ಮೈಸೂರಿನ ಜೈಲ್ ಗೆ ದಿಢೀರ್ ದಾಳಿ ಮಾಡಿದ ಪೊಲೀಸರು

ಮೈಸೂರು: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೋಜು ಮಸ್ತಿ ಕುರಿತು ಸುದ್ದಿ ಹರಡುತ್ತಿದ್ದಂತೆ ಮೈಸೂರು ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ.

ಮೈಸೂರಿನ ಕಾರಾಗೃಹಕ್ಕೆ ಬೆಳ್ಳಂಬೆಳಿಗ್ಗೆ ಪೊಲೀಸರು ದಿಢೀರ್ ದಾಳಿ ಮಾಡಿ ಪರಿಶೀಲನೆ ನಡೆಸಿದರು.

ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಬಿಂದುಮಣಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ಬಿಂದುಮಣಿ ಅವರಿಗೆ ಎಸಿಪಿಗಳು ಹಾಗೂ ವಿವಿಧ ಠಾಣೆಯ ನಿರೀಕ್ಷಕರು ಸಾಥ್ ನೀಡಿದರು.

ಒಂದೆಡೆ ಗೃಹಸಚಿವ ಪರಮೇಶ್ವರ್ ಮೈಸೂರಿನ ನಜರಬಾದ್ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದರೆ ಮತ್ತೊಂದೆಡೆ ಪೊಲೀಸರು ಜೈಲಿನ ಮೇಲೆ ದಾಳಿ ನಡೆಸಿ ಕುತೂಹಲ ಮೂಡಿಸಿದ್ದಾರೆ.

ಮೈಸೂರಿನ ಜೈಲ್ ಗೆ ದಿಢೀರ್ ದಾಳಿ ಮಾಡಿದ ಪೊಲೀಸರು Read More

ಪೆರೋಲ್ ಮೇಲೆ ತೆರಳಿದ್ದ ಸಜಾ ಖೈದಿ ನಾಪತ್ತೆ: ಎಫ್ಐಆರ್

ಮೈಸೂರು: ಪೆರೋಲ್ ರಜೆ ಮೇಲೆ ಜೈಲಿನಿಂದ ಹೋಗಿದ್ದ ಸಜಾ ಖೈದಿ ನಾಪತ್ತೆಯಾದ ಘಟನೆ ಮೈಸೂರು ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.

ಸಜಾ ಖೈದಿಯನ್ನ ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಕಾರಾಗೃಹದ ಅಧೀಕ್ಷಕರಾದ ಮೋಹನ್ ಕುಮಾರ್ ಅವರು ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ವಿವಿದ ಪ್ರಕರಣಗಳಲ್ಲಿ ಸಜಾ ಖೈದಿಯಾಗಿರುವ ಪ್ರಸಾದ್ @ಗೂಂಡಾ ನಾಪತ್ತೆಯಾಗಿದ್ದಾನೆ.

ಬೆಂಗಳೂರು ನ್ಯಾಯಾಲಯ ಹಾಗೂ ಹಾಸನ ಜಿಲ್ಲೆ ಚೆನ್ನರಾಯಪಟ್ಟಣ ನ್ಯಾಯಾಲಯದಲ್ಲಿ ದಾಖಲಾದ ಪ್ರಕರಣಗಳಲ್ಲಿ ಪ್ರಸಾದ್ ಸಜಾ ಖೈದಿಯಾಗಿದ್ದಾನೆ.

ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಯನ್ನೂ ಅನುಭವಿಸುತ್ತಿದ್ದಾನೆ.ಈತನನ್ನ ಹಾಸನ ಕಾರಾಗೃಹದಿಂದ ಮೈಸೂರು ಕೇಂದ್ರ ಕಾರಾಗೃಹಕ್ಕೆ 21-07-2024 ರಂದು ರವಾನಿಸಲಾಗಿತ್ತು.

ಹೈ ಕೋರ್ಟ್ ಆದೇಶದಂತೆ ಪ್ರಸಾದ್ ನನ್ನು ಪೆರೋಲ್ ನಲ್ಲಿ ಬಿಡುಗಡೆ ಮಾಡಿ,
19-09-2025 ರಿಂದ 18-10-2025 ರ ವರೆಗೆ ಒಂದು ತಿಂಗಳ ಪೆರೋಲ್ ರಜೆ ನೀಡಲಾಗಿತ್ತು.

