ರಿಪ್ಪನ್ ಸ್ವಾಮಿ ಚಿತ್ರದಲ್ಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ಅವಮಾನ; ದೃಶ್ಯ ತೆಗೆಯಲು ಆಗ್ರಹ

ಮೈಸೂರು: ರಿಪ್ಪನ್ ಸ್ವಾಮಿ ಚಿತ್ರದ
ನಿರ್ದೇಶಕ ಕಿಶೋರ್ ಮೂರ್ತಿ ಹಾಗೂ ನಟ ವಿಜಯ ರಾಘವೇಂದ್ರ ಅವರಿಂದ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ಅವಮಾನ ಮಾಡಲಾಗಿದೆ ಎಂದು ಯುವಭಾರತ್ ಸಂಘಟನೆಯ ಜೋಗಿ ಮಂಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಮೆಝಾನ್ ಪ್ರೈಮ್ ನಲ್ಲಿ ಶುಕ್ರವಾರ ಬಿಡುಗಡೆ ಯಾಗಿರುವ ರಿಪ್ಪನ್ ಸ್ವಾಮಿ ಚಲನ ಚಿತ್ರದಲ್ಲಿ ಹಿಂದು ಧರ್ಮ ಹಾಗೂ ಸಂಸ್ಕೃತಿಗೆ ಪ್ರತೀಕ ಹರಿಹರ ಪುತ್ರ ಅಯ್ಯಪ್ಪ ಸ್ವಾಮಿಯ ಮಾಲಾಧಾರಿಗಳಿಗೆ ಕಾಲಿನಿಂದ ಒದ್ದು ಅವರನ್ನು ತುಳಿದ ತುಣುಕುಗಳನ್ನು ನೋಡಿ ದಿಗ್ರಮೆ ಯಾಯಿತು ಎಂದು ಜೋಗಿ ಮಂಜು ಹೇಳಿದ್ದಾರೆ.

ಇದು ಅಯ್ಯಪ್ಪ ಸ್ವಾಮಿಗೆ ಮಾಡಿದ ಅವಮಾನ. ಅವಮಾನ ಮಾಡುವ ಮೂಲಕ ಹಣ ಮಾಡುವ ತೆವಲು ನಿರ್ದೇಶಕರುಗಳಿಗೆ ಇರಬಾರದು ಎಂದು ಅವರು ಅಸಮಾಧಾನ ಪಟ್ಟಿದ್ದಾರೆ.

ಕೂಡಲೆ ಇಂತಹ ತುಣುಕುಗಳನ್ನು ತೆಗೆದು ಪ್ರಚಾರ ಮಾಡಬೇಕು ಇಲ್ಲವಾದರೆ ಕಾನೂನು ಹೋರಾಟ ಮಾಡಬೇಕಾಗುತ್ತದೆ ಎಂದು ಜೋಗಿ ಮಂಜು ಎಚ್ಚರಿಸಿದ್ದಾರೆ.

ರಿಪ್ಪನ್ ಸ್ವಾಮಿ ಚಿತ್ರದಲ್ಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ಅವಮಾನ; ದೃಶ್ಯ ತೆಗೆಯಲು ಆಗ್ರಹ Read More

ಉಗ್ರರ ದಾಳಿ: ಮೃತರ ಕುಟುಂಬಕ್ಕೆ 50ಲಕ್ಷ ಪರಿಹಾರಕ್ಕೆ ಜೋಗಿ ಮಂಜು ಆಗ್ರಹ

ಮೈಸೂರು: ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಜೀವ ಕಳೆದಕೊಂಡ ಮೂವರು ಕನ್ನಡಿಗರ ಕುಟುಂಬಕ್ಕೆ ತಲಾ ಐವತ್ತು ಲಕ್ಷ ರೂ ಪರಿಹಾರ ನೀಡಬೇಕೆಂದು‌ ಸಿಎಂ ಸಿದ್ದರಾಮಯ್ಯ ಅವರನ್ನು ಮೈಸೂರು ನಗರ ಬಿಜೆಪಿ ಉಪಾಧ್ಯಕ್ಷ ಜೋಗಿ ಮಂಜು ಆಗ್ರಹಿಸಿದ್ದಾರೆ.

ಪಾಕಿಸ್ತಾನಿ ಉಗ್ರರು ದೇಶದೊಳಗೆ ನುಗ್ಗಿಬಂದು ಕ್ರೂರವಾಗಿ ಪ್ರವಾಸಿಗರನ್ನು ಕೊಂದಿದ್ದಾರೆ. ಹೀಗೆ ಹತ್ಯೆಯಾದವರಲ್ಲಿ ಕುಟುಂಬಕ್ಕೆ ಆಧಾರವಾಗಿದ್ದವರೇ ಗುರಿಯಾಗಿದ್ದು ಇದರಿಂದ ಕುಟುಂಬಗಳವರು ಅನಾಥವಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ರಾಜ್ಯಸರ್ಕಾರ ಕೇವಲ 10 ಲಕ್ಷ ಪರಿಹಾರ ಘೋಷಿಸಿರುವುದು ನ್ಯಾಯವಾದ ಪರಿಹಾರವಲ್ಲ.ಈ ಹಿಂದೆ ಕೇರಳದ ವ್ಯಕ್ತಿಯೊಬ್ಬರು ರಾಜ್ಯದಲ್ಲಿ ಆನೆ ತುಳಿತದಿಂದ ಸಾವಿಗೀಡಾದಾಗ ರಾಜ್ಯ ಸರ್ಕಾರ ಇಪ್ಪತ್ತ ಐದು ಲಕ್ಷ ರೂ ಪರಿಹಾರ ನೀಡಲಾಗಿತ್ತು ಎಂಬುದನ್ನು ಈ ಸಂದರ್ಭದಲ್ಲಿ ನೆನಪಿಸ ಬಯಸುತ್ತೇನೆ ಪ್ರಕಟಣೆಯಲ್ಲಿ ಜೋಗಿ ಮಂಜು ತಿಳಿಸಿದ್ದಾರೆ.

ಆದ್ದರಿಂದ ಕೂಡಲೇ ಸಿದ್ದರಾಮಯ್ಯ ನವರು ಉಗ್ರರ ಅಟ್ಟಹಾಸದಿಂದ ಅನಾಥರಾಗಿರುವ ಕುಟುಂಬಗಳಿಗೆ ತಲಾ ಐವತ್ತು ಲಕ್ಷ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಉಗ್ರರ ದಾಳಿ: ಮೃತರ ಕುಟುಂಬಕ್ಕೆ 50ಲಕ್ಷ ಪರಿಹಾರಕ್ಕೆ ಜೋಗಿ ಮಂಜು ಆಗ್ರಹ Read More