ಛಲ,ಆತ್ಮವಿಶ್ವಾಸವಿದ್ದರೆ ಯಶಸ್ವಿ ಉದ್ಯಮಿಯಾಗಲು ಸಾಧ್ಯ-ಫಾ. ಡಾ. ಜೆರಾಲ್ಡ್ ಐಸಾಕ್ ಲೋಬೊ

ಕಾರ್ಕಳ: ಯಾರಲ್ಲಿ ಕನಸು, ಛಲ, ಸ್ವಾ ಸಾಮರ್ಥ್ಯ ಆತ್ಮವಿಶ್ವಾಸ ಇರುತ್ತದೊ ಅವರು ಯಶಸ್ವಿ ಉದ್ಯಮಿಯಾಗಲು ಸಾಧ್ಯ ಎಂದು ಧರ್ಮ ಪ್ರಾಂತದ ಧರ್ಮಾಧ್ಯಕ್ಷ ರೆ. ಫಾ. ಡಾ. ಜೆರಾಲ್ಡ್ ಐಸಾಕ್ ಲೋಬೊ ಹೇಳಿದ್ದಾರೆ.

ಕಾರ್ಕಳದ ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ಸಮುದಾಯ ಭವನದಲ್ಲಿ ನಡೆದ ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ ಇಂಡಸ್ಟ್ರಿಯ ವಾರ್ಷಿಕ ಸಹ ಮಿಲನ ಹಾಗೂ ಪ್ರೇರಣಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಸಿಎಸ್ಐ ಕರ್ನಾಟಕ ದಕ್ಷಿಣ ಪ್ರಾಂತ ಸಭೆಯ ಧರ್ಮ ಅಧ್ಯಕ್ಷ ರೆ. ಫಾ. ಹೇಮಚಂದ್ರ ಕುಮಾರ್ ಅವರು ಎಲ್ಲರಿಗೂ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಡಾ. ಜೋಸೆಫ್ ಲೋಬೊ ಶಂಕರಾಪುರ ಅವರಿಗೆ ಪ್ರಗತಿ ಪರ ಕೃಷಿಕ ಪ್ರೇರಣಾ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಸಂಘಟನೆಯ ಅಧ್ಯಕ್ಷ ಸಂತೋಷ್ ಡಿಸಿಲ್ವ ಅಧ್ಯಕ್ಷತೆ ವಹಿಸಿದ್ದರು. ಅತ್ತೂರು ಸಂತ ಲಾರೆನ್ಸ್ ಮೈನರ್ ಬಸಲಿಕಾದ ಫಾ. ಆಲ್ವಿನ್ ಡಿಸೋಜ, ಸಂಘಟನೆಯ ಕಾರ್ಯದರ್ಶಿ ಆಲ್ವಿನ್ ಕ್ವಾಡ್ರಸ್, ಕೋಶಾಧಿಕಾರಿ ಮ್ಯಾಕ್ಸಿಂ ಸಲ್ಡಾನ್,ಜಿತೇಂದ್ರ ಪೋಟಾರ್ಡ್, ಆಲ್ವಿನ್ ಕ್ಯಾಟ್ರೆಸ್, ಸ್ಟೀವನ್ ಕುಲಾಸೊ ಉದ್ಯಾವರ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಛಲ,ಆತ್ಮವಿಶ್ವಾಸವಿದ್ದರೆ ಯಶಸ್ವಿ ಉದ್ಯಮಿಯಾಗಲು ಸಾಧ್ಯ-ಫಾ. ಡಾ. ಜೆರಾಲ್ಡ್ ಐಸಾಕ್ ಲೋಬೊ Read More

ಬೆಳ್ಳಂಬೆಳಿಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾ ಶಾಕ್ ರಾಜ್ಯದ ಹಲವೆಡೆ ದಾಳಿ

ಬೆಂಗಳೂರು: ಶನಿವಾರ ಬೆಳ್ಳಂ ಬೆಳಿಗ್ಗೆ ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಪೊಲೀಸರು ಶಾಕ್ ನೀಡಿದ್ದಾರೆ.

