ಮನೆ ದೇವರ ಪರಿಕಲ್ಪನೆ ಜಾನಪದರಿಂದ ಹುಟ್ಟಿದ್ದು:ಡಾ ಜಾನಪದ ಎಸ್ ಬಾಲಾಜಿ

ಹುಬ್ಬಳ್ಳಿ: ಮನೆ ದೇವರ ಪರಿಕಲ್ಪನೆ ಜಾನಪದರಿಂದ ಹುಟ್ಟಿದ್ದುದು ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಹಾಗೂ ಭಾರತ ಸರ್ಕಾರದ ಐಸಿಸಿಆರ್ ಸದಸ್ಯ ಡಾ ಜಾನಪದ ಎಸ್ ಬಾಲಾಜಿ ತಿಳಿಸಿದರು.

ಹುಬ್ಬಳ್ಳಿ ತಾಲೂಕಿನ ನೂಲ್ವಿ ಶ್ರೀ ಜಗದ್ಗುರು ರೇಣುಕಾಚಾರ್ಯ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಸಭಾಂಗಣದಲ್ಲಿ ಕನ್ನಡ ಜಾನಪದ ಪರಿಷತ್ ಹುಬ್ಬಳ್ಳಿ ತಾಲೂಕು ಘಟಕ ಏರ್ಪಡಿಸಿದ್ದ ವಿಶ್ವ ಬುಡಕಟ್ಟು ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಸವಾದಿ ಶರಣರು ಹಾಗೂ ವಚನಕಾರರು ಮನೆದೇವರ ಸಾಂಪ್ರದಾಯವನ್ನು ಮುಂದುವರಿಸಿಕೊಂಡು ಬಂದರು, ಬುಡಕಟ್ಟು ಸಮುದಾಯದವರಿಗೆ ಪಾರಂಪರಿಕ ಜ್ಞಾನ ಇರುತ್ತದೆ, ಬುಡಕಟ್ಟು ಪ್ರದರ್ಶನ ಕಲೆಗಳು ಇತ್ತೀಚಿನ ದಿನಗಳಲ್ಲಿ ಅಳಿವಿನಂಚಿನಲ್ಲಿದ್ದು, ಸರ್ಕಾರ ಈ ಬಗ್ಗೆ ಹೆಚ್ಚು ಅಲೆಮಾರಿಗಳು ಹಾಗೂ ಬುಡಕಟ್ಟು ಸಮುದಾಯದವರಿಗೆ ಪ್ರೋತ್ಸಾಹ ಮತ್ತು ತರಬೇತಿ ನೀಡುವ ಮೂಲಕ ಅವರ ಸಂಪ್ರದಾಯ ಮತ್ತು ಕಲಾಪ್ರಾಕಾರಗಳನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಬೇಕೆಂದು ಅಗ್ರಹಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಿವಾನಂದ ಬೆಂತೂರ ಅಧ್ಯಕ್ಷರು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕುಂದಗೋಳ ಮಾತನಾಡಿ ಬುಡಕಟ್ಟು ಸಮುದಾಯದಲ್ಲಿ ಸಾಮರಸ್ಯ ಹಾಗೂ ಐಕ್ಯತೆಯ ಭಾವನೆಗಳು ಹೆಚ್ಚಾಗಿರುತ್ತದೆ, ಅವರಿಂದ ಒಗ್ಗೂಡಿಸಿಕೊಂಡು ಕಲಿಯ ಬಹುದು ಎಂದು ತಿಳಿಸಿದರು.

ಕನ್ನಡ ಜಾನಪದ ಪರಿಷತ್ ರಾಜ್ಯ ಕಾರ್ಯದರ್ಶಿ ಪ್ರೊ ಕೆ ಎಸ್ ಕೌಜಲಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಜನಪದ ಸಾಹಿತ್ಯದ ಮೂಲವೇ ಬುಡಕಟ್ಟು ಸಮುದಾಯದವರು, ಅವರನ್ನು ಯುವ ಜನಾಂಗ ಅನುಕರಣೆ ಮಾಡುವ ಮೂಲಕ ಸಹಕರಿಸಬೇಕೆಂದು ತಿಳಿಸಿದರು.

