ಮೈಸೂರು: ಮೈಸೂರಿನ ಸರಸ್ವತಿಪುರಂ ನಲ್ಲಿರುವ ಸಾನಿಧ್ಯ ವೃದ್ಧಾಶ್ರಮದಲ್ಲಿ ಕೆ ಎಂ ಪಿ ಕೆ ಟ್ರಸ್ಟ್ ವತಿಯಿಂದ ವೃದ್ಧರಿಗೆ ಹೊದಿಕೆ ವಿತರಿಸುವ ಮೂಲಕ ಮಾತಾ ಶ್ರೀ ಶಾರದಾದೇವಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ವೇಳೆ ಕಲ್ಪವೃಕ್ಷ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಬಸವರಾಜ್ ಪೂಜಾರಿ ಮಾತನಾಡಿ,ತಮ್ಮ ಸಾಧನೆ, ತ್ಯಾಗ ಮತ್ತು ಪರಿಶ್ರಮದಿಂದ ಶ್ರೀ ರಾಮಕೃಷ್ಣ ಪರಮಹಂಸರು ಹಾಗೂ ವೀರಸನ್ಯಾಸಿ ಸ್ವಾಮಿ ವಿವೇಕಾನಂದರನ್ನು ಆಧ್ಯಾತ್ಮಿಕವಾಗಿ ಬೆಳೆಸಿದ ಮಹಾನ್ ಶಕ್ತಿ ಶ್ರೀ ಶಾರದಾದೇವಿಯವರು ಎಂದು ಬಣ್ಣಿಸಿದರು.
ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಪರಿಷತ್ ಅಧ್ಯಕ್ಷರಾದ ಕಡಕೋಳ ಜಗದೀಶ್ ಮಾತನಾಡಿ,ವಿವೇಕಾನಂದನಗರ, ರಾಮಕೃಷ್ಣನಗರದ ವೃತ್ತಗಳಲ್ಲಿರುವಂತೆ ಶಾರದಾದೇವಿನಗರದಲ್ಲಿಯೂ ಶಾರದಾಮಾತೆಯ ಪ್ರತಿಮೆ ನಿರ್ಮಾಣವಾಗಬೇಕು ಈ ಮೂಲಕ ಮೂವರು ಮಹನೀಯರ ಕೊಡುಗೆಯನ್ನು ಶಾಶ್ವತವಾಗಿ ನೆನೆಯುವ ಕೆಲಸವಾಗುತ್ತದೆ ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ನಿರೂಪಕ ಅಜಯ್ ಶಾಸ್ತ್ರಿ,ಸುಚೇಂದ್ರ,ಶಂಕ್ರಪ್ಪ ಪವಾರ್, ರಂಗಪ್ಪ ತಮ್ಮನ ಮರಡಿ, ರಾಜು ನಾಯಕ್ ಅರಿಕೇರಿ,ಸಾನಿಧ್ಯ ವೃದ್ಧಾಶ್ರಮದ ಚಂದ್ರಶೇಖರ್ ಮತ್ತಿತರರು ಹಾಜರಿದ್ದರು.
