ನಜರ್ ಬಾದ್ ನಟರಾಜ್ ಅವರಿಗೆ ಡಿ. ದೇವರಾಜ ಅರಸು ಸೇವಾರತ್ನ ಪ್ರಶಸ್ತಿ

ಮೈಸೂರು: ಕರ್ನಾಟಕ ಸೇನಾ ಪಡೆ ವತಿಯಿಂದ ಕೊಡಮಾಡುವ ಡಿ. ದೇವರಾಜ ಅರಸು ಸೇವಾರತ್ನ ಪ್ರಶಸ್ತಿಯನ್ನು
ನಜರ್ ಬಾದ್ ನಟರಾಜ್ ಅವರಿಗೆ ನೀಡಿ ಗೌರವಿಸಲಾಯಿತು.

ಕರ್ನಾಟಕ ಸೇನಾ ಪಡೆ ಪ್ರತಿ ವರ್ಷ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರನ್ನು ಗುರುತಿಸಿ ಡಿ. ದೇವರಾಜ ಅರಸು ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸುತ್ತಾ ಬಂದಿದೆ.

ಈ ವರ್ಷ ಸಮಾಜ ಸೇವೆ ಮತ್ತು 28 ವರ್ಷಗಳ ರಾಜಕೀಯ ಕ್ಷೇತ್ರದ ಸೇವೆಯನ್ನು ಗುರುತಿಸಿ ನಜರ್ ಬಾದ್ ನಟರಾಜ್ ಅವರಿಗೆ
ಡಿ.ದೇವರಾಜ ಅರಸು ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶ್ರೀ ಅವಧೂತ ಅರ್ಜುನ ಗುರೂಜಿ ಅವರು ನಜರ್ ಬಾದ್ ನಟರಾಜ್ ಅವರು ಪ್ರಶಸ್ತಿ ನೀಡಿ ಗೌರವಿಸಿದರು.

ಈ ವೇಳೆ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಕರ್ನಾಟಕ ಸೇನಾ ಪಡೆ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಆಲನಹಳ್ಳಿ ಚೇತನ್, ಹನುಮಂತಯ್ಯ, ಪ್ರಭಾಕರ್ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.

ನಜರ್ ಬಾದ್ ನಟರಾಜ್ ಅವರಿಗೆ ಡಿ. ದೇವರಾಜ ಅರಸು ಸೇವಾರತ್ನ ಪ್ರಶಸ್ತಿ Read More

ಮಹನೀಯರ‌ ನಾಮಫಲಕಗಳ ತೆರವು ಖಂಡಿಸಿ ಕರ್ನಾಟಕ ಸೇನಾ ಪಡೆ ಪ್ರತಿಭಟನೆ

ಮೈಸೂರು: ದಸರಾ ವಸ್ತುಪ್ರದರ್ಶನದ ಆವರಣದಲ್ಲಿ, ಕನ್ನಡ ನಾಡಿನ ನುಡಿ, ಪರಂಪರೆಗೆ ಮಹಾನ್ ಕೊಡುಗೆಗಳನ್ನು ನೀಡಿದ ಮಹನೀಯರನ್ನು ಸ್ಮರಿಸುವ ನಾಮಫಲಕಗಳನ್ನು ಕಿತ್ತು ಹಾಕಿರುವುದನ್ನು ಖಂಡಿಸಿ ಕರ್ನಾಟಕ ಸೇನಾ ಪಡೆ ಸದಸ್ಯರು ಪ್ರತಿಭಟನೆ ನಡೆಸಿದರು.