18-10-2025 ರಂದು ಪ್ರಸಾದ್ ವಾಪಸ್ ಬಂದಿಲ್ಲ.ಹಾಗಾಗಿ ಈತನ ವಿರುದ್ದ ಹಾಗೂ ಜಾಮೀನು ನೀಡಿದ ತಂದೆ ಪ್ರಕಾಶ್ ಹಾಗೂ ರಂಜಿತ್ ಕುಮಾರ್ ವಿರುದ್ದ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪೆರೋಲ್ ಮೇಲೆ ತೆರಳಿದ್ದ ಸಜಾ ಖೈದಿ ನಾಪತ್ತೆ: ಎಫ್ಐಆರ್ Read More

ಇಬ್ಬರು ಜೈಲಾಧಿಕಾರಿಗಳ ಅಮಾನತು

ಕಲಬುರಗಿ: ಕಲಬುರಗಿ ಕಾರಾಗೃಹದಲ್ಲಿ ಖೈದಿಗಳಿಗೆ ರಾಜಾತಿಥ್ಯ ನೀಡಿದ ಪ್ರಕರಣ ಸಂಬಂಧ ಇಬ್ಬರು ಜೈಲಾಧಿಕಾರಿಗಳನ್ನು ಅಮಾನತು ಗೊಳಿಸಲಾಗಿದೆ.

ಕರ್ತವ್ಯಲೋಪ ಆರೋಪದಡಿ ಇಬ್ಬರು ಜೈಲರ್ ಗಳಾದ ಸೈನಾಜ್ ನಿಗೆವಾನ್, ಪಾಂಡುರಂಗ ಹರವಾಳ ಅವರನ್ನು ಅಮಾನತುಪಡಿಸಿ ಆದೇಶ ಹೊರಡಿಸಲಾಗಿದೆ
ಎಂದು ಕಲಬುರಗಿ ಜೈಲಿನ ಮುಖ್ಯ ಅಧೀಕ್ಷಕಿ ಡಾ.ಅನಿತಾ ತಿಳಿಸಿದ್ದಾರೆ.

ಕಲಬುರಗಿ ಜೈಲಿನಲ್ಲಿ ಕೈದಿಗಳಿಗೆ ಗಾಂಜಾ, ಮದ್ಯ, ಮೊಬೈಲ್ ಸೇರಿದಂತೆ ವಿವಿಧ ರೀತಿಯ ಸೌಲಭ್ಯಗಳು ನೀಡಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್ ಅಧಿಕರಿಗಳು ಜೈಲಿನ ಮೇಲೆ ದಾಳಿ ನಡೆಸಿ ಪರಿಶೀಲಿಸಿದ್ದರು.

ಕೈದಿಗಳಿಗೆ ಕೆಲ ಸೌಲಭ್ಯ ಕೊಟ್ಟಿದ್ದು ಸಾಬೀತಾದ ಕಾರಣ ಇಬ್ಬರು ಜೈಲಾಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

ಇಬ್ಬರು ಜೈಲಾಧಿಕಾರಿಗಳ ಅಮಾನತು Read More

ದುರ್ಗಾ ಫೌಂಡೇಶನ್ ನಿಂದ ಪವನ್ ಸಿದ್ದರಾಮ ಅವರಿಗೆ ಅಭಿನಂದನೆ ಸಲ್ಲಿಕೆ

ಮೈಸೂರು: ಕರ್ನಾಟಕ ರಾಜ್ಯ ಸರ್ಕಾರದ ಮೈಸೂರು ಕೇಂದ್ರ ಕಾರಾಗೃಹ ಸಂದರ್ಶಕ ಮಂಡಳಿಯ ಸದ್ಯಸರಾಗಿ ನೇಮಕವಾದ ಪವನ್ ಸಿದ್ದರಾಮ ಅವರಿಗೆ ದುರ್ಗಾಪೌಂಡೇಶನ್ ಅಭಿನಂದನೆ ಸಲ್ಲಿಸಿದೆ.

ಮೈಸೂರು ಕೇಂದ್ರ ಕಾರಾಗೃಹ ಸಂದರ್ಶಕ ಮಂಡಳಿಯ ಸದ್ಯಸರಾಗಿ ನೇಮಕರಾದ ಪವನ್ ಸಿದ್ದರಾಮು ಅವರು ಕಾಂಗ್ರೆಸ್ ಪ್ರಚಾರ ಸಮಿತಿ ಸಹ ಕಾರ್ಯದರ್ಶಿ ಕೂಡಾ ಆಗಿದ್ದಾರೆ.

