ಜನರಿಗೆ ಹೋಳಿಗೆ ವಿತರಿಸಿ ಕನಕ ಜಯಂತಿ

ಮೈಸೂರು: ಮೈಸೂರಿನಲ್ಲಿ ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜು ಬಸಪ್ಪ ಅವರ ನೇತೃತ್ವದಲ್ಲಿ ಸಾರ್ವ ಜನಿಕರಿಗೆ ಹೋಳಿಗೆ ಹಂಚುವ ಮೂಲಕ ಕನಕ ದಾಸರ ಜಯಂತಿಯನ್ನು ವಿಶೇಷವಾಗಿ ಆಚಾರಿಸಲಾಯಿತು.

ಕುಲ, ಜಾತಿ ,ಮತಗಳ ತಾರತಮ್ಯವನ್ನು ವಿರೋಧಿಸಿ ಸಮಾನತೆ ಸಾರಿದ ಕನಕದಾಸರ ಜಯಂತಿಯನ್ನು ಸಾರ್ವಜನಿಕರೊಂದಿಗೆ ಸೇರಿ ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸಂತ,ಕವಿ ಕನಕದಾಸರ ಭಾವಚಿತ್ರಕ್ಕೆ ದೀಪ ಬೆಳಗಿಸಿ ಪುಷ್ಪ ನಮನ ಸಲ್ಲಿಸಿ ಪೂಜೆ ಮಾಡಿ ನಂತರ ಸರ್ವಜನರಿಗೆ ಹೋಳಿಗೆ ವಿತರಲಿಸಲಾಯಿತು.

ಕನಕದಾಸರ ಜೀವನ ಮತ್ತು ಸಾಧನೆ, ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಸಮಾಜದಲ್ಲಿ ಎಲ್ಲರೂ ಸಮಾನರು ಎಂಬುದನ್ನು ಮರೆಯಬಾರದು ಎಂದು ಬಸವರಾಜ್ ಬಸಪ್ಪ ತಿಳಿಸಿದರು.

ಕಾರ್ಯಕ್ರಮದಲ್ಲಿ ಬಸವರಾಜು ಬಸಪ್ಪ ಅವರಿಗೆ ಮಂಜೇಶ್, ವಿದ್ಯಾ ಮತ್ತಿತರರು ಸಾಥ್ ನೀಡಿದರು.

ಜನರಿಗೆ ಹೋಳಿಗೆ ವಿತರಿಸಿ ಕನಕ ಜಯಂತಿ Read More

ಹುಣಸೂರು ತಾಲೂಕು ಕಚೇರಿಯಲ್ಲಿ ಕನಕದಾಸರ ಜಯಂತಿ ಆಚರಣೆ

ಹುಣಸೂರು: ಹುಣಸೂರಿನ ತಾಲೂಕು ಕಚೇರಿಯಲ್ಲಿ ಭಕ್ತ ಶ್ರೇಷ್ಠ ಕನಕದಾಸರ 538ನೇ ಜಯಂತಿಯನ್ನು ಆಚರಿಸಲಾಯಿತು.

ತಾಲೂಕು ದಂಡಾಧಿಕಾರಿಗಳಾದ ಮಂಜುನಾಥ್‌ ಅವರ ನೇತೃತ್ವದಲ್ಲಿ ನಡೆದ ಕನಕ ಜಯಂತಿ ಯಲ್ಲಿ ಎಲ್ಲ ಗಣ್ಯರು ದಾಸ ಶ್ರೇಷ್ಠರನ್ನು ಸ್ಮರಿಸಿದರು.

ನಗರಸಭಾ ಆಯುಕ್ತರಾದ ಮಾನಸ ಮತ್ತು ಎಲ್ಲಾ ಇಲಾಖೆಯ ಅಧಿಕಾರಿಗಳು ಕುರುಬ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಪದಾಧಿಕಾರಿಗಳು ಎಲ್ಲಾ ಸಮಾಜದ ಮುಖಂಡರು ಪಟ್ಟಣದ ನಾಗರೀಕರು ಪಾಲ್ಗೊಂಡಿದ್ದರು.