ಮೈಸೂರು: ಬೀದಿಬದಿ ಜೀವನ ಸಾಗಿಸುವ ನಿರ್ಗತಿಕರು ಹಾಗೂ ಬಡಜನರಿಗೆ ಚಳಿ ಹಾಗೂ ತಂಡಿಗಾಳಿಯಿಂದಾಗಿ ಆರೋಗ್ಯ ಸಮಸ್ಯೆ ಬರದಂತೆ ಮೈಸೂರಿನ ಕೆ ಎಂ ಪಿ ಕೆ ಚಾರಿಟಬಲ್ ಟ್ರಸ್ಟ್ ನವರು ಕಂಬಳಿ ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಸೋಮವಾರ ರಾತ್ರಿ ರೈಲ್ವೆ ನಿಲ್ದಾಣದ ಮುಂಭಾಗ ರಸ್ತೆ ಬದಿ ಮಲಗಿರುವ ಬಡವರ್ಗದವರಿಗೆ ಹೊದಿಕೆ ನೀಡುವ ಮೂಲಕ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಕೆ.ಬಿ ಲಿಂಗರಾಜು ಅವರು ಹೊದಿಕೆ ವಿತರಣಾ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಬಡವರಿಗೆ ಸೇವೆ ಸಲ್ಲಿಸಿದರೆ ದೇವರಿಗೆ ಸಲ್ಲುತ್ತದೆ, ಇಂತಹ ಸೇವೆ ಮೂಲಕ ಮಾನವೀಯತೆ ಮೈಗೂಡಿಸಿಕೊಂಡು ಜೀವನ ಸಾಗಿಸಿ ಬದುಕನ್ನು ಹಸನಗೊಳಿಸಿಕೊಳ್ಳುವಂತೆ ಕರೆ ನೀಡಿದರು.
ಕೆ ಎಮ್ ಪಿ ಕೆ ಚಾರಿಟೆಬಲ್ ಟ್ರಸ್ಟ್ ನ ಸೇವಾ ಕಾರ್ಯವನ್ನು ಲಿಂಗರಾಜು ಶ್ಲಾಘಿಸಿದರು.
ಕೆ.ಎಂ.ಪಿ.ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಮಾತನಾಡಿ,ಸ್ನೇಹಿತರ ಸಹಕಾರದೊಂದಿಗೆ ಕಳೆದ 6 ವರ್ಷದಿಂದ ನಿರಂತರವಾಗಿ ಡಿಸೆಂಬರ್ ಹಾಗೂ ಜನವರಿ ತಿಂಗಳಿನಲ್ಲಿ ಚಳಿಗಾಲ ಸಂದರ್ಭದಲ್ಲಿ ನಗರದ ವಿವಿಧ ಸ್ಥಳಕ್ಕೆ ತೆರಳಿ ಅವರ ಸ್ಥಿತಿಗಳನ್ನು ನೋಡಿ ಹೊದಿಕೆ ಯನ್ನು ವಿತರಿಸುತ್ತಾ ಬಂದಿದ್ದೇವೆ ಎಂದು ತಿಳಿಸಿದರು.
ಜೊತೆಗೆ ಕೆಲವೊಂದು ಹಾಡಿಗಳಿಗೂ ಭೇಟಿ ಕೊಟ್ಟಿ ಹಾಡಿ ಜನಾಂಗದವರಿಗೂ ಹೂದಿಕೆ ಯನ್ನು ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.
ಅಭಿಯಾನದಲ್ಲಿ ಬಿಜೆಪಿ ಮುಖಂಡ ಜೋಗಿ ಮಂಜು, ನಿರೂಪಕ ಅಜಯ್ ಶಾಸ್ತ್ರಿ, ಎಸ್ ಬಿ ರಾಮು,ಎಸ್ ಎನ್ ರಾಜೇಶ್, ಕಡಕೋಳ ಆರೋಗ್ಯ ಅಧಿಕಾರಿ ಮಂಜುನಾಥ್, ಸಚಿನ್ ನಾಯಕ್, ಅಮಿತ್ ಮತ್ತಿತರರು ಪಾಲ್ಗೊಂಡಿದ್ದರು.
ಮೈಸೂರು: ನಮ್ಮಲ್ಲಿ ಬಹಳಷ್ಟು ಮಂದಿ ಕಾರಣಾಂತರಗಳಿಂದ ರೈಲು,ಬಸ್ ನಿಲ್ದಾಣವನ್ನೇ ಆಶ್ರಯತಾಣ ಮಾಡಿಕೊಂಡು ಚಳಿ,ಗಾಳಿಯಲ್ಲಿ ನಡುಗುತ್ತಾ ಮಲಗುವುದನ್ನು ಕಾಣುತ್ತೇವೆ.
