ಫೆ.1,2 ರಂದು ಪರಿದೃಶ್ಯ ಅಂತರಾಷ್ಟ್ರೀಯ ಕಿರುಚಿತ್ರ, ಸಾಕ್ಷ್ಯಚಿತ್ರೋತ್ಸವ

ಮೈಸೂರು: ಮೈಸೂರು ಸಿನಿಮಾ ಸೊಸೈಟಿ ಮತ್ತು ಭಾರತೀಯ ಚಿತ್ರ ಸಾಧನದ ಸಹಯೋಗದೊಂದಿಗೆ ಫೆಬ್ರವರಿ 1 ಮತ್ತು 2 ರಂದು ಪರಿದೃಶ್ಯ ಅಂತರಾಷ್ಟ್ರೀಯ ಕಿರುಚಿತ್ರ, ಸಾಕ್ಷ್ಯಚಿತ್ರೋತ್ಸವ ಹಮ್ಮಿಕೊಳ್ಳಲಾಗಿದೆ.

ಕರ್ನಾಟಕ ಮುಕ್ತ ವಿಶ್ವವಿದ್ಯಾಲದ ಆವರಣದಲ್ಲಿರುವ ಕಾವೇರಿ ಮತ್ತು ನಳ ಸಭಾಂಗಣದಲ್ಲಿ ಈ ಸಮಾರಂಭ ನಡೆಯಲಿದೆ.

ಖ್ಯಾತ ನಟ,ನಿರ್ದೇಶಕ ಪ್ರಕಾಶ್ ಬೆಳವಾಡಿ, ಬರಹಗಾರ ಮನೇಕ್ ಪ್ರೇಮಚಂದ್ ಮತ್ತು ಕೆಎಸ್ಒಯು ಉಪಕುಲಪತಿ ಶರಣಪ್ಪ ಹಲಸೆ ಅವರು ಉದ್ಘಾಟಿಸಲಿದ್ದಾರೆ.

ಪರಿದೃಶ್ಯ ಚಿತ್ರೋತ್ಸವಕ್ಕೆ ಪ್ರಪಂಚದಾದ್ಯಂತ 109 ದೇಶಗಳಿಂದ 3123 ಕಿರು ಮತ್ತು ಸಾಕ್ಷ್ಯಚಿತ್ರಗಳು ಬಂದಿವೆ.

ಈ ಚಿತ್ರಗಳಲ್ಲಿ ಆಯ್ಕೆಯಾದ ಸಿನಿಮಾಗಳಿಗೆ 26 ವರ್ಗಗಳ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಭಾರತದಿಂದ 985 , ಇರಾನ್ ಇಂದ 413, ಸ್ಪೇನ್ ಇಂದ 138, ಫ್ರಾನ್ಸ್ 137, ಬ್ರೆಜಿಲ್ 108,ಚೀನಾ 99,ಇಂಡೋನೇಷಿಯಾ 91, ಟರ್ಕಿ 88, USA 82 , ಇಟಲಿ 81 ಮುಂತಾದ ದೇಶಗಳಿಂದ 3123 ಸಿನಿಮಾಗಳು ಬಂದಿವೆ. ಕನ್ನಡದ ಒಟ್ಟು 73 ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರಗಳು ಸೇರಿವೆ.

ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಕೇಂದ್ರ ಸಚಿವರಾದ ಡಾ.ಎಲ್.ಮುರುಗನ್ ಅವರು ಉಪಸ್ಥಿತರಿರುವರು.

ಫೆ.1,2 ರಂದು ಪರಿದೃಶ್ಯ ಅಂತರಾಷ್ಟ್ರೀಯ ಕಿರುಚಿತ್ರ, ಸಾಕ್ಷ್ಯಚಿತ್ರೋತ್ಸವ Read More

ಡಿ 29 ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ :ಪೋಸ್ಟರ್ ಬಿಡುಗಡೆ ಮಾಡಿದ ಡಾಲಿ

ಮೈಸೂರು: ಇದೇ‌ ಡಿ. 29 ರಂದು ಮೈಸೂರಿನಲ್ಲಿ ಜೆ ಕೆ ಮೈದಾನದಲ್ಲಿ ಮೇಕ್ ಸೊಸೈಟಿ ಸ್ಮೈಲ್ ಫೌಂಡೇಶನ್ ವತಿಯಿಂದ 4ನೇ ಮೈಸೂರು ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ 2024 ಆಯೋಜಿಸಲಾಗಿದೆ.

ಜತೆಗೆ ಇದೇ ಮೊದಲ ಬಾರಿಗೆ ಚಿತ್ರಸಂತೆ ಯನ್ನು ಕೂಡಾ ಹಮ್ಮಿಕೊಳ್ಳಲಾಗಿದೆ.

