ಪ್ರಶಸ್ತಿಗಳಿಂದ ಸಾಧಕರ ಜವಾಬ್ದಾರಿ ಹೆಚ್ಚಳ: ಕೆ ಬಿ ಲಿಂಗರಾಜು

ಮೈಸೂರು: ಮನುಷ್ಯ ಸಾಧನೆ ಮಾಡಿದಾಗ ಪ್ರಶಸ್ತಿಗಳು ಒಲಿದು ಬರುತ್ತವೆ, ಅದರೊಂದಿಗೆ ಹೆಚ್ಚಿನ ಜವಾಬ್ದಾರಿಗಳು ಕೂಡ ಸಾಧಕನನ್ನು ಅರಸಿ ಬರುತ್ತವೆ ಎಂದು ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷರಾದ ಕೆ ಬಿ ಲಿಂಗರಾಜು ಹೇಳಿದರು.

ಮೈಸೂರು ಜಿಲ್ಲಾಡಳಿತ ವತಿಯಿಂದ 70ನೇ ಕನ್ನಡ ರಾಜ್ಯೋತ್ಸವ ಆಚರಿಸಿದ ಸಂದರ್ಭದಲ್ಲಿ ಸಮಾಜ ಸೇವೆಯಿಂದ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಕೆ ಬಿ ಲಿಂಗರಾಜು ಅವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದುದಕ್ಕಾಗಿ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಹಾಗೂ ಕರ್ನಾಟಕ ಹಿತರಕ್ಷಣಾ ವೇದಿಕೆ ವತಿಯಿಂದ ಅಭಿನಂದನೆ ಸಲ್ಲಿಸಿದ ವೇಳೆ
ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದ ರು.

ಸಾಧನೆ ಎಂಬುದು ಸುಲಭದ ಮಾತಲ್ಲ ಸಾಧನೆಯು ಒಂದು ತಪಸ್ಸಿನ ಹಾಗೆ, ಹಲವು ಅಡೆತಡೆಯನ್ನು ಲೆಕ್ಕಿಸದೆ ದೃಢಸಂಕಲ್ಪ ಹಾಗೂ ಉತ್ತಮ ವಿಚಾರಗಳಿದ್ದಲ್ಲಿ ಸಾಧನೆಯನ್ನು ಯಾರು ಬೇಕಾದರೂ ಮಾಡಬಹುದು ಎಂದು ಹೇಳಿದರು.

ಪ್ರಶಸ್ತಿಗಳು ಸಾಧಕನಿಗೆ ಸಮಾಜದಲ್ಲಿ ಗೌರವ ಕೊಡಿಸುವುದರ ಜೊತೆಗೆ ಜವಾಬ್ದಾರಿಗಳನ್ನು ಕೂಡ ಹೆಚ್ಚಿಸುತ್ತದೆ ಎಂದು ಲಿಂಗರಾಜು ತಿಳಿಸಿದರು.

ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಮಾತನಾಡಿ,ಕೆ ಬಿ ಲಿಂಗರಾಜು ಅವರು ಹಲವು ವರ್ಷಗಳ ಸಾಮಾಜಿಕ, ಶೈಕ್ಷಣಿಕ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಮೈಸೂರು ಜಿಲ್ಲಾಡಳಿತ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿರುವುದು ಮೈಸೂರು ನಾಗರಿಕರಿಗೆ ಹೆಮ್ಮೆಯ ಸಂಗತಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಗರ ಪಾಲಿಕೆ ಮಾಜಿ ಸದಸ್ಯ ಜಗದೀಶ್, ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್, ಅಖಿಲ ಕರ್ನಾಟಕ ಒಕ್ಕಲಿಗ ಮಹಾಸಭಾ ಅಧ್ಯಕ್ಷ ಎನ್ ಬೆಟ್ಟೆಗೌಡ,ಮೈಸೂರು ಜಿಲ್ಲಾ
ಚಳವಳಿ ಗಾರರ ಸಂಘದ ಅಧ್ಯಕ್ಷ ಬಿ ಎ ಶಿವಶಂಕರ್, ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ್ ಅಯ್ಯಂಗಾರ್, ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಲೋಹಿತ್, ಎಸ್ ಎನ್ ರಾಜೇಶ್, ಸಚಿನ್ ನಾಯಕ್,ಭಾರತಿ ಮತ್ತಿತರರು ಲಿಂಗರಾಜು ಅವರಿಗೆ ಶುಭ ಕೋರಿದರು.

ಪ್ರಶಸ್ತಿಗಳಿಂದ ಸಾಧಕರ ಜವಾಬ್ದಾರಿ ಹೆಚ್ಚಳ: ಕೆ ಬಿ ಲಿಂಗರಾಜು Read More

ವೀರೇಂದ್ರ ಹೆಗಡೆ ಅವರಿಗೆ ಶುಭ ಕೋರಿದಕೆಎಂ ಪಿ ಕೆ ಟ್ರಸ್ಟ್ ಪದಾಧಿಕಾರಿಗಳು

ಮೈಸೂರು: ಮೈಸೂರಿನ ಕೆಎಂ ಪಿ ಕೆ ಚಾರಿಟೇಬಲ್ ಟ್ರಸ್ಟ್ ಪದಾಧಿಕಾರಿಗಳು ಧರ್ಮಸ್ಥಳಕ್ಕೆ ಭೇಟಿ ನೀಡಿ ಧರ್ಮಾಧಿಕಾರಿಗಳಾದ ಡಾ.ವೀರೇಂದ್ರ ಹೆಗಡೆ ಅವರನ್ನು ಭೇಟಿ ಮಾಡಿದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ ಅವರ ಪಟ್ಟಾಭಿಷೇಕದ 58ನೇ ವರ್ದಂತೋತ್ಸವದ ಪ್ರಯುಕ್ತ ಅವರಿಗೆ ಕೆಎಂ ಪಿ ಕೆ ಟ್ರಸ್ಟ್ ಪದಾಧಿಕಾರಿಗಳು
ಶುಭಾಶಕೋರಿದರು.

