ಮುನೇಶ್ವರ ಕಾವಲ್ ಮೈದಾನದಲ್ಲಿ ವಿ.ಐ.ಪಿ ರಸ್ತೆ:ಚೆಲುವರಾಜು ವಿರೋಧ

ಹುಣಸೂರು: ಹುಣಸೂರು ನಗರಾದ್ಯಂತ ಗುಂಡಿ ಬಿದ್ದಿರುವ ರಸ್ತೆಗಳನ್ನು ಸರಿಪಡಿಸದೇ ಮುನೇಶ್ವರ ಕಾವಲ್ ಮೈದಾನದಲ್ಲಿ ವಿ.ಐ.ಪಿ ರಸ್ತೆ ಮಾಡ ಹೊರಟಿರುವುದು ಸರಿಯಲ್ಲ, ಇದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕೆಂದು ಕರ್ನಾಟಕ ಪ್ರಜಾ ಪಾರ್ಟಿ ರೈತಪರ್ವ ತಾ.ಅಧ್ಯಕ್ಷ ಚೆಲುವರಾಜು ಮನವಿ ಮಾಡಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಅವರು ಹುಣಸೂರು‌ ನಗರಸಭಾ ಆಯುಕ್ತರಿಗೆ ಚೆಲುವರಾಜು ಪತ್ರ ಬರೆದಿದ್ದಾರೆ.
ಹುಣಸೂರು ನಗರದ ಮುನೇಶ್ವರ ಕಾವಲ್ ಮೈದಾನದಲ್ಲಿ ವಿ.ಐ.ಪಿ. ರಸ್ತೆ ನಿರ್ಮಾಣ ಮಾಡಲು ಟೆಂಡರ್ ಆಗಿರುವುದು ಸರಿಯಷ್ಟೆ ಆದರೆ ನಗರಸಭಾ ಮೈದಾನದಲ್ಲಿ ವಿ.ಐ.ಪಿ. ರಸ್ತೆ ಮಾಡುವಂತಿಲ್ಲ, ಸಾರ್ವಜನಿಕರಿಗೆ ಹಾಗೂ ಶಾಲಾ ಕಾಲೇಜುಗಳ ಮಕ್ಕಳಿಗೆ ಕ್ರೀಡಾ ಮತ್ತಿತರ ಸರ್ಕಾರಿ ಕಾರ್ಯಕ್ರಮಗಳನ್ನು ನಡೆಸಲು ಮೀಸಲಾಗಿರುವ ಈ ಆಟದ ಮೈದಾನದಲ್ಲಿ ವಿ.ಐ.ಪಿ ರಸ್ತೆ ನಿರ್ಮಾಣ ಮಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಅವರು ಪ್ರಶ್ನಿಸಿದ್ದಾರೆ.

ಕಾಮಗಾರಿಗಳನ್ನು ಕೈಗೆತ್ತಿಕೊಂಡು ಬಿಲ್ ಮಾಡಿಸುವುದು ನಗರಸಭಾ ಅಧಿಕಾರಿಗಳ ದುರುದ್ದೇಶವಾಗಿದೆ, ನಗರಾದ್ಯಂತ ಗುಂಡಿ ಬಿದ್ದಿರುವ ರಸ್ತೆಗಳನ್ನು ಮುಚ್ಚಿಸದೇ ಇರುವುದರಿಂದ ಹುಣಸೂರಿನ ಜನತೆ ಪ್ರಾಣ ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕಾದ ಸ್ಥಿತಿ ಇದೆ.