ಕಾಲೇಜಿನ ಪ್ರಾಚಾರ್ಯರು ಜಿ ಹೆಚ್ ಕಟ್ಟಿ ಮಾತನಾಡಿ ಮುಂದಿನ ಪೀಳಿಗೆ ಬುಡಕಟ್ಟು ಸಮುದಾಯಗಳ ಸಾಂಸ್ಕೃತಿಕ ವೈಭವ
ಪರಿಚಯ ಮಾಡಬೇಕೆಂದರೆ
ಅವರನ್ನು ಮುಖ್ಯವಾಹಿನಿಗೆ ತರುವ ಕಾರ್ಯ ಆಗಬೇಕಾಗಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಹಿಂದ ಸಂಘಟನೆಯ ರಾಜ್ಯಾಧ್ಯಕ್ಷ ಮುತ್ತಣ್ಣ ಎಸ್ ಶಿವಳ್ಳಿ , ಜನಪದ ಕಲಾವಿದ ಪ್ರಶಾಂತ್ ತಡಸೂರ, ಗ್ರಾಮ ಪಂಚಾಯತಿ ಸದಸ್ಯ ದೇವನಗೌಡ ಮಾ ಧರ್ಮಗೌಡ, ಕಾರವೆ ಹುಬ್ಬಳ್ಳಿ ತಾಲೂಕ ಅಧ್ಯಕ್ಷ ಗಂಗನಗೌಡ ಶಿ ನರಗುಂದ,
ಕಾಲೇಜಿನ ಉಪನ್ಯಾಸಕರಾದ ಜಿ ಬಿ ತಾಶಿಲ್ದಾರ್, ಎಸ್ ಎಸ್ ಹಿರೇಗೌಡ್ರು, ಎಂ ಎಂ ಹಾದಿಮನಿ, ಕೆ ಎಂ. ಮಲ್ಲಿಕಾರ್ಜುನಯ್ಯ, ಎಚ್ ಡಿ ಗುಂಡಪ್ಪಲ್ಲಿ, ಧಾರವಾಡ ಜಿಲ್ಲಾ ಕನ್ನಡ ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಎಂ ಸದಾನಂದ, ಕಲಘಟಗಿ ತಾಲೂಕ ಅಧ್ಯಕ್ಷ ನಿಂಗಪ್ಪ ದೊಡ್ಡ ಪೂಜಾರ್, ಕಲಾವಿದ ಶ್ರೀ ಪ್ರಶಾಂತ್ ಎಮ್ ತಡಿಸನ್ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸ್ವಾಗತವನ್ನು ತಾಲೂಕ ಅಧ್ಯಕ್ಷ ಈಶ್ವರಪ್ಪ ಕ ಹೊ ಳಮ್ಮನವರ್, ವಂದನಾರ್ಪಣೆ ಕಾರ್ಯದರ್ಶಿ ಸಂತೋಷ್ ಕುಮಾರ್ ಬಡಿಗೇರ, ನಿರೂಪಣೆಯನ್ನು ಮಂಜುನಾಥ ಐ ಕೆ, ನಿರ್ವಹಿಸಿದರು.

ಮನೆ ದೇವರ ಪರಿಕಲ್ಪನೆ ಜಾನಪದರಿಂದ ಹುಟ್ಟಿದ್ದು:ಡಾ ಜಾನಪದ ಎಸ್ ಬಾಲಾಜಿ Read More

ಜಾನಪದ ಧರ್ಮಾತೀತ; ಚೌಕಟ್ಟು,ಇತಿಮಿತಿಇಲ್ಲ-ಡಾ ಜಾನಪದ ಎಸ್ ಬಾಲಾಜಿ

ತರೀಕೆರೆ: ಜಾನಪದ ಧರ್ಮಾತೀತವಾದದ್ದು ಇದಕ್ಕೆ ಚೌಕಟ್ಟು, ಇತಿಮಿತಿ ಯಾವುದೂ ಇಲ್ಲ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ ಜಾನಪದ ಎಸ್ ಬಾಲಾಜಿ ತಿಳಿಸಿದರು.