ಈ ವೇಳೆ ಭಕ್ತ ಶ್ರೇಷ್ಠ ಕನಕದಾಸರ ಭಾವಚಿತ್ರ ಇಟ್ಟು ಪೂಜಿಸಿ ನಮನ ಸಲ್ಲಿಸಿದರು.

ಹುಣಸೂರು ತಾಲೂಕು ಕಚೇರಿಯಲ್ಲಿ ಕನಕದಾಸರ ಜಯಂತಿ ಆಚರಣೆ Read More

ಕನಕದಾಸರು ಯಾವುದೆ ಜಾತಿಗೆ ಸೀಮಿತರಲ್ಲ: ಎಚ್ ವಿ ರಾಜೀವ್

ಮೈಸೂರು: ಕನಕದಾಸರು ಯಾವುದೆ ಜಾತಿಗೆ ಸೀಮಿತರಲ್ಲ, ಕುಲ ಕುಲವೆಂದು ಹೊಡೆದಾಡದಿರಿ ಎನ್ನುವ ಮೂಲಕ ಅಂದೇ ಜಾತಿ ಸಂಘರ್ಷಕ್ಕೆ ವಿರುದ್ಧವಾಗಿ ಸಾಮಾಜಿಕ ಜಾಗೃತಿ ಮೂಡಿಸಿದ್ದರು ಎಂದು ಕೆಪಿಸಿಸಿ ಸದಸ್ಯ ಎಚ್ ವಿ ರಾಜೀವ್ ತಿಳಿಸಿದರು.

ನಗರದ ಕಂಸಾಳೆ ಮಹದೇವಯ್ಯ ವೃತ್ತದಲ್ಲಿ‌
ಶ್ರೀ ಕನಕ ಸೇವಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಭಕ್ತ ಕನಕದಾಸರ 538ನೇ ಜಯಂತಿ ಕಾರ್ಯಕ್ರಮ ದಲ್ಲಿ ಶ್ರೀ ಕನಕದಾಸರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನಂತರ ಸಾರ್ವಜನಿಕರಿಗೆ ಮೈಸೂರು ಪಾಕ್ ವಿತರಿಸಿ ಅವರು ಮಾತನಾಡಿದರು.

ಭಕ್ತಿ ಪರಂಪರೆ ಕಾಲದಲ್ಲಿ ಅವರು ಎದುರಿಸಿದ ಸಂಕಷ್ಟಕ್ಕೆ ಬದಲಾಗಿ ತಮ್ಮ ವೈಚಾರಿಕ, ಪ್ರತಿಭಟನಾ ನೆಲೆಗಟ್ಟಿನಿಂದ ದಾಸ ಸಾಹಿತ್ಯಕ್ಕೆ ವೈಚಾರಿಕ ಪ್ರಭೆ ನೀಡಿದರು ಎಂದು ‌ತಿಳಿಸಿದರು.

ಭೂಮಿ ಅಗೆಯುತ್ತಿದ್ದಾಗ ಸಿಕ್ಕ ನಿಧಿಯನ್ನು ತಾನು ಬಳಸದೆ ಬಡವರ ಉದ್ಧಾರಕ್ಕೆ, ದೇವಸ್ಥಾನ ಜೀರ್ಣೋದ್ಧಾರ ಹೀಗೆ ಸಮಾಜಮುಖಿ ಕೆಲಸಕ್ಕೆ ನೀಡಿದರು.