ಇದನ್ನು ಸರಿಪಡಿಸಲು ಮೊದಲ ಆದ್ಯತೆ ನೀಡಬೇಕಾದ ನಗರಸಭೆ ಅಧಿಕಾರಿಗಳು ಅನಾವಶ್ಯಕವಾಗಿ ಮುನೇಶ್ವರ ಕಾವಲ್ ಆಟದ ಮೈದಾನದಲ್ಲಿ ವಿ.ಐ.ಪಿ. ರಸ್ತೆ ಮಾಡಲು ಹೊರಟಿರುವುದು ಸರಿಯಲ್ಲ.
ನಗರಸಭಾ ಮೈದಾನವನ್ನು ಆಟದ ಮೈದಾನವಾಗಿ ಅಭಿವೃದ್ಧಿಪಡಿಸಬೇಕಾದ ಅಧಿಕಾರಿಗಳು ವಿ.ಐ.ಪಿ. ರಸ್ತೆ ಮಾಡಲು ಹೊರಟಿರುವುದು ಹಾಸ್ಯಾಸ್ಪದವಾಗಿದೆ.
ಆದ್ದರಿಂದ ಕೂಡಲೇ ವಿ.ಐ.ಪಿ. ರಸ್ತೆಗೆ ಕರೆಯಲಾಗಿದ್ದ ಟೆಂಡರ್ ಪ್ರಕ್ರಿಯೆ ಆದೇಶದ ಕಾಪಿ, ಕಾಮಗಾರಿಗಾಗಿ ಮಾಡಲಾಗಿರುವ ಅಗ್ರಿಮೆಂಟ್ ಪ್ರತಿ ಹಾಗೂ ಕಾಮಗಾರಿಯ ಅಂದಾಜು ಪಟ್ಟಿಯ ಸಂಪೂರ್ಣ ಮಾಹಿತಿ ದಾಖಲೆಗಳನ್ನು ನೀಡಬೇಕೆಂದು ಚೆಲುವರಾಜು ಕೋರಿದ್ದಾರೆ.

ಮಾಹಿತಿಗಳನ್ನು ಕೊಡಲು ತಪ್ಪಿದರೆ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಯಾವುದೇ ಕಾರಣಕ್ಕೂ ಟೆಂಡರ್ ಪಡೆದಿರುವ ಗುತ್ತಿಗೆದಾರನಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಯಾವುದೇ ಬಿಲ್ ಪಾಸ್ ಮಾಡಬಾರದು ಎಂದು ಪರಿಸರ ಇಂಜಿನಿಯರ್ ಗೂ ಅವರು ಮನವಿ ಮಾಡಿದ್ದಾರೆ.

ಈ ಕಾಮಗಾರಿಯಲ್ಲಿ ಜಲ್ಲಿ ಹಾಕದೆ ಕಾಂಕ್ರಿಟ್ ಹಾಕುತ್ತಿದ್ದು ಕಾಮಗಾರಿಯು ಸಂಪೂರ್ಣ ಕಳಪೆಯಿಂದ ಕೂಡಿದೆ. ಇಡೀ ಹುಣಸೂರಿನ ಜನ ವಿರೋಧಿಸಿದ್ದಾರೆ, ಇದನ್ನು ವಿಚಾರಿಸಲು ಹೋದ ನಮ್ಮ ಮೇಲೆಯೇ ಗುತ್ತಿಗೆದಾರ ಬೆದರಿಕೆ ಹಾಕಿ ತಳ್ಳಾಡಿದ್ದಾರೆ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗುವುದು ಎಂದು
ಚೆಲುವರಾಜು ತಿಳಿಸಿದ್ದಾರೆ

ಮುನೇಶ್ವರ ಕಾವಲ್ ಮೈದಾನದಲ್ಲಿ ವಿ.ಐ.ಪಿ ರಸ್ತೆ:ಚೆಲುವರಾಜು ವಿರೋಧ Read More

ಕೊಳಚೆ ನೀರು ರಸ್ತೆಗೆ ಹರಿಯ ಬಿಡುತ್ತಿರುವ ಹೋಟೆಲ್ ಲೈಸನ್ಸ್ ರದ್ದುಪಡಿಸಲು ಆಗ್ರಹ

ಹುಣಸೂರು: ಹೋಟೇಲ್‌ನಿಂದ ತ್ಯಾಜ್ಯ ನೀರು ರಸ್ತೆಗೆ ಬಿಟ್ಟಿರುವ ಹೋಟೇಲ್ ಮಾಲೀಕನ ವಿರುದ್ಧ ಕ್ರಮ ಕೈಗೊಂಡು ಲೈಸೆನ್ಸ್ ರದ್ದುಪಡಿಸಬೇಕೆಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾ.ಅಧ್ಯಕ್ಷ ಚೆಲುವರಾಜು ಆಗ್ರಹಿಸಿದ್ದಾರೆ.

