ಗಾಂಧೀಜಿ,ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜೀವನವೇ ಒಂದು ಸಂದೇಶ:ತೇಜೇಶ್

ಮೈಸೂರು: ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಶತಮಾನದ ಗಾಂಧೀಜಿ ಹಾಗೂ ದೇಶ ಕಂಡ ಸರಳ ಶಿಸ್ತಿನ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜೀವನವೇ ಒಂದು ಸಂದೇಶ ಎಂದು
ಕರ್ನಾಟಕ ಸೇನಾ ಪಡೆ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಹೇಳಿದರು.

ಕರ್ನಾಟಕ ಸೇನಾ ಪಡೆ ವತಿಯಿಂದ ಹಮ್ಮಿಕೊಂಡಿದ್ದ ಮಹಾತ್ಮ‌ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆ ವೇಳೆ ಅವರು ಮಾತನಾಡಿದರು.

ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟಗಳಲ್ಲಿ ಹಲವಾರು ಮಹನೀಯರು ತಮ್ಮ ತಮ್ಮ ಜೀವಗಳನ್ನು ಮುಡುಪಾಗಿಟ್ಟರು ಮಹಾತ್ಮ ಗಾಂಧೀಜಿ ಅವರು ತಮ್ಮ ಅಹಿಂಸ ಚಳವಳಿ ಯಿಂದ ಇಡೀ ವಿಶ್ವವನ್ನೇ ಗಮನ ಸೆಳೆದು ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಮಹತ್ತರ ಪಾತ್ರ ವಹಿಸಿದರು ಎಂದು ತಿಳಿಸಿದರು.

ದೇಶ ಕಂಡ ಅತೀ ಸರಳ ಶಿಸ್ತಿನ ಸಿಪಾಯಿ ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರೀಜಿ. ಅವರಿಬ್ಬರ ಆದರ್ಶ ಮತ್ತು ತತ್ವ ಗಳನ್ನು ದೇಶದ ಜನಪ್ರತಿನಿಧಿಗಳೆಲ್ಲ ಅಳವಡಿಸಿ ಕೊಳ್ಳಬೇಕು ಎಂದು ಮನವಿ ಮಾಡಿದರು.

ಇದೇ ವೇಳೆ ಸಾರ್ವಜನಿಕರಿಗೆ ಕರ್ನಾಟಕ ಸೇನಾ ಪಡೆ ವತಿಯಿಂದ ಸಿಹಿ ವಿತರಣೆ ಮಾಡಲಾಯಿತು.

ಈ ವೇಳೆ ಪ್ರಭುಶಂಕರ್, ಕೃಷ್ಣಯ್ಯ, ಹನುಮಂತಯ್ಯ, ಲಕ್ಷ್ಮೀದೇವಿ, ಸುಶೀಲಾ ನಂಜಪ್ಪ, ಶಿವಲಿಂಗಯ್ಯ, ಡಾ. ಮೊಗಣ್ಣಾಚಾರ್, ಗಣೇಶ್ ಪ್ರಸಾದ್, ನೇಹಾ, ಲಕ್ಷ್ಮೀ, ಭಾಗ್ಯಮ್ಮ,ಇಂದಿರಾ, ಸುಬ್ಬೇಗೌಡ, ಪ್ರಭಾಕರ್, ವೆಂಕಟೇಶ್, ಕೃಷ್ಣಮೂರ್ತಿ, ಸ್ವಾಮಿ, ಕುಮಾರ್ ಗೌಡ, ಶ್ರೀನಿವಾಸ ರಾಜಕುಮಾರ್ , ಎಳನೀರು ರಾಮಣ್ಣ, ದರ್ಶನ್ ಮತ್ತಿತರರು ಹಾಜರಿದ್ದರು.

