ಡಾ ಜಾನಪದ ಎಸ್ ಬಾಲಾಜಿ ಅವರಿಗೆಕೆಂಪೇಗೌಡ ರಾಷ್ಟ್ರೀಯ ಪ್ರಶಸ್ತಿ

ಬೆಂಗಳೂರು: ನಾಡಪ್ರಭು ಕೆಂಪೇಗೌಡ ರಾಷ್ಟ್ರೀಯ ಪ್ರಶಸ್ತಿಯನ್ನು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಭಾರತ ಸರ್ಕಾರದ ಐಸಿಸಿ ಆರ್ ಸದಸ್ಯ ಡಾ ಜಾನಪದ ಎಸ್ ಬಾಲಾಜಿ ಅವರಿಗೆ ನೀಡಿ‌ಗೌರವಿಸಲಾಯಿತು.

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಕನ್ನಡ ಸಂಘದ ವತಿಯಿಂದ ಡಾ ಜಾನಪದ ಎಸ್ ಬಾಲಾಜಿ ಅವರಿಗೆ ಈ ಪ್ರಶಸ್ತಿ ಕೊಡಮಾಡಲಾಯಿತು.

ಮಾಜಿ ಮಹಾಪೌರರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಹರೀಶ್, ಟಾಟಾ ಇನ್ಸ್ಟಿಟ್ಯೂಟ್ ವಿಜ್ಞಾನಿ ಶ್ರೀರಾಮಚಂದ್ರ ರಾವ್, ಕನ್ನಡ ಸಂಘದ ಅಧ್ಯಕ್ಷರು ಜಗದೀಶ್, ಹಾಗೂ ಸತೀಶ್ ಮತ್ತಿತರ ಗಣ್ಯರು ಪ್ರಶಸ್ತಿ ಪ್ರದಾನ ಮಾಡಿದರು.

ಡಾ ಜಾನಪದ ಎಸ್ ಬಾಲಾಜಿ ಅವರಿಗೆಕೆಂಪೇಗೌಡ ರಾಷ್ಟ್ರೀಯ ಪ್ರಶಸ್ತಿ Read More

ಕರ್ನಾಟಕ ಸಾಂಸ್ಕೃತಿಕ ಪರಂಪರೆಉಳಿಸಿ ಬೆಳಸುವ ಕಾರ್ಯ ಮಾಡುತ್ತಿರುವ ಜಾನಪದ ಬಾಲಾಜಿ

ಭೋಪಾಲ್: ಭೂಪಲ್ ನಗರಕ್ಕೆ ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ ಜಾನಪದ ಬಾಲಾಜಿಯವರು ಆಗಮಿಸಿರುವುದು ಸಂತಸ ತಂದಿದೆ ಎಂದು ಮಧ್ಯ ಪ್ರದೇಶ್ ಜನ ಅಭಿಮಾನ್ಯ ಪರಿಷತ್ ಸಂಚಾಲಕ ರಾಕೇಶ್ ಶರ್ಮಾ ತಿಳಿಸಿದರು.

ಭೂಪಲ್ ನಗರದಲ್ಲಿ ಡಾ ಜಾನಪದ ಎಸ್ ಬಾಲಾಜಿ ಅವರನ್ನು ಸ್ವಾಗತಿಸಿ ಮಾತನಾಡಿದ ಅವರು,ನೀವು ಬಂದಿರುವುದು ಎರಡು ರಾಜ್ಯಗಳ ಯುವ ಹಾಗು ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳು ನಂಬಿಕೊಳ್ಳಲು ಮುಖ್ಯ ವೇದಿಕೆ ಆಗಿದೆ ಎಂದು ತಿಳಿಸಿದರು.

ಕರ್ನಾಟಕ ಸಾಂಸ್ಕೃತಿಕ ಪರಂಪರೆ ಬಹಳ ವಿಶೇಷವಾಗಿದೆ ಅದನ್ನು ಉಳಿಸಿ ಬೆಳಸುವ ಕಾರ್ಯ ಮಾಡುತ್ತಿರುವ ಬಾಲಾಜಿ ಅವರ ಕಾರ್ಯ ಭೋಪಾಲ್ ರಾಜ್ಯದಲ್ಲೂ ಅನುಕರಣೀಯ ಎಂದು ಹೇಳಿದರು.

