ಕನ್ನಡಾಂಬೆ ರತ್ನ ಪ್ರಶಸ್ತಿಗೆ ಭಾಜನರಾದಸಬ್ ಇನ್ಸ್‌ಪೆಕ್ಟರ್ ಮಹೇಂದ್ರ

ಮೈಸೂರು: ಇಲವಾಲ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಮಹೇಂದ್ರ ಪಿ.ಅವರು
ಕನ್ನಡಾಂಬೆ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.
೭೦ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಇಲವಾಲ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಮಹೇಂದ್ರ ಪಿ.ಅವರಿಗೆ
ಕನ್ನಡಾಂಬೆ ರಕ್ಷಣಾ ವೇದಿಕೆ ವತಿಯಿಂದ ನೀಡಲಾದ ’ಕನ್ನಡಾಂಬೆ ರತ್ನ’ ಪ್ರಶಸ್ತಿಯನ್ನು ವೇದಿಕೆಯ ರಾಜ್ಯಾಧ್ಯಕ್ಷರಾದ ಬಿ.ಬಿ.ರಾಜಶೇಖರ್ ಅವರು ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ವೇದಿಕೆಯ ರಾಜ್ಯ ಖಜಾಂಚಿ ನಂಜುಂಡ, ಕಾರ್ಯದರ್ಶಿ ಶಿವಕುಮಾರ್, ಮುಖಂಡರಾದ ಕಿರಣ್, ಇ.ವಿ.ನಾಗರಾಜು, ಹರೀಶ್, ಹೊನ್ನೇಗೌಡ, ದೊರೆಸ್ವಾಮಿ, ಗುರು, ಶೇಖರ್, ಮೋಹನ, ಶ್ರೀನಿವಾಸ್, ವಿಜಿ ಕುಮಾರ್ ಮತ್ತು ಇತರೆ ಪದಾಧಿಕಾರಿಗಳು ಹಾಜರಿದ್ದರು.

ಕನ್ನಡಾಂಬೆ ರತ್ನ ಪ್ರಶಸ್ತಿಗೆ ಭಾಜನರಾದಸಬ್ ಇನ್ಸ್‌ಪೆಕ್ಟರ್ ಮಹೇಂದ್ರ Read More

ಜಿಟಿಡಿ ಹುಟ್ಟುಹಬ್ಬ: ಮಕ್ಕಳಿಗೆ ಲೇಖನ ಸಾಮಾಗ್ರಿ,ರೋಗಿಗಳಿಗೆ ಹಣ್ಣು ವಿತರಣೆ

ಮೈಸೂರು: ಕನ್ನಡಾಂಬೆ ರಕ್ಷಣಾ ವೇದಿಕೆ ವತಿಯಿಂದ ಶಾಸಕ ಜಿ.ಟಿ.ದೇವೇಗೌಡರ ಹುಟ್ಟುಹಬ್ಬವನ್ನು‌ ಉದ್ಯಾನವನಗಳಲ್ಲಿ ಸಸಿಗಳನ್ನು ನೆಟ್ಟು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಮಂಗಳವಾರ ಬೆಳಗ್ಗೆ ಕನ್ನಡಾಂಬೆ ರಕ್ಷಣಾ ವೇದಿಕೆ ಅಧ್ಯಕ್ಷರಾದ ಬಿ.ಬಿ. ರಾಜಶೇಖರ್ ನೇತೃತ್ವದಲ್ಲಿ ವೇದಿಕೆ ಕಾರ್ಯಕರ್ತರು ಇಲವಾಲ ಬಳಿಯ ಈರಪ್ಪನ ಕೊಪ್ಪಲು ಗ್ರಾಮದ ಉದ್ಯಾನವನದಲ್ಲಿ ೭೫
ವಿವಿಧ ಹಣ್ಣು, ಹೂವುಗಳ ಸಸಿಗಳನ್ನು ನೆಟ್ಟು ನೀರೆರೆಯಲಾಯಿತು.