ಈ ಕುರಿತು ನಗರಸಭಾ ಆಯುಕ್ತರಿಗೆ ಅವರು ಪತ್ರ ಬರೆದಿದ್ದಾರೆ.

ಹುಣಸೂರು ನಗರದ ಬೈಪಾಸ್ ರಸ್ತೆಯಲ್ಲಿರುವ ಡಿ. ದೇವರಾಜ ಅರಸು ಅವರ ಪ್ರತಿಮೆ ಹಿಂಭಾಗದಲ್ಲಿ ಚೆಟಾಯಿಸ್ ಫ್ಯಾಮಿಲಿ ರೆಸ್ಟೋರೆಂಟ್ ಎಂಬ ಹೋಟೆಲನ್ನು ಇತ್ತೀಚೆಗೆ‌ ತೆರೆಯಲಾಗಿದೆ.ಅದು ಸರಿ. ಆದರೆ ಈ ಹೋಟೇಲಿನಿಂದ ಬರುವ ತ್ಯಾಜ್ಯ ನೀರು ಚರಂಡಿಗೆ ಹೋಗದೆ ರಸ್ತೆಯ ಮೇಲೆಯೇ ಹರಿಯುತ್ತಿದೆ ಎಂದು ಚೆಲುವರಾಜು ಆರೋಪಿಸಿದ್ದಾರೆ‌.

ಇದರಿಂದಾಗಿ ರಸ್ತೆಯೆಲ್ಲಾ ಗಬ್ಬು ನಾರುತ್ತಿದೆ. ಬೆಳಗಿನ ಸಮಯದಲ್ಲಿ ವಾಯುವಿಹಾರಕ್ಕೆ ಹೋಗುವ ಜನರಿಗಂತೂ ಈ ಗಬ್ಬು ವಾಸನೆಯಿಂದ ತಿರುಗಾಡುವುದೇ ಬಹಳ ಕಷ್ಟವಾಗಿದೆ.

ಸಾವಿರಾರು ಜನ ಸಾರ್ವಜನಿಕರು, ಶಾಲಾ ಮಕ್ಕಳು, ವಾಹನಗಳು ಓಡಾಡುವ ರಸ್ತೆಯಲ್ಲಿ ವಾಹನಗಳು ರಭಸದಿಂದ ಓಡಾಡುವ ಸಂದರ್ಭದಲ್ಲಿ ಈ ಕೊಳಕು ನೀರು ಮಕ್ಕಳು ಸಾರ್ವಜನಿಕರಿಗೆ ಎರಚಿ ಬಹಳ ಸಮಸ್ಯೆಯಾಗುತ್ತಿದೆ ಎಂದು ಚೆಲುವರಾಜು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಹೊಟೇಲ್ ಪಕ್ಕದಲ್ಲಿಯೇ ಟ್ರ್ಯಾಕ್ಟರ್ ಶೋರೂಮ್ ಹಾಗೂ ಅಂಗಡಿಗಳು ಇದ್ದು, ಇವರಿಗೂ ಈ ಗಬ್ಬು ವಾಸನೆಯಿಂದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಈ ಕೊಳಚೆ ನೀರಿನಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ನಾನೇ ಖುದ್ದಾಗಿ ಪರಿಶೀಲಿಸಿ ಹೋಟೇಲ್‌ನವರ ಗಮನಕ್ಕೆ ತಂದರೆ ನಾವು ಲೈಸೆನ್ಸ್ ತೆಗೆದುಕೊಂಡು ಹೋಟೇಲ್ ಉದ್ಯಮ ನಡೆಸುತ್ತಿದ್ದೇವೆ. ಚರಂಡಿ ಸರಿಪಡಿಸುವುದು ನಗರಸಭೆಯವರ ಕರ್ತವ್ಯ ಎಂದು ನನಗೆ ಧಮ್ಮಿ ಹಾಕುತ್ತಿದ್ದಾರೆ ಎಂದು ಚೆಲುವರಾಜು ಗಂಭೀರ ಆರೋಪ ಮಾಡಿದ್ದಾರೆ.

