ದೀಪೋತ್ಸವಗಳು ಜ್ಞಾನ ಬೆಳಗಿಸುವ ಉತ್ಸವಗಳಾಗಲಿ: ಸೋಮಸುಂದರ್ ದೀಕ್ಷಿತ್

ಮೈಸೂರು: ದೀಪೋತ್ಸವ ಮನಸ್ಸಿನ
ಕಲ್ಮಶ ತೊಳೆದು ಜ್ಞಾನದ ಬೆಳಕು ಹಚ್ಚುವ ಉತ್ಸವಗಳಾಗಬೇಕು ಎಂದು ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಡಾಕ್ಟರ್ ಎಸ್ ಸೋಮಸುಂದರ್ ದೀಕ್ಷಿತ್ ಹೇಳಿದರು.

ಮೈಸೂರು ಕಲ್ಯಾಣಗಿರಿ, ಡಾಕ್ಟರ್ ರಾಜಕುಮಾರ್ ರಸ್ತೆಯಲ್ಲಿರುವ ಶ್ರೀ ಕಲ್ಯಾಣ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಸ್ಥಾನದ ಎದುರು ವಿಷ್ಣು ದೀಪೋತ್ಸವ ಪ್ರಯುಕ್ತ
ಹಮ್ಮಿಕೊಂಡಿದ್ದ ಲಕ್ಷ ದೀಪೋತ್ಸವಕ್ಕೆ ಚಾಕನೆ ನೀಡಿ ಅವರು ಮಾತನಾಡಿದರು.

ದೀಪೋತ್ಸವ ಎಂಬುದು ದೀಪಗಳನ್ನು
ಬೆಳಗುವುದನ್ನು ಸೂಚಿಸುತ್ತದೆ. ಹಣತೆ ನಮ್ಮ ದೇಹವನ್ನು ಸಂಕೇತಿಸಿದರೆ ಬೆಳಕು ನಮ್ಮ ಆತ್ಮವನ್ನು ಸೂಚಿಸುತ್ತದೆ ಎಂದು ಅವರು ಹೇಳಿದರು.

ಲಕ್ಷದೀಪೋತ್ಸವದಲ್ಲಿ ನೂರಾರು ಭಕ್ತರು ದೀಪ ಬೆಳಗಿಸಿದರು.

ಲಕ್ಷ ದೀಪೋತ್ಸವಕ್ಕೂ ಮುನ್ನ ದೇವರಿಗೆ ವಿಶೇಷ ಅಲಂಕಾರದೊಂದಿಗೆ ಬೆಳಗ್ಗೆಯಿಂದಲೇ ವಿಶೇಷ ಪೂಜೆ ಸಲ್ಲಿಸಲಾಯಿತು.

ಸಾಮ್ರಾಜ್ಯ ಮಹಾಲಕ್ಷ್ಮೀ ಯಾಗ, ಪೂರ್ಣಾಹುತಿ, ಅನ್ನದಾನ, ಭಜನಾ ಕಾರ್ಯಕ್ರಮ ಸೇರಿದಂತೆ ವಿವಿಧ ಕೈಂಕರ್ಯ ಗಳು ನೆರವೇರಿದವು.

ದೇಮಗೆ ಪೂಜೆ ಸಲ್ಲಿಸಿದ ಭಕ್ತರು, ವಿಶೇಷ ಅಲಂಕಾರ, ಹೋಮದ ಸೇವೆ, ಅಲಂಕಾರ ಸೇವೆ, ಅನ್ನದಾನ, ಪ್ರಸಾದ ಸೇವೆ, ಸುವರ್ಣ ಪುಷ್ಪ ಅಷ್ಟೋತ್ತರ ಸೇವೆ, ಮಹಾಸಂಕಲ್ಪ, ಕಮಲ ಪುಷ್ಪಾರ್ಚನೆ ಸೇವೆ, ತುಪ್ಪದ ದೀಪ, ಕಂಕಣ ಕಟ್ಟುವುದು, ಸಾಲಿಗ್ರಾಮ ಅವಧೃತ ತೀರ್ಥಸ್ನಾನ, ದೀಪೋತ್ಸವಕ್ಕೆ ಎಣ್ಣೆ ಸೇರಿದಂತೆ ವಿವಿಧ ಸೇವೆಗಳ ಮೂಲಕ ಕೃತಾರ್ಥರಾದರು.

