ಹೊನಲು ಬೆಳಕಿನ ಶಾರ್ಟ್ ಪಿಚ್ ಕ್ರಿಕೆಟ್ ಪಂದ್ಯಾವಳಿ:ಶಾರದಾ ಕ್ರಿಕೇಟರ್ಸ್ ತಂಡ ಚಾಂಪಿಯನ್

ಬೆಂಗಳೂರು: ಅಂಜನಾನಗರ ಪ್ರೀಮಿಯರ್ ಲೀಗ್ ಸೀಸನ್ -02 ರಾಜ್ಯ ಮಟ್ಟದ ಹೊನಲು ಬೆಳಕಿನ ಶಾರ್ಟ್ ಪಿಚ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬೆಂಗಳೂರಿನ ಬಸವೇಶ್ವರ ನಗರದ ಶಾರದಾ ಕ್ರಿಕೇಟರ್ಸ್ ತಂಡ ಜಯ ಸಾದಿಸಿದೆ.

ಬೆಂಗಳೂರಿನ ಮಾಗಡಿ ಮುಖ್ಯರಸ್ತೆ ಅಂಜನಾನಗರದಲ್ಲಿ ಜೀವ ಕ್ರಿಕೆಟರ್ಸ್ ಹಾಗೂ ಪವರ್ ಸ್ಟಾರ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ಈ ಕ್ರಿಕೇಟ್ ಪಂದ್ಯಾವಳಿಯಲ್ಲಿ ಶಾರದಾ ಕ್ರಿಕೇಟರ್ಸ್ ತಂಡವು ಜಯ ಗಳಿಸಿ,ಒಂದು ಲಕ್ಷದ ಬಹುಮಾನದೊಂದಿಗೆ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿದೆ

ಜೈ ಗುರುದೇವ್. ಎಫ್. ಸಿ. ಸಿ ತಂಡವು
ರನ್ನರ್ ಅಪ್ ಆಗಿ 50000 ರೂ ಬಹುಮಾನ ಪಡೆಯಿತು.

ಆಟ ಪ್ರಾರಂಭಕ್ಕೂ ಮೊದಲು ಪಿಚ್ ಗೆ ಪೂಜೆ ಸಲ್ಲಿಸಲಾಯಿತು.

ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಆಟಗಾರರ ಕೈ ಕುಲುಕಿ ಶುಭ ಹಾರೈಸಿದರು.

ಆಟ ಮುಗಿದ ವೇಳೆ ಸೋಮಶೇಖರ್ ಅವರನ್ನು ಜೀವ ಕ್ರಿಕೆಟರ್ಸ್ ಹಾಗೂ ಪವರ್ ಸ್ಟಾರ್ ಅಸೋಸಿಯೇಷನ್ ವತಿಯಿಂದ ಗೌರವಿಸಲಾಯಿತು.

ಚಾಂಪಿಯನ್ ಪಟ್ಟ ಪಡೆದ ಶಾರದಾ ಕ್ರಿಕೇಟರ್ಸ್ ತಂಡದವರು ಕುಣಿದು‌ ಕುಪ್ಪಳಿಸಿ ಜೈಕಾರ ಕೂಗಿ ಸಂಭ್ರಮಿಸಿದರು.ರನ್ನರ್ ಅಪ್ ಆದ ತಂಡ ಕೂಡಾ ಖುಷಿ ಪಟ್ಟಿತು.

ಹೊನಲು ಬೆಳಕಿನ ಶಾರ್ಟ್ ಪಿಚ್ ಕ್ರಿಕೆಟ್ ಪಂದ್ಯಾವಳಿ:ಶಾರದಾ ಕ್ರಿಕೇಟರ್ಸ್ ತಂಡ ಚಾಂಪಿಯನ್ Read More