ಸಂಗೀತ ಸೇರಿದಂತೆ ಯಾವ ಕ್ಷೇತ್ರದಲ್ಲಿ ಪ್ರತಿವಭಾವಂತರು ಎಂದು ಅರಿತು ಪ್ರಥಮ ಹಂತದಲ್ಲೆ ಪೋಷಕರು ಪ್ರೋತ್ಸಾಹ ನೀಡಬೇಕು ಎಂದು ಸಲಹೆ ನೀಡಿದರು.

ಪುರಾಣ ಇತಿಹಾಸದಲ್ಲಿರುವ ಪಾರ್ವತಿದೇವಿ ತನ್ನ ಮಗು ಗಣೇಶನಿಗೂ ಸಹ ಅಕ್ಷರಾಭ್ಯಾಸ ಕಲಿಸಿದ ಉಲ್ಲೇಖವಿದೆ, ಮಗು ಪೋಷಕರಿಂದ ಕಲಿತ ಮೊದಲ ಅಕ್ಷರದಲ್ಲಿರುವ ಆಸಕ್ತಿ, ಶ್ರಮಪಟ್ಟ ಕನಸನ್ನ ಕಂಡ ಪೋಷಕರು ಅದೇ ರೀತಿಯಲ್ಲೆ ಸನ್ಮಾರ್ಗದ ಕಡೆ ಮಗು ಬೆಳೆಯುವಂತೆ ನೋಡಿಕೊಳ್ಳುವುದು ಕರ್ತವ್ಯವಾಗಿದೆ, ಶಿಕ್ಷಣಕ್ಕೆ ಎಂದೂ ಅಂತ್ಯವಿಲ್ಲ, ತಂತ್ರಜ್ಞಾನ ಮುಂದಿನ ಪೀಳಿಗೆ ಕಲಾಮಾನಕ್ಕೆ ತಕ್ಕಂತೆ ಪ್ರತಿದಿನ ಸಮಾಜದಲ್ಲಿ ಶಿಕ್ಷಣದ ಮಹತ್ವದ ಬಗ್ಗೆ ತಿಳಿಯುತ್ತಲೇ ಇರಬೇಕು, ಪ್ರತಿಯೊಬ್ಬರು ಶಿಕ್ಷಣ ಪಡೆದ ನಂತರದಲ್ಲಿ ಅದನ್ನ ಮತ್ತೊಬ್ಬರಿಗೆ ವಿದ್ಯಾದಾನ ಮಾಡಲು ಮುಂದಾಗಬೇಕು ಎಂದು ಶ್ರೀವತ್ಸ ತಿಳಿಹೇಳಿದರು.

100ಕ್ಕೂ ಹೆಚ್ಚು ಮಂದಿ ಅಕ್ಷರಭ್ಯಾಸದಲ್ಲಿ ಪಾಲ್ಗೊಂಡಿದ್ದರು. ಪೋಷಕರು ಮಕ್ಕಳಿಗೆ ವಿದ್ಯಾರಂಭ ಮಾಡಿಸಿ ಭಕ್ತಿಯನ್ನು ಸಮರ್ಪಿಸಿ ನಂಬಿಕೆಯನ್ನು ಪುನರ್ಜೀವನಗೊಳಿಸಿದರು.

ಸರಸ್ವತಿ ಪೂಜೆ ಮಾಡಿ ಆನಂತರ ಮಕ್ಕಳಿಗೆ ಹೆತ್ತವರು ಮಕ್ಕಳ ಕೈ ಹಿಡಿದು ಅಕ್ಕಿ ಕಾಳಿನಲ್ಲಿ ಓಂಕಾರ ಮತ್ತು ಗಣೇಶನಾಮ ಹಾಗೂ ತಮ್ಮ ಮಾತೃಭಾಷೆ ಅ ಆ ಇ ಮುಂತಾದವುಗಳನ್ನು ಬರೆಸುವುದರ ಮೂಲಕ ಅರ್ಚಕರಾದ ನಾಗರಾಜ್ ಶಾಸ್ತ್ರಿ ಹಾಗೂ ರಾಘವೇಂದ್ರ ಅವರ ನೇತೃತ್ವದಲ್ಲಿ ಅಕ್ಷರಭ್ಯಾಸ ಮಾಡಿದರು.

ಪುರಾಣ ನಂಬಿಕೆಯ ಪ್ರಕಾರ ಹೀಗೆ ಮಾಡುವುದರಿಂದ ಮಕ್ಕಳ ನಾಲಗೆಯ ಮೇಲೆ ಸರಸ್ವತಿ ದೇವಿ ನೆಲೆಸಿ ಮಕ್ಕಳ ಶೈಕ್ಷಣಿಕ ಬದುಕು ಉತ್ತಮವಾಗಿರುತ್ತವೆ ಎಂಬ ನಂಬಿಕೆ ಇದೆ.