ಪರಿಸರಕ್ಕೆ ಹಾನಿಯಾಗುವ ರೀತಿಯಲ್ಲಿ ಇವರು ಹೋಟೇಲ್ ಉದ್ಯಮ ನಡೆಸಲು ಲೈಸೆನ್ಸ್ ನೀಡುವುದಾದರೆ ಹುಣಸೂರು ನಗರಾದ್ಯಂತ ಗಬ್ಬು ನಾರುವುದರಲ್ಲಿ ಸಂಶಯವೇ ಇಲ್ಲ. ಆದ್ದರಿಂದ ಕೂಡಲೇ ನಗರಸಭೆಯ ಆಯುಕ್ತರು ಹಾಗೂ ಹೆಲ್ತ್ ಇನ್ಸ್‌ಪೆಕ್ಟರ್, ಪರಿಸರ ನಿಯಂತ್ರಣಾಧಿಕಾರಿಗಳು, ಸಿಬ್ಬಂಧಿಗಳು ಪರಿಶೀಲಿಸಿ ಚೆಟಾಯಿಸ್ ಹೋಟೇಲ್ ಉದ್ಯಮದ ಲೈಸೆನ್ಸ್ ಮುಟ್ಟುಗೋಲು ಹಾಕಿಕೊಂಡು ಮಾಲೀಕರ ಮೇಲೆ ಕ್ರಮ ಕೈಗೊಳ್ಳಬೇಕು, ಕೂಡಲೇ ಚರಂಡಿ ವ್ಯವಸ್ಥೆ ಸರಿಪಡಿಸಿ ನಾಗರೀಕರಿಗೆ ಓಡಾಡಲು ಅನುಕೂಲ ಮಾಡಿಕೊಡಬೇಕೆಂದು ಚೆಲುವರಾಜು ಒತ್ತಾಯಿಸಿದ್ದಾರೆ.

ಕೊಳಚೆ ನೀರು ರಸ್ತೆಗೆ ಹರಿಯ ಬಿಡುತ್ತಿರುವ ಹೋಟೆಲ್ ಲೈಸನ್ಸ್ ರದ್ದುಪಡಿಸಲು ಆಗ್ರಹ Read More

ಹುಣಸೂರಿನಲ್ಲಿ ವಿಷ್ಣುವರ್ಧನ್ ಜನ್ಮದಿನ: ಸಾರ್ವಜನಿಕರಿಗೆ ಲಾಡು ಊಟ

ಹುಣಸೂರು: ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ 75 ನೆ‌ ಹುಟ್ಟುಹಬ್ಬವನ್ನು ಹುಣಸೂರಿನ ಕಲಾ ಸ್ಟುಡಿಯೋ ಮುಂಭಾಗ ವಿಷ್ಣುವರ್ಧನ್ ಅಭಿಮಾನಿಗಳ ಸಂಘ ಮತ್ತು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ತಾಲೂಕು ವತಿಯಿಂದ ವಿಶೇಷವಾಗಿ ಆಚರಿಸಲಾಯಿತು.

