ಕರ್ನಾಟಕ ಬಂದ್ ಗೆ ಬೆಂಬಲ ಸೂಚಿಸಿ ಕಾವೇರಿ ಕ್ರಿಯಾ ಸಮಿತಿ ಪ್ರತಿಭಟನೆ ‌

ಮೈಸೂರು: ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ಕಾವೇರಿ ಕ್ರಿಯಾ ಸಮಿತಿಯವರು ಬೆಂಬಲ ಸೂಚಿಸಿ ಮೈಸೂರಿನ ಸಬರ್ಬ್ ಬಸ್ ನಿಲ್ದಾಣದ ಮುಂಬಾಗ ಪ್ರತಿಭಟನೆ ನಡೆಸಲಾಯಿತು.

ಮೇಕೆದಾಟು, ಮಹಾದಾಯಿ, ಕಳಸ ಬಂಡೂರಿ ಯೋಜನೆ ಜಾರಿಗೊಳಿಸಲು ಆಗ್ರಹಿಸಿ ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ಅವರು ಕರೆ ನೀಡಿರುವ ಕರ್ನಾಟಕ ಬಂದ್ ಗೆ ಮೈಸೂರಿನ ಎಲ್ಲಾ ಕನ್ನಡ ಪರ ಸಂಘಟನೆಗಳೊಂದಿಗೆ ಪ್ರತಿಭಟನೆ ನಡೆಸಿ ರಸ್ತೆ ತಡೆ ಮಾಡಲಾಯಿತು.

ಪ್ರತಿಭಟನೆಯಲ್ಲಿ ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷ ಎಸ್ ಜಯಪ್ರಕಾಶ್,ಸಂಚಾಲಕ ಮೂಗೂರು ನಂಜುಂಡಸ್ವಾಮಿ, ಪ್ರಧಾನ ಕಾರ್ಯದರ್ಶಿ ತೇಜೇಶ್ ಲೋಕೇಶ್ ಗೌಡ, ಗೋಲ್ಡ್ ಸುರೇಶ್, ಪ್ರಭುಶಂಕರ್, ರಘು ಅರಸ್,ಪ್ರಜೀಶ್, ಕುಮಾರ್ ಗೌಡ,ಬೋಗಾದಿ ಸಿದ್ದೇಗೌಡ, ಭಾಗ್ಯಮ್ಮ, ವರಕೂಡು ಕೃಷ್ಣೇಗೌಡ, ಹನುಮಂತಯ್ಯ, ಕೃಷ್ಣಪ್ಪ, ಮಹಾದೇವ ಸ್ವಾಮಿ, ತ್ಯಾಗರಾಜ್, ಸುಬ್ಬೇಗೌಡ,ರವೀಶ್,ನಾಯಕ್ ವಿಷ್ಣು, ಹೊಂಬೇಗೌಡ ಮತ್ತಿತರರು ಪಾಲ್ಗೊಂಡಿದ್ದರು.

ಕರ್ನಾಟಕ ಬಂದ್ ಗೆ ಬೆಂಬಲ ಸೂಚಿಸಿ ಕಾವೇರಿ ಕ್ರಿಯಾ ಸಮಿತಿ ಪ್ರತಿಭಟನೆ ‌ Read More

ನಾಳಿನ ಕರ್ನಾಟಕ ಬಂದ್ ಗೆ ಕಾವೇರಿ ಕ್ರಿಯಾ ಸಮಿತಿ ಬೆಂಬಲ

ಮೈಸೂರು: ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ನಮ್ಮ ಕಾವೇರಿ ಕ್ರಿಯಾ ಸಮಿತಿಯಿಂದ ಬೆಂಬಲ ಸೂಚಿಸಿದ್ದೇವೆ ಎಂದು ಸಮಿತಿಯ ಅಧ್ಯಕ್ಷರಾದ ಎಸ್ ಜಯ ಪ್ರಕಾಶ್ ತಿಳಿಸಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ, ಕಾವೇರಿ ಕ್ರಿಯಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಕೆದಾಟು, ಮಹಾದಾಯಿ ಹಾಗೂ ಕಳಸ ಬಂಡೂರಿ ಯೋಜನೆ ಜಾರಿಗೊಳಿಸಲು ಆಗ್ರಹಿಸಿ ಕನ್ನಡ ಚಳವಳಿಗಳ ಅಗ್ರಮಾನ್ಯ ನಾಯಕ ವಾಟಾಳ್ ನಾಗರಾಜ್ ಅವರು ಕರೆ ನೀಡಿರುವ ಕರ್ನಾಟಕ ಬಂದ್ ಗೆ ಮೈಸೂರಿನ ಎಲ್ಲಾ ರೈತರು, ವಿಧ್ಯಾರ್ಥಿಗಳು, ಎಲ್ಲಾ ಕಾರ್ಮಿಕರು, ಆಟೋ ಚಾಲಕರು ಮಾಲೀಕರು, ಹೋಟೆಲ್ ಮಾಲೀಕರು ಬಂದ್ ಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮೂಗೂರು ನಂಜುಂಡಸ್ವಾಮಿ, ತೇಜೇಶ್ ಲೋಕೇಶ್ ಗೌಡ, ಬಾಲಕೃಷ್ಣ, ಸುರೇಶ್ ಗೌಡ, ಸಿಂದುವಳ್ಳಿ ಶಿವಕುಮಾರ್, ಬೋಗಾದಿ ಸಿದ್ದೇಗೌಡ,ವರಕೂಡು ಕೃಷ್ಣೇಗೌಡ, ಸುಬ್ಬೇಗೌಡ, ಕೃಷ್ಣಪ್ಪ ಉಪಸ್ಥಿತರಿದ್ದರು.

ನಾಳಿನ ಕರ್ನಾಟಕ ಬಂದ್ ಗೆ ಕಾವೇರಿ ಕ್ರಿಯಾ ಸಮಿತಿ ಬೆಂಬಲ Read More