ಸಿಎಂ‌ ತವರು ಜಿಲ್ಲೆಯಲ್ಲೆ ಅಂಬೇಡ್ಕರ್ ಭಾವಚಿತ್ರ ವಿರೂಪ:ಆರ್ ಡಿ ಎಂ ಎಸ್ ಪ್ರತಿಭಟನೆ

ಮೈಸೂರು: ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲೇ‌ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಕಿಡಿಗೇಡಿಗಳು ವಿರೂಪಗೊಳಿಸಿ ವಿಕೃತಿ ಮೆರೆದಿದ್ದು ರಾಜ್ಯ ದ್ರಾವಿಡ ಮಹಾಸಭಾ ಸದಸ್ಯರು ಸಿಡಿದೆದ್ದಿದ್ದಾರೆ.

ಮೈಸೂರು ತಾಲೂಕು ಕಡಕೊಳ ಬಳಿಯ ಸಿಂಧುವಳ್ಳಿ ಗ್ರಾಮದಲ್ಲಿ ಮಧ್ಯರಾತ್ರಿ ಯಾರೋ ಕಿಡಿಗೇಡಿಗಳು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ವಿರೂಪಗೊಳಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ರಾಜ್ಯ ದ್ರಾವಿಡ ಮಹಾಸಭಾ ರಾಜ್ಯಾಧ್ಯಕ್ಷ ಅಶೋಕಪುರಂ ಶ್ರೀನಿವಾಸ್ ಮತ್ತು ಅವರ ಸದಸ್ಯರು ಬೆಂಬಲಿಗರು ಸಿಂಧುವಳ್ಳಿ ಗ್ರಾಮಕ್ಕೆ ಧಾವಿಸಿ ಘಟನೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದರು.

ಇಡೀ ಗ್ರಾಮದ ಜನತೆ ಹಾಗೂ ಅಂಬೇಡ್ಕರ್ ಸಂಘಟನೆಗಳ ಸದಸ್ಯರು ಯುವ ಸಂಘಟನೆಗಳ ಸದಸ್ಯರು ಅಶೋಕಪುರಂ ಶ್ರೀನಿವಾಸ್ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಘಟನೆಯನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಅಶೋಕಪುರಂ ಶ್ರೀನಿವಾಸ್ ಅವರು ನಮ್ಮ ದೇಶಕ್ಕೆ ಅತ್ಯುತ್ತಮವಾದ ಸಂವಿಧಾನವನ್ನು ಕೊಟ್ಟ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಹರಿದು ಕಿಡಿಗೇಡುಗಳು ವಿಕೃತಿ ಮೆರೆದಿದ್ದಾರೆ.ಇಂತಹುದನ್ನು ಸಹಿಸಲು ಸಾಧ್ಯ ವಿಲ್ಲ,ನಾವು ಕೈಕಟ್ಟಿ ಕೂರುವುದಿಲ್ಲ ಎಂದು ಕಠಿಣ ಎಚ್ಚರಿಕೆ ನೀಡಿದರು.

ಕೂಡಲೇ ಆರೋಪಿಗಳನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆ ವಿಷಯದಂತೆ ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಸ್ಥಳಕ್ಕೆ ಧಾವಿಸಿ ಪ್ರತಿಭಟನಾ ನಿರತರನ್ನು ಸಮಾಧಾನ ಪಡಿಸಲು ಯತ್ನಿಸಿದರು.

ನಂತರ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಭೇಟಿ ನೀಡಿ ಪರಿಶೀಲಿಸಿ ಮುಖಂಡರುಗಳಿಂದ ಮಾಹಿತಿ ಪಡೆದರು.

ಯಾವುದೇ‌ ಅಹಿತಕರ‌ ಘಟನೆ ನಡೆಯದಂತೆ ಪೊಲೀಸ್‌ ಬಂದೋಬಸ್ತ್ ಮಾಡಲಾಗಿತ್ತು.