ನಂತರ ಹೆಗಡೆ ಅವರ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಜಿ ರಾಘವೇಂದ್ರ, ಕಡಕೋಳ ಜಗದೀಶ್, ಎಸ್ ಎನ್ ರಾಜೇಶ್, ಹರೀಶ್ ನಾಯ್ಡು, ಮಹೇಶ್ ಕುಮಾರ್ ಹಾಗೂ ಟ್ರಸ್ಟ್ ನ ಇತರ ಪದಾಧಿಕಾರಿಗಳು ಹಾಜರಿದ್ದರು.

ವೀರೇಂದ್ರ ಹೆಗಡೆ ಅವರಿಗೆ ಶುಭ ಕೋರಿದಕೆಎಂ ಪಿ ಕೆ ಟ್ರಸ್ಟ್ ಪದಾಧಿಕಾರಿಗಳು Read More

ವಿದ್ವಾನ್ ಪ್ರಹ್ಲಾದ್ ರಾವ್ ಅವರಿಗೆ ಕೆ ಎಂ ಪಿ ಕೆ ಟ್ರಸ್ಟ್ ನಿಂದ ಗೌರವ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಯಶಸ್ವಿಗೊಂಡ ಹಿನ್ನೆಲೆಯಲ್ಲಿ ಪೂರ್ವಜರ ಕೆಲಸವನ್ನು ಮುಂದುವರೆಸಿಕೊಂಡು ಬಂದಿರುವ ವಿದ್ವಾನ್ ಪ್ರಹ್ಲಾದ್ ರಾವ್ ಅವರನ್ನು ಕೆ ಎಂ ಪಿ ಕೆ ಟ್ರಸ್ಟ್ ವತಿಯಿಂದ‌ ಸನ್ಮಾನಿಸಲಾಯಿತು.

ದಸರಾ ಮೆರವಣಿಗೆಯಲ್ಲಿ ಭಾಗವಹಿಸುವ ಆನೆಗಳ ಹಾಗೂ ಅಂಬಾರಿಯಲ್ಲಿ ಪ್ರತಿಷ್ಠಾಪಿಸುವ ಚಾಮುಂಡೇಶ್ವರಿಯ ಪೂಜೆಯನ್ನು ಸತತ 28ವರ್ಷಗಳಿಂದ ನೆರವೇರಿಸಿಕೊಂಡು ಬರುತ್ತಿದ್ದು
ನಮ್ಮ ಸಂಸ್ಕಾರ ಸಂಸ್ಕೃತಿ ಹಾಗೂ ಪೂರ್ವಜರ ಕೆಲಸವನ್ನು ಮುಂದುವರೆಸಿಕೊಂಡು ಬಂದಿರುವ ವಿದ್ವಾನ್ ಪ್ರಹ್ಲಾದ್ ರಾವ್ ಅವರನ್ನು ಅರಮನೆ ಆವರಣದಲ್ಲಿ ಆನೆಗಳನ್ನು ಮರಳಿ ಕಾಡಿಗೆ ಕಲಿಸುವ ಪೂಜಾ ಕಾರ್ಯದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್, ಜಿ ರಾಘವೇಂದ್ರ, ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಎಸ್. ಎನ್ ರಾಜೇಶ್, ರವಿಚಂದ್ರನ್, ಮೋಹನ್, ನಿತಿನ್, ದಿನೇಶ್, ಅಮಿತ್ ಮತ್ತಿತರರು ಹಾಜರಿದ್ದರು.

ವಿದ್ವಾನ್ ಪ್ರಹ್ಲಾದ್ ರಾವ್ ಅವರಿಗೆ ಕೆ ಎಂ ಪಿ ಕೆ ಟ್ರಸ್ಟ್ ನಿಂದ ಗೌರವ Read More

ಹಳೇ ಮೈಸೂರು ಅಭಿವೃದ್ಧಿಗೆ ಶ್ರಮಿಸಿದ ಸರ್.ಎಂ ವಿ- ಸಂದೇಶ್ ಸ್ವಾಮಿ

ಮೈಸೂರು: ಕೆಎಂಪಿಕೆ ಟ್ರಸ್ಟ್ ಹಾಗೂ ಜೀವಧಾರ ರಕ್ತನಿಧಿ ಕೇಂದ್ರದ ವತಿಯಿಂದ ಭಾರತರತ್ನ ದಿವಾನ್ ಸರ್. ಎಂ ವಿಶ್ವೇಶ್ವರಯ್ಯ ರವರ 165ನೇ ಜಯಂತಿಯನ್ನು ವಿಶೇಷವಾಗಿ ಆಚರಿಸಲಾಯಿತು.

ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿರುವ ಸರ್. ಎಂ ವಿಶ್ವೇಶ್ವರಯ್ಯ ಅವರ ವೃತ್ತದಲ್ಲಿ ಸರ್.ಎಂ ವಿ ನೆನಪು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಮಾಜಿ ಮಾಹಾಪೌರರಾದ ಸಂದೇಶ್ ಸ್ವಾಮಿ ಅವರು ಸರ್. ಎಂ ವಿಶ್ವೇಶ್ವರಯ್ಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಸಂದೇಶ್ ಸ್ವಾಮಿ ಅವರು, ಆಧುನಿಕ ಮೈಸೂರನ್ನು ವಿಶ್ವಮಟ್ಟದಲ್ಲಿ ಜನಪ್ರಿಯವಾಗಲು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜೊತೆಯಲ್ಲಿ ಶಿಕ್ಷಣ, ಕೃಷಿ, ನೀರಾವರಿ, ಕೈಗಾರಿಕೆ, ಸಹಕಾರಿ, ತಂತ್ರಾಜ್ಞಾನ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಅತ್ಯಾಧುನಿಕ ಯೋಜನೆಗಳನ್ನು ಜಾರಿಗೆ ತರಲು ದಿವಾನ್ ಸರ್. ಎಂ ವಿಶ್ವೇಶ್ವರಯ್ಯ ಅವರ ಸೇವೆ ಸ್ಮರಣೀಯವಾದುದು ಎಂದು ಹೇಳಿದರು.

ಹಳೇಮೈಸೂರಿನ ಅಭಿವೃದ್ಧಿಗೆ ಶ್ರಮಿಸಿರುವ ಸರ್.ಎಂ ವಿಶ್ವೇಶ್ವರಯ್ಯ ಅವರನ್ನ ಇಂದಿನ ಯುವಪೀಳಿಗೆ ಸ್ಮರಿಸಬೇಕು ಎಂದು ಕರೆ ನೀಡಿದರು.