ಆರ್‌ಎಸ್‌ಎಸ್ ಜೇಷ್ಠ ಪ್ರಚಾರಕರಾದ ಸು.ರಾಮಣ್ಣ, ದೇವಸ್ಥಾನದ ಸಂಸ್ಥಾಪಕ ಹೆಚ್.ಜಿ.ಗಿರಿಧರ, ಯೋಗಾನಂದ, ಅಭಿಸ್ಟಾ, ದರ್ಶನ್, ರವಿಚಂದ್ರ, ಶ್ರೀನಿಧಿ, ನಿಕಿತ್, ಪಂಪಾಪತಿ ಮತ್ತಿತರರು ದೀಪೋತ್ಸವದಲ್ಲಿ ಪಾಲ್ಗೊಂಡಿದ್ದರು.

ದೀಪೋತ್ಸವಗಳು ಜ್ಞಾನ ಬೆಳಗಿಸುವ ಉತ್ಸವಗಳಾಗಲಿ: ಸೋಮಸುಂದರ್ ದೀಕ್ಷಿತ್ Read More

ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಡಿ.15 ಲಕ್ಷ ದೀಪೋತ್ಸವ

ಮೈಸೂರು: ನಗರದ ಕಲ್ಯಾಣಗಿರಿ ಡಾ ರಾಜಕುಮಾರ್ ರಸ್ತೆಯಲ್ಲಿರುವ ಶ್ರೀ ಕಲ್ಯಾಣ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಡಿಸೆಂಬರ್ 15 ರಂದು ವಿಷ್ಣು ದೀಪೋತ್ಸವದ ಪ್ರಯುಕ್ತ ಲಕ್ಷ ದೀಪೋತ್ಸವ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ಪೋಸ್ಟರ್ ಗಳನ್ನು ದೇವಸ್ಥಾನದ ಸಂಸ್ಥಾಪಕರಾದ ಎಚ್‍ ಜಿ ಗಿರಿಧರ್ ಬಿಡುಗಡೆಗೊಳಿಸಿದರು.

ಈ ವೇಳೆ ಮಾತನಾಡಿದ ಗಿರಿಧರ್, 15 ರ ಭಾನುವಾರದಂದು ಬೆಳಗ್ಗೆ 9ಕ್ಕೆ ದೇವರಿಗೆ ವಿಶೇಷ ಅಲಂಕಾರ ಇರುತ್ತದೆ. ಸಾಮ್ರಾಜ್ಯ ಮಹಾಲಕ್ಷ್ಮೀ ಯಾಗ ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ 12ಕ್ಕೆ ಪೂರ್ಣಾಹುತಿ 1ಕ್ಕೆ ಅನ್ನದಾನ, ಸಂಜೆ 5ಕ್ಕೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ಸಂಜೆ 6ಕ್ಕೆ ಲಕ್ಷ ದೀಪೋತ್ಸವ ನೆರವೇರಲಿದೆ ಭಕ್ತರು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ನರಸಿಂಹರಾಜ ಕ್ಷೇತ್ರದ ಅಧ್ಯಕ್ಷರಾದ ಸ್ಮಾರ್ಟ್ ಮಂಜು, ಪ್ರಧಾನ ಕಾರ್ಯದರ್ಶಿ ಪದ್ಮನಾಥ್, ದೇವಸ್ಥಾನದ ಅರ್ಚಕರಾದ ದರ್ಶನ್ ಕುಮಾರ್, ನಿಕಿತ್, ಪ್ರಕಾಶ್ ಮತ್ತಿತರರು
ಉಪಸ್ಥಿತರಿದ್ದರು.

ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಡಿ.15 ಲಕ್ಷ ದೀಪೋತ್ಸವ Read More