ತರೀಕೆರೆ ತಾಲೂಕಿನ ಬೆಟ್ಟ ತಾವರೆಕೆರೆಯ ಅಂಬೇಡ್ಕರ್ ವಸತಿ ಶಾಲೆ ಸಭಾಂಗಣದಲ್ಲಿ ಕನ್ನಡ ಜಾನಪದ ಪರಿಷತ್ ಚಿಕಮಗಳೂರು ಜಿಲ್ಲಾ ಮಹಿಳಾ ಘಟಕ ಏರ್ಪಡಿಸಿದ್ದ ಜಿಲ್ಲಾ ದಶಮಾನೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕೃಷಿ ಸಂಸ್ಕೃತಿಯಿಂದ ಜಾನಪದ ಉಗಮವಾಗಿದ್ದು ಎಂದಿಗೂ ಇದು ನಶಿಸುವುದಿಲ್ಲ, ಕಾಲ ಕ್ರಮೇಣ ಪರಿವರ್ತನೆಗೊಳ್ಳುವ ಶಕ್ತಿ ಜಾನಪದ ಹೊಂದಿದೆ, ಎಷ್ಟೇ ಪಾಶ್ಚಾತ್ಯ ಸಂಸ್ಕೃತಿ ಬಂದರೂ ಸಹ ಜಾನಪದದ ಸೊಗಡನ್ನು ಅಳಿಸಲು ಸಾಧ್ಯವಿಲ್ಲ ಎಂದು ದೃಢವಾಗಿ ‌ಹೇಳಿದರು.

ಜಾನಪದ ಬೆಸೆಯುವ ಶಕ್ತಿಯನ್ನು ಹೊಂದಿದೆ, ಇದನ್ನು ಶಾಲಾ ಮತ್ತು ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು‌ ಹಮ್ಮಿಕೊಂಡರೆ ವಿದ್ಯಾರ್ಥಿಗಳು ಯುವಜನರಲ್ಲಿ ಜಾನಪದ ಜಾಗೃತಿಯನ್ನು ಮೂಡಿಸಿದಂತಾಗುತ್ತಿದೆ ಎಂದು ಡಾ.ಬಾಲಾಜಿ‌ ಅಭಿಪ್ರಾಯ ಪಟ್ಟರು.

ಈ ದೆಸೆಯಲ್ಲಿ ಜಿಲ್ಲಾ ಮಹಿಳಾ ಘಟಕ ಕಾರ್ಯ ಪ್ರವೃತ್ತಿಯಾಗಿದೆ ಎಂದು ತಿಳಿಸಿದರು.

ಜಾನಪದ ನೂರೊಂದು ಕೃತಿ ಬಿಡುಗಡೆ ಮಾಡಿ ತರೀಕೆರೆ ಉಪ ವಿಭಾಗದ ಉಪವಿ ಭಾಗಾಧಿಕಾರಿ ಡಾ ಕೆ ಜೆ ಕಾಂತರಾಜ್ ಮಾತನಾಡಿ, ಜನಪದ ಗೀತೆಗಳು ಮಾನವೀಯ ಮೌಲ್ಯ ಹಾಗೂ ಜೀವನ ಪಾಠವನ್ನು ಕಲಿಸುತ್ತದೆ, ಇದನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವುದು ಎಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು.