ಈ ಸಂದರ್ಭದಲ್ಲಿ ಹಿರಿಯ ಸಮಾಜ ಸೇವಕರಾದ ಕೆ ರಘುರಾಮ್ ವಾಜಪೇಯಿ,ಮಹರ್ಷಿ ಪಬ್ಲಿಕ್ ಶಾಲೆ ಸಿಇಒ ತೇಜಸ್ ಶಂಕರ್, ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್,
ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್, ಬಿಜೆಪಿ ನಗರ ಉಪಾಧ್ಯಕ್ಷ ಜೋಗಿ ಮಂಜು,ಜೆಡಿಎಸ್ ಕಾರ್ಯದಕ್ಷ ಎಸ್ ಪ್ರಕಾಶ್ ಪ್ರಿಯದರ್ಶನ್, ಎಸ್ ಎನ್ ರಾಜೇಶ್,
ಖುಷಿ,ಸವಿತಾ ಘಾಟ್ಕೆ, ಜಯಶ್ರೀ ಶಿವರಾಂ, ವಿದ್ಯಾ, ಪುಷ್ಪ, ರುಕ್ಮಿಣಿ, ಶಾಲೆಯ ಪ್ರಾಂಶುಪಾಲರಾದ ಗೋಪಾಲಸ್ವಾಮಿ, ಬಿ ಏನ್ ಅನಿತಾ, ಪ್ರಿಯಾಂಕ ಹಾಗೂ ಶಿಕ್ಷಕ ವೃಂದ ಹಾಜರಿದ್ದರು.

ಶಿಕ್ಷಣ ಪ್ರತಿ ಮಗುವಿಗೆ ಸಿಗಬೇಕಾದ ಮೂಲಭೂತ ಹಕ್ಕು : ಟಿ ಎಸ್ ಶ್ರೀವತ್ಸ Read More

ಫೆ.14 ರಂದು ಉಚಿತ ಸಾಮೂಹಿಕ ಅಕ್ಷರಭ್ಯಾಸ:ಪೋಸ್ಟರ್ ಬಿಡುಗಡೆ ಮಾಡಿದ ಸಿಂಹ

ಮೈಸೂರು: ಮೈಸೂರಿನ ಕೆ ಎಂ ಪಿ ಕೆ ಟ್ರಸ್ಟ್ ವತಿಯಿಂದ ಫೆ.14 ರಂದು ಉಚಿತ ಸಾಮೂಹಿಕ ಅಕ್ಷರಭ್ಯಾಸ ಹಮ್ಮಿಕೊಂಡಿದ್ದು ಇದರ ಪೋಸ್ಟರ್ ಅನ್ನು ಮಾಜಿ ಸಂಸದ ಪ್ರತಾಪ್ ಸಿಂಹ ಬಿಡುಗಡೆಗೊಳಿಸಿದರು.

ಕಾರ್ಯಕ್ರಮ ವಿಶ್ವೇಶ್ವರ ನಗರ,ಇಂಡಸ್ಟ್ರಿಯಲ್ ಸಬರ್ಬ್,
ಮಹರ್ಷಿ ಪಬ್ಲಿಕ್ ಶಾಲೆಯಲ್ಲಿ ಉಚಿತ ಸಾಮೂಹಿಕ ಅಕ್ಷರಭ್ಯಾಸ ಹಾಗೂ ಸರಸ್ವತಿ ಪೂಜೆ ಏರ್ಡಿಸಲಾಗಿದೆ.

ಪೋಸ್ಟರ್ ಬಿಡುಗಡೆ ಮಾಡಿ‌ ಶುಭ ಹಾರೈಸಿ ಮಾತನಾಡಿದ ಪ್ರತಾಪ್ ಸಿಂಹ, ಮಗುವಿಗೆ ಮಾತನಾಡುವ ಭಾಷೆ ಮತ್ತು ವಿದ್ಯೆ ಕಲಿಸುವ ಪ್ರಾರಂಭ ಹಂತ ಅಕ್ಷರಾಭ್ಯಾಸ. ಇದನ್ನು ಕೊಡುಸುವುದು ಪೋಷಕರ ಮೂಲ ಕರ್ತವ್ಯ ಎಂದು ಹೇಳಿದರು.

ಮಕ್ಕಳಿಗೆ ಮನೆಯೇ ಮೊದಲ ಪಾಠ ಶಾಲೆಯಾಗಿದ್ದು, ತಾಯಿಯೇ ಮೊದಲ ಗುರು, ಮಗುವಿಗೆ ಅಕ್ಷರಭ್ಯಾಸ ಎನ್ನುವುದು ಜ್ಞಾನ ದೇಗುಲದ ಪ್ರಮುಖ ಘಟ್ಟ. ಅಕ್ಷರಾಭ್ಯಾಸದಲ್ಲಿ ಹೆಚ್ಚು ಮಕ್ಕಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು

ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಮಾತನಾಡಿ,ಎಲ್ಲಾ ಜನಾಂಗದವರಿಗೂ ಉಚಿತ ಸಾಮೂಹಿಕ ಅಕ್ಷರಭ್ಯಾಸ ಹಾಗೂ ಸರಸ್ವತಿ ಪೂಜೆ ಫೆ.14.ರ ಬುಧವಾರ ಬೆಳಗ್ಗೆ 8 ರಿಂದ 10.30 ರವರಿಗೂ ಮಹರ್ಷಿ ಪಬ್ಲಿಕ್ ಶಾಲೆಯಲ್ಲಿ ನಡೆಯಲಿದೆ.ಅಕ್ಷರಭ್ಯಾಸನವನ್ನು ಮಾಡಲಿಚ್ಚಿಸುವ ಮಕ್ಕಳ ಪೋಷಕರು ದೂರವಾಣಿ 9880752727/7829067769 ನೋಂದಾಯಿಸಿಕೊಳ್ಳಬೇಕೆಂದು ಮನವಿ ಮಾಡಿದರು.

