ಹಿರಿಯ ಕನ್ನಡ ಹೋರಾಟಗಾರರಿಗೆ ನಿವೇಶನನೀಡಲು ಸರ್ಕಾರಕ್ಕೆ ತೇಜಸ್ವಿ ಮನವಿ

ಮೈಸೂರು: ಹಿರಿಯ ಕನ್ನಡ ಹೋರಾಟಗಾರರಿಗೆ ಸರ್ಕಾರದ ವತಿಯಿಂದ ನಿವೇಶನ ನೀಡಬೇಕೆಂದು ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗಸ್ವಾಮಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ನಾಡು ನುಡಿ ನೆಲ ಜಲ ಭಾಷೆ ವಿಚಾರದಲ್ಲಿ ಸೇವೆ ಸಲ್ಲಿಸಿ ಎಲೆ ಮರೆ ಕಾಯಿಯಂತೆ ಇಂದಿಗೂ ಸಹ ಬಾಡಿಗೆ ಮನೆಯಲ್ಲಿ ವಾಸವಿರುವ ಮೈಸೂರಿನ ಹಿರಿಯ ಕನ್ನಡಪರ ಹೋರಾಟಗಾರರನ್ನು ಗುರುತಿಸಿ ರಾಜ್ಯ ಸರ್ಕಾರ ಕೂಡಲೇ ನಿವೇಶನಗಳನ್ನು ನೀಡಬೇಕು ಎಂದು ಅವರು ಕೋರಿದ್ದಾರೆ‌

ಗಣನೀಯವಾಗಿ ಸೇವೆ ಸಲ್ಲಿಸಿ ಇಡೀ ಜೀವನವನ್ನೇ ಕನ್ನಡಕ್ಕಾಗಿ ತ್ಯಾಗ ಮಾಡಿದ ಅನೇಕ ಹೋರಾಟಗಾರರು ನಮ್ಮ ಮೈಸೂರಿನಲ್ಲಿ ವಾಸಿಸುತ್ತಿದ್ದಾರೆ,೭೦ ನೇ ಕನ್ನಡ ರಾಜ್ಯೋತ್ಸವದ ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ಅವರುಗಳನ್ನು ಗುರುತಿಸಬೇಕೆಂದು ಒತ್ತಾಯಿಸಿದ್ದಾರೆ.

ಅಂತಹವರನ್ನು ಗುರುತಿಸಿ ಮೈಸೂರಿನ ಪ್ರಮುಖ ಭಾಗಗಳಲ್ಲಿ ನೀವೇಶನ ನಿಡಿದರೆ ಸರ್ಕಾರಕ್ಕೆ ಹೆಚ್ಚು ಕೀರ್ತಿ ಸಲ್ಲುತ್ತದೆ ಮತ್ತು ಕನ್ನಡ ಹೋರಾಟಗಾರರಿಗೆ ಗೌರವ ಕೊಟ್ಟಂತೆ ಆಗುತ್ತದೆ ಎಂದು ತೇಜಸ್ವಿ ಹೇಳಿದ್ದಾರೆ.

೭೦ ನೇ ಕನ್ನಡ ರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ರಾಜ್ಯ ಸರ್ಕಾರ ಹಿರಿಯ ಕನ್ನಡಪರ ಹೋರಾಟಗಾರರನ್ನು ಗುರುತಿಸಿ ನೀವೇಶನಗಳನ್ನು ನೀಡ ಬೇಕೆಂದು ರಾಜ್ಯ ಸರ್ಕಾರಕ್ಕೆ ಕನ್ನಡ ಕ್ರಾಂತಿದಳ ಸಂಘಟನೆಯ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗ ಸ್ವಾಮಿ ಮನವಿ ಮಾಡಿದ್ದಾರೆ.

ಹಿರಿಯ ಕನ್ನಡ ಹೋರಾಟಗಾರರಿಗೆ ನಿವೇಶನನೀಡಲು ಸರ್ಕಾರಕ್ಕೆ ತೇಜಸ್ವಿ ಮನವಿ Read More

ಬಾನು ಮುಷ್ತಾಕ್ ಅವರಿಂದ ದಸಾರ ಉದ್ಘಾಟನೆ ಮಾಡಿಸಿ:ತೇಜಸ್ವಿ ಮನವಿ

ಮೈಸೂರು,ಜು.1: 2025 ರ ದಸಾರ ಉದ್ಘಾಟನೆ ಯನ್ನು ಬೂಕರ್ ಪ್ರಶಸ್ತಿ ಪಡೆದ ಕನ್ನಡದ ಮೊದಲ ಸಾಹಿತಿ ಬಾನು ಮುಷ್ತಾಕ್ ಅವರಿಂದ ಮಾಡಿಸಬೇಕೆಂದು ಸರ್ಕಾರಕ್ಕೆ ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗ ಸ್ವಾಮಿ ಮನವಿ ಮಾಡಿದ್ದಾರೆ.

ಕನ್ನಡದ ಪ್ರಮುಖ ಲೇಖಕಿ ಎಸ್. ಕೆ. ಬಾನು ಮುಷ್ತಾಕ್ ಅವರ ‘ಹಾರ್ಟ್ ಲ್ಯಾಂಪ್ ‘ ಕೃತಿಗೆ ವಿಶ್ವದ ಮೇರು ಸಾಹಿತ್ಯ ಪ್ರಶಸ್ತಿಯಾದ 2025 ನೇ ಸಾಲಿನ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಒಲಿದಿದೆ.

ಲಂಡನ್ ನಲ್ಲಿ 2025 ಮೇ 20 ರಂದು ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕೃತಿಯ ಅನುವಾದಕರಾದ ದೀಪ ಭಸ್ತಿ ಅವರೊಂದಿಗೆ ಬಾನು ಮುಷ್ತಾಕ್ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದರು.

ಬಾನು ಅವರು ‘ ಎದೆಯ ಹಣತೆ ‘ ಶೀರ್ಷಿಕೆಯಡಿ ಬರೆದಿದ್ದ ಈ ಕೃತಿಯನ್ನು ದೀಪಾ ಭಸ್ತಿಯವರು ‘ ಹಾರ್ಟ್ ಲ್ಯಾಂಪ್ ‘ ಹೆಸರಿನಲ್ಲಿ ಅನುವಾದಿಸಿದ್ದಾರೆ.

ಬೂಕರ್ ಪ್ರಶಸ್ತಿಯು ಕನ್ನಡ ಸಾಹಿತ್ಯಕ್ಕೆ ಸಿಕ್ಕ ಗೆಲುವು ಎಂದು ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗ ಸ್ವಾಮಿ ಸಂತಸ ವ್ಯಕ್ತಪಡಿಸಿದ್ದಾರೆ.

ಬಾನು ಮುಷ್ತಾಕ್ ಅವರು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ರಾಜ್ಯ ಸರ್ಕಾರ 2025 ರ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆ ಯನ್ನು ಬಾನು ಮುಷ್ತಾಕ್ ಅವರಿಂದ ಮಾಡಿಸುವ ಮೂಲಕ ಗೌರವ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ತೇಜಸ್ವಿ ಮನವಿ ಮಾಡಿದ್ದಾರೆ.

ಬಾನು ಮುಷ್ತಾಕ್ ಅವರಿಂದ ದಸಾರ ಉದ್ಘಾಟನೆ ಮಾಡಿಸಿ:ತೇಜಸ್ವಿ ಮನವಿ Read More