ಸಿಎಂ‌ ತವರು ಜಿಲ್ಲೆಯಲ್ಲೆ ಅಂಬೇಡ್ಕರ್ ಭಾವಚಿತ್ರ ವಿರೂಪ:ಆರ್ ಡಿ ಎಂ ಎಸ್ ಪ್ರತಿಭಟನೆ Read More

ಕಡಕೊಳದಲ್ಲಿ ಮತ್ತೆ ಆರಂಭವಾಗುತ್ತಿದೆ ಕುರಿ, ಮೇಕೆ, ಜಾನುವಾರು ಶನಿವಾರ ಸಂತೆ

ಮೈಸೂರು: ಕಡಕೊಳದಲ್ಲಿ ಸರ್ಕಾರದ ವತಿಯಿಂದ ನಿರ್ಮಾಣ‌ವಾಗಿರುವ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ಶನಿವಾರ ಕುರಿ, ಮೇಕೆ, ಹಸು, ಜಾನುವಾರುಗಳ ಮಾರಾಟ ಸಂತೆ 15 ವರ್ಷಗಳ ನಂತರ ಮತ್ತೆ ಪ್ರಾರಂಭವಾಗುತ್ತಿದೆ.

ಕೃಷಿ ಉತ್ಪನ್ನ ಮಾರಾಟ ಇಲಾಖೆ ವತಿಯಿಂದ ರೈತರು ಸಾಕಾಣಿಕೆ ಮಾಡಿರುವ ಕುರಿ, ಮೇಕೆ, ಹಸು, ಜಾನುವಾರುಗಳನ್ನು ಯೋಗ್ಯ ಬೆಲೆಗೆ ಮಾರಾಟ ಮಾಡಲು ರೈತರಿಗೆ ಸಹಕಾರಿಯಾಗಲು ಕಡಕೊಳದಲ್ಲಿ ಸರ್ಕಾರದ ವತಿಯಿಂದ ಉಪ ಮಾರುಕಟ್ಟೆ ಪ್ರಾಂಗಣ ನಿರ್ಮಿಸಿ ಪ್ರತಿ ಶನಿವಾರ ಕುರಿ, ಮೇಕೆ, ಹಸು, ಜಾನುವಾರುಗಳ ಮಾರಾಟಕ್ಕಾಗಿ ಸಂತೆಯನ್ನು ನಡೆಸಲು ತೀರ್ಮಾನಿಸಲಾಗಿದೆ.

ಕಳೆದ 15 ವರ್ಷಗಳಿಂದ ನಿಂತು ಹೋಗಿರುವ ಸಂತೆಯನ್ನು ಪುನಃ ಪ್ರಾರಂಭಿಸಲು ಪ್ರಯತ್ನಪಟ್ಟಿರುವ ಶ್ರೀ ಮಹದೇಶ್ವರ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಬಹುವರ್ಷಗಳ ಬೇಡಿಕೆಗೆ ಈಗ ಫಲ ದೊರೆತಿದೆ.

ಈ ಸಂತೆಯ ಉಸ್ತುವಾರಿಯನ್ನು ನೋಡಿಕೊಳ್ಳಲು ಶ್ರೀ ಮಹದೇಶ್ವರ ಕುರಿ ಮತ್ತು ಉಣ್ಣೆ ಉತ್ಪಾದರಕ ಸಹಕಾರ ಸಂಘ ಸಿಂಧುವಳ್ಳಿ ಅವರಿಗೆ ವಹಿಸಲಾಗಿದೆ.
ಆದ್ದರಿಂದ ಮೈಸೂರು ಜಿಲ್ಲೆಯ ಎಲ್ಲಾ ರೈತರುಗಳು, ಕುರಿಗಾಹಿಗಳು ತಾವು ಸಾಕಿರುವ ಕುರಿ, ಮೇಕೆ, ಹಸು, ಜಾನುವಾರುಗಳನ್ನು ದಳ್ಳಾಳಿಗಳ ಮೊರೆ ಹೋಗದೆ ಯೋಗ್ಯ ಬೆಲೆಗೆ ಮಾರಾಟ ಮಾಡಲು ಹಾಗೂ ಕೊಂಡುಕೊಳ್ಳಲು ಈ ಸಂತೆಯು ತುಂಬಾ ಉಪಯೋಗವಾಗಲಿದೆ.

ಆದ್ದರಿಂದ ಜಿಲ್ಲೆಯಾದ್ಯಂತ ಇರುವ ರೈತರು ಶನಿವಾರ ಸಂತೆಯನ್ನು ಉತ್ತಮವಾಗಿ ಬಳಸಿಕೊಂಡು ಸಂತೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಶ್ರೀ ಮಹದೇಶ್ವರ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಎಸ್.ಎಂ.ಚಂದ್ರಶೇಖರ್, ಸಿಂಧುವಳ್ಳಿಯವರು ಕೋರಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಮೊಬೈಲ್ 9900956277 ಸಂಪರ್ಕಿಸಬಹುದು.