ಗಾಂಧೀಜಿ,ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜೀವನವೇ ಒಂದು ಸಂದೇಶ:ತೇಜೇಶ್ Read More

ಧ್ವನಿ ಇಲ್ಲದವರಿಗೆ ಧ್ವನಿ ಕೊಟ್ಟವರು ಡಿ. ದೇವರಾಜ ಅರಸರು-ಡಾ. ಡಿ.ತಿಮ್ಮಯ್ಯ

ಮೈಸೂರು: ಧ್ವನಿ ಇಲ್ಲದವರಿಗೆ ಧ್ವನಿಯನ್ನು ಕೊಟ್ಟವರು ಮಾಜಿ ಮುಖ್ಯ ಮಂತ್ರಿ ಡಿ. ದೇವರಾಜ ಅರಸು ಅವರು ಎಂದು ವಿಧಾನ ಪರಿಷತ್ ಸದಸ್ಯ ಡಾ. ಡಿ.ತಿಮ್ಮಯ್ಯ ಹೇಳಿದರು.

ನಗರದ ರೋಟರಿ ಶಾಲಾಸಭಾಂಗಣದಲ್ಲಿ
ಕರ್ನಾಟಕ ಸೇನಾ ಪಡೆ ವತಿಯಿಂದ ಕರ್ನಾಟಕ ಸುವರ್ಣ ಸಂಭ್ರಮದ ಅಂಗವಾಗಿ ಹಮ್ಮಿಕೊಳ್ಳ ಲಾಗಿದ್ದ ಹಿಂದುಳಿದ ವರ್ಗಗಳ ಧೀಮಂತ ನಾಯಕ, ನಾಡು ಕಂಡ ಶ್ರೇಷ್ಠ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಡಿ ದೇವರಾಜ ಅರಸರು ಪ್ರಾರ್ತ ಸ್ಮರಣೀಯರು,ನಾಡಿನ ಪ್ರತಿಯೊಬ್ಬರು ಅವರನ್ನು ನೆನೆಯಲೇಬೇಕು, ‌ಅವರ ಆಡಳಿತ ಕಾಲದಲ್ಲಿ ಹಿಂದುಳಿದವರಿಗೆ, ದೀನ ದಲಿತರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಪ್ರತಿಯೊಂದು ಸೌಲಭ್ಯಗಳು ಪ್ರತಿಯೊಬ್ಬರಿಗೂ ತಲುಪುವಂತೆ ಮಾಡಿದವರು ಎಂದು ಸ್ಮರಿಸಿದರು.

ಹಿಂದೆ ಇದ್ದ ಮಲ ಹೊರುವ ಪದ್ಧತಿಯನ್ನು ನಿರ್ಮೂಲನೆ ಗೊಳಿಸಿದರು, ಉಳುವವನಿಗೆ ಭೂಮಿ ಎಂದು ಹಲವಾರು ನಿರ್ಗತಿಕರಿಗೆ ಭೂಮಿಯನ್ನು ಕೊಡಿಸಿಕೊಟ್ಟ ಮಹಾ ನಾಯಕ, ಧಣಿ ಇವರು. ಇಂತಹ ಮಹನೀಯರ ಹೆಸರಿನಲ್ಲಿ ಕರ್ನಾಟಕ ಸೇನಾ ಪಡೆ ಸೇವಾ ರತ್ನ ಪ್ರಶಸ್ತಿ ನೀಡುತ್ತಿರುವುದು ಸೂಕ್ತವಾಗಿದೆ ಎಂದು ಶ್ಲಾಘನೀಯ ಡಿ.ತಿಮ್ಮಯ್ಯ ಮೆಚ್ಚುಗೆ‌ ವ್ಯಕ್ತಪಡಿಸಿದರು.