ಹಾಗೆ ಕಂಡರೂ ಯಾರೂ ಅವರ ನೆರವಿಗೆ ಬರುವುದಿಲ್ಲ.ಆದರೆ ಮೈಸೂರಿನ ಕೆ ಎಂ ಪಿ ಕೆ ಚಾರಿಟಬಲ್ ಟ್ರಸ್ಟ್ ಚಳಿಗಾಲದಲ್ಲಿ ಇಂತವರಿಗೆ ನೆರವಾಗುತ್ತಾ ಇತರರಿಗೆ ಮಾದರಿಯಾಗಿದ್ದಾರೆ.
ಪ್ರತಿ ವರ್ಷ ಕೆಎಂಪಿಕೆ ಟ್ರಸ್ಟ್ ನವರು ರಸ್ತೆ ಬದಿ ಮಲಗುವ ನಿರಾಶ್ರಿತರಿಗೆ ಹೊದಿಕೆ ವಿತರಿಸುವ ಸೇವೆ ಮಾಡುತ್ತಿದ್ದು ಈ ಬಾರಿ ಕೂಡಾ ಈ ಕಾರ್ಯವನ್ನು ಮುಂದುವರೆಸಿದ್ದಾರೆ.
ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಪದಾಧಿಕಾರಿಗಳು ಭಾನುವಾರ ರಾತ್ರಿ ರೈಲ್ವೆ ನಿಲ್ದಾಣ ಹಾಗೂ ಬಸ್ ನಿಲ್ದಾಣ ಹಾಗೂ ಸುತ್ತ ಮತ್ತಲಿನಲ್ಲಿ ಮಲಗಿರುವ ನಿರಾಶಿತರಿಗೆ ಹೊದಿಕೆ ವಿತರಿಸಿ ಅವರ ಆರೋಗ್ಯ ವಿಚಾರಿಸಿದರು.
ಟ್ರಸ್ಟ್ ನ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಅವರ ನೇತೃತ್ವದಲ್ಲಿ ಹೊದಿಕೆ ವಿತರಣೆ ಮಾಡಿ,ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿದರು.
ಈಗಾಗಲೇ ಚಳಿ ಪ್ರಾರಂಭವಾಗಿದ್ದು, ವಾತಾವರಣದಲ್ಲಿನ ಉಷ್ಣಾಂಶ ಕಡಿಮೆಯಾಗಿ, ತಂಡಿ ವಾತಾವರಣ ಕಂಡುಬರುತ್ತಿದೆ,ರಾತ್ರಿಯಾದರೆ ಬಹಳ ಚಳಿ ಇರುತ್ತದೆ.
ಈ ಸಂದರ್ಭದಲ್ಲಿ ದೇಹಕ್ಕೆ ವಿವಿಧ ರೀತಿಯ ತೊಂದರೆಗಳಾಗುತ್ತವೆ,ಅನಾರೋಗ್ಯ ಪೀಡಿತರಾಗಬೇಕಾಗುತಗತದೆ, ಆದ್ದರಿಂದ ಮುಂಜಾಗ್ರತೆ ತೆಗೆದುಕೊಳ್ಳುವುದು ಅಗತ್ಯವಾಗಿದೆ ಎಂಬುದನ್ನು ನಿರಾಶ್ರಿತರಿಗೆ ಮನದಟ್ಟು ಮಾಡಿಕೊಡಲಾಯಿತು.
ಕೆಎಂಪಿಕೆ ಟ್ರಸ್ಟ್ ಸೇವಾ ಕಾರ್ಯಕ್ಕೆ ರಾಷ್ಟ್ರೀಯ ವಿಶೇಷ ಚೇತನ ಕ್ರೀಡಾಪಟು ಅಲೋಕ್ ಆರ್.ಜೈನ್ ಮಹಾನ್ ಶ್ರೆಯಸ್ , ಬೈರತಿ ಲಿಂಗರಾಜು, ಮಂಜುನಾಥ್, ಸಚಿನ್ ನಾಯಕ್, ಸೇರಿದಂತೆ ಅನೇಕರು ಕೈ ಜೋಡಿಸಿದರು.