ಬಳಿಕ ಈರಪ್ಪನ ಕೊಪ್ಪಲು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಲೇಖನ ಸಾಮಾಗ್ರಿಗಳನ್ನು ವಿತರಣೆ ಮಾಡಲಾಯಿತು.

ನಂತರ ವಿವಿ ಪುರಂ ಬಡಾವಣೆಯ ಕಾಳಿದಾಸ ರಸ್ತೆಯಲ್ಲಿರುವ ಶ್ರೀ ಲಕ್ಷ್ಮೀದೇವಮ್ಮ ಶಂಕರಶೆಟ್ಟಿ ಹೆರಿಗೆ ಆಸ್ಪತ್ರೆಯ ಒಳ ರೋಗಿಗಳಿಗೆ ಬ್ರೆಡ್‌ ಮತ್ತು ಹಣ್ಣುಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಕನ್ನಡಾಂಬೆ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಬಿ.ಬಿ.ರೇಜಶೇಖರ್ ಮಾತನಾಡಿ, ಶಾಸಕರು ಮತ್ತು ಮಾಜಿ ಸಚಿವರೂ ಆದ ಜಿ.ಟಿ.ದೇವೇಗೌಡರು ಅಜಾತ ಶತೃವಾಗಿದ್ದಾರೆ ಎಂದು ಹೇಳಿದರು.

ಚಾಮುಂಡೇಶ್ವರಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಅವರು ಹಗಲಿರುಳು ಶ್ರಮಿಸುತ್ತಿದ್ದಾರೆ. ಯಾವುದೇ ಜಾತಿ, ಧರ್ಮ, ವರ್ಣ, ವರ್ಗಗಳ ಬೇದವಿಲ್ಲದೇ ಎಲ್ಲರನ್ನೂ ಸರಿ ಸಮಾನವಾಗಿ ಕಂಡು ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ಬಣ್ಣಿಸಿದರು.

ದೇವರಾಜ ಅರಸು, ಸಿದ್ದರಾಮಯ್ಯ ಬಿಟ್ಟರೆ ಮೈಸೂರು ಭಾಗದ ಅತ್ಯಂತ ಪ್ರಭಾವಿ ರಾಜಕಾರಣಿಯಾದ ಜಿ.ಟಿ.ದೇವೇಗೌಡರು ಎಲ್ಲರನ್ನೂ ಪ್ರೀತಿ ಪೂರ್ವಕವಾಗಿ ಕಾಣುತ್ತಾ ಕ್ಷೇತ್ರದ ಅಭಿವೃದ್ಧಿ ಮಾಡುತ್ತಿದ್ದಾರೆ ಎಂದು ಬಿ.ಬಿ. ರಾಜಶೇಖರ್ ಶ್ಲಾಘಿಸಿದರು.

ಹಿರಿಯ ಸಹಕಾರಿ ಧುರೀಣರೂ ಆದ ಜಿ.ಟಿ.ದೇವೇಗೌಡರ ೭೫ನೇ ವರ್ಷದ ಹುಟ್ಟು ಹಬ್ಬವನ್ನು ೭೫ ಸಸಿಗಳನ್ನು ನೆಡುವ ಮೂಲಕ ಕನ್ನಡಾಂಬೆ ರಕ್ಷಣಾ ವೇದಿಕೆ ವತಿಯಿಂದ ಅರ್ಥಪೂರ್ಣವಾಗಿ ಆಚರಿಸುತ್ತಿದ್ದೇವೆ ಎಂದು ತಿಳಿಸಿದರು.

ಬಳಿಕ ಅವರು ಜಿ.ಟಿ.ದೇವೇಗೌಡರ ಮನೆಗೆ ಬಂದು ಕೇಕ್ ಕತ್ತರಿಸಿ ಜಿಟಿಡಿ ಅವರನ್ನು ಗೌರವಿಸಿ ಹುಟ್ಟುಹಬ್ಬದ ಶುಭಾಶಯ ಕೋರಿದರು.

