ಪತ್ರಕರ್ತ ಕೆ ಬಿ ಗಣಪತಿ ಅವರಿಗೆ ಕೆ ಎಂ ಪಿ ಕೆ ಟ್ರಸ್ಟ್ ನಿಂದ ಸಂತಾಪ

ಮೈಸೂರು: ಹಿರಿಯ ಪತ್ರಕರ್ತರು ಹಾಗೂ ಹೆಸರಾಂತ ಮೈಸೂರು ಮಿತ್ರ ಮತ್ತು ಸ್ಟಾರ್ ಆಫ್ ಮೈಸೂರು ಪತ್ರಿಕೆಗಳ ಸಂಪಾದಕರಾದ ಕೆ ಬಿ ಗಣಪತಿ ಅವರಿಗೆ ಕೆ ಎಮ್ ಪಿ ಕೆ ಟ್ರಸ್ಟ್ ವತಿಯಿಂದ ಸಂತಾಪ ಸಲ್ಲಿಸಲಾಯಿತು

ಮೈಸೂರಿನ ಅಗ್ರಹಾರ ವೃತ್ತದಲ್ಲಿ ಕೆ ಎಮ್ ಪಿ ಕೆ ಟ್ರಸ್ಟ್ ವತಿಯಿಂದ ಕೆ.ಬಿ.ಗಣಪತಿ ಅವರ ಭಾವಚಿತ್ರ ಹಿಡಿದು ಸಂತಾಪ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಚಂದ್ರಶೇಖರ್, ಮೈಸೂರು ಮಿತ್ರ ಹಾಗೂ ಸ್ಟಾರ್ ಆಫ್ ಮೈಸೂರು ಪತ್ರಿಕೆಗಳು ಮೈಸೂರು ನಗರಕ್ಕೆ ಎರಡು ಕಣ್ಣುಗಳು ಇದ್ದಹಾಗೆ ಎಂದು ‌ಬಣ್ಣಿಸಿದರು.

ಒಂದು ಸ್ಥಳೀಯ ಪತ್ರಿಕೆ ರಾಜ್ಯ ಮಟ್ಟದಲ್ಲಿ ಸರಿಸಾಟಿಯಾಗಿ ನಿಂತದೆ. ಒಂದು ಪತ್ರಿಕೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ವಿಚಾರಗಳನ್ನ ತಿಳಿಸುತ್ತಾ, ಅನೇಕ ಉದಯೋನ್ಮುಖ ಲೇಖಕರಿಗೆ ಅವರ ಬರಹಗಳಿಗೆ ಅವಕಾಶ ಮಾಡಿಕೊಟ್ಟು ನೂರಾರು ಉದ್ಯೋಗದಾತರಿಗೆ ಉದ್ಯೋಗ ಒದಗಿಸಿದ್ದು ಮೈಸೂರು ಮಿತ್ರ, ಸ್ಟಾರ್ ಆಫ್ ಮೈಸೂರು ಪತ್ರಿಕೆಗಳು.ಇದು
ಹೆಮ್ಮೆಯ ವಿಚಾರ ಎಂದು ಹೇಳಿದರು.

ಕೆ ಬಿ ಜಿ ಯವರ ಸಂಪಾದಿಕೀಯ ಛೂ ಮಂತ್ರ ಓದುಗರ ಗಮನವನ್ನು ಸೆಳೆದಿದ್ದು ವಿಶೇಷವಾಗಿತ್ತು, ನೇರ ಮಾತಿನಲ್ಲಿ ಸರ್ಕಾರವನ್ನು ಎಚ್ಚರಿಸುವ, ಜನರಲ್ಲಿ ಜಾಗೃತಿ ಮೂಡಿಸುವ ಪ್ರಸ್ತುತ ವಿಚಾರಗಳನ್ನು ಇಟ್ಟುಕೊಂಡು ಬರೆಯುತ್ತಿದ್ದ ಅಂಕಣ ಬರಹಗಳು ಎಲ್ಲಾ ಕಾಲಕ್ಕೂ ಪ್ರಸ್ತುತವಾದದ್ದು ಎಂದು ಚಂದ್ರಶೇಖರ್ ಹೇಳಿದರು.

ಸ್ಟಾರ್ ಆಫ್ ಮೈಸೂರು ಪತ್ರಿಕೆಯಲ್ಲಿ ಅಬ್ರಕ ಡಬ್ರ ಕಾಲಂ ಅಷ್ಟೇ ಪ್ರಸಿದ್ಧವಾದದ್ದು. ತಮ್ಮ ಪತ್ರಿಕೆಯ ಮೂಲಕ ಸಾಹಿತ್ಯ, ಸಂಗೀತ,ಕಲೆ, ಸಾಂಸ್ಕೃತಿಕ,ಧಾರ್ಮಿಕ ವಿಚಾರಗಳಿಗೆ
ಹೆಚ್ಚು ಮಹತ್ವವನ್ನು ಕೆ.ಬಿ.ಗಣಪತಿ ಅವರು ನೀಡುತ್ತಿದ್ದರು ಎಂದು ಹೇಳಿದರು

ಈ ಸಂದರ್ಭದಲ್ಲಿ ನಗರ ಪಾಲಿಕೆ ಮಾಜಿ ಸದಸ್ಯರಾದ ಮಾ ವಿ ರಾಮಪ್ರಸಾದ್, ಮೈಸೂರ್ ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೇಬಲ್ ಮಹೇಶ್, ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ, ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, ಜಿ ರಾಘವೇಂದ್ರ,ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಕರ್ನಾಟಕ ಸೇನಾ ಪಡೆ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಟಿ ಎಸ್ ಅರುಣ್ ರಂಗನಾಥ್, ಚಕ್ರಪಾಣಿ, ರವಿಚಂದ್ರ, ಹರೀಶ್ ನಾಯ್ಡು,ಜೆಡಿಎಸ್ ಯುವ ಮುಖಂಡ ಪ್ರಶಾಂತ್,ರಾಜೇಂದ್ರ ಪ್ರಸಾದ್,ಮಹಾನ್ ಶ್ರೇಯಸ್, ದಿನೇಶ್, ವಿಶ್ವನಾಥ್ ಮತ್ತಿತರರು ಸಂತಾಪ ವ್ಯಕ್ತಪಡಿಸಿದರು.

ಪತ್ರಕರ್ತ ಕೆ ಬಿ ಗಣಪತಿ ಅವರಿಗೆ ಕೆ ಎಂ ಪಿ ಕೆ ಟ್ರಸ್ಟ್ ನಿಂದ ಸಂತಾಪ Read More