ಸಮಾಜಸೇವೆಯಲ್ಲಿ ತೊಡಗಿರುವ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಇಂತಹ ಅಸಹಾಯಕರು,ನಿರ್ಗತಿಕರ ಬವಣೆಗೆ ಮರುಗಿ ಪ್ರತಿ ವರ್ಷ ನೆರವಾಗುತ್ತಿದೆ.
ಕೆಎಂಪಿಕೆ ಟ್ರಸ್ಟ್ ನವರ ಈ ಕಾರ್ಯ ನಿಜಕ್ಕೂ ಇತರರಿಗೆ ಮಾದರಿಯಾಗಿದೆ,ಜತೆಗೆ ಸ್ತುತ್ಯಾರ್ಹ ಕೂಡಾ ಹೌದು.
ನಿರಾಶ್ರಿತರಿಗೆ ಹಾಗೂ ಅಸಹಾಯಕರಿಗೆ ಗ್ರಾಮೀಣ ಪ್ರದೇಶದ ಹಾಡಿ ಜನಾಂಗಕ್ಕೆ ಹೊದಿಕೆ ವಿತರಣಾ ಅಭಿಯಾನವನ್ನು ಕೆಎಂಪಿಕೆ ಟ್ರಸ್ಟ್ ಹಮ್ಮಿಕೊಂಡಿದೆ.
ಈ ಅಭಿಯಾನದ ಪ್ರಚಾರ ಸಾಮಗ್ರಿಗಳನ್ನು ಚಾಮರಾಜ ಕ್ಷೇತ್ರದ ಶಾಸಕ ಹರೀಶ್ ಗೌಡ ಅವರು ಹುಣಸೂರು ರಸ್ತೆಯಲ್ಲಿರುವ ಶಾಸಕರ ಕಚೇರಿಯಲ್ಲಿ ಬಿಡುಗಡೆಗೊಳಿಸಿ ಟ್ರಸ್ಟ್ ಕಾರ್ಯಕ್ಕೆ ಶುಭ ಹಾರೈಸಿದರು.
ಈ ವೇಳೆ ಮಾತನಾಡಿದ ಶಾಸಕರು, ಸಾಂಸ್ಕೃತಿಕ ನಗರಿ ಎಲ್ಲರಿಗೂ ಆಶ್ರಯ ನೀಡಿದೆ, ಕೆಲವರ ಜೀವನದಲ್ಲಿ ವಿಧಿಯ ಆಟ ಅಥವಾ ಪರಿಸ್ಥಿತಿ ತೊಂದರೆಗೆ ಸಿಲುಕುವಂತೆ ಮಾಡಿಬಿಡುತ್ತದೆ ಎಂದು ವಿಷಾದಿಸಿದರು.
ಕೆಲವರು ಬಹಳ ತೊಂದೆರೆಯಲ್ಲಿರುತ್ತಾರೆ,ಅನಿವಾರ್ಯವಾಗಿ ಮಳೆ ಚಳಿ ಎನ್ನದೇ ಬಸ್ ನಿಲ್ದಾಣ, ರೈಲ್ವೇನಿಲ್ದಾಣ, ದೇವಸ್ಥಾನ,ಚಿತ್ರಮಂದಿರ, ಸರ್ಕಾರಿ ಕಟ್ಟಡಗಳೆ ಅವರಿಗೆ ಆಶ್ರಯತಾಣವಾಗಿರುತ್ತದೆ ಅಲ್ಲೆ ಮಲಗಿರುತ್ತಾರೆ.