ವಿವಿಧ ಕ್ಷೇತ್ರಗಳ ಸಾಧಕರಿಗೆ ಮೈಸೂರು ಮಹಾನಗರ ಪಾಲಿಕೆಯ ಉಪ ಆಯುಕ್ತರಾದ (ಕಂದಾಯ) ಜಿ.ಎಸ್. ಸೋಮಶೇಖರ್ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ- ಡಾ. ಫ್ರೊ. ಎನ್ ಲಕ್ಷ್ಮೀ, ಡೀನ್, ಕರಾಮುವಿನಿ, ಸಮಾಜಸೇವೆ ಕ್ಷೇತ್ರದಲ್ಲಿ- ಎಸ್ ಬಸವೇಗೌಡ, ಮುಖ್ಯಸ್ಥರು, ಎಸ್ ಎಂ ಪಿ ಕನ್ಸ್ಟ್ರಕ್ಷನ್, ಪೋಲಿಸ್ ಸೇವಾ ಕ್ಷೇತ್ರದಲ್ಲಿ ಎನ್ ಸಿ. ನಾಗೇಗೌಡ, ಆರಕ್ಷಕ ನಿರೀಕ್ಷಕರು, ಕೆ ಆರ್ ಪೋಲಿಸ್ ಠಾಣೆ, ಉನ್ನತ ಶಿಕ್ಷಣ ಕ್ಷೇತ್ರದಲ್ಲಿ- ಬಿಳಿಗಿರಿರಂಗ, ಮುಖ್ಯಸ್ಥರು, ಸ್ನಾತಕೋತ್ತರ ಸಸ್ಯ ಶಾಸ್ತ್ರ ವಿಭಾಗ, ಜೆಎಸ್ಎಸ್, ನಿರ್ವಹಣಾ ಕ್ಷೇತ್ರದಲ್ಲಿ – ಡಾ. ಚಿರಂತ್ ಕೆ ಎಂ, ಸಹಾಯಕ ಪ್ರಾಧ್ಯಾಪಕರು ವಿಟಿಯು ಇವರುಗಳಿಗೆ ಶ್ರೀ ಡಿ. ದೇವರಾಜ ಅರಸು ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಿ, ಸನ್ಮಾನಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಡಾದ ಅಧ್ಯಕ್ಷ ಸಿ ಮರಿಸ್ವಾಮಿ ರವರು ವಹಿಸಿದ್ದರು. ಸ್ವಾಗತ ಹಾಗೂ ಪ್ರಾಸ್ತಾವಿಕ ಭಾಷಣವನ್ನು ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ನೆರೆವೇರಿಸಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಸಬಾದ ವಲಯ ಉಪಾಧ್ಯಕ್ಷ ಡಾ. ಬಿ ಆರ್ ನಟರಾಜ್ ಜೋಯ್ಸ್, ಕರ್ನಾಟಕ ಸೇನಾ ಪಡೆಯ ರಾಜ್ಯಾಧ್ಯಕ್ಷ ಚಾ. ರಂ. ಶ್ರೀನಿವಾಸ ಗೌಡ, ಭೂ ದಾಖಲೆಗಳ ಸಹಾಯಕ ನಿರ್ದೇಶಕ ಎಚ್ ಮಂಜುನಾಥ್, ತಾಂತ್ರಿಕ ಸಹಾಯಕ ಎಸ್ .ಪಿ ಭಾಸ್ಕರ್, ಕರ್ನಾಟಕ ಸೇನಾ ಪಡೆಯ ಪ್ರಭುಶಂಕರ್, ಕೃಷ್ಣಪ್ಪ, ಪ್ರಜೀಶ್ ಪಿ, ಸುರೇಶ್ ಗೋಲ್ಡ್, ಪ್ರಭಾಕರ್, ನೇಹ, ಮಂಜುಳಾ, ಶಿವಲಿಂಗಯ್ಯ, ಸುಶೀಲಾ ನಂಜಪ್ಪ, ಲಕ್ಷ್ಮಿ, ಭಾಗ್ಯಮ್ಮ, ಸಿಂದುವಳ್ಳಿ ಶಿವಕುಮಾರ್, ವರಕೂಡು ಕೃಷ್ಣೇಗೌಡ, ವಿಜಯೇಂದ್ರ, ಗೊರೂರು ಮಲ್ಲೇಶ್, ನಾಗರಾಜು, ಹನುಮಂತಯ್ಯ, ಗೀತಾ ಗೌಡ, ಕುಮಾರ್ , ರಘು ಅರಸ್, ಅಕ್ಬರ್ , ನಂದಕುಮಾರ್ ವಿಷ್ಣು ಮತ್ತಿತರರು ಉಪಸ್ಥಿತರಿದ್ದರು.

