ಕಿಡ್ನಿ ವೈಫಲ್ಯ:ಮೈಸೂರು ಲಯನ್ಸ್ ಅಂಬಾಸಿಡರ್ ಸಂಸ್ಥೆಯಿಂದ ಧನಸಹಾಯ
ಮೈಸೂರು, ಮಾ.8: ಮೈಸೂರು ಲಯನ್ಸ್ ಅಂಬಾಸಿಡರ್ ಸಂಸ್ಥೆ ವತಿಯಿಂದ ದಿವ್ಯ ರವರ ಪತಿಯ ಕಿಡ್ನಿ ವೈಫಲ್ಯದ ಹಿನ್ನೆಲೆಯಲ್ಲಿ ವೈದ್ಯಕೀಯ ವೆಚ್ಚಕ್ಕಾಗಿ ಧನಸಹಾಯ ಮಾಡಲಾಯಿತು.
ಮೈಸೂರು ಲಯನ್ಸ್ ಅಂಬಾಸಿಡರ್ ಸಂಸ್ಥೆಯ ಸೇವಾ ಕಾರ್ಯದ ಅಂಗವಾಗಿ 10000 ರೂ ಗಳನ್ನು ನೀಡಲಾಯಿತು.
ಈ ವೇಳೆ ಲಯನ್ಸ್ ಜಿಲ್ಲಾ ರಾಜ್ಯಪಾಲರಾದ ಸುಬ್ರಮಣ್ಯ, ಸಂಸ್ಥೆಯ ಅಧ್ಯಕ್ಷರಾದ ವಿ.ಶ್ರೀಧರ್, ಸೆಕೆಂಡ್ ಸೆಂಚುರಿ ಅಂಬಾಸಿಡರ್ ಡಾ.ಅರ್.ಡೆ.ಕುಮಾರ್, ಜಿಲ್ಲಾ ಸಂಪುಟ ಕಾರ್ಯದರ್ಶಿ ಲಯನ್ ಸಿ ಡಿ ಕೃಷ್ಣ, ಲಯನ್ ಪಿ ರಮೇಶ್ ,ಲಯನ್ ಪಿ. ಮಲ್ಲಿಕಾರ್ಜುನಪ್ಪ ಮತ್ತು ಲಯನ್ ಎಚ್.ಆರ್ ರವಿಚಂದ್ರ ಉಪಸ್ಥಿತರಿದ್ದರು.
ಕಿಡ್ನಿ ವೈಫಲ್ಯ:ಮೈಸೂರು ಲಯನ್ಸ್ ಅಂಬಾಸಿಡರ್ ಸಂಸ್ಥೆಯಿಂದ ಧನಸಹಾಯ Read More