ಬೆಳಗ್ಗೆ ವಿಷ್ಣುವರ್ಧನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಚ್ ಪಿ ಮಂಜುನಾಥ್, ಕೆಪಿಸಿಸಿ ಜನರಲ್ ಸೆಕ್ರೆಟರಿ ಹುಣಸೂರು ತಾಲೂಕು ಸಿದ್ದನ ಕೊಪ್ಪಲು ಪ್ರೊ ಸುವರ್ಣ ರಾಮದಾಸ್, ನಗರಸಭೆ ಕಮಿಷನರ್ ಮಾನಸ,ತಹಸೀಲ್ದಾರ್ ಮಂಜುನಾಥ್ ಸೇರಿದಂತೆ ಹುಣಸೂರು ಡಿ ವೈ ಎಸ್ ಪಿ, ಸರ್ಕಲ್ ಇನ್ಸ್ಪೆಕ್ಟರ್, ಗ್ರಾಮಾಂತರ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಮತ್ತಿತರ ಗಣ್ಯ ವ್ಯಕ್ತಿಗಳು ಪಾಲ್ಗೊಂಡು ವಿಷ್ಣುವರ್ಧನ್ ಭಾವಚಿತ್ರಕ್ಕೆ ನಮನ ಸಲ್ಲಿಸಿದರು.

ಪೂಜೆಯ ನಂತರ ಸಾರ್ವಜನಿಕರಿಗೆ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ವತಿಯಿಂದ ತಾಲೂಕು ಅಧ್ಯಕ್ಷ ಚೆಲುವರಾಜು ಅವರ ನೇತೃತ್ವದಲ್ಲಿ ಲಾಡು ಊಟ ಏರ್ಪಡಿಸಲಾಗಿತ್ತು.ಇದಕ್ಕೆ ವಿಷ್ಣುವರ್ಧನ್ ಅಭಿಮಾನಿಗಳ ಸಂಘದವರು ಸಾಥ್ ನೀಡಿದರು.

ಈ ಎಲ್ಲಾ ಕಾರ್ಯಕ್ರಮದಲ್ಲಿ,ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಅಧ್ಯಕ್ಷ ನಾರಾಯಾಣ,ಉಪಾಧ್ಯಕ್ಷ ಮಂಜುನಾಥ್,ಖಜಾಂಚಿ ಸಿ.ಎಸ್ ರವಿ,ಸದಸ್ಯರು ಗಳಾದ ಬಸವರಾಜು,ವೆಂಕಟೇಶ್
ಚಲುವರಾಜು,ಯತಿರಾಜು,ಸುನಿಲ್,ಪ್ರತಿಬ್,ಮಹದೇವ್,ಲಕ್ಷ್ಮಣ್,ಹೊನ್ನಯ್ಯ,ಬನ್ನೇರಿ,ಚಿಕ್ಕ,ಜೋಗಿ ಮುರುಗೇಶ್,ಸಾದಿಕ್,ಜಿಯಾ ಮತ್ತಿತರರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಭದ್ರತೆ ಮಾಡಿದ್ದರು.

ಹುಣಸೂರಿನಲ್ಲಿ ವಿಷ್ಣುವರ್ಧನ್ ಜನ್ಮದಿನ: ಸಾರ್ವಜನಿಕರಿಗೆ ಲಾಡು ಊಟ Read More

ಶ್ರೀ ಮಾರುತಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆಕೆಪಿಪಿ ಯಿಂದ ಉಚಿತ ಬುಕ್ ವಿತರಣೆ

ಹುಣಸೂರು, ಜು.2:‌ ಹುಣಸೂರಿನ ತಟ್ಟೆಕೆರೆಯ ಶ್ರೀ ಮಾರುತಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ಮತ್ತು ಲೇಖನಿ ಸಾಮಗ್ರಿಗಳನ್ನು ವಿತರಿಸಲಾಯಿತು.

ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಅವರ ನೇತೃತ್ವದಲ್ಲಿ ಶ್ರೀ ಮಾರುತಿ ಪ್ರೌಢಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ಮತ್ತು ಲೇಖನಿ ಸಾಮಗ್ರಿಗಳನ್ನು ನೀಡಲಾಯಿತು.

ಈ ಬಾರಿ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ವತಿಯಿಂದ ಸರ್ಕಾರಿ ಶಾಲೆಯ ಒಂದು ಸಾವಿರ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ಮತ್ತು ಲೇಖನಿ ಸಾಮಗ್ರಿಗಳನ್ನು ಕೊಡುವ ಗುರಿಯನ್ನು ಹೊಂದಲಾಗಿದೆ. ಈಗಾಗಲೇ ಈ ಗುರಿ ತಲುಪುವ ಹಂತದಲ್ಲಿದೆ.