ತಾಲೂಕು ಪಂಚಾಯಿತಿ ತರೀಕೆರೆ ಕಾರ್ಯನಿರ್ವಾಹಕ ಅಧಿಕಾರಿ ದೇವೇಂದ್ರಪ್ಪ ಮಾತನಾಡಿ ತರೀಕೆರೆಯಲ್ಲಿ ಬಹಳಷ್ಟು ಜಾನಪದ ಪ್ರಕಾರಗಳಿದ್ದು ಇವುಗಳನ್ನು ಸಂರಕ್ಷಿಸುವ ಕಾರ್ಯದಲ್ಲಿ ಜಿಲ್ಲಾ ಮಹಿಳಾ ಘಟಕ ಕೆಲಸ ಮಾಡುತ್ತಿದೆ ಎಂದು ಪ್ರಶಂಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕಿ ಡಾ. ಮಂಜುಳಾ ಹುಲಳ್ಳಿ ಮಾತನಾಡಿ, ಜಾನಪದ ನೂರೊಂದು ಕೃತಿಯು ಕರೋನ ಕಾಲಘಟ್ಟದಲ್ಲಿ ನಡೆದ ನೂರೊಂದು ವಿಚಾರ ಸಂಕೀರ್ಣಗಳ ಬಹಳ ಪ್ರಮುಖ ಲೇಖನಗಳಾಗಿದ್ದು, ನಾಡಿನ ಬಹುತೇಕ ವಿದ್ವಾಂಸರ ಲೇಖನಗಳನ್ನು ಕೃತಿಗಳು ಒಳಗೊಂಡಿದೆ, ಒಂದು ಆಕಾರ ಗ್ರಂಥವಾಗಿದೆ ಎಂದು ತಿಳಿಸಿದರು.

ಅಂಬೇಡ್ಕರ್ ವಸತಿ ಶಾಲೆ ಬೆಟ್ಟ ತಾವರೆಕೆರೆಯ ಪ್ರಾಂಶುಪಾಲೆ ಸುವರ್ಣ ಎ ನಾಯಕ ಮಾತನಾಡಿ ಜಾನಪದ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ಹೆಚ್ಚುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕದ ಅಧ್ಯಕ್ಷೆ ವಿಶಾಲಕ್ಷಮ್ಮ ಮಾತನಾಡಿ ದಶಮಾನೋತ್ಸವದಲ್ಲಿ ಹತ್ತು ಜನ ಹಿರಿಯ ಕಲಾವಿದರಿಗೆ ದಶಮಾನೋತ್ಸವ ಪ್ರಶಸ್ತಿಯನ್ನು ನೀಡುವುದಲ್ಲದೆ ಎಲ್ಲಾ ತಾಲೂಕುಗಳನ್ನು ಸಹ ಹತ್ತತ್ತು ಕಲಾವಿದರನ್ನು ಮುಂದಿನ ದಿನಗಳಲ್ಲಿ ಗುರುತಿಸಿ ಗೌರವಿಸಲಾಗುವುದು ಎಂದು ತಿಳಿಸಿದರು.

ಅಳಿವಿನಂಚಿನ ಕಲೆಗಳನ್ನು
ಮಹಿಳಾ ಘಟಕದ ವತಿಯಿಂದ ಸಂರಕ್ಷಣೆಗೊಳಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಹಿಳಾ ಘಟಕದ ಗೌರವಾಧ್ಯಕ್ಷೆ ಸವಿತಾ ಸತ್ಯನಾರಾಯಣ, ವಿಜಯಕುಮಾರಿ,ಕಲಾ ಮಾಲ್ತೇಶ್, ಕೆ ಸಿ ಕಾಂತಪ್ಪ ಜಿಲ್ಲಾಧ್ಯಕ್ಷರು ರಾಮನಗರ ಹಾಗೂ ವಿಜಯ್ ಕೊಪ್ಪ ಜಿಲ್ಲಾಧ್ಯಕ್ಷರು ಮಂಡ್ಯ ಹಾಗೂ ರತ್ನಾಕರ್ ಜಿಲ್ಲಾಧ್ಯಕ್ಷರು ಚಿಕ್ಕಮಂಗಳೂರು ಜಿಲ್ಲೆ ಆಶಾ ಭೋಸ್ಲೆ ಅಧ್ಯಕ್ಷರು ಸೀನಿಯರ್ ಚೇಂಬರ್ ತರೀಕೆರೆ ಮತ್ತಿತರರು ಉಪಸ್ಥಿತರಿದ್ದರು.

