ಮೈಸೂರು: ಮೈಸೂರಿನ ಉದ್ಬೂರು ಗೇಟ್ ಸಾಹಸಸಿಂಹ ಕರ್ನಾಟಕ ರತ್ನ ವಿಷ್ಣುವರ್ಧನ್ ಅವರ ಸ್ಮಾರಕಕ್ಕೆ ಅಭಿಮಾನಿಗಳ ಅನುಕೂಲಕ್ಕಾಗಿ 40,000 ರೂ ವೆಚ್ಚದ ಶುದ್ಧ ಕುಡಿಯುವ ನೀರಿನ ಘಟಕವನ್ನು ಜೀವದಾರ ರಕ್ತ ನಿಧಿ ಕೇಂದ್ರ ಕೊಡುಗೆ ನೀಡಿದೆ.
ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಅವರು ನೀರಿನ ಘಟಕವನ್ನು ಲೋಕಾರ್ಪಣೆ ಮಾಡಿದರು.
ಈ ವೇಳೆ ಮಾತನಾಡಿದ ಗಿರೀಶ್, ಅಭಿಮಾನಿಗಳು ನೀರನ್ನು ಪೋಲು ಮಾಡದೆ ಹಿತಮಿತವಾಗಿ ಬಳಸುವ ಮೂಲಕ ನೀರನ್ನು ಸಂರಕ್ಷಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿ ಬಳಗದ ಅಧ್ಯಕ್ಷರಾದ ಎಂ ಡಿ ಪಾರ್ಥಸಾರಥಿ, ಕರುಣಾಮಯಿ ವಿಷ್ಣು ಅಭಿಮಾನಿ ಬಳಗದ ಅಧ್ಯಕ್ಷ ಎಸ್ ಎನ್ ರಾಜೇಶ್,ಸ್ಮಾರಕ ಮೇಲ್ವಿಚಾರಕರಾದ ಸತೀಶ್, ರಕ್ಷಾ ಗಿರೀಶ್, ರಘು, ಸದಾಶಿವ್, ಪ್ರಭು, ಮಹದೇವ್, ಸಂತೋಷ್ ಮತ್ತಿತರರು ಹಾಜರಿದ್ದರು.
ಮೈಸೂರು: ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಜೀವಧಾರ ರಕ್ತ ನಿಧಿ ಕೇಂದ್ರದ ಆವರಣದಲ್ಲಿ 15 ಬಾರಿ ಮೇಲ್ಪಟ್ಟು ಸ್ವಯಂ ಪ್ರೇರಿತ ರಕ್ತದಾನ ಮಾಡಿದ ರಕ್ತದಾನಿಗಳನ್ನು ಸತ್ಕರಿಸಿ ಗೌರವಿಸಲಾಯಿತು.
ಬ್ಲಡ್ ಆನ್ ಕಾಲ್ ಕ್ಲಬ್ ಸಹಯೋಗದೊಂದಿಗೆ 15 ಬಾರಿ ಮೇಲ್ಪಟ್ಟು ಸ್ವಯಂ ಪ್ರೇರಿತ ರಕ್ತದಾನ ಮಾಡಿದ ನವೀನ್, ಕಾಂತಿಲಾಲ್ ಸಂದೇಶ, ಮಂಜುನಾಥ್ ವೈ ಎಸ್, ಯಶ್ವಂತ್, ರಶ್ಮಿ ಶರ್ಮಾ,ಪರಾಶ್ರಮ ಬೋರನ, ರಾಹುಲ್ ಕೊಠಾರಿ,ಮೀನಾಕ್ಷಿ ಕೊಠಾರಿ,ಮನೀಶ್ ಜೈನ್, ವನಿತಾ ಡಕ್, ಮುಕೇಶ್ ಅವರುಗಳನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ 100ಕ್ಕೂ ಹೆಚ್ಚು ಬಾರಿ ಸ್ವಯಂ ಪ್ರೇರಿತ ರಕ್ತದಾನ ಮಾಡಿದ ದೇವೇಂದ್ರ ಪರಿಹಾರಿಯ ಅವರನ್ನು ವಿಶೇಷವಾಗಿ ಗೌರವಿಸಲಾಯಿತು.
