ಪ್ರಕಾಶ್ ಪ್ರಿಯದರ್ಶನ್ ಗೆ ಜನ್ಮದಿನದ ಶುಭ ಕೋರಿದ ಜೆಡಿಎಸ್ ನಾಯಕರು
ಮೈಸೂರು: ಮೈಸೂರಿನ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಪಕ್ಷದ ನಗರ ಕಾರ್ಯಾಧ್ಯಕ್ಷರೂ, ಸಮಾಜ ಸೇವಕರೂ ಆದ ಪ್ರಕಾಶ್ ಪ್ರಿಯದರ್ಶನ್ ಅವರ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು.
ಜೆಡಿಎಸ್ ನಗರ ಅಧ್ಯಕ್ಷರಾದ ಕೆ. ಟಿ ಚೆಲುವೇಗೌಡ್ರು ನೇತೃತ್ವದಲ್ಲಿ ಎನ್ ಆರ್ ಬ್ಲಾಕ್ ಅಧ್ಯಕ್ಷರಾದ ರಾಮೆ ಗೌಡ್ರು, ಚಾಮರಾಜ ಕ್ಷೇತ್ರದ ಅಧ್ಯಕ್ಷರಾದ ಮಂಜು ಗೌಡ್ರು ಹಾಗೂ ಹಲವಾರು ಜೆಡಿಎಸ್ ನಾಯಕರುಗಳ ನೇತೃತ್ವದಲ್ಲಿ ಪ್ರಕಾಶ್ ಪ್ರಿಯದರ್ಶನ್ ಅವರ ಹುಟ್ಟುಹಬ್ಬವನ್ನು ಪಕ್ಷದ ಕಚೇರಿಯಲ್ಲಿ ಎಚ್ ಡಿ ಕುಮಾರಸ್ವಾಮಿ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಂಡಿದ್ದ
ಶ್ರೀ ಕನಕದಾಸ ಜಯಂತಿ ಸಂದರ್ಭದಲ್ಲಿ ಆಚರಿಸಲಾಯಿತು.
ಆ ಸಂದರ್ಭದಲ್ಲಿ ನಗರ ಅಧ್ಯಕ್ಷರಾದ ಕೆ ಆರ್ ಮಿಲ್ ಆನಂದ್ ಗೌಡ್ರು,ನಗರ ಸಂಘಟನಾ ಕಾರ್ಯದರ್ಶಿ ಕೋದಂಡ, ಬಂಬೂ ಬಜಾರ್ ಮೆದರ್ ಬ್ಲಾಕ್ ನಿಖಿಲ್ ಕುಮಾರಸ್ವಾಮಿ ಬಳಗದ ಅಧ್ಯಕ್ಷರಾದ ಪ್ರದೀಪ್, ಕೃಷ್ಣೇಗೌಡ ಮತ್ತಿತರರು ಹಾಜರಿದ್ದರು.
ಈ ವೇಳೆ ಪ್ರಕಾಶ್ ಪ್ರಿಯದರ್ಶನ್ ಅವರಿಗೆ ಶಾಲು ಹೊದಿಸಿ,ಹಾರಹಾಕಿ ಜನುಮ ದಿನದ ಶುಭ ಕೋರಲಾಯಿತು.
ಪ್ರಕಾಶ್ ಪ್ರಿಯದರ್ಶನ್ ಗೆ ಜನ್ಮದಿನದ ಶುಭ ಕೋರಿದ ಜೆಡಿಎಸ್ ನಾಯಕರು Read More