ಸರ್ ಎಂ ವಿ ಅವರ ಜನುಮ ದಿನವನ್ನು ವಿಶ್ವ ಅಭಿಯಂತರರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ ಆದರೆ ಮೈಸೂರಿನ ಜಿಲ್ಲಾಮಟ್ಟದಲ್ಲಿ ನಗರಪಾಲಿಕೆ ವತಿಯಿಂದ ಆಚರಿಸಲು ಮುಂದಾಗದಿರುವುದು ದುರಾದೃಷ್ಟಕರ ಎಂದು ‌ವಿಷಾಧಿಸಿದರು.

ಇನ್ನೇನು ದಸರಾ ಆಗಮಿಸುತ್ತಿರುವ ಸಂಧರ್ಭದಲ್ಲಿ ಜಂಬೂಸವಾರಿ ಹಾದುಹೋಗುವ ಮಾರ್ಗದಲ್ಲಿ ಸರ್.‌ಎಂ ವಿ ವೃತ್ತವಿದ್ದು ಚೆಸ್ಕಾಂ ದೀಪಾಲಂಕಾರ ಸಮಿತಿ ಆಕರ್ಷಕವಾಗಿ ಲೈಟಿಂಗ್ಸ್ ಮೂಲಕ ಸರ್.ಎಂ ವಿ ಅವರನ್ನ ಸ್ಮರಿಸಲಿ ಎಂದು ಸಂದೇಶ್ ಸ್ವಾಮಿ ಸಲಹೆ ನೀಡಿದರು.

ಹಿರಿಯ ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ ಅವರು ಮಾತನಾಡಿ, ಶಾಲಾ ಮಟ್ಟದಲ್ಲಿ ಸರ್. ಎಂವಿ ಅವರ ಕೊಡುಗೆ ಸೇವಾ ಯೋಜನೆಗಳನ್ನ ಸ್ಮರಿಸಲು ಸರ್ಕಾರ ಮುಂದಾಗಬೇಕು ಎಂದು ತಿಳಿಸಿದರು.

ಬ್ರಿಟೀಷ್ ಸರ್ಕಾರ ಸರ್ ಎಂದು ಪದವಿ ನೀಡಿತು ಕೇಂದ್ರ ಸರ್ಕಾರ ಭಾರತರತ್ನ ನೀಡಿ ಗೌರವಿಸಿತು, ಸರ್.ಎಂ ವಿಶ್ವೇಶ್ವರಯ್ಯ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಪ್ರತಿಮೆಯನ್ನ ಉದ್ಘಾಟಿಸಲು ವಿಶ್ರಾಂತಿ ಗೃಹದಿಂದ ಕಾರಿನಲ್ಲೆ ಬರದೆ ಸ್ವತಃ ಕಾಲ್ನಡಿಗೆಯಲ್ಲೇ ನಡೆದುಕೊಂಡು ಬಂದರು ಅವರ ಸರಳತೆ, ಸಮಯ ಪರಿಪಾಲನೆ ಇಂದಿನ ಯುವಸಮುದಾಯಕ್ಕೆ ಮಾದರಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮ ದಲ್ಲಿ ನಗರ ಪಾಲಿಕೆ ಮಾಜಿ ಸದಸ್ಯರಾದ ಮ ವಿ ರಾಮಪ್ರಸಾದ್, ಅನಂತು, ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್,ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಅರ್ಚಕ ಸಂಘದ ಅಧ್ಯಕ್ಷರಾದ ವಿದ್ವಾನ್ ಕೃಷ್ಣಮೂರ್ತಿ, ನಿರೂಪಕ ಅಜಯ್ ಶಾಸ್ತ್ರಿ, ಕೆ ಆರ್ ಎಸ್ ವಿಜಯ್ ಕುಮಾರ್, ಸುಬ್ಬಯ್ಯ, ಸುಚೇಂದ್ರ, ಸೂರಜ್,ಸದಾಶಿವ್ ಮತ್ತಿತರರು ಹಾಜರಿದ್ದರು.

ಹಳೇ ಮೈಸೂರು ಅಭಿವೃದ್ಧಿಗೆ ಶ್ರಮಿಸಿದ ಸರ್.ಎಂ ವಿ- ಸಂದೇಶ್ ಸ್ವಾಮಿ Read More

ಜಿಎಸ್‌ಟಿ ಹೆಸರಲ್ಲಿ ಸಣ್ಣ ವ್ಯಾಪಾರಿಗಳ ಸಂಕಷ್ಟ ತಪ್ಪಿಸಿ-ವಿಕ್ರಂ ಅಯ್ಯಂಗಾರ್

ಮೈಸೂರು: ರಾಜ್ಯ ಸರ್ಕಾರ ಸಣ್ಣ ವ್ಯಾಪಾರಿಗಳಿಗೂ ಜಿಎಸ್‌ಟಿ ಹೆಸರಿನಲ್ಲಿ ಅಧಿಕ ತೆರೆಗೆ ವಿಧಿಸುವ ಮೂಲಕ ಅವರನ್ನು ಸಂಕಷ್ಟಕ್ಕೆ ತಳ್ಳುತ್ತಿದೆ ಎಂದು ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್
ಆರೋಪಿಸಿದರು.

ನಗರದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದ ಮುಂಭಾಗ
ಕೆ ಎಂ ಪಿ ಕೆ ಟ್ರಸ್ಟ್ ವತಿಯಿಂದ
ತೆರಿಗೆ ಸಂಕಷ್ಟದಿಂದ ಸಣ್ಣ ವ್ಯಾಪಾರಿಗಳನ್ನು ಕಾಪಾಡಿ ಎಂದು ಪೋಸ್ಟರ್ ಹಿಡಿದು
ಸರ್ಕಾರದ ಗಮನ ಸೆಳೆದರು

ಸಣ್ಣ ವ್ಯಾಪಾರಿಗಳಿಗೆ ರಾತ್ರೋರಾತ್ರಿ ಲಕ್ಷಾಂತರ ರೂ ಜಿ ಎಸ್ ಟಿ ಪಾವತಿಸುವಂತೆ ನೋಟಿಸ್ ನೀಡುವ ಮೂಲಕ
ಸಾವಿರಾರು ಕುಟುಂಬಗಳನ್ನು ಬೀದಿಗೆ ತಳ್ಳುವ ಕೆಲಸಕ್ಕೆ ಕೈ ಹಾಕಿರುವ ರಾಜ್ಯ ಸರ್ಕಾರದ ದಮನಕಾರಿ ನಡೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಲಾಯಿತು.