ಈ ವೇಳೆ ಮಾತನಾಡಿದ ಜೀವಧಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ರಕ್ತದಾನದಿಂದ ಶರೀರದಲ್ಲಿ ಚೈತನ್ಯ ಶಕ್ತಿಯು ಹೆಚ್ಚಾಗಿ ದೇಹದಲ್ಲಿ ಆರೋಗ್ಯಕರ ಬದಲಾವಣೆಗಳನ್ನು ಕಾಣಬಹುದು ಎಂದು ಹೇಳಿದರು.
ರಕ್ತದಾನದ ಬಗ್ಗೆ ಪರಿಚಯದರಿಗೂ ತಿಳಿಸಿ ಅವರನ್ನೂ ಇಂತಹ ಉತ್ತಮ ಕಾರ್ಯಗಳಲ್ಲಿ ಭಾಗಿಯಾಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ಮನವಿ ಮಾಡಿದರು.
ರಕ್ತದಾನದ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು.ಅವಶ್ಯಕವಾದಾಗ ಹುಡುಕುವುದಕ್ಕಿಂತ ಮುಂಚೆಯೇ ಸಾಕಷ್ಟು ರಕ್ತವನ್ನು ಸಂಗ್ರಹಿಸಿಟ್ಟುಕೊಳ್ಳಲು ಕ್ರಮ ವಹಿಸಿಕೊಳ್ಳಬೇಕು. ಜಿಲ್ಲೆಯಲ್ಲಿ ರಕ್ತದ ಕೊರತೆಯು ಹೆಚ್ಚಾಗಿರುವುದರಿಂದ ರಕ್ತದಾನದ ಅವಶ್ಯಕತೆಯಿದೆ. ದಾನಿಗಳು ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವುದರಿಂದ ರಕ್ತದ ಕೊರತೆಯನ್ನು ಸಾಧ್ಯವಾದ ಮಟ್ಟಿಗೆ ನಿಭಾಯಿಸಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಬ್ಲಡ್ ಆನ್ ಕಾಲ್ ಕ್ಲಬ್ ಮೈಸೂರಿನ ದೇವೇಂದ್ರ ಪರಿಹಾರಿಯ, ಆನಂದ್ ಮಾಂದೋಟ್, ಮಹಾವೀರ ಜೈನ, ಸಪ್ನ, ಮಮತಾ, ಸದಾಶಿವ್ ಮತ್ತಿತರರು ಹಾಜರಿದ್ದರು.
ಮೈಸೂರು: ಭಯೋತ್ಪಾದನೆ, ಹಿಂಸೆ, ಅಮಾನವೀಯತೆ ಹೆಸರಿನಲ್ಲಿ ರಕ್ತ ಹರಿಸುವ ಬದಲು ಸಾವು-ಬದುಕಿನ ನಡುವೆ ಹೋರಾಡುವವರಿಗೆ ರಕ್ತ ನೀಡುವುದು ನಿಜವಾದ ಮಾನವೀಯತೆ ಎಂದು ಮಾಜಿ ಮಹಾಪೌರರಾದ ಸಂದೇಶ ಸ್ವಾಮಿ ಹೇಳಿದರು.
ನಗರದ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಜೀವದಾರ ರಕ್ತ ನಿಧಿ ಕೇಂದ್ರದ ಆವರಣದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ 25ಕ್ಕೂ ಹೆಚ್ಚು ಬಾರಿ ಸ್ವಯಂ ಪ್ರೇರಿತ ರಕ್ತದಾನ ಮಾಡಿದ ರಕ್ತಧಾನಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.
