ಜೆಎಸ್‌ಎಸ್ ಉನ್ನತ ಶಿಕ್ಷಣ ಸಂಶೋಧನಾ ಅಕ್ಯಾಡೆಮಿ 16 ನೆ ಘಟಿಕೋತ್ಸವ
ಮೈಸೂರು: ನ್ಯಾಕ್ ನಿಂದ ಎ ಶ್ರೇಣಿಯನ್ನು ಪಡೆದಿರುವ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕ್ಯಾಡೆಮಿಯ 16 ನೆ ಘಟಿಕೋತ್ಸವ ನ. 9 ರಂದು ಮಧ್ಯಾಹ್ನ 1.25 ಕ್ಕೆ ಮೈಸೂರಿನ ಶ್ರೀ ಶಿವರಾತ್ರೀಶ್ವರ ನಗರದಲ್ಲಿ ನೆರವೇರಲಿದೆ.
ಘಟಿಕೋತ್ಸವಕ್ಕೆ ಸಂಸ್ಥೆಯ ಕುಲಾಧಿಪತಿಗಳಾದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಜಿ ಅವರು ಚಾಲನೆ ನೀಡಲಿದ್ದಾರೆ.
ಸಮಾರಂಭದಲ್ಲಿ ಉಪರಾಷ್ಟ್ರಪತಿ ಚಂದ್ರಾಪುರಂ ಪೊನ್ನುಸಾಮಿ ರಾಧಾಕೃಷ್ಣನ್ ಅವರು ಘಟಿಕೋತ್ಸವ ಭಾಷಣ ಮಾಡುವುದರ ಜೊತೆಗೆ ಚಿನ್ನದ ಪದಕಗಳು ಮತ್ತು ಪ್ರಶಸ್ತಿಗಳನ್ನು ನೀಡಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಉಪಕುಲಪತಿ ಡಾ.ಬಿ.ಸುರೇಶ್ ಮಾಹಿತಿ ನೀಡಿದರು.
ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಪದವಿ ಮತ್ತು ಡಿಪ್ಲೊಮಾ ವಿಭಾಗಗಳಿಂದ ಒಟ್ಟು 2,925 ಪದವೀಧರರು ವಿವಿಧ ವಿಭಾಗಗಳಲ್ಲಿ ಪದವಿ ಪ್ರಮಾಣ ಪತ್ರಗಳನ್ನು ಪಡೆಯಲಿದ್ದಾರೆ.
ಪಿಎಚ್‌ಡಿ ವಿಭಾಗದಿಂದ ಒಟ್ಟು 80 ವಿದ್ವಾಂಸರಿಗೆ ಪಿಎಚ್ ಡಿ ಪದವಿಗಳನ್ನು ನೀಡುವುದರ ಜೊತೆಗೆ,7 ಅಭ್ಯರ್ಥಿಗಳಿಗೆ ವೈದ್ಯಕೀಯ ಡಾಕ್ಟರೇಟ್ (DM) ಮತ್ತು Master of Chirurgie (M Ch) ಪದವಿಗಳನ್ನು ನೀಡಲಾಗುವುದು.
ಶೈಕ್ಷಣಿಕ ಶ್ರೇಷ್ಠತೆ ವಿಭಾಗದಿಂದ ಅತ್ಯುತ್ತಮ ಶೈಕ್ಷಣಿಕ ಸಾಧನೆ ಮಾಡಿರುವ 68 ಪ್ರತಿಭಾನ್ವಿತ ವಿದ್ಯಾರ್ಥಿಗಳು 100 ಪದಕಗಳು ಮತ್ತು ಪ್ರಶಸ್ತಿಗಳನ್ನು ಪಡೆಯಲಿದ್ದಾರೆ.
NEP 2020 ರ ಅಡಿಯಲ್ಲಿ 4 ವರ್ಷಗಳ ಪದವಿ ಕಾರ್ಯಕ್ರಮದ ಮೊದಲ ಬ್ಯಾಚ್ ನ B.Sc ಆನರ್ಸ್ 132 ಪದವೀಧರರು ಪದವಿ ಪಡೆಯುವರಿ.
ಜೆಎಸ್‌ಎಸ್ ಉನ್ನತ ಶಿಕ್ಷಣ ಸಂಶೋಧನಾ ಅಕ್ಯಾಡೆಮಿ 16 ನೆ ಘಟಿಕೋತ್ಸವ Read More