ಈ ಸಂದರ್ಭದಲ್ಲಿ ವೇದಿಕೆಯ ರಾಜ್ಯ ಖಜಾಂಚಿ ನಂಜುಂಡ, ಸಿಂಧುವಳ್ಳಿ ಶಿವಕುಮಾರ್, ಕಿರಣ್, ಲೋಕೇಶ್, ಹರೀಶ್, ಬೊಮ್ಮನಹಳ್ಳಿ ಲೋಕೇಶ್, ಶಿವಕುಮಾರ್, ಶಿವಲಿಂಗಪ್ಪ, ಚಂದ್ರಶೇಖರ್, ಕಾವಿ ಬಸಪ್ಪ, ಈಡೇಗೌಡ, ಮಾದಪ್ಪ, ವತ್ಸಲ, ರಶ್ಮಿ ಸಿಂಗ್ ಮತ್ತಿತರರು ಹಾಜರಿದ್ದರು.

ಜಿಟಿಡಿ ಹುಟ್ಟುಹಬ್ಬ: ಮಕ್ಕಳಿಗೆ ಲೇಖನ ಸಾಮಾಗ್ರಿ,ರೋಗಿಗಳಿಗೆ ಹಣ್ಣು ವಿತರಣೆ Read More

ಗ್ರಾಪಂ ಅಮೃತ್ ಯೋಜನೆ:ಭ್ರಷ್ಟಾಚಾರಖಂಡಿಸಿ ಕನ್ನಡಾಂಬೆ ರಕ್ಷಣಾ ವೇದಿಕೆ ಪ್ರತಿಭಟನೆ

ಮೈಸೂರು: ಗ್ರಾಮ ಪಂಚಾಯಿತಿ ಅಮೃತ್
ಯೋಜನೆಗೆ ಆಯ್ಕೆಯಾಗಿರುವ ಮೈಸೂರು ಜಿಪಂ ವ್ಯಾಪ್ತಿಯ ೩೨ ಗ್ರಾಮ ಪಂಚಾಯಿತಿಗಳ ಸಾಮಾಗ್ರಿ ಖರೀದಿಯಲ್ಲಿ
೭.೯೨ ಕೋಟಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಕನ್ನಡಾಂಬೆ ರಕ್ಷಣಾ ವೇದಿಕೆಯವರು ಪ್ರತಿಭಟನೆ ನಡೆಸಿದರು.

ಸರ್ಕಾರ ಕೂಡಲೇ ಆಯಾ ಪಿಡಿಒ ಗಳನ್ನು ಅಮಾನತು ಪಡಿಸಿ ತನಿಖೆಗೆ ಆದೇಶಿಸಬೇಕು, ಇಲ್ಲದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಮತ್ತು ಸಿಎಂ ಕಾರಿಗೂ ಘೇರಾವ್ ಮಾಡುವುದಾಗಿ ಕನ್ನಡಾಂಬೆ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಬಿ.ಬಿ.ರಾಜಶೇಖರ್ ಪ್ರತಿಭಟನೆ ವೇಳೆ ಎಚ್ಚರಿಸಿದರು.

ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬಿ.ಬಿ.ರಾಜಶೇಖರ್ ಅವರು ಮಾತನಾಡಿ, ಅಮೃತ್ ಗ್ರಾಮ ಪಂಚಾಯಿತಿ ಯೋಜನೆಗೆ ಆಯ್ಕೆಯಾಗಿರುವ ಮೈಸೂರು ಜಿಲ್ಲೆಯ ವಿವಿಧ ತಾಲ್ಲೂಕುಗಳ ೩೨ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಂಗನವಾಡಿಗಳಿಗೆ ನಲಿ-ಕಲಿ ಸಾಮಗ್ರಿ, ಶಾಲೆಗಳಿಗೆ ಕ್ರೀಡಾ ಸಾಮಾಗ್ರಿ ಹಾಗೂ ಲ್ಯಾಬ್‌ ಸಾಮಗ್ರಿ, ಡಿಜಿಟಲ್ ಗ್ರಂಥಾಲಯಗಳ ಸಾಮಗ್ರಿ, ಸೋಲಾರ್ ಬೀದಿ ದೀಪ,ಕುಡಿಯುವ ನೀರು ಇತರೆ ಮೂಲಭೂತ ಸೌಕರ್ಯಗಳಿಗೆ ಸರ್ಕಾರವು ೭ ಕೋಟಿ ೯೨ ಲಕ್ಷ ರೂ, ಬಿಡುಗಡೆ ಮಾಡಿತ್ತು.ಆದರೆ ಖರೀದಿಯಲ್ಲಿ ಕೆಟಿಪಿಪಿ ನಿಯಮ ಪಾಲಿಸಿಲ್ಲ, ಎಲ್ಲ ಖರೀದಿಯಲ್ಲಿ ಭಾರಿ ಭಷ್ಟಾಚಾರ ನಡೆದಿದೆ ಎಂದು ಗಂಭೀರ ಆರೋಪ ಮಾಡಿದರು.

ಈ ಬಗ್ಗೆ ಗ್ರಾಪಂ ಸದಸ್ಯ ಜಲೇಂದ್ರ ಅವರು ಒಂದು ವರ್ಷದ ಹಿಂದೆ ದೂರು ನೀಡಿದ್ದರೂ ಜಿಲ್ಲಾಧಿಕಾರಿಗಳು, ಜಿಪಂ ಸಿಇಒ ಯಾವುದೇ ತನಿಖೆಗೆ ಆದೇಶಿಸದೆ, ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿದ್ದಾರೆ ಎಂದು ಕಿಡಿ ಕಾರಿದರು.

ಒಂದು ಗ್ರಾಪಂಗೆ ೨೪.೭೫ ಲಕ್ಷದಂತೆ ೩೨ ಗ್ರಾಪಂಗಳಿಗೆ ಒಟ್ಟು ೭ ಕೋಟಿ ೯೨ ಲಕ್ಷ ರೂಗಳನ್ನು ಸರ್ಕಾರ ಬಿಡುಗಡೆ ಮಾಡಿದೆ.
ಹಲವು ಗ್ರಾಮ ಪಂಚಾಯಿತಿಗಳು ಒಂದೇ ಏಜೆನ್ಸಿಗೆ ಅನುಕೂಲವಾಗುವಂತೆ ಕೆಟಿಪಿಪಿ ನಿಯಮ ಉಲ್ಲಂಘಿಸಿ ಸಾಮಗ್ರಿ ಖರೀದಿ ಮಾಡಿವೆ.

ಒಂದೇ ಏಜೆನ್ಸಿಯಿಂದ ಒಂದೇ ವಸ್ತುವಿಗೆ ಬೇರೆ ಬೇರೆ ಗ್ರಾಪಂಗಳು ಬೇರೆ ಬೇರೆ ದರದಲ್ಲಿ, ಸಾಮಗ್ರಿ ಖರೀದಿ
ಮಾಡಿದ್ದಾರೆ.ಹೀಗೆ ಹಲವು ಗ್ರಾಪಂಗಳಲ್ಲಿ ಇ-ಟೆಂಡರ್ ನಲ್ಲಿ ಒಂದೇ ಏಜೆನ್ಸಿ ಭಾಗವಹಿಸಿ ಒಂದೇ ರೀತಿಯ ವಸ್ತುವಿಗೆ ಬೇರೆ,
ಬೇರೆ ದರ ನಿಗದಿ ಮಾಡಿ, ಖರೀದಿ ಮಾಡಿರುವ ಭಾರಿ ಅನುಮಾನ ಮೂಡಿದೆ ಎಂದು ದೂರಿದರು.