ಜಾನಪದ ಧರ್ಮಾತೀತ; ಚೌಕಟ್ಟು,ಇತಿಮಿತಿಇಲ್ಲ-ಡಾ ಜಾನಪದ ಎಸ್ ಬಾಲಾಜಿ Read More

ರಾಜಾಜಿನಗರ ಕನ್ನಡ ಜಾನಪದ ಸಮ್ಮೇಳನ ಸರ್ವಾಧ್ಯಕ್ಷರಾಗಿ ಡಾ ಎಲ್ ಹನುಮಂತಯ್ಯ ಆಯ್ಕೆ

ಬೆಂಗಳೂರು: ರಾಜಾಜಿನಗರ ಕನ್ನಡ ಜಾನಪದ ಪರಿಷತ್ ವಿಧಾನಸಭಾ ಕ್ಷೇತ್ರ ಘಟಕದ ಪ್ರಥಮ ಕನ್ನಡ ಜಾನಪದ ಸಮ್ಮೇಳನ ಸರ್ವಾಧ್ಯಕ್ಷರಾಗಿ ರಾಜ್ಯಸಭಾ ಮಾಜಿ ಸದಸ್ಯ ಡಾ ಎಲ್ ಹನುಮಂತಯ್ಯ ಅವರನ್ನು ಆಯ್ಕೆ ಮಾಡಲಾಗಿದೆ.

ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ ಜಾನಪದ ಎಸ್ ಬಾಲಾಜಿ‌ ಅವರ ನೇತೃತ್ವದ ನಿಯೋಗ ಡಾ ಎಲ್ ಹನುಮಂತಯ್ಯ ಅವರನ್ನು ಭೇಟಿ ಮಾಡಿ,ಅವರಿಗೆ ಆಯ್ಕೆ ಪತ್ರ ನೀಡಿ ಗೌರವಿಸಿ ಅಭಿನಂದಿಸಲಾಯಿತು.

ಈ ವೇಳೆ ರಾಜಾಜಿನಗರ ವಿಧಾನಸಭಾ ಕ್ಷೇತ್ರ ಘಟಕದ ಅಧ್ಯಕ್ಷ ರಾ ನರಸಿಂಹಮೂರ್ತಿ, ಪ್ರಧಾನ ಕಾರ್ಯದರ್ಶಿ ಸಂತ ವಾಣಿ ಸುಧಾಕರ್, ಶಂಕರ್, ಜಯರಾಮ್, ರಾಜಾಜಿನಗರ ಮಹಿಳಾ ಘಟಕದ ಅಧ್ಯಕ್ಷೆ ಶಕುಂತಲಾ, ಗೋವಿಂದರಾಜ ನಗರ ಮಹಿಳಾ ಘಟಕದ ಅಧ್ಯಕ್ಷೆ ಸವಿತಾ ಕುಮಾರ್, ಅಶ್ವಥ್ ನಾರಾಯಣ್,ಕೇಶವರಾಜು, ರಾಮಾಂಜನೇಯ, ಮುರಳಿಧರ್ ಮತ್ತಿತರರು ನಿಯೋಗದಲ್ಲಿ ಹಾಜರಿದ್ದರು.