ಹೀಗೆ ಮೈಸೂರಿನಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ನಿರಾಶ್ರಿತರಿದ್ದು, ಮಾನವೀಯತೆ ದೃಷ್ಟಿಯಿಂದ ಚಳಿ ಮಳೆಯಿಂದ ನಿರಾಶ್ರಿತರ ರಕ್ಷಣೆ ಸಾರ್ವಜನಿಕರ ಹೊಣೆ ಎನ್ನುವ ಸಂಕಲ್ಪದೊಂದಿಗೆ ಅವರಿರುವ ಜಾಗಕ್ಕೆ ಹೋಗಿ ಹೊದಿಕೆ ನೀಡುವ ಕೆ.ಎಂ.ಪಿ.ಕೆ ಟ್ರಸ್ಟ್ ಪ್ರಾರಂಭಿಸಿರುವ ಅಭಿಯಾನ ನಿಜಕ್ಕೂ ಶ್ಲಾಘನೀಯ ಎಂದು ಹರೀಶ್ ಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.
ಟ್ರಸ್ಟ್ ನ ಅಧ್ಯಕ್ಷ ವಿಕ್ರಮ ಅಯ್ಯಂಗಾರ್ ಮಾತನಾಡಿ,ಕಳೆದ ವರ್ಷ 1000 ಮಂದಿಗೆ ಕಂಬಳಿ ನೀಡಿದ್ದೆವು ಎಂದು ತಿಳಿಸಿದರು.
ರಸ್ತೆ ಬದಿ ಮಲಗುವ ನಿರಾಶ್ರಿತರು, ಅಸಹಾಯಕರು, ರಾತ್ರಿ ವೇಳೆ ರೈಲ್ವೆ ನಿಲ್ದಾಣ ,ಸಬ್ ಅರ್ಬನ್ ಬಸ್ ಸ್ಟ್ಯಾಂಡ್ ಸಿಟಿಬಸ್ ಸ್ಟ್ಯಾಂಡ್, ಮಾರುಕಟ್ಟೆ ಸೇರಿದಂತೆ ಸತತ 4 ವರ್ಷ ರಾತ್ರಿ ವೇಳೆ 1 ತಿಂಗಳು ನಿರಂತರವಾಗಿ ಅಭಿಯಾನವನ್ನು ಹಮ್ಮಿಕೊಂಡು ಯಶಸ್ವಿ ಗೊಳಿಸಿದ್ದೇವೆ ಎಂದು ಹೇಳಿದರು.
ಈ ವರ್ಷ ಕೂಡಾ ಇದೇ ಡಿಸೆಂಬರ್ 1ರಿಂದ ಜನವರಿ 15ರವರೆಗೂ ಪ್ರತಿದಿನ ರಾತ್ರಿ ವೇಳೆ ರಸ್ತೆ ಬದಿಯಲ್ಲಿ ಮಲಗಿರುವ ಅಸಹಾಯಕರು ಹಾಗೂ ನಿರಾಶ್ರಿತರಿಗೆ 1000 ಹೊದಿಕೆ ವಿತರಿಸಲು ನಿರ್ಧರಿಸಿದ್ದೇವೆ ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದರು.
ಸಾರ್ವಜನಿಕರು ಕೈಜೋಡಿಸಿ ನೆರವು ನೀಡಬಯಸಿದರೆ ಮೊಬೈಲ್ ನಂಬರ್ 9880752727 ಸಂಪರ್ಕಿಸಬೇಕೆಂದು ಕೋರಿದರು.
ಇದೇ ಸಂದರ್ಭದಲ್ಲಿ ಇಂದಿರಾ ಗಾಂಧಿ ಬ್ಲಾಕ್ ಅಧ್ಯಕ್ಷ ರವಿ ಮಂಚೇಗೌಡನ ಕೊಪ್ಪಲು, ಅರ್ಚಕರ ಸಂಘದ ಅಧ್ಯಕ್ಷರಾದ ವಿದ್ವಾನ್ ಕೃಷ್ಣಮೂರ್ತಿ, ಯುವ ಮುಖಂಡರಾದ ನವೀನ್ ,ರವಿಚಂದ್ರ, ಎಸ್ ಎನ್ ರಾಜೇಶ್, ಹರೀಶ್ ನಾಯ್ಡು ಮತ್ತಿತರರು ಹಾಜರಿದ್ದರು.