ಅಕ್ಷರಭ್ಯಾಸ ಮಾಡಿಸುವವರಿಗೆ ಸ್ಲೇಟ್ (ಪ್ಲೇಟ್)-ಬಳಪ ನಮ್ಮ ಟ್ರಸ್ಟ್ ವತಿಯಿಂದ ಉಚಿತವಾಗಿ ಪ್ರಸಾದ ರೂಪದಲ್ಲಿ ನೀಡಲಾಗುವುದು, ಪ್ರತ್ಯೇಕವಾಗಿ ತರುವ ಅಗತ್ಯವಿರುವುದಿಲ್ಲ. 13ರಂದು ನೋಂದಣಿಗೆ ಕಡೆಯ ದಿನವಾಗಿದೆ ಎಂದು ತಿಳಿಸಿದರು

ಈ ಸಂದರ್ಭದಲ್ಲಿ
ಮಹರ್ಷಿ ಪಬ್ಲಿಕ್ ಶಾಲೆಯ ಸಿಇಒ ತೇಜಸ್ ಶಂಕರ್, ಬಿಜೆಪಿ ಮುಖಂಡರಾದ ಆರ್ ಪರಮೇಶ್ ಗೌಡ ಮತ್ತಿತರರು ಹಾಜರಿದ್ದರು.

ಫೆ.14 ರಂದು ಉಚಿತ ಸಾಮೂಹಿಕ ಅಕ್ಷರಭ್ಯಾಸ:ಪೋಸ್ಟರ್ ಬಿಡುಗಡೆ ಮಾಡಿದ ಸಿಂಹ Read More

ಜ 23 ರಂದು ನೇತಾಜಿ ಜಯಂತಿ ಪ್ರಯುಕ್ತ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಮೈಸೂರು: ಜೀವದಾರ ರಕ್ತ ನಿಧಿ ಕೇಂದ್ರ ಹಾಗೂ ಕೆಎಂಪಿ ಕೆ ಟ್ರಸ್ಟ್ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರರಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜಯಂತಿ ಪ್ರಯುಕ್ತ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ.

ನಗರದ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಜೀವಧಾರ ರಕ್ತನಿಧಿ ಕೇಂದ್ರ ಆವರಣದಲ್ಲಿ ಜ 23 ರಂದು ಬೆಳಗ್ಗೆ 11 ಗಂಟೆಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಬಂದು ರಕ್ತದಾನ ಮಾಡಬೇಕೆಂದು ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ತಿಳಿಸಿದ್ದಾರೆ

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ಟಿ ಎಸ್ ಶ್ರೀವತ್ಸ,
ಬಿಜೆಪಿ ನಗರಾಧ್ಯಕ್ಷ ಎಲ್ ನಾಗೇಂದ್ರ, ಜಿಲ್ಲಾಧ್ಯಕ್ಷ ಎಲ್ ಆರ್ ಮಾದೇಸ್ವಾಮಿ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರ ನಾರಾಯಣಗೌಡ, ಮಂಡಿ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಾದ ನಾಗೇಶ್, ಹಿರಿಯ ಸಮಾಜ ಸೇವಕರಾದ ಕೆ ರಘುರಾಮ್ ವಾಜಪೇಯಿ ,ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಮತ್ತಿತರರು ಭಾಗವಹಿಸಲಿದ್ದಾರೆ.

ಜ 23 ರಂದು ನೇತಾಜಿ ಜಯಂತಿ ಪ್ರಯುಕ್ತ ಸ್ವಯಂ ಪ್ರೇರಿತ ರಕ್ತದಾನ ಶಿಬಿರ Read More

ಸೈಬರ್‌ವಂಚನೆ ಬಗ್ಗೆ ಜಾಗೃತರಾಗಿರಿ:ಎ ಎನ್ ಪ್ರಕಾಶ್ ಗೌಡ ಸಲಹೆ

ಮೈಸೂರು:ಸಾರ್ವಜನಿಕರು, ಅದರಲ್ಲೂ ಯುವ ಸಮುದಾಯ ಸೈಬರ್ ವಂಚನೆ ಬಗ್ಗೆ ಜಾಗೃತವಾಗಿರಬೇಕು ಎಂದು ಕರ್ನಾಟಕ ಆಂತರಿಕ ಭದ್ರತಾ ವಿಭಾಗ, ಪೊಲೀಸ್ ಅಧೀಕ್ಷಕರಾದ ಡಾಕ್ಟರ್ ಎ ಎನ್ ಪ್ರಕಾಶ್ ಗೌಡ ಸಲಹೆ ನೀಡಿದರು.

ಸೈಬರ್ ಅಪರಾಧ, ಅದರಿಂದ ಪಾರಾಗುವ ಬಗೆಯ ಕುರಿತು ಜನರಿಗೆ ಉಪಯುಕ್ತ ಮಾಹಿತಿ ಒಳಗೊಂಡ ಕೆ ಎಂ ಪಿ ಕೆ ಟ್ರಸ್ಟ್ ಹೊರತಂದ 2025ರ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ದೇಶದಲ್ಲಿ ಸೈಬರ್ ಅಪರಾಧಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಅದರಲ್ಲೂ ವಿದ್ಯಾವಂತ ಜನರೇ ಇದರಲ್ಲಿ ಹೆಚ್ಚಾಗಿ ಮೋಸ ಹೋಗುತ್ತಿದ್ದು, ಹೆಚ್ಚಿನ ಪ್ರಮಾಣದಲ್ಲಿ ಹಣ ಕಳೆದುಕೊಂಡು ತೊಂದರೆ ಪಡುತ್ತಿದ್ದಾರೆ,ಇದನ್ನು ನಿಯಂತ್ರಿಸಲು ಪ್ರತಿಯೊಬ್ಬರಲ್ಲೂ ಡಿಜಿಟಲ್ ಕ್ರೈಂಗಳ ಜಾಗೃತಿ ಅಗತ್ಯವಾಗಿದೆ ಎಂದು ತಿಳಿಸಿದರು.