ಪ್ರತಿದಿನ ವ್ಯಾಪಾರ ಮಾಡದಿದ್ದರೆ ಊಟಕ್ಕೂ ಪರದಾಡುವ ಸಣ್ಣ ವ್ಯಾಪಾರಿಗಳಿಗೆ ಜಿಎಸ್‌ಟಿ ನೋಟಿಸ್ ನೀಡಿದ್ದು ಸರಿಯಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಕ್ಷಣ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಕೆಎಂಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಮತ್ತಿತರರು ಒತ್ತಾಯಿಸಿದರು.

ಸಣ್ಣ ಪುಟ್ಟ ವ್ಯಾಪಾರಿಗಳಲ್ಲಿ ಜಿ ಎಸ್ ಟಿ ಪದ್ಧತಿ,ವ್ಯವಸ್ಥೆ ಬಗ್ಗೆ ಅರಿವು ಮೂಡಿಸಬೇಕು, ಹಾಗೆಯೇ ಜಿ ಎಸ್ ಟಿ ಸಂಪೂರ್ಣ ಮನ್ನಾ ಮಾಡಿ ಸಣ್ಣ ವ್ಯಾಪಾರಿಗಳಿಗೆ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದರು

ಅಭಿಯಾನದಲ್ಲಿ ಪರಮೇಶ್ ಗೌಡ, ಪ್ರಮೋದ್ ಗೌಡ, ಅಭಿ, ಎಸ್.ಎನ್ ರಾಜೇಶ್ ಮತ್ತಿತರರು ಪಾಲ್ಗೊಂಡಿದ್ದರು.

ಜಿಎಸ್‌ಟಿ ಹೆಸರಲ್ಲಿ ಸಣ್ಣ ವ್ಯಾಪಾರಿಗಳ ಸಂಕಷ್ಟ ತಪ್ಪಿಸಿ-ವಿಕ್ರಂ ಅಯ್ಯಂಗಾರ್ Read More

ಚಾಮುಂಡೇಶ್ವರಿ ವರ್ಧಂತಿ: ಪ್ರಾಣಿ ಪ್ರಿಯರಿಂದ ವಾನರಗಳಿಗೆ ಆಹಾರ!

ಮೈಸೂರು: ನಾಡ ಅಧಿದೇವತೆ ಚಾಮುಂಡೇಶ್ವರಿ ವರ್ಧಂತಿ ಪ್ರಯುಕ್ತ ಅನೇಕ ಸಂಘ-ಸಂಸ್ಥೆಗಳು ಜನರಿಗೆ ಪ್ರಸಾದ ವಿತರಿಸುವುದು ಸರ್ವೇ ಸಾಮಾನ್ಯ.

ಆದರೆ ಪ್ರಾಣಿಗಳಿಗೂ ಆಹಾರ ನೀಡುವ ಮೂಲಕ ಕೆಎಂಪಿಕೆ ಟ್ರಸ್ಟ್ ಇತರರಿಗೆ ಮಾದರಿಯಾಗಿದೆ.

ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷರಾದ ವಿಕ್ರಮ್ ಅಯ್ಯಂಗಾರ್ ಅವರು ಚಾಮುಂಡೇಶ್ವರಿ ವರ್ಧಂತಿ ಪ್ರಯುಕ್ತ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಇಂದು ವಾನರಗಳಿಗೆ ಕಡಲೆಕಾಯಿ ಹಾಗೂ ಬಾಳೆ ಹಣ್ಣುಗಳನ್ನು ನೀಡಿ ಭಕ್ತಿಯ ಜೊತೆ ಪ್ರಾಣಿ ಪ್ರೇಮ ಮೆರೆದ್ದಾರೆ.

ವಾನರಗಳೂ ಕೂಡಾ ಖುಷಿಯಿಂದ ಬಂದು ಬಾಳೆಹಣ್ಣು, ಕಡಲೆಕಾಯಿ ತಿಂದು ಹಸಿವು ನೀಗಿಸಿಕೊಂಡವು.

ಚಾಮುಂಡೇಶ್ವರಿ ವರ್ಧಂತಿ: ಪ್ರಾಣಿ ಪ್ರಿಯರಿಂದ ವಾನರಗಳಿಗೆ ಆಹಾರ! Read More

ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಬಳಕೆ ತ್ಯಜಿಸಿ-ವಿಕ್ರಮ್ ಅಯ್ಯಂಗಾರ್

ಮೈಸೂರು: ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕ ಹಾಗೂ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ರಾಷ್ಟ್ರೀಯ ಪ್ಲಾಸ್ಟಿಕ್ ಚೀಲ ಮುಕ್ತ ದಿನವನ್ನು
ಅರ್ಥಪೂರ್ಣವಾಗಿ ಆಚರಿಸಲಾಯಿತು.

ನಗರದ ದೇವರಾಜ ಮಾರುಕಟ್ಟೆ ಮುಂಭಾಗ ಪ್ಲಾಸ್ಟಿಕ್ ಬ್ಯಾಗ್ ತ್ಯಜಿಸಿ ಬಟ್ಟೆ ಬ್ಯಾಗ್ ಬಳಸಿ ಘೋಷ ವಾಕ್ಯದೊಂದಿಗೆ ಗ್ರಾಹಕರಿಗೆ ಉಚಿತ ಬಟ್ಟೆ ಬ್ಯಾಗ್ ವಿತರಿಸಿ ಜಾಗೃತಿ ಮೂಡಿಸಲಾಯಿತು.