ದಾನ ಮಾಡುವುದು ಮೊದಲಿನಿಂದ ಇದ್ದರೂ ರಕ್ತದಾನಕ್ಕೆ ತನ್ನದೇ ಆದ ಮಹತ್ವ ಇದೆ. ನೀರು, ಪೆಟ್ರೋಲ್, ಡೀಸೆಲ್ ಹೀಗೆ ಯಾವ ವಸ್ತುವನ್ನಾದರೂ ದುಡ್ಡು ಕೊಟ್ಟು ಕೊಂಡುಕೊಳ್ಳಬಹುದು,ಆದರೆ ರಕ್ತವನ್ನು ಮಾತ್ರ ಕೊಂಡುಕೊಳ್ಳಲು ಆಗುವುದಿಲ್ಲ ಎಂದು ತಿಳಿಸಿದರು.
ಪ್ರತಿಯೊಬ್ಬರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವುದರಿಂದ ಜೀವದಾನಿಗಳಾಗಬಹುದು ಎಂದು ಹೇಳಿದರು.
ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ರಕ್ತ ಅತ್ಯವಶ್ಯಕವಾಗಿಬೇಕು. ದ್ವೇಷ, ಜನಾಂಗೀಯ ಘರ್ಷಣೆಯಿಂದ ರಕ್ತಹರಿದರೆ ಯಾವ ಪ್ರಯೋಜನವೂ ಇಲ್ಲ. ದೌರ್ಜನ್ಯದಿಂದ ರಕ್ತ ಹರಿಸುವುದು ಅನಾಗರೀಕತನ. ಜೀವದ ಬೆಲೆಯನ್ನು ಎಲ್ಲರೂ ಅರ್ಥಮಾಡಿಕೊಂಡು ತುರ್ತು ಸಂದರ್ಭಗಳಲ್ಲಿ ರಕ್ತದಾನ ಮಾಡಬೇಕು ರಕ್ತದಾನದಿಂದ ನಿಶ್ಯಕ್ತರಾಗುತ್ತೇವೆ ಎಂಬುದು ತಪ್ಪು ಕಲ್ಪನೆ ಎಂದು ಸಂದೇಶ್ ಸ್ವಾಮಿ ತಿಳಿಹೇಳಿದರು.
ಡಿ ವೈ ಎಸ್ ಪಿ ಕಿರಣ್ ಕುಮಾರ್ ಮಾತನಾಡಿ,ಒಂದು ಯೂನಿಟ್ ರಕ್ತದಿಂದ 3 ಜೀವವನ್ನು ಉಳಿಸಬಹುದು. ಎಲ್ಲರೂ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿ ಎಂದು ಸಲಹೆ ನೀಡಿದರು.
ರಕ್ತವನ್ನು ಇನ್ನಿತರ ವಸ್ತುಗಳಂತೆ ಕೃತಕವಾಗಿ ತಯಾರಿಸಲಾಗದು. ಈ ನಿಟ್ಟಿನಲ್ಲಿ ನಡೆದ ಸಂಶೋಧನೆಗಳೂ ಫಲ ನೀಡಿಲ್ಲ. ನೆಗೆಟಿವ್ ಗ್ರೂಪ್ ರಕ್ತ ಸಿಗುವುದು ತುಂಬಾ ಅಪರೂಪ ವಾಗಿದ್ದು, ಇಂತವರು ಹೆಚ್ಚು ದಾನ ಮಾಡುವ ಅತ್ಯಗತ್ಯವಾಗಿದೆ ಎಂದು ಹೇಳಿದರು.
ಅತಿ ಹೆಚ್ಚು ರಕ್ತದಾನ ಮಾಡುವ ಪ್ರವೃತ್ತಿ ಹೊಂದಿರುವ ಎಲ್ಲರಿಗೂ ಧನ್ಯವಾದಗಳನ್ನು ಕಿರಣ್ ಕುಮಾರ್ ಸಲ್ಲಿಸಿದರು.
ರಕ್ತದಾನ ಮಾಡುವುದರಿಂದ ಮತ್ತೊಂದು ಜೀವವನ್ನು ಉಳಿಸಬಹುದು ಇದು ಒಂದು ಮಹತ್ಕಾರ್ಯ ಎಂದು ಮೈಸೂರು ನಗರ ಬಿಜೆಪಿ ಉಪಾಧ್ಯಕ್ಷರಾದ ಹೇಮಾ ನಂದೀಶ್ ತಿಳಿಸಿದರು.