ಕಡಕೊಳದಲ್ಲಿ ಮತ್ತೆ ಆರಂಭವಾಗುತ್ತಿದೆ ಕುರಿ, ಮೇಕೆ, ಜಾನುವಾರು ಶನಿವಾರ ಸಂತೆ Read More

ಕಡಕೋಳ ಶ್ರೀ ಬೀರೇಶ್ವರ ಸ್ವಾಮಿ ಮತ್ತು ಕಾಳಮ್ಮ ಟ್ರಸ್ಟ್ ಅಧ್ಯಕ್ಷರಾಗಿ ಬಿ ನಾಗರಾಜು ಆಯ್ಕೆ

ಮೈಸೂರು: ಕಡಕೋಳ ಶ್ರೀ ಬೀರೇಶ್ವರ ಸ್ವಾಮಿ ಮತ್ತು ಕಾಳಮ್ಮ ಟ್ರಸ್ಟ್ ಅಧ್ಯಕ್ಷರಾಗಿ ಬಿ ನಾಗರಾಜು ಮತ್ತೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಂಜನಗೂಡು – ಮೈಸೂರು ಊಟಿ ರಸ್ತೆ ಕಡಕೋಳ ಬಳಿ ಇರುವ ಶ್ರೀ ಬೀರೇಶ್ವರ ಸ್ವಾಮಿ ಮತ್ತು ಕಾಳಮ್ಮ ಟ್ರಸ್ಟ್ ಅಧ್ಯಕ್ಷರಾಗಿ ನಾಲ್ಕನೇ ಬಾರಿಗೆ ಬಿ ನಾಗರಾಜ್ ಅವರನ್ನು ಟ್ರಸ್ಟಿನ ಎಲ್ಲಾ ಸದಸ್ಯರು 33 ಹಳ್ಳಿ ಗಡಿ ಯಜಮಾನರಾದ ಸಿದ್ದರಾಮ ಅವರ ನೇತೃತ್ವದಲ್ಲಿ ನಡೆದ ಸಭೆ ನಡೆಸಿದರು.

ಟ್ರಸ್ಟ್ ನ ಅಧ್ಯಕ್ಷ ಬಿ ನಾಗರಾಜು ಅವರ ಅಧ್ಯಕ್ಷ ಅವಧಿ ಪೂರ್ಣಗೊಂಡಿದ್ದು, ಟ್ರಸ್ಟ್ ನ ಎಲ್ಲಾ ಸದಸ್ಯರು 33 ಹಳ್ಳಿ ಗಡಿ ಯಜಮಾನರಾದ ಸಿದ್ದರಾಮ ಅವರ ನೇತೃತ್ವದಲ್ಲಿ ಸಭೆ ಸೇರಿ ನಾಗರಾಜು ಅವರನ್ನೇ ಮತ್ತೊಮ್ಮೆ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಸತತವಾಗಿ 4ನೇ ಅವಧಿಗೆ ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಿ ಮತ್ತೊಮ್ಮೆ ದೇವರ ಸೇವೆ ಮಾಡಲು ಅವಕಾಶ ಮಾಡಿಕೊಟ್ಟ ಯಜಮಾನರು ಟ್ರಸ್ಟಿನ ಎಲ್ಲ ಸದಸ್ಯರಿಗೂ ನಾನು ಸದಾ ಚಿರಋಣಿಯಾಗಿ ಆಭಾರಿಯಾಗಿರುತ್ತೇನೆ ಎಂದು ನೂತನ ಅಧ್ಯಕ್ಷ ಬಿ ನಾಗರಾಜು ತಿಳಿಸಿದರು.

ಕಡಕೋಳ ಶ್ರೀ ಬೀರೇಶ್ವರ ಸ್ವಾಮಿ ಮತ್ತು ಕಾಳಮ್ಮ ಟ್ರಸ್ಟ್ ಅಧ್ಯಕ್ಷರಾಗಿ ಬಿ ನಾಗರಾಜು ಆಯ್ಕೆ Read More

ಬಿಕೆಟಿ ಪಬ್ಲಿಕ್ ಶಾಲೆ ವಿದ್ಯ ಸಂಸ್ಥೆ, ಕಾಳಿ ಬೀರೇಶ್ವರ ಟ್ರಸ್ಟ್ ನಿಂದ ಪೌರಕಾರ್ಮಿಕರಿಗೆ ಸನ್ಮಾನ