ಈ‌ ವೇಳೆ ಕೆಎಂಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಮಾತನಾಡಿ,
ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಬಳಕೆಯನ್ನು ಪ್ರತಿಯೊಬ್ಬರೂ ತ್ಯಜಿಸಬೇಕು, ಆ ಮೂಲಕ ಪ್ಲಾಸ್ಟಿಕ್‌ ಮುಕ್ತ ನಗರ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಪ್ಲಾಸ್ಟಿಕ್ ನಿಷೇಧ ಹಾಗೂ ಪರಿಸರ ರಕ್ಷಣೆ ಜವಾಬ್ದಾರಿ ಕೇವಲ ಸರ್ಕಾರ ಹಾಗೂ ಸ್ಥಳೀಯ ಆಡಳಿತದ್ದು ಎಂಬ ಮನೋಭಾವದಿಂದ ಹೊರಬರಬೇಕು. ಸಾರ್ವಜನಿಕರು ತಮ್ಮ ಹೊಣೆ ಅರಿತು ಪರಿಸರ ರಕ್ಷಣೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು.

ಪ್ಲಾಸ್ಟಿಕ್ ಬ್ಯಾಗುಗಳು ಹಾಗೂ ವಸ್ತುಗಳನ್ನು ಬಳಸುವ ದನ್ನು ನಿಲ್ಲಿಸಿ ಸುಂದರ ಪರಿಸರ ನಿರ್ಮಿಸಿ, ದೈನಂದಿನ ಜೀವನದಲ್ಲಿ ಪ್ಲಾಸ್ಟಿಕ್ ಬಳಕೆ ಯನ್ನು ತ್ಯಜಿಸಿ ಬಟ್ಟೆ, ಕಾಗದ ಹಾಗೂ ಇತರ ಪರಿಸರ ಸ್ನೇಹಿ ಕೈಚೀಲ ಬಳಸಿ ಪ್ಲಾಸ್ಟಿಕ್‌ ನಿಂದ ಪರಿಸರವನ್ನು ದೂರವಿಡಿ ಎಂದು ಸಲಹೆ ನೀಡಿದರು.

ಮುಂದಿನ ಪೀಳಿಗೆಗೆ ಪ್ಲಾಸ್ಟಿಕ್ ಮುಕ್ತ ಪರಿಸರ ಕೊಡುಗೆಯಾಗಿ ನೀಡಲು ಇಂದೇ ಶಪಥ ಮಾಡಿ. ನಿಮ್ಮ ಮನೆಯನ್ನು ಸಂಪೂರ್ಣ ಪ್ಲಾಸ್ಟಿಕ್ ಮುಕ್ತವಾಗಿ ಮಾಡಿ ಎಂದು ತಿಳಿಹೇಳಿದರಲ್ಲದೆ ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ನಗರದ ಸಂಘ ಸಂಸ್ಥೆಗಳು ಆಯೋಜಿಸಬೇಕೆಂದು ವಿಕ್ರಮ್ ಅಯ್ಯಂಗಾರ್ ಕೋರಿದರು.

ಜಾಗೃತಿ ಯಲ್ಲಿ ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್,ಎಸ್ ಎನ್ ರಾಜೇಶ್,ರವಿಚಂದ್ರ, ಹರೀಶ್ ನಾಯ್ಡು, ದುರ್ಗಾ ಪ್ರಸಾದ್, ರಾಕೇಶ್, ಶ್ರೀಕಾಂತ್ ಕಶ್ಯಪ್ ಮತ್ತಿತರರು ಪಾಲ್ಗೊಂಡಿದ್ದರು.

ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಬಳಕೆ ತ್ಯಜಿಸಿ-ವಿಕ್ರಮ್ ಅಯ್ಯಂಗಾರ್ Read More

ಯುಗಾದಿ ಹಬ್ಬದಂದು ರಂಗೋಲಿ ಸ್ಪರ್ಧೆ

ಮೈಸೂರು: ಕೆ ಎಂ ಪಿ ಕೆ ಚಾರಿಟಬಲ್ ಟ್ರಸ್ಟ್ ಹಾಗೂ ಶ್ರೀ ದುರ್ಗಾ ಫೌಂಡೇಶನ್ ವತಿಯಿಂದ ಯುಗಾದಿ ಹಬ್ಬದ ಪ್ರಯುಕ್ತ ಮೈಸೂರು ನಗರ ವ್ಯಾಪ್ತಿಯ ಮಹಿಳೆಯರಿಗೆ ರಂಗೋಲೆ ಸ್ಪರ್ಧೆ ಆಯೋಜಿಸಲಾಗಿದೆ.

ಈ ಬಗ್ಗೆ ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್ ಮಾಹಿತಿ ನೀಡಿದ್ದು, ಮೊದಲ 5 ಸ್ಥಾನ ಪಡೆದ ವಿಜೇತರಿಗೆ ಆಕರ್ಷಕ ಬಹುಮಾನ ನೀಡಲಾಗುವುದು, ಹಾಗೂ ಸ್ಪರ್ಧಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಅಭಿನಂದನಾ ಪತ್ರ ನೀಡಲಾಗುವುದು ಎಂದು ತಿಳಿಸಿದರು.

ಯುಗಾದಿ ಹಬ್ಬದಂದು ಮಹಿಳೆಯರು ತಮ್ಮ ಮನೆಗಳ ಮುಂದೆ ಆಕರ್ಷಕ ರಂಗೋಲಿಯನ್ನು ಬಿಡಿಸಿ 89713 89539
ಸಂಖ್ಯೆಗಳಿಗೆ ವಾಟ್ಸಪ್ ಮೂಲಕ ರಂಗೋಲಿ ಚಿತ್ರವನ್ನು ಕಳುಹಿಸಬೇಕು, ಸ್ಪರ್ಧೆಯಲ್ಲಿ ಭಾಗವಹಿಸುವರು ಹೆಸರು ಮತ್ತು ವಿಳಾಸ ದಾಖಲಿಸಬೇಕು ಎಂದು ಅವರು ಕೋರಿದ್ದಾರೆ.

ಯುಗಾದಿ ಹಬ್ಬದಂದು ರಂಗೋಲಿ ಸ್ಪರ್ಧೆ Read More

ಸಾಂಸ್ಕೃತಿಕ ‌ನಗರಿಯಲ್ಲಿ ಗುಬ್ಬಚ್ಚಿ ಹಬ್ಬ :ಗುಬ್ಬಿ ಸಂತತಿ ಮುಂದಿನ ಪೀಳಿಗೆಗೂಉಳಿಸಿ- ಸ್ನೇಕ್ ಶ್ಯಾಮ್

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ
ಗುಬ್ಬಚ್ಚಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು.