ಇದೇ ವೇಳೆ ಯತಿರಾಜ್, ಸೈಯದ್ ನಜಮುದ್ದೀನ್, ನಾಗೇಂದ್ರ, ಬಾಲಚಂದ್ರ, ಅಕ್ಷಯ್ ಭಾರದ್ವಾಜ್, ಕೌಶಿಕ್ ಬಾರದ್ವಾಜ್, ಭರತ್, ರೇವಣ್ಣ, ಪ್ರೇಮ ಅವರುಗಳನ್ನು ಸನ್ಮಾನಿಸ ಲಾಯಿತು.
ಮೈಸೂರ್ ನಗರ ಬಿಜೆಪಿ ಉಪಾಧ್ಯಕ್ಷರಾದ ಹೇಮಾ ನಂದೀಶ್, ಸಿಸಿಬಿ ಇನ್ಸ್ಪೆಕ್ಟರ್ ಶಬೀರ್ ಹುಸೇನ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಬ್ಲಡ್ ಆನ್ ಕಾಲ್ ಕ್ಲಬ್ ಮೈಸೂರು ದೇವೇಂದ್ರ ಪರಿಹಾರಿಯ,ಸಮಾಜ ಸೇವಕರಾದ ರಮೇಶ್, ಸೂರಜ್, ಸದಾಶಿವ್ ಮತ್ತಿತರರು ಪಾಲ್ಗೊಂಡಿದ್ದರು.
ಮೈಸೂರು:ಕೋಟಿಗಟ್ಟಲೇ ಆಸ್ತಿ ಮಾಡಿಟ್ಟರೆ ಮನಸ್ಸಿಗೆ ನೆಮ್ಮದಿ ಸಿಗಲಾರದು, ಅಸಹಾಯಕ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾದರೆ ಸಂತೋಷ ಸಿಗಲಿದೆ ಎಂದು ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಮುತ್ತಣ್ಣ ಹೇಳಿದರು.
ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಗುಬ್ಬಚ್ಚಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಮಂಗಳವಾರ ಜೀವದಾರ ರಕ್ತ ನಿಧಿ ಕೇಂದ್ರದ ವತಿಯಿಂದ ಉಚಿತ ನೋಟ್ ಪುಸ್ತಕ, ಲೇಖನ ಸಾಮಾಗ್ರಿ, ಊಟದ ಬ್ಯಾಗ್ ವಿತರಿಸಿ ಅವರು ಮಾತನಾಡಿದರು.
ಮಕ್ಕಳಿಗೆ ದಾನದ ರೂಪದಲ್ಲಿ ನೋಟ್ ಪುಸ್ತಕ ವಿತರಿಸುತ್ತಿಲ್ಲ, ಬದಲಾಗಿ ಭವಿಷ್ಯದಲ್ಲಿ ವಿದ್ಯಾವಂತರಾಗಿ ಸಮಾಜದಲ್ಲಿ ದೊಡ್ಡವ್ಯಕ್ತಿಗಳಾಗಿ ರೂಪುಗೊಳ್ಳಲಿ ಎಂಬ ಉದ್ದೇಶದಿಂದ ಈ ಸಾಮಾಜಿಕ ಕಾರ್ಯಕ್ಕೆ ಮುಂದಾಗಿದೆ. ಹೀಗಾಗಿ ಶಾಲಾಮಕ್ಕಳು ಸೌಲಭ್ಯವನ್ನು ಸದ್ಬಳಕೆ ಮಾಡಿಕೊಂಡು ಭವಿಷ್ಯದಲ್ಲಿ ಅಸಹಾಯಕರಿಗೆ ಸ್ಪಂದಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ವಿದ್ಯೆಯಿಂದ ಮಾತ್ರ ಕಳೆದುಕೊಂಡಿದ್ದನ್ನು ಮರಳಿ ಪಡೆಯಲು ಸಾಧ್ಯ. ಆದ್ದರಿಂದ ಸಮಾಜದ ಮಕ್ಕಳು ಉನ್ನತ ಶಿಕ್ಷಣ ಪಡೆಯುವತ್ತ ಗಮನಹರಿಸಬೇಕು,ಪಾಲಕರು ಕೂಡಾ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪ್ರೋತ್ಸಾಹಿಸಬೇಕು, ಮಕ್ಕಳ ಶಿಕ್ಷಣಕ್ಕೆ ಯಾವುದೇ ರೀತಿಯ ಅನಾನುಕೂಲವಾದರೆ ಜೀವದಾರ ರಕ್ತ ನಿಧಿ ಕೇಂದ್ರ ಸದಾ ಬೆನ್ನೆಲುಬಾಗಿ ನಿಲ್ಲಲಿದೆ ಎಂದು ಮುತ್ತಣ್ಣ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಜಿ ರಾಘವೇಂದ್ರ, ರಾಕೇಶ್, ಮಣಿಕಂಠ,ಚಂದ್ರು, ಶಾಲೆಯ ಮುಖ್ಯ ಶಿಕ್ಷಕರಾದ ಮೋಹನ್ ಕುಮಾರ್ ಮತ್ತಿತರರು ಹಾಜರಿದ್ದರು.