ರಾಜಾಜಿನಗರ ಕನ್ನಡ ಜಾನಪದ ಸಮ್ಮೇಳನ ಸರ್ವಾಧ್ಯಕ್ಷರಾಗಿ ಡಾ ಎಲ್ ಹನುಮಂತಯ್ಯ ಆಯ್ಕೆ Read More

ಜಾನಪದ ಮಹಿಳಾ ಪ್ರಧಾನವಾದದ್ದು-ಡಾ ಜಾನಪದ ಎಸ್ ಬಾಲಾಜಿ

ಚಿಕ್ಕಮಗಳೂರು: ಜಾನಪದ ಮಹಿಳಾ ಪ್ರಧಾನವಾದದ್ದು ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಹಾಗೂ ಭಾರತ ಸರ್ಕಾರದ ಐಸಿಸಿಆರ್ ಸದಸ್ಯ ಡಾ ಜಾನಪದ ಎಸ್ ಬಾಲಾಜಿ ಅಭಿಪ್ರಾಯಪಟ್ಟರು.

ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕನ್ನಡ ಜಾನಪದ ಪರಿಷತ್ ಅಜ್ಜಂಪುರ ತಾಲೂಕು ಮಹಿಳಾ ಘಟಕ ಹಮ್ಮಿಕೊಂಡಿದ್ದ ಪದವಿ ಪ್ರಧಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಜಾನಪದದ ಎಲ್ಲಾ ಆಯಾಮಗಳಲ್ಲಿ ಮಹಿಳೆಯರಿಗೆ ಮುಖ್ಯ ಪಾತ್ರ ಲಭಿಸಿದೆ, ಭೌತಿಕ ಪರಂಪರೆ ಗೀತೆಗಳು ಹುಟ್ಟಿದ್ದೇ ಮಹಿಳೆಯರಿಂದ ಅದನ್ನು ಪೋಷಿಸುತಿರುವುದು ಮಹಿಳೆಯರೆ, ಜಾನಪದ ಆಯಾಮಗಳಲ್ಲಿ ಕೊಂಡೊಯ್ಯುವ ಕಾರ್ಯವು ಸಹ ಮಹಿಳೆಯಿಂದಲೇ ಆಗುತ್ತಿದೆ ಎಂದು ಹೇಳಿದರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ರಾಜ್ಯಮಟ್ಟದ ಮಹಿಳಾ ಸಮ್ಮೇಳನಾಗುತ್ತಿರುವುದು ಕನ್ನಡ ಜಾನಪದ ಪರಿಷತ್ತಿಗೆ ಗೌರವ ಎಂದು ತಿಳಿಸಿದರು.

ಶಿಶು ಪ್ರಾಸ ಗೀತೆಗಳು ದೂರಿ ಪದಗಳು , ತೊಟ್ಟಿಲು ಪದಗಳು ಇಂದು ಅಳಿವಿನಂಚಿನಲ್ಲಿವೆ ಅದನ್ನು ತರಬೇತಿಯ ಮೂಲಕ ಮುಂದಿನ ಪೀಳಿಗೆಗೆ ಕೊಂಡಯುವ ಕೆಲಸವಾಗಬೇಕು ಎಂದು ಡಾ ಜಾನಪದ ಎಸ್ ಬಾಲಾಜಿ ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷೆ ವಿಶಾಲಾಕ್ಷಮ್ಮ ಅವರು ಮಾತನಾಡಿ, ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಮಹಿಳಾ ಘಟಕಗಳು ಸ್ಥಾಪನೆಯಾಗಿದ್ದು ಹೋಬಳಿ ಹಾಗೂ ಗ್ರಾಮ ಘಟಕಗಳನ್ನು ಅತಿ ಶೀಘ್ರದಲ್ಲಿ ಸ್ಥಾಪಿಸಿ ಜಾನಪದದ ಮೂಲಕ ಮಹಿಳಾ ಜಾಗೃತಿ ಮೂಡಿಸಲಾಗುವುದು ತಿಳಿಸಿದರು.

ತಾಲೂಕ್ ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳು ವಿಜಯ್ ಕುಮಾರ್ ಮಾತನಾಡಿ ಜಾನಪದ ಸಾಹಿತ್ಯವನ್ನು ದಾಖಲೀಕರಣದ ಮೂಲಕ ಉಳಿಸುವ ಅಗತ್ಯತೆ ಬಂದಿದೆ, ಗ್ರಂಥ ರೂಪದಲ್ಲಿ ಇದನ್ನು ತರುವುದು ಬಹಳಷ್ಟು ಮುಖ್ಯವಾಗಿದೆ ಎಂದು ಹೇಳಿದರು.

ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕ ಜಿಲ್ಲಾ ಗೌರವಾಧ್ಯಕ್ಷೆ ಸವಿತಾ ಸತ್ಯನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪುಷ್ಪ ಅವರಿಗೆ ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾಗಿ ಪದವಿ ಪ್ರಧಾನ ಮಾಡಲಾಯಿತು, ನಿಕಟಪೂರ್ವ ಅಧ್ಯಕ್ಷೆ ವಿಜಯಕುಮಾರಿ ಅವರಿಗೆ ಜಿಲ್ಲಾ ಘಟಕದ ಸಂಘಟನಾ ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು, ಮಹೇಶ್ ಅವರಿಗೆ ಜಾನಪದ ಯುವ ಬ್ರಿಗೇಡ್ ಸಂಚಾಲಕ ಪದಪತ್ರ ನೀಡಲಾಯಿತು.ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕಲಾವಿದೆ ಲಕ್ಷ್ಮೀದೇವಮ್ಮ ಮಾತನಾಡಿದರು,

ಕನ್ನಡ ಜಾನಪದ ಪರಿಷತ್
ರಾಮನಗರ ಜಿಲ್ಲಾಧ್ಯಕ್ಷ
ಕೆ ಸಿ ಕಾಂತಪ್ಪ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಪ್ರತಿಮ ಸೋಮಶೇಖರ್, ಜಿಲ್ಲಾ ಸಂಚಾಲಕಿ ಆಶಾ ನವೀನ್, ರಂಜಿತಾ, ಉಪಸ್ಥಿತರಿದ್ದರು.

ಜಾನಪದ ಮಹಿಳಾ ಪ್ರಧಾನವಾದದ್ದು-ಡಾ ಜಾನಪದ ಎಸ್ ಬಾಲಾಜಿ Read More

ಉತ್ತರ ಕನ್ನಡ ಜಿಲ್ಲೆ ಜಾನಪದ ಕಣಜ-ಡಾ ಜಾನಪದ ಎಸ್ ಬಾಲಾಜಿ

ಉತ್ತರ ಕನ್ನಡ,ಏ.5: ಉತ್ತರ ಕನ್ನಡ ಜಿಲ್ಲೆ ಜಾನಪದ ಕಣಜ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಹಾಗೂ ಭಾರತ ಸರ್ಕಾರದ ಐಸಿಸಿಆರ್ ಸದಸ್ಯರಾದ ಡಾ ಜಾನಪದ ಎಸ್ ಬಾಲಾಜಿ ತಿಳಿಸಿದರು.

ಕಾರವಾರ ನಗರದ ದಿವಾಕರ್ ಪದವಿ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಿದ ಕನ್ನಡ ಜಾನಪದ ಪರಿಷತ್ ಉತ್ತರ ಕನ್ನಡ ಜಿಲ್ಲಾ ಘಟಕದ ಪರ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಾನಪದ ಕ್ಕೆ ಇತಿಮಿತಿ ಹಾಗೂ ಚೌಕಟ್ಟಿಲ್ಲ, ಇದು ಅವಿನಾಶಿ, ಗ್ರಾಮೀಣ ಭಾಗದ ಮೂಲ ಕಲೆಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಕನ್ನಡ ಜಾನಪದ ಪರಿಷತ್ ಸ್ಥಾಪನೆಯಾಗಿದ್ದು ಉತ್ತರಕನ್ನಡ ಜಿಲ್ಲೆಯಲ್ಲಿ ಜಿಲ್ಲಾ ಪ್ರಥಮ ಕನ್ನಡ ಜಾನಪದ ಸಮ್ಮೇಳನವನ್ನು ಏರ್ಪಡಿಸಲಾಗುವುದು ಹಾಗೂ ಮೂಲ ಕಲಾವಿದರ ಸಮೀಕ್ಷೆಯನ್ನು ಸಹ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಎಸ್ ಪಿ ಕಾಮತ್, ಜಾನಪದದಲ್ಲಿ ಸಂಸ್ಕಾರವಿದೆ, ಮನುಷ್ಯರ ಭಾವನೆಗಳನ್ನು ಹೊಂದಾಣಿಕೆ ಮಾಡುವ ಗುಣವಿದೆ ಇದನ್ನು ಉಳಿಸಿ ಬೆಳೆಸುವುದು ಎಲ್ಲ ಯುವಜನರ ಕರ್ತವ್ಯ ಎಂದು ಹೇಳಿದರು.