ನಾಡಿನ ಕಲೆ, ಸಂಸ್ಕೃತಿಯ ವೈಭವವನ್ನು ಸಾರುವ ಜತೆಗೆ ಇದನ್ನು ಆಸ್ವಾದಿಸಲು ಬರುವವರಿಗೆ ಕನ್ನಡ ನಾಡಿನ ಪರಂಪರೆಗೆ ಮಹಾನ್ ಕೊಡುಗೆಗಳನ್ನು ನೀಡಿದ ಮಹನೀಯರನ್ನು ಸ್ಮರಿಸುವ ನಾಮಫಲಕಗಳನ್ನು ಅಂದರೆ ಪುರಂದರದಾಸರು, ಕನಕದಾಸರು, ದರಾ ಬೇಂದ್ರೆ, ಕುವೆಂಪು, ಡಾ. ರಾಜಕುಮಾರ್ ವಿಕೃ ಗೋಕಾಕ್, ಟಿಎನ್ ಬಾಲಕೃಷ್ಣ, ಸಂಗೀತ ದಿಗ್ಗಜರುಗಳಾದ ವಾಸುದೇವಾಚಾರ್ಯ ಪಿಟೀಲು ಚೌಡಯ್ಯ ಇವರ ಹೆಸರುಗಳನ್ನು ಇಲ್ಲಿನ ರಸ್ತೆಗಳಿಗೆ ನಾಮಪಲಕಗಳಾಗಿ ಅಳವಡಿಸಲಾಗಿದೆ.

ಆದರೆ ಸರ್ಕಾರ ಈಗ ಏಕಾಏಕಿ ನಾಡಹಬ್ಬ ದಸರಾ ದಿನವೇ ನಮ್ಮ ಸಂಸ್ಕೃತಿ ಪರಂಪರೆ ಸಾಹಿತ್ಯಕ್ಕೆ ಮಹಾನ್ ಕೊಡುಗೆ ನೀಡಿರುವ ಮಹನೀಯರು ಗಳನ್ನು ಸ್ಮರಿಸುವ ನಾಮಫಲಕಗಳನ್ನು ಕಿತ್ತೆಸೆದು ವಿಕೃತಿ ಮೆರೆಯಲಾಗಿದೆ ಎಂದು ಪ್ರತಿಭಟನಾ ನಿರತರು ಕಿಡಿಕಾರಿದರು.

ಕೂಡಲೇ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರ ಕಿತ್ತು ಹಾಕಿರುವ ನಾಮಪಲಕಗಳನ್ನು ಅಳವಡಿಸಿ ನಾಡಿನ ಜನತೆಯ ಕ್ಷಮೆಯಾಚಿಸಬೇಕು ಎಂದು ಕರ್ನಾಟಕ ಸೇನಾ ಪಡೆ ವತಿಯಿಂದ ವಸ್ತು ಪ್ರದರ್ಶನದ ಅಧ್ಯಕ್ಷರಿಗೆ ಮನವಿ ನೀಡಲಾಯಿತು.

ಈ ಮನವಿಗೆ ಸ್ಪಂದಿಸಿದ ವಸ್ತು ಪ್ರದರ್ಶನದ ಅಧ್ಯಕ್ಷರು, ಸಂಜೆಯೊಳಗೆ ಹೆರಿಟೇಜ್ ಮಾದರಿಯಲ್ಲಿ ಉನ್ನತ ದರ್ಜೆಯ ನಾಮಫಲಕಗಳನ್ನು ಅಳವಡಿಸುವುದಾಗಿ ಭರವಸೆ ನೀಡಿದರು.

ಕರ್ನಾಟಕ ಸೇನಾ ಪಡೆಯ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಕೃಷ್ಣಪ್ಪ, ಸುರೇಶ್ ಗೋಲ್ಡ್, ಪ್ರಭುಶಂಕರ್, ರಘು ಅರಸ್, ರಾಧಾಕೃಷ್ಣ ಹನುಮಂತಯ್ಯ ಅಕ್ಬರ್, ವಿಜಯೇಂದ್ರ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಮಹನೀಯರ‌ ನಾಮಫಲಕಗಳ ತೆರವು ಖಂಡಿಸಿ ಕರ್ನಾಟಕ ಸೇನಾ ಪಡೆ ಪ್ರತಿಭಟನೆ Read More