ಜೆ ಎಸ್ ಜಗದೀಶ್ ಸ್ನೇಹ ಬಳಗದಿಂದ ಪರಿಸರ ದಿನಾಚರಣೆ.
ಮೈಸೂರು: ಮೈಸೂರಿನ ಜೆ ಎಸ್ ಜಗದೀಶ್ ಸ್ನೇಹ ಬಳಗದ ವತಿಯಿಂದ ನಿವೇದಿತಾ ನಗರ ಸುಬ್ಬರಾವ್ ಉದ್ಯಾನವನದಲ್ಲಿ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಸುಬ್ಬರಾವ್ ಉದ್ಯಾನವನದಲ್ಲಿ ಗಿಡ ನೆಟ್ಟು ನೀರು ಹಾಕುವ ಮೂಲಕ ಪರಿಸರ ಸಂರಕ್ಷಣೆ ಮಾಡಲು ಮುಖಂಡರು ನಿರ್ಧರಿಸಿದರು.
ಕಾರ್ಯಕ್ರಮದಲ್ಲಿ ನಗರ ಪಾಲಿಕೆ ಮಾಜಿ ಸದಸ್ಯ ಜೆ ಎಸ್ ಜಗದೀಶ್,ಡಾ. ರವೀಂದ್ರ, ನಿರಂಜನ್, ಶಿವಣ್ಣೇಗೌಡ,
ಮುಖಂಡರಗಳಾದ ಶ್ರೀನಿವಾಸ್, ಸತ್ಯಾನಂದ, ಬಿಟ್ಟು, ಲೋಹಿತ್, ಶರ್ಮ, ಪ್ರಸನ್ನ ಕುಮಾರ್ ಹಾಗೂ
ಬಡಾವಣೆಯ ಹಿರಿಯ ನಾಗರಿಕರು ಪಾಲ್ಗೊಂಡಿದ್ದರು.