ಥ್ರೋಬಾಲ್ ಪಂದ್ಯಾವಳಿ:ಜೆ ಎಸ್ ಎಸ್ ಮಹಿಳಾ ವಸತಿ ನಿಲಯ ವಿದ್ಯಾರ್ಥಿಗಳು ಪ್ರಥಮ
ಮೈಸೂರು: ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 110ನೇ ಜಯಂತಿ ಪ್ರಯುಕ್ತ ಮೈಸೂರು ನಗರ ಅಂತರ ವಸತಿ ನಿಲಯ ಥ್ರೋಬಾಲ್ ಪಂದ್ಯಾವಳಿ ಹಮ್ಮಿಕೊಳ್ಳಲಾಯಿತು.
ಜೆ ಎಸ್ ಎಸ್ ಮಹಿಳಾ ವಸತಿ ನಿಲಯಗಳ ಸಮುಚ್ಚಯ ಸರಸ್ವತಿಪುರಂನಲ್ಲಿ ನಡೆದ ಮೈಸೂರು ನಗರ ಅಂತರ ವಸತಿ ನಿಲಯ ಥ್ರೋಬಾಲ್ ಪಂದ್ಯಾವಳಿಯಲ್ಲಿ ಜೆ ಎಸ್ ಎಸ್ ಮಹಿಳಾ ನಿಲಯದ ವಿದ್ಯಾರ್ಥಿಗಳು ಭಾಗವಹಿಸಿ ಪ್ರಥಮ ಬಹುಮಾನ ಪಡೆದರು.
ಈ ವೇಳೆ ವಸತಿ ನಿಲಯದ ಮುಖ್ಯ ನಿಲಯ ಪಾಲಕರಾದ ಮಮತಾ ಸುರೇಶ್, ಎಲ್ಲಾ ನಿಲಯಪಾಲಕರು ಹಾಗೂ ಜೆಎಸ್ಎಸ್ ಮಹಿಳಾ ಕಾಲೇಜು ಸರಸ್ವತಿಪುರಂ ದೈಹಿಕ ಶಿಕ್ಷಕರುಗಳಾದ ಶಿವಕುಮಾರ್,ರಶ್ಮಿ ಹಾಜರಿದ್ದು ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿದರು.
ಥ್ರೋಬಾಲ್ ಪಂದ್ಯಾವಳಿ:ಜೆ ಎಸ್ ಎಸ್ ಮಹಿಳಾ ವಸತಿ ನಿಲಯ ವಿದ್ಯಾರ್ಥಿಗಳು ಪ್ರಥಮ Read More