ಶ್ರೀ ದುರ್ಗಾಪೌಂಡೇಶನ್ ವತಿಯಿಂದ ಖಾಸಗಿ ಹೋಟೆಲ್ ನಲ್ಲಿ ಸಮಾರಂಭ ಹಮ್ಮಿಕೊಂಡು ಪವನ್ ಸಿದ್ದರಾಮ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಈ ವೇಳೆ ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್,ದಿ. ಗ್ರಾಜುಯೇಟ್ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕರಾದ ವರಲಕ್ಷ್ಮಿ ಅಜಯ್, ರವಿಚಂದ್ರ, ಮಂಜುನಾಥ್, ರಾಘವೇಂದ್ರ ಜಿ ,ಎಸ್ ಎನ್ ರಾಜೇಶ್ ಮತ್ತಿತರರು ಅಭಿನಂದನೆ ಸಲ್ಲಿಸಿದರು.

ದುರ್ಗಾ ಫೌಂಡೇಶನ್ ನಿಂದ ಪವನ್ ಸಿದ್ದರಾಮ ಅವರಿಗೆ ಅಭಿನಂದನೆ ಸಲ್ಲಿಕೆ Read More

ದರ್ಶನ್ ಅಂಡ್ ಗ್ಯಾಂಗ್ ಗೆ ಮತ್ತೆ 3 ದಿನ ನ್ಯಾಯಾಂಗ ಬಂಧನ ವಿಸ್ತರಿಸಿದ ಕೋರ್ಟ್

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್‌ ಮತ್ತು ಗ್ಯಾಂಗ್‌ಗೆ ಕೋರ್ಟ್ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿ ಆದೇಶ ಹೊರಡಿಸಿದೆ.

ದರ್ಶನ್ ಅಂಡ್ ಗ್ಯಾಂಗ್ ಗೆ ಸೆ.12ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿ ಕೋರ್ಟ್ ಆದೇಶಿಸಿದೆ. ಮಧ್ಯಾಹ್ನ 1.15ಕ್ಕೆ ವೀಡಿಯೋ ಕಾನ್ಫರೆನ್ಸ್ ಮೂಲಕ 17 ಆರೋಪಿಗಳನ್ನು ವಿಚಾರಣೆಗೆ ಹಾಜರುಪಡಿಸಲಾಯಿತು.

ಬಳ್ಳಾರಿ ಜೈಲಿನಿಂದ ವೀಡಿಯೋ ಕಾನ್ಫರೆನ್ಸ್‌ಗೆ ಆರೋಪಿ ದರ್ಶನ್ ಬಂದಿದ್ದರು.

ಪ್ರಕರಣದ ಹಾರ್ಡ್ ಡಿಸ್ಕ್, ಪೆನ್‌ಡ್ರೈವ್ ಎಲ್ಲವನ್ನೂ ಕೋರ್ಟ್‌ಗೆ ಎಸ್‌ಪಿಪಿ ಪ್ರಸನ್ನಕುಮಾರ್ ಸಲ್ಲಿಕೆ ಮಾಡಿದರು. ಡಿಜಿಟಲ್ ಎವಿಡೆನ್ಸ್ 2 ವಾರದಲ್ಲಿ ಕೊಡುವುದಾಗಿ ತಿಳಿಸಿದರು.

ವಿಚಾರಣೆ ವೇಳೆ, ಜೈಲಿಗೆ ಚಾರ್ಜ್‌ಶೀಟ್‌ ಕಳಿಸುತ್ತೇವೆ ಎಂದು ಎಸ್‌ಪಿಪಿ ಪ್ರಸನ್ನಕುಮಾರ್ ಕೋರ್ಟ್‌ಗೆ ಮನವಿ ಮಾಡಿದರು. ಆದರೆ ಆರೋಪಿಗಳ ಪರ ವಕೀಲರು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ನ್ಯಾಯಾಧೀಶರು ಆರೋಪಿಗಳ ಬಳಿಯೇ ವಕೀಲರ ಹೆಸರು ಕೇಳಿದರು. ಸಿ.ವಿ.ನಾಗೇಶ್ ನನ್ನ ಪರ ಹಾಜರಾಗುತ್ತಿದ್ದಾರೆ ಎಂದು ದರ್ಶನ್ ತಿಳಿಸಿದರು.