ಮೈಸೂರು: ಜೀವದಾರ ರಕ್ತ ನಿಧಿ ಕೇಂದ್ರ ಹಾಗೂ ಕೆಎಂಪಿ ಕೆ ಟ್ರಸ್ಟ್ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರರಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜಯಂತಿ ಪ್ರಯುಕ್ತ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ.
ನಗರದ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಜೀವಧಾರ ರಕ್ತನಿಧಿ ಕೇಂದ್ರ ಆವರಣದಲ್ಲಿ ಜ 23 ರಂದು ಬೆಳಗ್ಗೆ 11 ಗಂಟೆಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಬಂದು ರಕ್ತದಾನ ಮಾಡಬೇಕೆಂದು ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ತಿಳಿಸಿದ್ದಾರೆ
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ಟಿ ಎಸ್ ಶ್ರೀವತ್ಸ, ಬಿಜೆಪಿ ನಗರಾಧ್ಯಕ್ಷ ಎಲ್ ನಾಗೇಂದ್ರ, ಜಿಲ್ಲಾಧ್ಯಕ್ಷ ಎಲ್ ಆರ್ ಮಾದೇಸ್ವಾಮಿ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರ ನಾರಾಯಣಗೌಡ, ಮಂಡಿ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಾದ ನಾಗೇಶ್, ಹಿರಿಯ ಸಮಾಜ ಸೇವಕರಾದ ಕೆ ರಘುರಾಮ್ ವಾಜಪೇಯಿ ,ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಮತ್ತಿತರರು ಭಾಗವಹಿಸಲಿದ್ದಾರೆ.
ಮೈಸೂರು: ಸನಾತನ ಧರ್ಮದಲ್ಲಿ ದಾನಕ್ಕೆ ಅಪಾರ ಮಹತ್ವವಿದೆ,ಫಲಾಪೇಕ್ಷೆ ಇಲ್ಲದೆ ದಾನ ನೀಡುವ ಗುಣವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದು ಶ್ರೀಕ್ಷೇತ್ರ ಬೇಬಿ ಮಠ ಮತ್ತು ಚಂದ್ರವನ ಆಶ್ರಮದ ಪೀಠಾಧ್ಯಕ್ಷರಾದ ಡಾ.ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮಿಗಳು ತಿಳಿಸಿದರು.
ದಾನ ಧರ್ಮದಿಂದ ವರ್ತಮಾನ, ಭವಿಷ್ಯ ಹಾಗೂ ಮುಂದಿನ ಜನ್ಮದಲ್ಲೂ ಪುಣ್ಯ ಫಲ ಸಿಗುವ ನಂಬಿಕೆ ಇದೆ ಎಂದು ಹೇಳಿದರು.