ಮಾನವನ ಆಧುನಿಕ ಜೀವನದಿಂದಾಗಿ ಇತ್ತೀಚಿನ ದಿನಗಳಲ್ಲಿ ಗುಬ್ಬಚ್ಚಿ ಅಳಿವಿನಂಚಿನಲ್ಲಿದೆ ಎಂದು ಉರಗ ತಜ್ಞ ಸ್ನೇಕ್ ಶ್ಯಾಮ್ ವಿಷಾದಿಸಿದರು.

ನಗರದ ಮಹಾರಾಜ ಮೈದಾನದ ಮುಂಭಾಗ ಕೆ ಎಂ ಪಿ ಕೆ ಟ್ರಸ್ಟ್ ಹಮ್ಮಿಕೊಂಡಿದ್ದ
ವಿಶ್ವ ಗುಬ್ಬಚ್ಚಿ ದಿನಾಚರಣೆ ಅಂಗವಾಗಿ ಗುಬ್ಬಚ್ಚಿ ಹಬ್ಬ ಆಚರಣೆ ವೇಳೆ ಮರಗಳಲ್ಲಿ ಪಕ್ಷಿಗಳಿಗೆ ನೀರಿನ ಬೌಲು ಅಳವಡಿಸಿ ನೀರು ಹಾಗೂ ಆಹಾರ ಹಾಕುವ ಮೂಲಕ ಸ್ನೇಕ್ ಶ್ಯಾಮ್ ಚಾಲನೆ ನೀಡಿ ಮಾತನಾಡಿದರು.

ಗುಬ್ಬಚ್ಚಿ ಉಳಿದರೆ ಉತ್ತಮ ಪರಿಸರ ನೋಡಲು ಸಾಧ್ಯ. ನಾವು ಗುಬ್ಬಚ್ಚಿಗಳೊಂದಿಗೆ ಬೆಳೆದವರು, ಪರಿಸರ ಸಮತೋಲನ ಬಹಳ ಮುಖ್ಯ, ಗುಬ್ಬಚ್ಚಿ ಮಾತ್ರವಲ್ಲ ಎಲ್ಲ ಪಕ್ಷಿಗಳು ಕೂಡ ಅಳಿವಿನಂಚಿನಲ್ಲಿದೆ. ಆದ್ದರಿಂದ ಮುಂದಿನ ಪೀಳಿಗೆಗೂ ಗುಬ್ಬಿ ಸಂತತಿ ಉಳಿಸಿ ಎಂದು ಸಲಹೆ ನೀಡಿದರು.

ಇಂದು ಕೃಷಿಗೆ ಕ್ರಿಮಿನಾಶಕಗಳನ್ನು ಬಳಸಲಾಗುತ್ತಿದೆ. ಇದು ವಿಷಕಾರಿಯಾಗಿದ್ದು, ಗುಬ್ಬಿಗಳು ಸಾವನಪ್ಪುತ್ತಿದೆ.
ಗುಬ್ಬಚ್ಚಿ ಉಳಿಸಿದರೆ ಪರಿಸರದ ಉಳಿವು. ಮನುಷ್ಯರು ನಾವು ಮಾತ್ರ ಬದುಕದೆ, ಎಲ್ಲಾ ಜೀವಿಗಳು ಬದುಕಲು ಅವಕಾಶ ಮಾಡಿಕೊಡಬೇಕೆಂದು ಉರಗ ತಜ್ಞ ತಿಳಿಹೇಳಿದರು.

ಸುಮಾರು 25ಕ್ಕೂ ಅಧಿಕ ಗುಬ್ಬಿಗಳ ಪ್ರಬೇಧವಿದೆ,ಆದರೆ ಗುಬ್ಬಿ ಸಂತತಿ ಇಂದು ಅಳಿವಿನಂಚಿನಲ್ಲಿದೆ. ಮನುಷ್ಯನಿಂದ ಗುಬ್ಬಿಗೆ ಕಂಟಕ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ವಾಸಿಸಲು ಪೂರಕ ವಾತಾವರಣ ಇಲ್ಲದಿರುವುದು ಗುಬ್ಬಿ ಸಂತತಿ ಇಳಿಮುಖವಾಗಲು ಪ್ರಮುಖ ಕಾರಣ. ಗುಬ್ಬಿಯ ಸಂಕುಲವನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು.

ಚಿತ್ರನಟ ಆದಿ ಲೋಕೇಶ್ ಮಾತನಾಡಿ,ಇಂದಿನ‌ ದಿನಗಳಲ್ಲಿ
ಗುಬ್ಬಿ ಕಾಣಲು ಸಿಗುತ್ತಿಲ್ಲ. ಆದರೆ ನಮ್ಮ ಬಾಲ್ಯವನ್ನು ನೆನಪಿಡಿಸಿಕೊಂಡರೆ ಗುಬ್ಬಚ್ಚಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದವು.
ಆದರೆ ಇಂದು ಗುಬ್ಬಚ್ಚಿ ಸೇರಿದಂತೆ ಹಲವು ಪಕ್ಷಿ ಸಂಕುಲ ಅವಸಾನದಂಚಿನಲ್ಲಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಗುಬ್ಬಚ್ಚಿ ದಿನ ಮಾತ್ರ ಪಕ್ಷಿಗಳಿಗೆ ನೀರು ಆಹಾರ ನೀಡುವುದು ಮುಖ್ಯವಲ್ಲ ಪ್ರತಿದಿನವೂ ಪಕ್ಷಿ ಸಂಕುಲನವನ್ನು ಉಳಿಸಲು ತಮ್ಮ ತಮ್ಮ ಮನೆಯ ಮೇಲೆ ಪ್ರಾಣಿ ಪಕ್ಷಿಗಳಿಗೆ ನೀರಿನ ಬಟ್ಟಲು ಅಳವಡಿಸುವ ಕೆಲಸವಾಗಬೇಕು ಎಂದು ಹೇಳಿದರು.