ರಾಜ್ಯದ ಹಲವು ಜಿಲ್ಲೆ ಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಬಾಗಲಕೋಟೆ, ಗದಗದ ಹುನಗುಂದ,ಬೆಳಗಾವಿ, ಹಾವೇರಿ ಸೇರಿದಂತೆ ಹಲವು ಕಡೆ ಲೋಕಾಯುಕ್ತ ಅಧಿಕಾರಿಗಳು ಬೆಳಗ್ಗೆ ದಾಳಿ ನಡೆಸಿದರು.

ಗದಗ ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕ ಗಂಗಾಧರ್ ಶಿರೋಳ ಅವರ ಮನೆ, ಕಚೇರಿಗಳ ಮೇಲೆ ಹಾಗೂ ಅವರ ಅಳಿಯ, ಭಾವನ ಮನೆ ಸೇರಿ 6 ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಲೋಕಾಯುಕ್ತ ಎಸ್ ಪಿ ಹಣಮಂತರಾಯ ನೇತೃತ್ವದಲ್ಲಿ ದಾಳಿ ನಡೆದಿದೆ. ಬಳ್ಳಾರಿ ಜಿಲ್ಲೆ ಹೂವಿನಹಡಗಲಿ, ಹಾವೇರಿ ಜಿಲ್ಲೆಯಲ್ಲಿ ಕೂಡ ಲೋಕಾಯುಕ್ತ ದಾಳಿ ನಡೆದಿದೆ.

ಬೆಳಗಾವಿಯ ದೇವರಾಜ್ ಅರಸು ಅಭಿವೃದ್ಧಿ ‌ನಿಗಮದ ಜಿಲ್ಲಾ ವ್ಯವಸ್ಥಾಪಕ ಸಿದ್ಧಲಿಂಗಪ್ಪ ಬಾನಸಿ ಮನೆ ಮೇಲೂ ಲೋಕಾಯುಕ್ತ ದಾಳಿ ನಡೆದಿದೆ.

ಬೆಳಗಾವಿ ನಗರದ ವಿದ್ಯಾನಗರದಲ್ಲಿರುವ ಸಿದ್ಧಲಿಂಗಪ್ಪ ಬಾನಸಿ ಮನೆ ಮೇಲೆ ದಾಳಿ ಮಾಡಿದ ಲೋಕಾಯುಕ್ತರು ತಪಾಸಣೆ ನಡೆಸಿದರು

ಬನಸಿ ಅವರ ರಾಯಬಾಗ ತಾಲೂಕಿನ ಸ್ವಗ್ರಾಮ ಬೆಕ್ಕೇರಿಯ ಮನೆ ಹಾಗೂ ಕಚೇರಿ ಮೇಲೂ ದಾಳಿ ನಡೆದಿದೆ.

ಇನ್ನು ಧಾರವಾಡದ PWD ಮುಖ್ಯ ಇಂಜಿನಿಯರ್ ಎಚ್‌. ಸಿ. ಸುರೇಶ ಮನೆ ಮೇಲೂ ದಾಳಿ ನಡೆದಿದ್ದು, ಅವರ
ಬೆಳಗಾವಿಯ ಹನುಮಾನ ನಗರದಲ್ಲಿರುವ ಮನೆ ತಪಾಸಣೆ ನಡೆದಿದೆ.

ಅದರಂತೆ ಗದಗದ ನಿರ್ಮಿತಿ ಕೇಂದ್ರದ ಪ್ರೊಜೆಕ್ಟ್ ಡೈರೆಕ್ಟರ್ ಗಂಗಾಧರ ಶಿರೋಳ ಮನೆ ಮೇಲೂ ದಾಳಿ ನಡೆಸಲಾಗಿದೆ.