ಮೈಸೂರಿನ ಜೀವದಾರ ರಕ್ತ ನಿಧಿ ಕೇಂದ್ರದ ಆವರಣದಲ್ಲಿ ಜೀವದಾರ ರಕ್ತ ನಿಧಿ ಕೇಂದ್ರದ 2025ರ ರಕ್ತದಾನದ ಮಹತ್ವದ ಜಾಗೃತಿಯ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಶ್ರೀಗಳು ಆಶೀರ್ವಚನ ನೀಡಿ ಮಾತನಾಡಿದರು.
ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ದಾನ ಮಾಡುವ ಅಗತ್ಯವಿದೆ. ಉಪಯೋಗವಾಗುವುದನ್ನು ನೀಡುವುದು ಬಹಳ ಮುಖ್ಯ. ಆ ಮೂಲಕ ವ್ಯಕ್ತಿ ,ಸಮಾಜದ ಸಂಬಂಧ ಮಧುರವಾಗಿರಲು, ಸಾಮಾಜಿಕ ಸಾಮರಸ್ಯ ಬೆಳೆಯಲು ಕಾರಣವಾಗುತ್ತದೆ ಎಂದು ತಿಳಿಸಿದರು.
ತಾನು ಕೊಡಲಾಗದಿದ್ದರು ಕೊಡಬಲ್ಲವರಿಂದ ದಾನ ಕೊಡಿಸಿ ಸಮಾಜದ ಹಿತ ಕಾಪಾಡಬೇಕು. ದಾನ ಮಾಡುವ ಕೈಗಳು ಸದಾ ಪುಣ್ಯದ ಕೈಗಳಾಗುತ್ತವೆ. ಶ್ರೀಮಂತ ಮತ್ತು ಬಡವ ಎಂಬ ಭೇದಭಾವವಿಲ್ಲದೆ ಪ್ರತಿಯೊಬ್ಬರು ನೀಡುವಿಕೆಯ ಗುಣವನ್ನು ಬೆಳೆಸಿಕೊಳ್ಳಬೇಕು.
ಜ್ಞಾನವನ್ನು ,ಸ್ನೇಹವನ್ನು ,ಹಂಚಿದರೆ ಅವು ನಮಗೆ ಕಾವಲಾಗುತ್ತದೆ. ಭೂದಾನ,ಗೋ ದಾನ,ಆಹಾರ, ಅಂಗಾಂಗಗಳ ದಾನ ,ರಕ್ತದಾನ, ವಿವಿಧ ರೀತಿಯಲ್ಲಿ ನೀಡುವ ಗುಣ ಪುರಾತನ ಕಾಲದಿಂದಲೂ ಇದೆ. ಯುವಕರು, ವಿದ್ಯಾರ್ಥಿಗಳು ಬಾಲ್ಯದಿಂದಲೂ ಪರಸ್ಪರ ನೆರವಾಗುವ, ಸಹಾಯ ಹಸ್ತ ಚಾಚುವ ಮನಸ್ಸನ್ನು ಬೆಳೆಸಿಕೊಳ್ಳಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಮುತ್ತಣ್ಣ, ಜಿ ರಾಘವೇಂದ್ರ,ಆಲನಹಳ್ಳಿ ಎಂ ಎನ್ ಚೇತನ್ ಗೌಡ, ಮಮತಾ, ಸುರೇಶ್, ಪ್ರಭು ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.
ಮೈಸೂರು: ಗೌರಿ-ಗಣೇಶ ಹಬ್ಬವು ಸಾಮರಸ್ಯದ ಸಂಕೇತವಾಗಿದ್ದು ಈ ಹಬ್ಬವನ್ನು ಶ್ರದ್ಧಾ-ಭಕ್ತಿಯಿಂದ ಶಾಂತಿಯುತವಾಗಿ ಆಚರಿಸಬೇಕು ಎಂದು ಶ್ರೀ ದುರ್ಗ ಫೌಂಡೇಶನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್ ಹೇಳಿದರು.