ಮೈಸೂರು: ಮೈಸೂರಿನ ಕಡಕೋಳ ಗ್ರಾಮದ ಬಿಕೆಟಿ ಪಬ್ಲಿಕ್ ಶಾಲೆ ವಿದ್ಯ ಸಂಸ್ಥೆ ಹಾಗೂ ಕಾಳಿ ಬೀರೇಶ್ವರ ಟ್ರಸ್ಟ್ ವತಿಯಿಂದ ದಸರಾ ಹಬ್ಬದ ಪ್ರಯುಕ್ತ ಕಡಕೋಳ ಪಟ್ಟಣ ಪಂಚಾಯ್ತಿಯ ಪೌರಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ವೇಳೆ ಮಾತನಾಡಿದ ಕಾಳಿ ಬೀರೇಶ್ವರ ಟ್ರಸ್ಟ್‌ ಅಧ್ಯಕ್ಷ ಬಿ ನಾಗರಾಜ್ ಅವರು, ನಮ್ಮ ಗ್ರಾಮಗಳ ಸ್ವಚ್ಛತೆ ಮಾಡುವ ಮೂಲಕ ಜನರ ಆರೋಗ್ಯವನ್ನು ಕಾಪಾಡುತ್ತಿರುವ ಪೌರಕಾರ್ಮಿಕರನ್ನು ವಿಶ್ವಾಸ ಮತ್ತು ಗೌರವದಿಂದ ಕಾಣಬೇಕೆಂದು ಮನವಿ ಮಾಡಿದರು.

ಪ್ರತಿವರ್ಷದಂತೆ ಈ ವರ್ಷವೂ ಸಹ ಪೌರಕಾರ್ಮಿಕರಿಗೆ ದಸರಾ ಹಬ್ಬದ ಪ್ರಯುಕ್ತ ಪುರುಷರಿಗೆ ಹೊಸ ಬಟ್ಟೆ ಮಹಿಳಾ ಪೌರಕಾರ್ಮಿಕರಿಗೆ ಹೊಸ ಸೀರೆ ಬಟ್ಟೆಗಳನ್ನು ವಿತರಿಸಿ ಗೌರವಿಸಿ ಸನ್ಮಾನ ಮಾಡುವುದರಿಂದ ಇದು ಅವರ ಸೇವೆಗೆ ಸಂದ ಗೌರವ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಕೆಂಪೇಗೌಡ, 33 ಹಳ್ಳಿ ಯಜಮಾನರಾದ ಸಿದ್ದರಾಮೇಗೌಡ, ನಂಜುಂಡೇಗೌಡ ಖಜಾಂಚಿ ಶ್ರೀ ಕೃಷ್ಣ, ಕೆ. ಟಿ ಶಿವಣ್ಣ, ಟ್ರಸ್ಟಿನ ಸದಸ್ಯರಾದ ಶಿವಬೀರ, ಸಿದ್ದಪ್ಪ, ಹುಚ್ಚೇಗೌಡ, ಕಾಳೇಗೌಡ, ಮಾಲೆಗೌಡ,ಮಾದೇಗೌಡ, ಶಿವ ಬೇರ, ಶಿವಕುಮಾರ್, ಮಹದೇವ, ಕರ್ನಾಟಕ ರಕ್ಷಣಾ ವೇದಿಕೆಯ ರಾಕೇಶ, ವೀರೇಶ, ಮಾಲೆಗೌಡ, ಚಿಕ್ ಪುಟ್ಟಯ್ಯ, ಶಂಭುಲಿಂಗು, ಚನ್ನಬಸವ, ಸುಬ್ಬೇಗೌಡ, ನಾರಾಯಣ ನಾಯ್ಕ, ಬಿಕೆಟಿ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕರಾದ ಎಂ ಕುಮಾರಸ್ವಾಮಿ, ಪೌರಕಾರ್ಮಿಕರ ಸಂಘದ ಅಧ್ಯಕ್ಷ ಆನಂದ್ ಹಾಗೂ ಪೌರಕಾರ್ಮಿಕರು ಗ್ರಾಮಸ್ಥರು ಹಾಜರಿದ್ದರು.

ಬಿಕೆಟಿ ಪಬ್ಲಿಕ್ ಶಾಲೆ ವಿದ್ಯ ಸಂಸ್ಥೆ, ಕಾಳಿ ಬೀರೇಶ್ವರ ಟ್ರಸ್ಟ್ ನಿಂದ ಪೌರಕಾರ್ಮಿಕರಿಗೆ ಸನ್ಮಾನ Read More