ರತ್ನ ಖಚಿತ ಸಿಂಹಾಸನವೇರಿ ಖಾಸಗಿ ದರ್ಬಾರ್ ಆರಂಭಿಸಿದ ಯದುವೀರ್
ಮೈಸೂರು: ಇತಿಹಾಸ ಪ್ರಸಿದ್ದ ಮೈಸೂರು ಅರಮನೆಯಲ್ಲಿ ಪಾರಂಪರಿಕ ಯದುವಂಶದ ಖಾಸಗಿ ದರ್ಬಾರ್ ಆರಂಭವಾಗಿದೆ.
ಅಂಬಾವಿಲಾಸ ಅರಮನೆಯಲ್ಲಿ ಖಾಸಗಿ ದರ್ಬಾರ್ ಪ್ರಾರಂಭವಾಯಿತು.
ರತ್ನ ಖಚಿತ ಸಿಂಹಾಸನವೇರಿ ಧಾರ್ಮಿಕ ವಿಧಿ ವಿಧಾನವನ್ನು ರಾಜ ವಂಶಸ್ಥ ಯದುವೀರ ಕೃಷ್ಣ ದತ್ತ ಚಾನರಾಜ ಒಡೆಯರ್
ಪ್ರಾರಂಭಿಸಿದರು.
10 ಗಂಟೆಗೆ ಯದುವೀರ್ ಹಾಗೂ ತ್ರಿಷಿಕಾ ಕುಮಾರಿ ಒಡೆಯರ್ ಗೆ ವಾಣಿವಿಲಾಸ ದೇವರ ಮನೆಯಲ್ಲಿ ಕಂಕಣ ಧಾರಣೆ ಮಾಡಲಾಯಿತು.
ಬೆಳಗ್ಗೆ 11. 35ಕ್ಕೆ ಅರಮನೆಯ ಆವರಣದ ಕೋಡಿ ಸೋಮೇಶ್ವರ ದೇವಾಲಯದ ಬಳಿ ಪಟ್ಟದ ಆನೆ ಹಾಗೂ ಕುದುರೆ, ಹಸು ಗಳಿಗೆ ಪೂಜೆ ಸಲ್ಲಿಸಲಾಯಿತು.
ಈ ವೇಳೆ ಕಳಸ ಹೊತ್ತು ಮಹಿಳೆಯರು ಆಗಮಿಸಿದರು. ಮಧ್ಯಾಹ್ನ 12.42 ರಿಂದ 12.58 ರ ಒಳಗೆ ಸಲ್ಲುವ ಶುಭ ಲಗ್ನದಲ್ಲಿ ರತ್ನ ಖಚಿತ ಸಿಂಹಾಸನವನ್ನೇರಿ ಯದುವೀರ್ ಒಡೆಯರ್ ದರ್ಬಾರ್ ನಡೆಸಿದರು.
ರತ್ನ ಖಚಿತ ಸಿಂಹಾಸನವೇರಿ ಖಾಸಗಿ ದರ್ಬಾರ್ ಆರಂಭಿಸಿದ ಯದುವೀರ್ Read More