ನಗರದ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಜೀವದಾರ ರಕ್ತ ನಿಧಿ ಕೇಂದ್ರದಲ್ಲಿ ಸ್ವಚ್ಛತಾ ಸೇನಾ ನಿಗಳಾದ ಪೌರಕಾರ್ಮಿಕರಿಗೆ ಸ್ವರ್ಣ ಗೌರಿ ಗಣೇಶ ಹಬ್ಬದ ಪ್ರಯುಕ್ತ ಬಾಗಿನ ಸಮರ್ಪಣೆ ಮಾಡಿ ಅವರು ಮಾತನಾಡಿದರು.
ಯಾವುದೇ ಒಳ್ಳೆಯ ಕೆಲಸ ಪ್ರಾರಂಭಿಸುವ ಮೊದಲು ವಿಘ್ನ ನಿವಾರಕ ಗಣೇಶನ ಪೂಜಿಸುವುದು ಹಿಂದು ಧರ್ಮಿಯರ ಪದ್ಧತಿ. ಗಣಪತಿಯನ್ನು ಪ್ರತಿಷ್ಠಾಪಿಸಿ ದೇಶದ ಆಚಾರ-ವಿಚಾರ, ಸಂಸ್ಕೃತಿ ಮುಂದುವರಿಸುತ್ತಿರುವುದು ಸಂತಸತಂದಿದೆ ಎಂದು ಹೇಳಿದರು.
ಬಿಜೆಪಿ ಮಹಿಳಾ ಮೋರ್ಚಾ ನಗರಾಧ್ಯಕ್ಷೆ ರೇಣುಕ ರಾಜ್ ಮಾತನಾಡಿ, ಬಾಲಗಂಗಾಧರ ತಿಲಕ್ ಅವರು ಆಗಿನ ಸಂದರ್ಭದಲ್ಲಿ ಭಾರತ ದೇಶಕ್ಕೆ ಸ್ವಾತಂತ್ರ್ಯ ಹೋರಾಟಕ್ಕೆ ಭಾರತೀಯರನ್ನು ಸಂಘಟಿಸುವ ಉದ್ದೇಶದಿಂದ ಸಾರ್ವಜನಿಕ ಗಣೇಶೋತ್ಸವಕ್ಕೆ ಚಾಲನೆನೀಡಿದ್ದರು.ಅದರೆ ಪ್ರಸ್ತುತವಾಗಿ ಹಿಂದೂ ಧರ್ಮದ ಬಗ್ಗೆ ಜಾಗೃತಿ ಮೂಡಿಸಲು ಸಾರ್ವಜನಿಕ ಗಣೇಶೋತ್ಸವ ಅವಶ್ಯಕವಾಗಿದ್ದು ನಮ್ಮ ಸಂಸ್ಕೃತಿ ರಕ್ಷಣೆ ಮಾಡಲು ಈ ಹಬ್ಬಗಳು ಸಹಕಾರಿ ಎಂದರು.
50ಕ್ಕೂ ಹೆಚ್ಚು ಮಹಿಳೆಯರಿಗೆ ಬಾಗಿನ ವಿತರಿಸಿದರು
ಸಮೃದ್ಧಿ ವಾರ್ತಾಪತ್ರಿಕೆ ಸಂಪಾದಕಿ ಸಹನಗೌಡ, ನಟಿ ರೇಣುಕಾ, ಅಶ್ವಿನಿ ಗೌಡ, ಉಮೇಶ್, ರಶ್ಮಿ,ವಿಶ್ವ ಹಿಂದೂ ಪರಿಷತ್ ವಿಭಾಗ ಸಂಯೋಜಕಿ ಸವಿತಾ ಘಾಟ್ಕೆ, ಸೂರಜ್, ಸದಾಶಿವ್, ಸುರೇಶ್ ಮತ್ತಿತರರು ಹಾಜರಿದ್ದರು.