ಮನ ನೊಂದು ವೃದ್ಧ ದಂಪತಿ ಆತ್ಮ*ಹತ್ಯೆ

ಬೆಂಗಳೂರು: ಹೆತ್ತು,ಹೊತ್ತು ಪ್ರೀತಿಯಿಂದ ಸಾಕಿ ಬೆಳೆಸಿದ ಮಕ್ಕಳು‌‌ ವೃದ್ದಾಪ್ಯದಲ್ಲಿ ತಮ್ಮನ್ನು ಮಕ್ಕಳು ನೋಡಿಕೊಳ್ಳುತ್ತಾರೆ ಎಂದು ತಂದೆ,ತಾಯಿ ಆಸೆ ಇಟ್ಟುಕೊಳ್ಳುವುದೇ ತಪ್ಪೇನೊ ಎಂಬುದು ಕೆಲ ಘಟನೆಗಳನ್ನು ಕಂಡಾಗ ಅನಿಸಿಬಿಡುತ್ತದೆ.

ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ನಡೆದಿರುವ ಮನಕಲಕುವ ಘಟನೆ ಇದಕ್ಕೆ ಸಾಕ್ಷಿಯಾಗಿದೆ.

ಜೆಪಿ ನಗರ 8ನೇ ಹಂತದ ವೃದ್ದಾಶ್ರಮದಲ್ಲಿ ವೃದ್ಧ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೃಷ್ಣಮೂರ್ತಿ (81) ಮತ್ತು ಅವರ ಪತ್ನಿ ರಾಧಾ (74) ಆತ್ಮಹತ್ಯೆ ಮಾಡಿಕೊಂಡ ವೃದ್ದ ದಂಪತಿ.

ಈ ದಂಪತಿಯನ್ನು ಕೆಲ ವಾರಗಳ ಹಿಂದೆ ಅವರ ಪುತ್ರನೇ ತಂದು ಸೇರಿಸಿ ಹೋಗಿದ್ದರಂತೆ.

ಮನೆಯಲ್ಲಿ ಸೊಸೆ ಮಾಡುವ ಅಡುಗೆ ಚೆನ್ನಾಗಿಲ್ಲವೆಂದು ಹೇಳಿದ್ದಕ್ಕೆ ಸೊಸೆ ತಾತ್ಸಾರ ಮಾಡಿ ಜಗಳ ಮಾಡುತ್ತಿದ್ದಳು. ಇದನ್ನು ಮಗನಿಗೆ ಹೇಳಿದರೆ ಅಸತ ಕೂಡ ಜಗಳ ಮಾಡಿ ತಂದೆ-ತಾಯಿಗೆ ಬೈಯುತ್ತಿದ್ದ.ಸದಾ ಜಗಳದಿಂದ ದಂಪತಿ‌ ನೊಂದಿದ್ದರು‌.

ಮಂಗಳವಾರ ರಾತ್ರಿ ದಂಪತಿ ಅವರ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬುಧವಾರ ಅವರ ಕೊಠಡಿಯ ಬಾಗಿಲು ಬಹಳ ಹೊತ್ತಾದರೂ ತೆರೆಯದ ಕಾರಣ ಆಶ್ರಮದ ಸಿಬ್ಬಂದಿ ಪೊಲೀಸರ ನೆರವಿನಿಂದ ಬಾಗಿಲು ತೆರೆಸಿದ್ದು,ನೇಣಿನ ಕುಣಿಕೆಯಲ್ಲಿ ದಂಪತಿಯ ಶವ ಪತ್ತೆಯಾಗಿದೆ.

ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮನ ನೊಂದು ವೃದ್ಧ ದಂಪತಿ ಆತ್ಮ*ಹತ್ಯೆ Read More

ಮಧ್ಯರಾತ್ರಿ ಬೈಕ್ ಕದಿಯುತ್ತಿದ್ದವನ ಸಿನಿಮೀಯ ರೀತಿಯಲ್ಲಿ ಹಿಡಿದ ಮಾಲೀಕ

ಬೆಂಗಳೂರು: ಮಧ್ಯರಾತ್ರಿ ಬೈಕ್ ಕದಿಯಲು ಬಂದಿದ್ದ ಕಳ್ಳನನ್ನು ಸಿನಿಮೀಯ ರೀತಿಯಲ್ಲಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಜೆಪಿ ನಗರದಲ್ಲಿ ನಡೆದಿದೆ

ನಿನ್ನೆ ಮದ್ಯ ರಾತ್ರಿ ಐನಾತಿ ಬೈಕ್ ಕಳ್ಳ ಜೆಪಿ ನಗರ ಮೊದಲನೇ ಹಂತ 34ನೇ ಮುಖ್ಯ ರಸ್ತೆಯಲ್ಲಿರುವ ಪಿ ಎಂ ಆರ್ ರೆಸಿಡೆನ್ಸಿ ಅಪಾರ್ಟ್ ಮೆಂಟ್ ಮುಂಭಾಗ ನಿಲ್ಲಿಸಿದ್ದ ಯಮಹ ಆರ್ ಎಕ್ಸ್ 100 ಬೈಕ್ ಹ್ಯಾಂಡಲ್ ಮುರಿದು ತಳ್ಳಿಕೊಂಡು ಹೋಗಿದ್ದಾನೆ.

ಬೈಕ್ ಮಾಲೀಕ ರಾಕೇಶ್ ಅವರ ಪತ್ನಿಗೆ ಶಬ್ದ ಕೇಳಿಸಿದೆ,ತಕ್ಷಣ ಅವರು ಪತಿಯನ್ನು ಎಚ್ಚರಿಸಿ ವಿಷಯ ತಿಳಿಸಿದ್ದಾರೆ.

ಕೂಡಲೇ ರಾಕೇಶ್ ಅಕ್ಕಪಕ್ಕದ ನಿವಾಸಿಗಳಿಗೆ ವಿಷಯ ತಿಳಿಸಿ ಸುಮಾರು ಒಂದು ಕಿಲೋಮೀಟರ್ ಸಿನಿಮೀಯ ರೀತಿಯಲ್ಲಿ ಛೇಸ್ ಮಾಡಿ ಕಳ್ಳನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ನಂತರ ಕಳ್ಳನನ್ನು ಮರಕ್ಕೆ ಕಟ್ಟಿಹಾಕಿ ಜೆಪಿ ನಗರ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.

ಸ್ಥಳಕ್ಕೆ ಧಾವಿಸಿದ ಜೆಪಿ ನಗರ ಪೊಲೀಸರು ಕಳ್ಳನನ್ನು ಬಂಧಿಸಿ,ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮಧ್ಯರಾತ್ರಿ ಬೈಕ್ ಕದಿಯುತ್ತಿದ್ದವನ ಸಿನಿಮೀಯ ರೀತಿಯಲ್ಲಿ ಹಿಡಿದ ಮಾಲೀಕ Read More