ಕಾಂಗ್ರೆಸ್ ಮುಖಂಡರಾದ ಎನ್.ಎಂ ನವೀನ್ ಕುಮಾರ್ ಮಾತನಾಡಿ,
ಜನಸಂಖ್ಯೆಗಿಂತ ವಾಹನ‌ ಸಾಂದ್ರತೆ ಹೆಚ್ಚಾಗಿರುವುದರಿಂದ ಪರಿಸರ ವಿಕೋಪಕ್ಕೆ ತೆರಳಿ ಸಣ್ಣಪುಟ್ಟ ಪ್ರಾಣಿಪಕ್ಷಿಗಳ ಸಂಕುಲ ನಾಶವಾಗುತ್ತಿದೆ ಎಂದು ಕಳವಳ ಪಟ್ಟರು.

ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರೀಕನ ಹೊಣೆ, ಹವಮಾನ ಬದಲಾವಣೆ,ಪ್ರಕೃತಿ ವಿಕೋಪದ ಮುನ್ಸೂಚನೆ ಕೊಡುವುದರಲ್ಲಿ ಪ್ರಾಣಿಪಕ್ಷಿಗಳೇ ಮೊದಲು. ಹಾಗಾಗಿ ನಾಗರೀಕತೆಯೊಂದಿಗೆ ಉತ್ತಮ ಒಡನಾಟದಲ್ಲೆ ಜೀವಿಸುವ ಪ್ರಾಣಿಪಕ್ಷಿಗಳಿಗೆ ಇಂತಹ ರಣಬಿಸಿಲಿನಲ್ಲಿ ಒಂದಷ್ಟು ನೀರು ಆಹಾರ ನೀಡುವ ಕಾರ್ಯಕ್ಕೆ ಸಾರ್ವಜನಿಕರು ಮುಂದಾಗಬೇಕು ಎಂದು ಕರೆ ನೀಡಿದರು.

ಸಮತೋಲನಕ್ಕಾಗಿ ಗುಬ್ಬಚ್ಚಿಗಳನ್ನು ಉಳಿಸೋಣ,ಬೇಸಿಗೆಯ ಬಿಸಿಲಿನ ತಾಪದಿಂದ ಪ್ರಾಣಿ ಪಕ್ಷಿಗಳನ್ನು ರಕ್ಷಿಸೋಣ,
ಅಳಿದು ಹೋಗುತ್ತಿರುವ ಗುಬ್ಬಚ್ಚಿ ಸಂಕುಲಗಳ ಉಳಿವಿಗಾಗಿ ಜನಜಾಗೃತಿ ಮೂಡಿಸೋಣ, ನಶಿಸಿ ಹೋಗುತ್ತಿರುವ ಗುಬ್ಬಚ್ಚಿ ಸಂಕುಲವನ್ನು ಸಂರಕ್ಷಿಸೋಣ
ಎಂಬ ಘೋಷವಾಕ್ಯವುಳ್ಳ ನಾಮಫಲಕ ಪ್ರದರ್ಶಿಸುವ ಮೂಲಕ ಪಕ್ಷಿಗಳ ಸಂರಕ್ಷಣೆಯ ಸಂದೇಶ ಸಾರಿದರು.

ವನ್ಯಜೀವಿ ಮಂಡಳಿಯ ರಾಜ್ಯ ಸದಸ್ಯರಾದ ಡಾ. ಸಂತೃಪ್ತಿ ಗೌಡ,ಕೆ ಆರ್ ವಿಭಾಗದ ಉಪ ಪೊಲೀಸ್ ಆಯುಕ್ತರಾದ ರಮೇಶ್ ಕುಮಾರ್, ಸೌಮ್ಯ ಆದಿ ಲೋಕೇಶ್, ಕಿರುತರೆ ನಟ ಮಹೇಂದರ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ವೈದ್ಯರಾದ ಶ್ರೀನಿವಾಸ್ ಆಚಾರ್,ಶ್ರೀನಿವಾಸ್ ಭಾಷ್ಯಂ, ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಎಸ್ ಎನ್ ರಾಜೇಶ್, ಚಕ್ರಪಾಣಿ, ಸುಚೇಂದ್ರ, ಮಹಾನ್ ಶ್ರೇಯಸ್, ಮಿರ್ಲೆ ಪನಿಷ್, ರಾಕೇಶ್,
ಮತ್ತಿತರರು ಹಾಜರಿದ್ದರು.

ಸಾಂಸ್ಕೃತಿಕ ‌ನಗರಿಯಲ್ಲಿ ಗುಬ್ಬಚ್ಚಿ ಹಬ್ಬ :ಗುಬ್ಬಿ ಸಂತತಿ ಮುಂದಿನ ಪೀಳಿಗೆಗೂಉಳಿಸಿ- ಸ್ನೇಕ್ ಶ್ಯಾಮ್ Read More

ಪ್ರಾಣಿಪಕ್ಷಿ, ಪರಿಸರ ಉಳಿಸುವ ಮನೋಭಾವ ಬೆಳಸಿಕೊಳ್ಳಿ-ಪ್ರತಾಪ್ ಸಿಂಹ

ಮೈಸೂರು: ಪ್ರಾಣಿಪಕ್ಷಿಗಳು ಮತ್ತು ಪರಿಸರ ಉಳಿಸುವ ಸೇವಾ ಮನೋಭಾವ ಬೆಳಸಿಕೊಳ್ಳಬೇಕೆಂದು ಮಾಜಿ ಸಂಸದ ಪ್ರತಾಪ್ ಸಿಂಹ ಸಲಹೆ ನೀಡಿದರು.

ಮೈಸೂರಿನಲ್ಲಿ ಬೇಸಿಗೆಯ ತಾಪಮಾನದಿಂದ ಜೀವಸಂಕುಲ ತತ್ತರಿಸುತ್ತಿದ್ದು
ಪ್ರಾಣಿಪಕ್ಷಿಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಮೂಕಸ್ಪಂದನೆ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದ ವೇಳೆ ಅವರು ಮಾತನಾಡಿದರು.