ಬೆಳಗಾವಿ ವಿಭಾಗದ ಲೋಕಾಯುಕ್ತ ವ್ಯಾಪ್ತಿಯ ಮೂರು ಕಡೆಗಳಲ್ಲಿ ದಾಳಿ ನಡೆಸಲಾಗಿದೆ. ಲೋಕಾಯುಕ್ತ ಎಸ್ಒಇ ಹಣಮಂತರಾಯಪ್ಪ ನೇತೃತ್ವದಲ್ಲಿ ತಪಾಸಣೆ ಮುಂದುವರೆದಿದೆ.

ಇದಿಷ್ಟೇ ಅಲ್ಲದೆ ಕಾರ್ಕಳದ ಬೆಸ್ಕಾಂ ಅಧಿಕಾರಿ ಮನೆ ಮೇಲು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಕಾರ್ಕಳ ಮೆಸ್ಕಾಂ ಅಕೌಂಟೆಂಟ್ ಆಫೀಸರ್ ಗಿರೀಶ್ ರಾವ್ ಅವರ ಮನೆ ಮತ್ತು ಮೆಸ್ಕಾಂ ಕಚೇರಿ ಅಲ್ಲದೇ ಕಾರ್ಕಳ ಬೈಪಾಸ್ ನಲ್ಲಿರುವ ಅವರ ಮಾಲೀಕತ್ವದ ಲಾಡ್ಜ್ ಮತ್ತು ಬೈಪಾಸ್ ನವೋದಯ ಸರ್ಕಲ್ ಬಳಿ ಇರುವ ಸಂಬಂಧಿಕರ ಮನೆ ಮೇಲೂ ದಾಳಿ ನಡೆದಿದ್ದು ಸಂಪೂರ್ಣ ಪರಿಶೀಲನೆ ನಡೆಸುತ್ತಿದ್ದಾರೆ.

ಬೆಳ್ಳಂಬೆಳಿಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾ ಶಾಕ್ ರಾಜ್ಯದ ಹಲವೆಡೆ ದಾಳಿ Read More

ಬೈಕ್, ಲಾರಿ ಡಿಕ್ಕಿ ಒಂದೇ ಕುಟುಂಬದ ನಾಲ್ವರ ದುರ್ಮರಣ

ಕಾರ್ಕಳ: ಮಿನಿ ಲಾರಿ ಹಾಗೂ ಬೈಕ್ ಡಿಕ್ಕಿಯಾಗಿ ಒಂದೇ ಕುಟುಂಬದ ನಾಲ್ಕು ಮಂದಿ ದುರ್ಮರಣ ಅಪ್ಪಿದ ಘಟನೆ ಕಾರ್ಕಳ ಬಳಿ ನಡೆದಿದೆ.

ಕಾರ್ಕಳ ತಾಲೂಕಿನ ಧರ್ಮಸ್ಥಳ ಹೆದ್ದಾರಿಯ ಹೊಸ್ಮಾರುನ ಪಾಜೆಗುಡ್ಡೆ ಬಳಿ ಈ ಅಪಘಾತ ಸಂಭವಿಸಿದೆ.

ಸುರೇಶ್ ಆಚಾರ್ಯ (36), ಸಮೀಕ್ಷಾ (7) ಸುಶ್ಮೀತಾ (5) ಮತ್ತು ಸುಶಾಂತ್ (2) ಎಂದು ಗುರುತಿಸಲಾಗಿದೆ. ಮೀನಾಕ್ಷಿ ಆಚಾರ್ಯ (32) ಎಂಬವರು ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಈ‌ ನತದೃಷ್ಟರು ಒಂದೇ ಬೈಕ್ ನಲ್ಲಿ ಹೋಗುತ್ತಿದ್ದರು.ಅಪಘಾತದಲ್ಲಿ ಬೈಕ್ ನಜ್ಜುಗುಜ್ಜಾಗಿದೆ.

ಸುದ್ದಿ ತಿಳಿದ ತಕ್ಷಣ ಕಾರ್ಕಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದರು,ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿದರು.

ಬೈಕ್, ಲಾರಿ ಡಿಕ್ಕಿ ಒಂದೇ ಕುಟುಂಬದ ನಾಲ್ವರ ದುರ್ಮರಣ Read More