ದುಡಿಯದೆ ಅತಿ ಹೆಚ್ಚು ಹಣ ಗಳಿಸುವ, ಆಫರ್‌ನಲ್ಲಿ ಅತಿ ಹೆಚ್ಚಿನ ಲಾಭ ಪಡೆಯುವ ದುರಾಸೆಗೆ ಸಿಲುಕಿರುವ ಜನರೇ ಹೆಚ್ಚಿನ ಪ್ರಮಾಣದಲ್ಲಿ ಸೈಬ‌ರ್ ವಂಚನೆ ಜಾಲದಲ್ಲಿ ಸಿಲುಕುತ್ತಿದ್ದಾರೆ ಎಂದು ವಿಷಾದಿಸಿದರು.

ಪದವಿ ಹಂತದ ವಿದ್ಯಾರ್ಥಿಗಳು ವಾಟ್ಸಾಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತ ವ್ಯಕ್ತಿಗಳ ಜೊತೆಯಲ್ಲಿ ಗೆಳೆತನ ಮಾಡಿ ವೈಯಕ್ತಿಕ ಹಾಗೂ ಆರ್ಥಿಕ ಮಾಹಿತಿಗಳನ್ನು ಹಂಚಿಕೊಳ್ಳುವ ಮೂಲಕ ತೊಂದರೆಗೆ ಸಿಲುಕುತ್ತಿದ್ದಾರೆ ಎಂದು ಪ್ರಕಾಶ್ ಗೌಡ ಹೇಳಿದರು.

ಶಾಪಿಂಗ್ ಮಾಲ್ ಹಾಗೂ ಎಲ್ಲೆಂದರಲ್ಲಿ ಅಪರಿಚತರಿಗೆ ಫೋನ್ ನಂಬ‌ರ್, ಇಮೇಲ್ ಐಡಿ, ಆಧಾ‌ರ್ ಸಂಖ್ಯೆ, ಬ್ಯಾಂಕ್‌ ಖಾತೆ ವಿವರ, ಎಟಿಎಂ ಪಿನ್, ಇಂಟರ್‌ನೆಟ್‌ ಬ್ಯಾಂಕಿಂಗ್‌ ಪಾಸ್‌ ವರ್ಡ್ಸ್ ಬಗ್ಗೆ ಮಾಹಿತಿ ನೀಡಬಾರದು ಎಂದು ಅವರು ಸಲಹೆ ನೀಡಿದರು.

ಸಾಮಾಜಿಕ ಜಾಲತಾಣದಲ್ಲಿ ಹಾಗೂ ಫೋನ್ ಮಾಡುವ ವ್ಯಕ್ತಿಗಳ ಜೊತೆಗೆ ಯಾವತ್ತೂ ವಯಕ್ತಿಕ ವಿವರ ಹಂಚಿಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.

ಈ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಕೆ ಎಂ ಪಿ ಕೆ ಟ್ರಸ್ಟ್ ಕೆಲಸ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು ಪ್ರಕಾಶವ ಗೌಡ ಅವರು.

ಈ ಸಂದರ್ಭದಲ್ಲಿ ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಜಿ ರಾಘವೇಂದ್ರ, ದುರ್ಗಾ ಪ್ರಸಾದ್, ಬಾಲಾಜಿ, ಸಚಿನ್ ನಾಯಕ್ ಮತ್ತಿತರರು ಹಾಜರಿದ್ದರು.

ಸೈಬರ್‌ವಂಚನೆ ಬಗ್ಗೆ ಜಾಗೃತರಾಗಿರಿ:ಎ ಎನ್ ಪ್ರಕಾಶ್ ಗೌಡ ಸಲಹೆ Read More

ಹಿರಿಯ ನಾಗರಿಕರಿಗೆ ಹೊದಿಕೆ ವಿತರಿಸಿ ಹೊಸ ವರ್ಷ ಸ್ವಾಗತಿಸಿದ ಕೆ ಎಂ ಪಿ ಕೆ ಟ್ರಸ್ಟ್

ಮೈಸೂರು: ಹಿರಿಯ ನಾಗರಿಕರಿಗೆ ಹೊದಿಕೆ ವಿತರಿಸುವ ಮೂಲಕ ಹೊಸ ವರ್ಷವನ್ನು ಮೈಸೂರಿನ ಕೆ ಎಂ ಪಿ ಕೆ ಚಾರಿಟೆಬಲ್ ಟ್ರಸ್ಟ್ ವಿಶೇಷವಾಗಿ ಸ್ವಾಗತಿಸಿತು.

ಕೆ ಎಂ ಪಿ ಕೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ 2025 ಹೊಸ ವರ್ಷ ಆಚರಣೆ ಹಿನ್ನೆಲೆಯಲ್ಲಿ
ಅರವಿಂದ ನಗರದಲ್ಲಿರುವ ಜೆಎಸ್ಎಸ್ ವೃದ್ಧಾಶ್ರಮದಲ್ಲಿ ಹಿರಿಯ ನಾಗರಿಕರಿಗೆ ಹೊದಿಕೆ ವಿತರಿಸಿ ಮಾದರಿಯಾಯಿತು.