2 ತಿಂಗಳ ಕಾಲ ನಿರಂತರವಾಗಿ ಮೈಸೂರಿನ ವಿವಿಧ ಪ್ರದೇಶಗಳಲ್ಲಿ ಮೂಕ ಸ್ಪಂದನ ಅಭಿಯಾನ ಹಮ್ಮಿಕೊಳ್ಳಲಾಗಿದ್ದು,
ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ
ಚಾಮರಾಜ ಕ್ಷೇತ್ರದ ವಾರ್ಡ್ ನಂಬರ್ 23ರ ದಿವಾನ್ಸ್ ರಸ್ತೆಯಲ್ಲಿ ಮರಗಿಡಗಳಲ್ಲಿ ಆಹಾರ ನೀರಿನ ಬಟ್ಟಲು ಅಳವಡಿಸುವ ಮೂಲಕ ಪ್ರತಾಪ್ ಸಿಂಹ ಅಭಿಯಾನಕ್ಕೆ ಚಾಲನೆ ನೀಡಿದರು.

ಭೂಮಿಯ ಮೇಲೆ ಕಾಲ ಬದಲಾವಣೆ ಜಗದ ನಿಯಮ ಅದಕ್ಕೆ ಹೊಂದಿಕೊಂಡು‌‌ ಜೀವಿಸುವುದು ಪ್ರತಿಯೊಬ್ಬರ ಕರ್ತವ್ಯ, ಮನುಷ್ಯ ಪ್ರತಿಯೊಂದಕ್ಕೂ ಪರಿಸರದ ಮೇಲೆ ಅವಲಂಬಿತನಾಗುತ್ತಾನೆ ಆದರೆ ಪ್ರಾಣಿಪಕ್ಷಿಗಳ ಪರಿಸರ ಉಳಿಸುವ ಸೇವಾಮನೋಭಾವ ಬೆಳಸಿಕೊಳ್ಳಬೇಕು ಎಂದು ತಿಳಿಸಿದರು.

ಹೆಚ್ಚು ಸಸಿಗಳನ್ನು ನೆಡಲು ಮುಂದಾದರೆ ಪ್ರಾಣಿಪಕ್ಷಿಗಳ ರಕ್ಷಣೆಯಾಗುತ್ತದೆ, ಭವಿಷ್ಯದ ಪರಿಸರ ಸಂರಕ್ಷಣೆಯ ಪರಿಕಲ್ಪನೆಯ ನಿಟ್ಟಿನಲ್ಲಿ ಮೈಸೂರು ಅರಸರು ಮೃಗಾಲಯ ಕುಕ್ಕರಹಳ್ಳಿ ಕೆರೆ, ಕಾರಂಜಿ ಕೆರೆ, ಮಾದರಿ ಬಡಾವಣೆಗಳ ಉದ್ಯಾನವನಗಳನ್ನು ನಿರ್ಮಿಸಿದ್ದಾರೆ ಅದನ್ನು ಉಳಿಸಿಕೊಂಡು ಹೋಗುವುದು ಮೈಸೂರಿಗರ ಕರ್ತವ್ಯ ಎಂದು ಹೇಳಿದರು.

ಹಿಂದೆ ಮೈಸೂರಿನ ಪ್ರತಿ ಮನೆಗಳ ಮುಂದೆ ಹಸು ಕರು ಪಕ್ಷಿಗಳು ನೀರು ಕುಡಿಯಲು ಕಲ್ಲಿನ ನೀರಿನ ತೊಟ್ಟಿ ಯನ್ನು ಇಡುತ್ತಿದ್ದರು ಪಶು ಪಕ್ಷಿಗಳು ಆನಂದದಿಂದ ನೀರು ಕುಡಿದು ದಾಹ ತಾಣಿಸಿಕೊಳ್ಳುತ್ತಿದ್ದವು ,ಆದರೆ ಈ ದಿನಗಳಲ್ಲಿ ಅವೆಲ್ಲ ಕಣ್ಮರೆ ಆಗಿವೆ ಎಂದು ವಿಷಾದಿಸಿದರು.

ಮಾನವ ತನ್ನ ಕ್ಷೇಮಕ್ಕಾಗಿ ಬಡಾವಣೆಗಳನ್ನು ನಿರ್ಮಿಸಿ ಕೊಂಡು ಕೆರೆ ಕಟ್ಟೆ ಗಳನ್ನು ಮುಚ್ಚಿ ವೃಕ್ಷಗಳನ್ನು ಕತ್ತರಿಸಿ ಅಮಾಯಕ ಮೂಕ ಜೀವಿಗಳಿಗೆ ನೀರು ನೆರಳು ಇಲ್ಲದಂತೆ ಮಾಡಿರುವುದು ದುರಂತ, ಈ ಬೇಸಿಗೆಯ ಧಗೆಯಲ್ಲಿ ನೀರು ಆಹಾರ ನೀಡಿ ಸಕಲ ಜೀವರಾಶಿಗಳನ್ನು ಕಾಪಾಡಲು ಮುಂದಾಗಬೇಕೆಂದು ಪ್ರತಾಪ್ ಸಿಂಹ ಕರೆ ನೀಡಿದರು.

ಈ ಸಂದರ್ಭದಲ್ಲಿ ಕೆಎಂಪಿ ಕೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ನಗರ ಪಾಲಿಕೆ ಮಾಜಿ ಸಧಸ್ಯ ಸುಬ್ಬಯ್ಯ, ಆರ್ ಪರಮೇಶ್ ಗೌಡ, ಕಿರಣ್ ಗೌಡ,ಎಸ್ ಎನ್ ರಾಜೇಶ್, ಚೇತನ್, ನಂಜಪ್ಪ, ಬೈರತಿ ಲಿಂಗರಾಜು, ವಿನೋದ್ ಅರಸ್,ನಾಗೇಶ್ ಯಾದವ್, ಶ್ರೀನಿವಾಸ್, ಶ್ರವಣ್ ಮಾಲಿ, ಮಹಾನ್ ಶ್ರೇಯಸ್, ಅಮಿತ್, ನಾಣಿ ಗೌಡ, ಕೀರ್ತಿ, ಸುಚೇಂದ್ರ ತರರು ಹಾಜರಿದ್ದರು.

ಪ್ರಾಣಿಪಕ್ಷಿ, ಪರಿಸರ ಉಳಿಸುವ ಮನೋಭಾವ ಬೆಳಸಿಕೊಳ್ಳಿ-ಪ್ರತಾಪ್ ಸಿಂಹ Read More