ಧ್ವನಿ ಇಲ್ಲದವರಿಗೆ ಧ್ವನಿ ಕೊಟ್ಟವರು ಡಿ. ದೇವರಾಜ ಅರಸರು-ಡಾ. ಡಿ.ತಿಮ್ಮಯ್ಯ Read More

ಚಾಮುಂಡಿ ಬೆಟ್ಟದ ಅಭಿವೃದ್ಧಿಗೆ ಪ್ರಾಧಿಕಾರ ರಚನೆ ವಿರೋಧಿಸಿ ಪ್ರತಿಭಟನೆ

ಮೈಸೂರು: ಕರ್ನಾಟಕ ಸೇನಾ ಪಡೆ ವತಿಯಿಂದ ಚಾಮುಂಡಿ ಬೆಟ್ಟದ ಆವ್ಯವಸ್ಥೆ ಹಾಗೂ ಪ್ರಾಧಿಕಾರ ವಿರೋದಿಸಿ ಮೈಸೂರಿನ ಹಳೆ ಡಿಸಿ ಆಫೀಸ್ ಮುಂದೆ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ರಾಜ್ಯ ಸರ್ಕಾರ ಶ್ರೀ ಚಾಮುಂಡೇಶ್ವರಿ ಅಮ್ಮನವರ ದರ್ಶನಕ್ಕೆ, ಸ್ಮಾರ್ಟ್ ಕಾರ್ಡ್ ಜಾರಿಗೊಳಿಸಲು ಮುಂದಾಗಿರುವ ಕ್ರಮವನ್ನು ಖಂಡಿಸಲಾಯಿತು.

ಚಾಮುಂಡಿ ಬೆಟ್ಟದ ಅಭಿವೃದ್ಧಿಗಾಗಿ ಹೊಸದಾಗಿ ಪ್ರಾಧಿಕಾರ ರಚಿಸುತ್ತಿರುವ ಕ್ರಮವನ್ನು ವಿರೋಧಿಸಿ ಪ್ರತಿಭಟನಾನಿರತರು ಘೋಷಣೆ ಕೂಗಿದರು.

ಮೈಸೂರು ಅರಸರ ಸಂಸ್ಥಾನದ ಆದಿದೇವತೆ, ನಾಡದೇವತೆ, ತಾಯಿ ಚಾಮುಂಡೇಶ್ವರಿ ದೇವಿ ಬೆಟ್ಟವನ್ನು ಶ್ರದ್ಧಾಭಕ್ತಿಯಿಂದ ಅಭಿವೃದ್ಧಿಪಡಿಸಿದ್ದು, ದೇವಿಯ ಮಹಾನ್ ಆರಾಧಕರಾದ ಮುಮ್ಮಡಿ ಕೃಷ್ಣರಾಜ ಒಡೆಯರ್ ರವರು.

ಬೆಟ್ಟದಲ್ಲಿ, ದೇವಸ್ಥಾನಕ್ಕೆ ಪೂಜೆ ಮಾಡುವ ಅರ್ಚಕರಿಂದ ಹಿಡಿದು ಎಲಾ ವರ್ಗದವರಿಗೂ ಆಗಿನ ಕಾಲದಲ್ಲಿಯೇ ಅಲ್ಲಿ ಮನೆಗಳನ್ನು ನಿರ್ಮಿಸಿ ಕೊಟ್ಟದ್ದಾರೆ. ಜೊತೆಗೆ ಚಾಮುಂಡಿ ಬೆಟ್ಟ ಈಗ ಒಂದು ಗ್ರಾಮವಾಗಿದೆ, ಗ್ರಾಮ ಪಂಚಾಯಿತಿಯೂ ಇದೆ.