ಈ ವೇಳೆ ಮಾತನಾಡಿದ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ ಟಿ ಪ್ರಕಾಶ್ ಅವರು,ಕೆ ಎಂ ಪಿ ಕೆ ಟ್ರಸ್ಟ್ ಸದಸ್ಯರು ಈಗಾಗಲೇ ಒಂದು ತಿಂಗಳ ಕಾಲ ಪ್ರತಿದಿನ ರಾತ್ರಿ ಮೈಸೂರು ನಗರದ ಕೆಲವು ಪ್ರದೇಶಗಳಿಗೆ ಭೇಟಿ ನೀಡಿ ರಸ್ತೆಬದಿ ಹಾಗೂ ಲಾರಿ ಕೆಳಗೆ ಜೀವನ ಸಾಗಿಸುತ್ತಿರುವ ನಿರಾಶ್ರಿತರಿಗೆ ಹೊದಿಕೆ ವಿತರಿಸಿ ಮಾನವೀಯತೆ ಮೆರೆದಿದ್ದು ಟ್ರಸ್ಟ್ ಸದಸ್ಯರ ಕಾರ್ಯ ನಿಜಕ್ಕೂ ಸಂತೋಷವಾಗುತ್ತದೆ ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಯುವಕರು ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗಿ ಮೋಜು ಮಸ್ತಿ ಮಾಡಲು ಸ್ನೇಹಿತರೊಡನೆ ಮೈಮರೆತು ಮದ್ಯಪಾನ ಮಾಡಿ ಕುಣಿದು ಕುಪ್ಪಳಿಸುವ ಇಂತಹ ಸಂದರ್ಭದಲ್ಲೂ ಹಿರಿಯ ನಾಗರಿಕರಿಗೆ ಹೊದಿಕೆ ವಿತರಿಸುವ ಮೂಲಕ ಕ್ಯಾಲೆಂಡರ್ ಹೊಸ ವರ್ಷವನ್ನು ಅರ್ಥಪೂರ್ಣವಾಗಿ ಆಚರಿಸಿ ಸಮಾಜಕ್ಕೆ ಸಂದೇಶ ನೀಡಿರುವ ಕೆಎಂಪಿಕೆ ಟ್ರಸ್ಟ್ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಬಿಜೆಪಿ ನಗರ ಉಪಾಧ್ಯಕ್ಷರಾದ ಹೇಮಾನಂದೀಶ್ ಮಾತನಾಡಿ ಹವಮಾನ ಏರುಪೇರು, ತಂಡಿ ಶೀತಗಾಳಿ ಹೆಚ್ಚಿರುವ ಹಿನ್ನಲೆಯಲ್ಲಿ ಅಶಕ್ತರು, ನಿರಾಶ್ರಿತರಿಗೆ ಹಾಗೂ ಹಿರಿಯ ನಾಗರಿಕರಿಗೆ ನೆರವಾಗಲು ಹೊದಿಕೆ ನೀಡುತ್ತಿರುವುದು ಅರ್ಥಪೂರ್ಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಗರ ಮಟ್ಟದಲ್ಲಿ ವೃದ್ದಾಶ್ರಮಗಳಿಗೆ ಸರ್ಕಾರಗಳು ತೆರಿಗೆ ವಿನಾಯಿತಿ, ಉಚಿತ ವಿದ್ಯುತ್, ನೀರು ಪೊರೈಕೆ ಸಹಾಯಧನ ಸೌಲಭ್ಯ ನೀಡಲು ಮುಂದಾಗಬೇಕು‌ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಧ್ಯಕ್ಷ ಎಸ್ ಪ್ರಕಾಶ್ ಪ್ರಿಯದರ್ಶನ್, ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್,
ಆಲನಹಳ್ಳಿ ಎಂ ಎನ್ ಚೇತನ್ ಗೌಡ, ನಂದೀಶ್, ಅರಸು, ನಿಲಯ ಪಾಲಕ ಬಸವಣ್ಣ ಮತ್ತಿತರರು ಹಾಜರಿದ್ದರು.

ಹಿರಿಯ ನಾಗರಿಕರಿಗೆ ಹೊದಿಕೆ ವಿತರಿಸಿ ಹೊಸ ವರ್ಷ ಸ್ವಾಗತಿಸಿದ ಕೆ ಎಂ ಪಿ ಕೆ ಟ್ರಸ್ಟ್ Read More

ಕೆ ಆರ್ ಆಸ್ಪತ್ರೆಯಲ್ಲಿ ಹೊದಿಕೆ ವಿತರಿಸಿ‌ ಸಾಮಾಜಿಕ ಕಳಕಳಿ ಮೆರೆದ ಕೆಎಂಪಿಕೆ,ಯೂತ್ ಫೌಂಡೇಶನ್

ಮೈಸೂರು: ಚಳಿ ಹಾಗೂ ಮಂಜು ಹಾಗೂ ತಣ್ಣನೆ ವಾತಾವರಣದಲ್ಲಿ ತೊಂದರೆ ಅನುಭವಿಸುತ್ತಿದ್ದ ಭಿಕ್ಷುಕರಿಗೆ,ನಿರ್ಗತಿಕರಿಗೆ, ಮತ್ತು ಕೆ ಆರ್ ಆಸ್ಪತ್ರೆ ರೋಗಿಗಳ ಆರೈಕೆಗೆ ಬಂದಿರುವವರಿಗೆ ಹೊದಿಕೆ ವಿತರಣೆ ಮಾಡಿ ಮಾನವೀಯತೆ ತೋರಲಾಗಿದೆ.