ಈ ಅಕ್ರಮದಲ್ಲಿ ಭಾಗವಹಿಸಿರುವ ೩೨ ಗ್ರಾಪಂಗಳ ಪಿಡಿಒ ಗಳನ್ನು ಕೂಡಲೇ ಸೇವೆಯಿಂದ ಅಮಾನತ್ತು ಮಾಡಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲೇ ಇಷ್ಟೊಂದು ಭ್ರಷ್ಟಾಚಾರ ನಡೆದಿದ್ದರೆ, ಇನ್ನು ಇಡೀ ರಾಜ್ಯದ ಗತಿ ಏನು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಕನ್ನಡಾಂಬೆ ರಕ್ಷಣಾ ವೇದಿಕೆಯ ರಾಜ್ಯ ಖಜಾಂಚಿ ನಂಜುಂಡ ಶಿವಕುಮಾರ್, ಜಿಲ್ಲಾಧ್ಯಕ್ಷ ಸಂತೋಷ್,
ಪ್ರಧಾನ ಕಾರ್ಯದರ್ಶಿ ಪ್ರತಾಪ್ ಜಿ., ಜಿಲ್ಲಾ, ಮಹಿಳಾ ಘಟಕದ ಅಧ್ಯಕ್ಷರಾದ ಮಂಜುಳಾ, ಕರುನಾಡು ಲಾರಿ ಚಾಲಕರ
ಪರಿಷತ್ ಅಧ್ಯಕ್ಷರಾದ ಮಹದೇವಸ್ವಾಮಿ, ಹೋರಾಟಗಾರ ಡಿಪಿಕೆ ಪರಮೇಶ್, ದೂರುದಾರ ಜಲೇಂದ್ರ, ಶಿವಕುಮಾರ್ ಸಿಂಧುವಳ್ಳಿ, ಹರೀಶ್, ಕಿರಣ್, ದಿಲೀಪ್,
ಶ್ರೀನಿವಾಸ್, ಮಾಲಿನಿ, ಭಾಗ್ಯ, ಮಹೇಂದ್ರ, ರವಿ ಗೌಡ, ವರಕೋಡು ಕೃಷ್ಣಗೌಡ, ಮನುಗೌಡ, ಅನುರಾಜ್,
ಗೌತಮ್, ಕನ್ನಡಾಂಬೆ ರಕ್ಷಣಾ ವೇದಿಕೆ ಪದಾಧಿಕಾರಿಗಳು ಮತ್ತು ಸದಸ್ಯರು ಪಾಲ್ಗೊಂಡಿದ್ದರು.

ಪ್ರತಿಭಟನೆ ನಂತರ ‌ಅಪರ ಜಿಲ್ಲಾಧಿಕಾರಿ ಪಿ.ಶಿವರಾಜು ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಶೀಘ್ರ ತನಿಖೆಗೆ ಆದೇಶ:
ಮೈಸೂರು ಜಿಲ್ಲೆಯ ವಿವಿಧ ಗ್ರಾಪಂಗಳಲ್ಲಿ ಅಮೃತ್ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಕನ್ನಡಾಂಬೆ ರಕ್ಷಣಾ ವೇದಿಕೆ ದೂರು ನೀಡಿದೆ. ಈ ಬಗ್ಗೆ ಅರ್ಜಿ ಪರಿಶೀಲಿಸಿ ಶೀಘ್ರದಲ್ಲೆ ತನಿಖೆ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಪಿ.ಶಿವರಾಜು ಭರವಸೆ ನೀಡಿದ್ದಾರೆ.

ಗ್ರಾಪಂ ಅಮೃತ್ ಯೋಜನೆ:ಭ್ರಷ್ಟಾಚಾರಖಂಡಿಸಿ ಕನ್ನಡಾಂಬೆ ರಕ್ಷಣಾ ವೇದಿಕೆ ಪ್ರತಿಭಟನೆ Read More