ಅಂತಾರಾಜ್ಯ ಜಾನಪದ ಸಿರಿ ಪ್ರಶಸ್ತಿಗೆ ಡಾ ಜಾನಪದ ಎಸ್ ಬಾಲಾಜಿ ಆಯ್ಕೆ

ಬೆಂಗಳೂರು: ಅಂತಾರಾಜ್ಯ ಜಾನಪದ ಸಿರಿ ಪ್ರಶಸ್ತಿಗೆ ಕನ್ನಡ ಜಾನಪದ ಪರಿಷತ್ ರಾಜ್ಯ ಅಧ್ಯಕ್ಷ ಡಾ ಜಾನಪದ ಎಸ್ ಬಾಲಾಜಿ ಆಯ್ಕೆ
ಯಾಗಿದ್ದಾರೆ.

ಅಂದ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಗೋವಾ, ಚಿಕ್ಕಮಗಳೂರು ಸಂಯುಕ್ತ ಆಶ್ರಯದಲ್ಲಿ ಇದೆ ತಿಂಗಳ 22 ರಂದು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಸನ್ನಿದಾನದಲ್ಲಿ ಶ್ರೀಗಳ ದಿವ್ಯ ಸಾನಿದ್ಯದಲ್ಲಿ ಅಂತರ ರಾಜ್ಯ ಪ್ರಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.

ಈ ಸಮ್ಮೇಳನದಲ್ಲಿ ಡಾ ಜಾನಪದ ಎಸ್ ಬಾಲಾಜಿ ಅವರಿಗೆ 30 ವರ್ಷದ ಜಾನಪದ ಸಂಘಟನಾ ಕ್ಷೇತ್ರದ ಸೇವೆಯನ್ನು ಪರಿಗಣಿಸಿ ಅಂತರ ರಾಜ್ಯ ಜಾನಪದ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಚಿಕ್ಕಮಗಳೂರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸೂರಿ ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಂತಾರಾಜ್ಯ ಜಾನಪದ ಸಿರಿ ಪ್ರಶಸ್ತಿಗೆ ಡಾ ಜಾನಪದ ಎಸ್ ಬಾಲಾಜಿ ಆಯ್ಕೆ Read More