ಇಂದು‌ ಮಾರುತಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಉಚಿತ ಬುಕ್ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪೋಲಿಸ್ ಇಲಾಖೆಯ ಧನಂಜಯ ಅವರು ಪಾಲ್ಗೊಂಡಿದ್ದರು ಮತ್ತು ಚಲುವರಾಜು ಅವರ ಈ ಕಾರ್ಯವನ್ನು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಲಕ್ಷ್ಮಿಕಾಂತ,ಸಹ ಶಿಕ್ಷಕರುಗಳಾದ ಪುಟ್ಟೇಗೌಡ ವೈ.ಜೆ, ಮಾನಸ, ಪುಷ್ಪಲತಾ ಬಿ. ಎಸ್, ಶ್ರೀಧರ. ಎ,ಬಾಲೆಸಾಬ್ ಕನ್ಯಾಳ,ಮೆಹಬೂಬುನ್ನಿಸ ಮತ್ತು ಶಾಲೆಯ ಸಿಬ್ಬಂದಿ ವಿ.ಎನ್.ಗಿರೀಶ್ ಮತ್ತಿತರರು ಹಾಜರಿದ್ದರು.

ಶ್ರೀ ಮಾರುತಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆಕೆಪಿಪಿ ಯಿಂದ ಉಚಿತ ಬುಕ್ ವಿತರಣೆ Read More

ಸಿಬಿಟಿ ಕಾಲೋನಿ ಸರ್ಕಾರಿ ಶಾಲೆ ಮಕ್ಕಳಿಗೆ ಕೆಪಿಪಿ ರೈತ ಪರ್ವದಿಂದ ಉಚಿತ ಬುಕ್

ಹುಣಸೂರು: ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ವತಿಯಿಂದ ಸಿ ಬಿ ಟಿ ಕಾಲೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಿಸಲಾಯಿತು.

ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲ್ಲೂಕು ಅಧ್ಯಕ್ಷ ಚೆಲುವರಾಜು ಅವರ ನೇತೃತ್ವದಲ್ಲಿ ಕಳೆದ ತಿಂಗಳಿನಿಂದಲೂ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ನೋಟ್ ಬುಕ್ ಮತ್ತು ಲೇಖನಿ ಸಾಮಗ್ರಿಗಳನ್ನು ವಿತರಿಸಿಕೊಂಡು ಬರಲಾಗುತ್ತಿದೆ.

ಇಂದು ಹುಣಸೂರು ತಾಲೂಕು ಸಿ ಬಿ ಟಿ ಕಾಲೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಉಚಿತವಾಗಿ ನೋಟ್ ಬುಕ್ ಗಳನ್ನು ವಿತರಿಸಿ ಚೆನ್ನಾಗಿ ಓದುವಂತೆ ಪ್ರೋತ್ಸಾಹಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಹದೇವ್ ಅವರು ಚೆಲುವರಾಜು ಅವರ ಕಾರ್ಯವನ್ನು ಶ್ಲಾಘಿಸಿದರು.

ಈ ವೇಳೆ ಶಾಲೆಯ ಮುಖ್ಯೋಪಾಧ್ಯಾಯರಾದ ರೂಪ ಭಟ್ ಇತರೆ ಶಿಕ್ಷಕರುಗಳಾದ ರಮೇಶ್, ಮಧು ಲತೇಶ್ವರಿ, ಜಗದೀಶ್, ಚೈತ್ರ ಹಾಗೂ ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಶರವಣ ಮತ್ತಿತರರು ಉಪಸ್ಥಿತರಿದ್ದರು.

ಸಿಬಿಟಿ ಕಾಲೋನಿ ಸರ್ಕಾರಿ ಶಾಲೆ ಮಕ್ಕಳಿಗೆ ಕೆಪಿಪಿ ರೈತ ಪರ್ವದಿಂದ ಉಚಿತ ಬುಕ್ Read More