ಯೂನಿಕ್ ಯೂತ್ ಫೌಂಡೇಶನ್ ಹಾಗೂ ಕೆ ಎಂ ಪಿ ಕೆ ಟ್ರಸ್ಟ್ ವತಿಯಿಂದ ಮಂಗಳವಾರ ರಾತ್ರಿ ಹೊದಿಕೆ ಹಂಚುವ ಮೂಲಕ ಮಾನವೀಯತೆ ಮೆರೆದರು.

ಈಗಾಗಲೇ ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಅವರ ನೇತೃತ್ವದಲ್ಲಿ 15 ದಿನಗಳ ಕಾಲ ನಿರಂತರವಾಗಿ ರಾತ್ರಿ 12 ರಿಂದ 1ಗಂಟೆವರೆಗೂ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಮಾರ್ಕೆಟ್, ಹಾಡಿ ಜನಾಂಗದವರಿಗೆ, ಗುಡಿಸಲು ವಾಸಿಗಳಿಗೆ ಹೊದಿಕೆ ವಿತರಣೆ ಮಾಡುತ್ತಾ ಬರಲಾಗಿದೆ.

ಕೆಎಂಪಿಕೆ ಟ್ರಸ್ಟ್ ನವರ ಈ ಸಾಮಾಜಿಕ ಕಳಕಳಿಗೆ ಹಲವು ಸಂಘ ಸಂಸ್ಥೆಗಳು ಕೈಜೋಡಿಸುತ್ತಿವೆ.

ಈಗಾಗಲೇ 300ಕ್ಕೂ ಹೆಚ್ಚು ಹೊದಿಕೆಯನ್ನು ವಿತರಿಸಲಾಗಿದೆ.

ಈ ಕುರಿತು‌ ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಮಾತನಾಡಿ,
ಸ್ನೇಹಿತರ ಸಹಕಾರದೊಂದಿಗೆ ಕಳೆದ ನಾಲ್ಕು ವರ್ಷದಿಂದ ನಿರಂತರವಾಗಿ ಡಿಸೆಂಬರ್ ಹಾಗೂ ಜನವರಿ ತಿಂಗಳ ಚಳಿಗಾಲ ಸಂದರ್ಭದಲ್ಲಿ ಅಸಹಾಯಕರು ಇರುವ ಸ್ಥಳಕ್ಕೆ ತೆರಳಿ ಅವರ ಸ್ಥಿತಿಗಳನ್ನು ಅರಿತು ಹೊದಿಕೆ ವಿತರಿಸುತ್ತಾ ಬಂದಿದ್ದೇವೆ, ಜೊತೆಗೆ ಕೆಲವೊಂದು ಹಾಡಿಗಳಿಗೆ ಭೇಟಿ ನೀಡಿ ಅಲ್ಲಿನ ಜನರಿಗೂ ಹೂದಿಕೆ ವಿತರಿಸುತ್ತೇವೆ ಎಂದು ತಿಳಿಸಿದರು.

ಈ ಸಾಮಾಜಿಕ ಕಾರ್ಯದ ವೇಳೆ ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್, ಮಲೆ ಮಾದೇಶ್ವರ ಸೇವಾ ಸಂಸ್ಥೆಯ ಅಧ್ಯಕ್ಷ ಮಹಾನ್ ಶ್ರೇಯಸ್, ಶಿವು, ಯೂನಿಕ್ ಯೂತ್ ಫೌಂಡೇಶನ್ ಸಂಘಟನೆಯ ಸಂಚಾಲಕರಾದ ಮುದ್ದಸಿರ್ ಅಲಿ ಖಾನ್,ಡಾ. ಜೀಶನ್. ಧರ್ಮಶ್ರೀ,ಮುಜಕ್ಕಿರ್ ಅಲಿ ಖಾನ್,ನರ್ಗೀಸ್ ಪಠಾಣ್,ಶಹಾಬ್ ಉರ್ ರೆಹಮಾನ್,ಫೈಜಾನ್ ಅಹ್ಮದ್ ಖಾನ್,ಅಖಿಫ್,ಶಾರುಖ್,ಘೌಸ್,ಹೈದರ್ ಪಠಾಣ್ ಮತ್ತಿತರರು ಹಾಜರಿದ್ದರು.

ಕೆ ಆರ್ ಆಸ್ಪತ್ರೆಯಲ್ಲಿ ಹೊದಿಕೆ ವಿತರಿಸಿ‌ ಸಾಮಾಜಿಕ ಕಳಕಳಿ ಮೆರೆದ ಕೆಎಂಪಿಕೆ,ಯೂತ್ ಫೌಂಡೇಶನ್ Read More

ಜಗತ್ತಿಗೆ ಯೋಗದ ಪರಂಪರೆ ಬೆಸೆದ ಬಿ ಕೆ ಎಸ್ ಅಯ್ಯಂಗಾರ್-ರಘುರಾಮ್ ವಾಜಪೇಯಿ

ಮೈಸೂರು: ಇಡೀ ಜಗತ್ತಿಗೆ ತನ್ನದೇ ಆದ ಯೋಗದ ಪರಂಪರೆಯನ್ನು ತೋರಿಸಿಕೊಟ್ಟವರು ಬಿಕೆಎಸ್ ಅಯ್ಯಂಗಾರ್ ಎಂದು ಹಿರಿಯ ಸಮಾಜ ಸೇವಕರಾದ ಕೆ ರಘುರಾಮ್ ವಾಜಪೇಯಿ ಬಣ್ಣಿಸಿದರು.