ಉಳಿದ ಆರೋಪಿಗಳು ತಮ್ಮ ಪರ ವಾದ ಮಂಡಿಸುವ ವಕೀಲರ ಹೆಸರು ಹೇಳಿದರು. ವಾದ-ಪ್ರತಿವಾದ ಆಲಿಸಿದ ಕೋರ್ಟ್ ಮತ್ತೆ ಮೂರು ದಿನಗಳ ಕಾಲ ನ್ಯಾಯಾಂಗ ಬಂಧನ ವಿಸ್ತರಿಸಿ ಆದೇಶ ಹೊರಡಿಸಿತು.

ದರ್ಶನ್ ಅಂಡ್ ಗ್ಯಾಂಗ್ ಗೆ ಮತ್ತೆ 3 ದಿನ ನ್ಯಾಯಾಂಗ ಬಂಧನ ವಿಸ್ತರಿಸಿದ ಕೋರ್ಟ್ Read More

ದರ್ಶನ್ ಗಿಲ್ಲ ಗಣೇಶನ ದರ್ಶನ,ಪೂಜೆ ಭಾಗ್ಯ

ಬಳ್ಳಾರಿ: ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ಗಣೇಶ ಚತುರ್ಥಿ ಆಚರಿಸಿದರೂ ಕೂಡಾ ಆರೋಪಿ ದರ್ಶನ್‌ಗೆ ಗಣೇಶನ ದರ್ಶನ ಭಾಗ್ಯ ಸಿಗದಂತಾಗಿದೆ.

ಜೈಲು ಒಳಭಾಗದಲ್ಲಿ ಬಾಳೆ ಕಂಬ, ಬಲೂನ್, ಲೈಟಿಂಗ್, ಹಣ್ಣು, ಚಿತ್ತಾರದ ಹಾಳೆಯ ಅಲಂಕಾರದೊಂದಿಗೆ ಗಣೇಶ ಮೂರ್ತಿ ಪ್ರತಿಷ್ಟಾಪಿಸಲಾಯಿತು.

ಗಣೇಶ ಕೂರಿಸುವುದು ಜೈಲು ಸಿಬ್ಬಂದಿ ಮಾತ್ರ. ಆದರೆ, ಪ್ರತಿ ವರ್ಷ ಎಲ್ಲಾ ಕೈದಿಗಳು ಸೇರಿ ಅದ್ದೂರಿಯಾಗಿ ಅಲಂಕಾರ ಮಾಡಿ ಹಬ್ಬ ಮಾಡುತ್ತಿದ್ದರು.

ಈ ವರ್ಷ ದರ್ಶನ್ ಜೈಲಿನಲ್ಲಿರುವ ಹಿನ್ನೆಲೆ ಸರಳವಾಗಿ ಆಚರಣೆ ಮಾಡಲಾಗುತ್ತಿದೆ. ಗಣೇಶನ ದರ್ಶನ ಮಾಡಿ ಕೈ ಮುಗಿದು ಪ್ರಾರ್ಥನೆ ಮಾಡಲು ಮಾತ್ರ ಅವಕಾಶ ನೀಡಲಾಗಿದೆ. ಜೈಲಿನಲ್ಲಿ ಯಾವುದೇ ಸಾಂಸ್ಕೃತಿಕ ಚಟುವಟಿಕೆಗೆ ಅವಕಾಶ ನೀಡಿಲ್ಲ.

ಜೈಲಿನಲ್ಲಿ 3 ಅಡಿ ಎತ್ತರದ ಇಲಿಯ ಮೇಲೆ ಕುಳಿತಿರುವ ವಿಘ್ನೇಶ್ವರನ ಮಣ್ಣಿನ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಹೈ ಸೆಕ್ಯುರಿಟಿ ಸೆಲ್‌ನಲ್ಲಿ ಆರೋಪಿ ದರ್ಶನ್ ಸೇರಿದಂತೆ ಇತರೆ ಮೂರು ಕೈದಿಗಳಿದ್ದಾರೆ.ದರ್ಶನ್ ಸೇರಿ ಹೈ ಸೆಕ್ಯೂರಿಟಿ ಸೆಲ್‌ನಲ್ಲಿರುವ ಯಾವೊಬ್ಬ ಕೈದಿಗೂ ಗಣೇಶ ಪೂಜೆಗೆ ಅವಕಾಶ ನೀಡಲಾಗಿಲ್ಲ.

ದರ್ಶನ್ ಗಿಲ್ಲ ಗಣೇಶನ ದರ್ಶನ,ಪೂಜೆ ಭಾಗ್ಯ Read More