ಈಗ ಪ್ರಾಧಿಕಾರ ರಚನೆಯಾದರೆ ಸುಮಾರು 300 ಮೀಟರ್ ಸುತ್ತಳತೆ (ಅಂದರೆ 1000 ಅಡಿ ಸುತ್ತಮುತ್ತ) ಅಭಿವೃದ್ಧಿ ಮಾಡುತ್ತೇವೆ ಎನ್ನುತ್ತಾರೆ. ಆಗ ಇಡೀ ಗ್ರಾಮವೇ ಇಲ್ಲದಂತಾಗುತ್ತದೆ ಎಂದು ಸೇನಾಪಡೆ ಮುಖಂಡರು ಆತಂಕ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಸ್ಮಾರ್ಟ್ ಕಾರ್ಡ್ ಹೆಸರಿನಲ್ಲಿ 10,000 25000 ಹಾಗೂ ರೂ.1,00,000 ನಿಗದಿಪಡಿಸಲು ಉದ್ದೇಶಿಸಿರುವುದು ಅತ್ಯಂತ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರು ನಗರದಲ್ಲಿ ಚಾಮುಂಡಿ ಬೆಟ್ಟ ಇರುವುದರಿಂದ ಪ್ರಾಧಿಕಾರದ ಅವಶ್ಯಕತೆಯೇ ಇಲ್ಲ, ಈಗಾಗಲೇ ಚಾಮುಂಡಿ ಬೆಟ್ಟ ಮುಜರಾಯಿ ಇಲಾಖೆ, ಧಾರ್ಮಿಕ ದತ್ತಿ ಗೆ ಒಳಪಟ್ಟು ಭಕ್ತಾದಿಗಳಿಂದ ಕೋಟ್ಯಂತರ ಆದಾಯ ಬರುತ್ತಿದೆ.

ಚಾಮುಂಡಿ ಬೆಟ್ಟದ ಅಭಿವೃದ್ಧಿಗೆ ಈ ಹಣವನ್ನೇ ಸದ್ಬಳಕೆ ಮಾಡಿಕೊಳ್ಳಬೇಕೆಂದು ಹಾಗೂ ಸ್ಮಾರ್ಟ್ ಕಾರ್ಡ್ ಪ್ರಸ್ತಾವನೆಯನ್ನು ಕೂಡಲೇ ಕೈಬಿಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು.

ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ವಹಿಸಿದ್ದರು.

ಪ್ರಭುಶಂಕರ್ ಎಂ ಬಿ, ಪ್ರಜೀಶ್, ಕೃಷ್ಣಪ್ಪ, ಸುರೇಶ್ ಗೋಲ್ಡ್, ಶಿವಲಿಂಗಯ್ಯ, ನಾರಾಯಣ ಗೌಡ, ಕುಮಾರ್ ಗೌಡ, ಸಿಂದುವಳ್ಳಿ, ಶಿವಕುಮಾರ್, ವರಕೂಡು ಕೃಷ್ಣಗೌಡ, ಮಂಜುಳ, ವಿಜಯೇಂದ್ರ, ಭಾಗ್ಯಮ್ಮ, ರಘು ಅರಸ್, ಎಳನೀರು ರಾಮಣ್ಯ, ಪ್ರದೀಪ, ಗುರು ಮಲ್ಲಪ್ಪ, ಶಂಕರ್ ಗುರು, ಚಂದ್ರಶೇಖರ್, ಶಾಂತಕುಮಾರ್, ರಾಧಾಕೃಷ್ಣ ಅಕ್ಟರ್ ತ್ಯಾಗರಾಜ್, ಮಹಾದೇವ,ಸ್ವಾಮಿ ಗೌಡ, ಕೃಷ್ಣಮೂರ್ತಿ, ವಿಷ್ಣು ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಚಾಮುಂಡಿ ಬೆಟ್ಟದ ಅಭಿವೃದ್ಧಿಗೆ ಪ್ರಾಧಿಕಾರ ರಚನೆ ವಿರೋಧಿಸಿ ಪ್ರತಿಭಟನೆ Read More