ಪ್ರಸ್ತಾವಕವಾಗಿ ಮಾತನಾಡಿದ ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಾ ಪ್ರಕಾಶ್ ಬಿ ನಾಯಕ ಉತ್ತರ ಕನ್ನಡ ಜಿಲ್ಲೆಯ ಮೂಲ ಜನಪದ ಕಲಾವಿದರ ಕೈಪಿಡಿಯನ್ನು ತರಲಾಗುವುದು ಹಾಗೂ ದಾಖಲೀಕರಣ ಹಾಗೂ ತರಬೇತಿಯನ್ನು ಜಿಲ್ಲಾಧ್ಯಂತ ಏರ್ಪಡಿಸುವ ಮೂಲಕ ಯುವಜನರಲ್ಲಿ ಜಾನಪದ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.

ನಾಟಿ ವೈದ್ಯರಾದ ಅಂಕೋಲಾ ತಾಲೂಕಿನ ಬೆಳಂಬರಿನ ಹನುಮಂತ್ ಬಮ್ಮಗೌಡ ಅವರನ್ನು ಗೌರವಿಸಲಾಯಿತು.

ಉತ್ತರ ಕನ್ನಡ ಜಿಲ್ಲೆಯ ಕನ್ನಡ ಜಾನಪದ ಪರಿಷತ್ ಪದಾಧಿಕಾರಿಗಳಿಗೆ ರಾಜ್ಯಾಧ್ಯಕ್ಷ ಜಾನಪದ ಎಸ್ ಬಾಲಾಜಿ ಪದವಿ ಪ್ರದಾನ ಮಾಡಿದರು.

ಹಿರಿಯ ನ್ಯಾಯವಾದಿಗಳಾದ ನಾಗರಾಜ್ ನಾಯಕ್, ಸೆಂಟ್ ಮಿಲ ಗ್ರಿಸ್ ಕಾರ್ಪೊರೇಟಿವ್ ಬ್ಯಾಂಕಿನ ವ್ಯವಸ್ಥಾಪ ನಿರ್ದೇಶಕ ಜಾರ್ಜ್ ಫರ್ನಾಂಡಿಸ್ ಮಾತನಾಡಿದರು.

ಕುಮಟಾ ತಾಲೂಕಿನ ಗೊಮಟೆ ಪಾಂಗ್ ತಂಡ, ಕೆಪಿಎಸ್ ಶಿರವಾಡದ ಪ್ರಾಥಮಿಕ ಶಾಲಾ ಮಕ್ಕಳು ಹಾಗೂ ದಿವಾಕರ್ ಕಾಲೇಜಿನ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಮನಸೂರೆಗೊಂಡವು.

ದಿವಾಕರ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಕೇಶವ್ ಭಟ್ ಸ್ವಾಗತಿಸಿದರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಮರಾಠ ವಂದಿಸಿದರು.

ಉತ್ತರ ಕನ್ನಡ ಜಿಲ್ಲೆ ಜಾನಪದ ಕಣಜ-ಡಾ ಜಾನಪದ ಎಸ್ ಬಾಲಾಜಿ Read More