ಕೀರ್ತನೆ, ಕಾವ್ಯದ ಮೂಲಕ ಜನರ ಅಜ್ಞಾನ ಹೋಗಲಾಡಿಸುವ ಕೆಲಸ ಮಾಡಿದರು. ವ್ಯಾಸರಾಯರ ಶಿಷ್ಯನಾಗಿ ಅವರ ಮನಗೆದ್ದ ಹಲವು ಘಟನೆ ಇಂದಿಗೂ ಕಥೆಯಾಗಿ ಜನಪ್ರಿಯವಾಗಿವೆ. ಕನಕದಾಸರ ಜೀವನ ಎಲ್ಲರೂ ಅನುಸರಿಸುವಂತದ್ದು, ಅವರ ಜೀವನ ಓದಿ ತಿಳಿದು ಅದರಂತೆ ನಡೆದುಕೊಳ್ಳಬೇಕು ಎಂದು ರಾಜೀವ್ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ರವಿತೇಜ, ಕೇಬಲ್ ಮಹದೇವ್, ಶಿವನಂಜು,ಟಿಂಬರ್ ನಾಗರಾಜ್, ಕೃಷ್ಣಕುಮಾರ್ (ಕಿಟ್ಟಿ) ಕಂಸಾಳೆ ರವಿ, ನಾಗೇಶ್, ಪುಟ್ಟಸ್ವಾಮಿ, ಮಲ್ಲೇಶ್, ನಾಗರಾಜು, ಎಸ್ ಎನ್ ರಾಜೇಶ್, ಯತೀಶ್,ಗೋಬಿ ಸಂತೋಷ್, ದಿನೇಶ್, ರೈಸ್ ಕುಮಾರ್ ಮತ್ತಿತರರು ಹಾಜರಿದ್ದರು.

ಕನಕದಾಸರು ಯಾವುದೆ ಜಾತಿಗೆ ಸೀಮಿತರಲ್ಲ: ಎಚ್ ವಿ ರಾಜೀವ್ Read More

ಶ್ರೀ ಭಕ್ತ ಕನಕದಾಸ ಜಯಂತಿ:ಹೋಳಿಗೆ ವಿತರಣೆ

ಮೈಸೂರು: ಜೀವದಾರ ರಕ್ತ ನಿಧಿ ಕೇಂದ್ರ ಹಾಗೂ ಕೃಷ್ಣರಾಜ ಯುವ ಬಳಗದ ವತಿಯಿಂದ ಶ್ರೀ ಭಕ್ತ ಕನಕದಾಸರ 537 ನೇ ಜಯಂತಿಯ ಪ್ರಯುಕ್ತ ಜನರಿಗೆ ಹೋಳಿಗೆ ವಿತರಿಸಲಾಯಿತು.

ಮೈಸೂರಿನ ಚಾಮರಾಜ ಜೋಡಿ ರಸ್ತೆಯಲ್ಲಿ
ಜೀವದಾರ ರಕ್ತ ನಿಧಿ ಕೇಂದ್ರ ಹಾಗೂ ಕೃಷ್ಣರಾಜ ಯುವ ಬಳಗದವರು
ಸಾರ್ವಜನಿಕರಿಗೆ ಹೋಳಿಗೆ ವಿತರಿಸಿ ಖುಷಿ ಪಟ್ಟರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ. ಕೆ ಸೋಮಶೇಖರ್, ಪ್ರದೇಶ ಕುರುಬರ ಸಂಘದ ಅಧ್ಯಕ್ಷರಾದ ಸುಬ್ಬಣ್ಣ, ಶಿವಣ್ಣ, ಬಿಜೆಪಿ ಮುಖಂಡ ಶಿವಕುಮಾರ್,ನಗರ ಪಾಲಿಕೆ ಮಾಜಿ ಸದಸ್ಯರಾದ ಗೋಪಿ, ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಆರ್ ಕೆ ರವಿ, ಮಂಜುನಾಥ್, ಮಂಜ್ಜಪ, ಪುರುಷೋತ್ತಮ್ ಮತ್ತಿತರರು ಹಾಜರಿದ್ದರು.

ಶ್ರೀ ಭಕ್ತ ಕನಕದಾಸ ಜಯಂತಿ:ಹೋಳಿಗೆ ವಿತರಣೆ Read More