ಮೈಸೂರಿನ ಕೆ ಎಂ ಪಿ ಕೆ ಟ್ರಸ್ಟ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಬಿಕೆಎಸ್ ಅಯ್ಯಂಗಾರ್ 106ನೇ ಜಯಂತೋತ್ಸವದಲ್ಲಿ
ಬಿಕೆಎಸ್ ಅಯ್ಯಂಗಾರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಗುರು ಕೃಷ್ಣಮಾಚಾರ್ಯರ ಗರಡಿಯಲ್ಲಿ ಬೆಳೆದ ಶಿಷ್ಯೋತ್ತಮ ಕಮ್ಯೂನಿಷ್ಟ್ ರಾಷ್ಟ್ರಗಳಲ್ಲೂ ಯೋಗದ ಕಂಪು ಪಸರಿಸಿದವರು ಜಗ ಮಾನ್ಯರು ಅಯ್ಯಂಗಾರ್‌ ಅವರು ಎಂದು ಹೇಳಿದರು.

ಭಾರತೀಯ ಯೋಗಕ್ಕೆ ತನ್ನದೇ ಆದ ನೆಲೆಯನ್ನು ತಂದುಕೊಟ್ಟವರು ಬಿಕೆಎಸ್. ಹೊಸ ಹೊಸ ಪರಿಕರಗಳನ್ನು ಹಾಗೂ ಉಪಕರಣಗಳನ್ನು ಬಳಸಿ ಯೋಗಾಸನ ಗಳನ್ನು ಲೀಲಾ ಜಾಲವಾಗಿ ಮಾಡುವ ನವ ಆವಿಷ್ಕಾರವನ್ನು ಕಂಡುಕೊಂಡು ಅದನ್ನು ಶಿಷ್ಯಕೋಟಿಗೆ ಬೋಧಿಸಿ ಯೋಗದಲ್ಲಿ ನಾವಿನ್ಯತೆಯನ್ನು ಪ್ರಚುರ ಪಡಿಸಿದವರು ಬಿಕೆಎಸ್.

ಅವರ ಅಪ್ರತಿಮ ಸಾಧನೆಗೆ ಇಡೀ ಜಗತ್ತೇ ಬೆರಗಾಯಿತು ಅಲ್ಲದೆ ಅವರನ್ನು ತಮ್ಮ ತಮ್ಮ ದೇಶಗಳಿಗೆ ಆಹ್ವಾನಿಸಲು ತುದಿಗಾಲಿನಲ್ಲಿ ನಿಂತವು ಜಗತ್ತಿನ ಅನೇಕಾನೇಕ ಪ್ರಶಸ್ತಿಗಳಿಗೆ ಭಾಜನರಾದರೂ ಅಹಮಿಕೆ ಇಲ್ಲದೆ ತಮ್ಮ ಸರಳ ಸಜ್ಜನಿಕೆ ಗಳನ್ನು ಜೀವನದುದ್ದಕ್ಕೂ ಬೆಳೆಸಿಕೊಂಡು ಉಳಿಸಿಕೊಂಡು ಬಂದವರು ಎಂದು ಬಿಕೆಎಸ್‌ ಅಯ್ಯಂಗಾರ್ ಅವರ ನಡೆಯನ್ನು ರಘುರಾಮ್‌‌ ವಾಜಪೇಯಿ ವಿವರಿಸಿದರು.

ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಮಾತನಾಡಿ
ಭಾರತೀಯ ಪರಂಪರೆ ಸಾಂಸ್ಕೃತಿಕೆಯನ್ನು ವಿದೇಶಿಗರು ಅವರ ಜೀವನ ಶೈಲಿಯಲ್ಲಿ ಪಾಲಿಸುತ್ತಿದ್ದಾರೆ ಎಂದರೆ ಯೋಗ ಪ್ರಮುಖ ಪಾತ್ರವಹಿಸುತ್ತದೆ, ತಾಂತ್ರಿಕ ಮತ್ತು ಜಾಗತೀಕರಣದಲ್ಲಿ ಮನಃಶಾಂತಿ ಮತ್ತು ಆರೋಗ್ಯ ರಕ್ಷಣೆಗೆ ಒತ್ತು ನೀಡಬೇಕೆಂದರೆ ಯೋಗಾಭ್ಯಾಸ ಮಾಡಬೇಕು ಎಂದು ಸಲಹೆ ನೀಡಿದರು.

ಜಿ ರಾಘವೇಂದ್ರ ಆಲನಹಳ್ಳಿ, ಎಂ, ಎನ್ ಚೇತನ್ ಗೌಡ, ನಿರೂಪಕ ಅಜಯ್ ಶಾಸ್ತ್ರಿ, ಎಸ್ ಎನ್ ರಾಜೇಶ್, ಚಕ್ರಪಾಣಿ, ಸುಚಿಂದ್ರ, ಯುವ ಮುಖಂಡ ಸಚಿನ್ ನಾಯಕ್, ಮಂಜುನಾಥ್ ಮತ್ತಿತರರು ಭಾಗವಹಿಸಿದ್ದರು.