ಸಿಹೋರ್ ಜಿಲ್ಲಾ ಮಾತ್ತ್ರುಭೂಮಿ ಪ್ರತಿನಿಧಿ ವಿನೋದ್ ಸೋನಿ ಅವರು ಮಾತನಾಡಿ ಕರ್ನಾಟಕ ಸಾಂಸ್ಕೃತಿಕ ರಾಯಭಾರಿ ಮಧ್ಯ ಭಾರತದ ಸರೋವರಗಳ ನಗರ
ಭೋಪಾಲ್ ಗೆ ಆಗಮಿಸಿ ನಿನ್ನೆ ಸ್ಥಳೀಯ ಸಂಘ ಸಂಸ್ಥೆಗಳಿಗೆ ಭೇಟಿ ನೀಡಿ ಯುವ ಹಾಗೂ ಸಾಂಸ್ಕೃತಿಕ ಜಾಗೃತಿ ಮೂಡಿಸುತ್ತಿರುವುದು ಪ್ರಶಂಸನೀಯ ಎಂದು ಸಂತಸ ವ್ಯಕ್ತಪಡಿಸಿದರು.

ವಿಶಾಲ್ ಪಟೇದರ್ ಮತ್ತಿತರರು ಅಭಿನಂದಿಸಿ ಗೌರವಿಸಿದರು.

ಕರ್ನಾಟಕ ಸಾಂಸ್ಕೃತಿಕ ಪರಂಪರೆಉಳಿಸಿ ಬೆಳಸುವ ಕಾರ್ಯ ಮಾಡುತ್ತಿರುವ ಜಾನಪದ ಬಾಲಾಜಿ Read More

ಭೋಪಾಲ್ ನಲ್ಲಿ ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ ಜಾನಪದ ಎಸ್ ಬಾಲಾಜಿ ಅವರಿಗೆ ಅಭಿನಂದನೆ

ಭೋಪಾಲ್,ಮಾ.2:‌ ಮಧ್ಯ ಪ್ರದೇಶ ರಾಜ್ಯದ ಭೋಪಾಲ್ ನಲ್ಲಿ ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ ಜಾನಪದ ಎಸ್ ಬಾಲಾಜಿ ಅವರನ್ನು ವಿವಿಧೆಡೆ ಅಭಿನಂದಿಸಿ ಗೌರವಿಸಲಾಯಿತು.

ಭೋಪಾಲ್ ನಗರದ ಸಮಾಜ ಸೇವಾ ಭವನದಲ್ಲಿ ಮೊದಲಿಗೆ ಡಾ ಜಾನಪದ ಎಸ್ ಬಾಲಾಜಿ ಅವರನ್ನು ಪತ್ರಕರ್ತ ಜಿತೇಂದ್ರ ಸೋಲಂಕಿ, ಅಭಿನಂದಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಮಹಿ ಪಲ್ ಸಿಂಗ್, ಜನಪದ ಕಾಲಾವಿದ ಮಧುಸೂದನ್, ಶಿವು, ಜಿತೇಶ್ ಮತ್ತಿತರರು ಹಾಜರಿದ್ದರು.

ನಂತರ ಇದೇ ದಿನ ಮಧ್ಯಪ್ರದೇಶ ಭೋಪಾಲ್ ನಲ್ಲಿ ಆತ್ಮೀಯ ಮಿತ್ರರಾದ ಸಿಹೊರ್ ಜಿಲ್ಲೆಯ ರಾಕೇಶ್ ಶರ್ಮ ಅವರು ಕೂಡಾ ಡಾ ಜಾನಪದ ಎಸ್ ಬಾಲಾಜಿ ಅವರನ್ನು ಅಭಿನಂದಿಸಿ ಗೌರವಿಸಿದರು ಈ‌ ವೇಳೆ ವಿನೋದ್ ಸೋನಿ, ವಿಶಾಲ್ ಪಟೇದರ್ ಮತ್ತಿತರರು ಹಾಜರಿದ್ದರು.

ಭೋಪಾಲ್ ನಲ್ಲಿ ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ ಜಾನಪದ ಎಸ್ ಬಾಲಾಜಿ ಅವರಿಗೆ ಅಭಿನಂದನೆ Read More