ಜಗತ್ತಿಗೆ ಯೋಗದ ಪರಂಪರೆ ಬೆಸೆದ ಬಿ ಕೆ ಎಸ್ ಅಯ್ಯಂಗಾರ್-ರಘುರಾಮ್ ವಾಜಪೇಯಿ Read More

ನಿರಾಶ್ರಿತರಿಗೆ ಹೋದಿಕೆ ವಿತರಿಸಿ ಮಾದರಿಯಾದ ಕೆ ಎಂ ಪಿ ಕೆ ಟ್ರಸ್ಟ್

ಮೈಸೂರು: ನಮ್ಮಲ್ಲಿ ಬಹಳಷ್ಟು ಮಂದಿ ಕಾರಣಾಂತರಗಳಿಂದ ರೈಲು,ಬಸ್ ನಿಲ್ದಾಣವನ್ನೇ ಆಶ್ರಯತಾಣ ಮಾಡಿಕೊಂಡು‌‌ ಚಳಿ,ಗಾಳಿಯಲ್ಲಿ ನಡುಗುತ್ತಾ ಮಲಗುವುದನ್ನು ಕಾಣುತ್ತೇವೆ.

ಹಾಗೆ ಕಂಡರೂ ಯಾರೂ ಅವರ ನೆರವಿಗೆ ಬರುವುದಿಲ್ಲ.ಆದರೆ ಮೈಸೂರಿನ ಕೆ ಎಂ ಪಿ ಕೆ
ಚಾರಿಟಬಲ್ ಟ್ರಸ್ಟ್ ಚಳಿಗಾಲದಲ್ಲಿ ಇಂತವರಿಗೆ ನೆರವಾಗುತ್ತಾ ಇತರರಿಗೆ ಮಾದರಿಯಾಗಿದ್ದಾರೆ.

ಪ್ರತಿ‌ ವರ್ಷ ಕೆಎಂಪಿಕೆ ಟ್ರಸ್ಟ್ ನವರು ರಸ್ತೆ ಬದಿ ಮಲಗುವ ನಿರಾಶ್ರಿತರಿಗೆ ಹೊದಿಕೆ ವಿತರಿಸುವ ಸೇವೆ
ಮಾಡುತ್ತಿದ್ದು ಈ ಬಾರಿ ಕೂಡಾ ಈ ಕಾರ್ಯವನ್ನು ಮುಂದುವರೆಸಿದ್ದಾರೆ.

ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಪದಾಧಿಕಾರಿಗಳು ಭಾನುವಾರ ರಾತ್ರಿ ರೈಲ್ವೆ ನಿಲ್ದಾಣ ಹಾಗೂ ಬಸ್ ನಿಲ್ದಾಣ ಹಾಗೂ ಸುತ್ತ ಮತ್ತಲಿನಲ್ಲಿ ಮಲಗಿರುವ ನಿರಾಶಿತರಿಗೆ ಹೊದಿಕೆ ವಿತರಿಸಿ ಅವರ ಆರೋಗ್ಯ ವಿಚಾರಿಸಿದರು.

ಟ್ರಸ್ಟ್ ನ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಅವರ ನೇತೃತ್ವದಲ್ಲಿ ಹೊದಿಕೆ ವಿತರಣೆ ಮಾಡಿ,ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿದರು.

ಈಗಾಗಲೇ ಚಳಿ ಪ್ರಾರಂಭವಾಗಿದ್ದು, ವಾತಾವರಣದಲ್ಲಿನ ಉಷ್ಣಾಂಶ ಕಡಿಮೆಯಾಗಿ, ತಂಡಿ ವಾತಾವರಣ ಕಂಡುಬರುತ್ತಿದೆ,ರಾತ್ರಿಯಾದರೆ ಬಹಳ ಚಳಿ ಇರುತ್ತದೆ.

ಈ ಸಂದರ್ಭದಲ್ಲಿ ದೇಹಕ್ಕೆ ವಿವಿಧ ರೀತಿಯ ತೊಂದರೆಗಳಾಗುತ್ತವೆ,ಅನಾರೋಗ್ಯ ಪೀಡಿತರಾಗಬೇಕಾಗುತಗತದೆ, ಆದ್ದರಿಂದ ಮುಂಜಾಗ್ರತೆ ತೆಗೆದುಕೊಳ್ಳುವುದು ಅಗತ್ಯವಾಗಿದೆ ಎಂಬುದನ್ನು ನಿರಾಶ್ರಿತರಿಗೆ ಮನದಟ್ಟು ಮಾಡಿಕೊಡಲಾಯಿತು.

ಕೆಎಂಪಿಕೆ ಟ್ರಸ್ಟ್ ಸೇವಾ ಕಾರ್ಯಕ್ಕೆ ರಾಷ್ಟ್ರೀಯ ವಿಶೇಷ ಚೇತನ ಕ್ರೀಡಾಪಟು ಅಲೋಕ್ ಆರ್.ಜೈನ್ ಮಹಾನ್ ಶ್ರೆಯಸ್ , ಬೈರತಿ ಲಿಂಗರಾಜು, ಮಂಜುನಾಥ್, ಸಚಿನ್ ನಾಯಕ್, ಸೇರಿದಂತೆ ಅನೇಕರು ಕೈ ಜೋಡಿಸಿದರು.

ನಿರಾಶ್ರಿತರಿಗೆ ಹೋದಿಕೆ ವಿತರಿಸಿ ಮಾದರಿಯಾದ ಕೆ ಎಂ ಪಿ ಕೆ ಟ್ರಸ್ಟ್ Read More