ಫಿಲ್ಮ್ ಫೆಸ್ಟಿವಲ್ ಮತ್ತು ಚಿತ್ರಸಂತೆ ಪ್ರಚಾರದ ಪೋಸ್ಟರ್ ಗಳನ್ನು ಸ್ಯಾಂಡಲ್ ವುಡ್ ಖ್ಯಾತ ನಟ ಡಾಲಿ ಧನಂಜಯ ಬಿಡುಗಡೆಗೊಳಿಸಿ
ಶುಭ ಹಾರೈಸಿದರು.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಚಿತ್ರ ಸಂತೆ ನಡೆಯುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಡಾಲಿ, ಹೆಚ್ಚಿನ ಕಲಾ ಪ್ರೇಮಿಗಳು ಆಗಮಿಸಿ ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು,

ಮೈಸೂರು ಅಂತರಾಷ್ಟ್ರೀಯ ಚಲನಚಿತ್ರ ಉತ್ಸವದ ಆಯೋಜಕರಾದ ರಂಜಿತಾ ಸುಬ್ರಮಣ್ಯ ಮಾತನಾಡಿ,ಕಳೆದ 4 ವರ್ಷದಿಂದ ಸಿನಿ ಸಂತೆ ಆಯೋಜಿಸುತ್ತಾ ಬಂದಿದೆ ಎಂದು ‌ತಿಳಿಸಿದರು.

ಉದಯೋನ್ಮುಖ ಚಲನಚಿತ್ರ ನಿರ್ಮಾಪಕರಿಗೆ ಮೈಸೂರು ಅಂತರರಾಷ್ಟ್ರೀಯ ಚಲನಚಿತ್ರ ಉತ್ಸವ ಮತ್ತು ಸಿನಿ ಸಂತೆ ಫಿಲ್ಮ್ ಕಾರ್ನಿವಲ್ ನಲ್ಲಿ ಪ್ರೇಕ್ಷಕರೊಂದಿಗೆ ನೇರವಾಗಿ ಸಂಪರ್ಕಿಸಿ ನಿಮ್ಮ ಮುದ್ರೆಯನ್ನು ಮೂಡಿಸುವ ಅವಕಾಶ ಇಲ್ಲಿದೆ ಎಂದು ಕರೆ ನೀಡಿದರು.

ಈ ವಿಶಿಷ್ಟ ವೇದಿಕೆ, ನಿಮ್ಮ ಕ್ರಿಯಾಶೀಲತೆಯನ್ನು ಪ್ರದರ್ಶಿಸಲು ಮತ್ತು ಚಲನಚಿತ್ರ ಪ್ರೇಮಿಗಳ, ಪ್ರಭಾವಶಾಲಿಗಳ ಮತ್ತು ಉದ್ಯಮ ವೃತ್ತಿಪರರ ಮುಂದೆ ನಿಮ್ಮ ಪ್ರಾಜೆಕ್ಟ್ ಅನ್ನು ಪ್ರಚಾರ ಮಾಡಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.

ಈ ವರ್ಷ ವಿಶೇಷವಾಗಿ ಸಾರ್ವಜನಿಕರಿಗೆ ಗಾಯನ ಸ್ಪರ್ಧೆ, ಮಕ್ಕಳಿಗೆ ಅಲಂಕಾರಿಕ ಹುಡುಗಿ ಸ್ಪರ್ಧೆ ಹಾಗೂ ಚಿತ್ರಕಲಾ ಸ್ಪರ್ಧೆ ಆಯೋಜಿಸುತ್ತಿದ್ದು ಪ್ರತಿ ವಿಭಾಗದ ಮೂರು ಸ್ಪರ್ಧೆಯ ವಿಜೇತರಿಗೆ ಆಕರ್ಷಕ ಬಹುಮಾನ ನೀಡಲಾಗುವುದು ಹಾಗೂ ಸಿನಿ ಸಂತೆಯಲ್ಲಿ
ವಿವಿಧ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳನ್ನು ತೆರಿಯಲಾಗುವುದು.

ಹೆಚ್ಚಿನ ಮಾಹಿತಿಗಾಗಿ
6360959871/6364632425 ನಂಬರಿಗೆ ಸಂಪರ್ಕಿಸಬಹುದು ಎಂದು ತಿಳಿಸಿದರು

ಈ ಸಂದರ್ಭದಲ್ಲಿ ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್, ಸಂಪರ್ಕಾಧಿಕಾರಿ ಶಂಕರ್ ಎಸ್‌.ಎನ್, ಉದ್ಯಮಿ ಗಗನ್ ದೀಪ್,
ಸಿನಿ ಸಂತೆ ನಿರ್ದೇಶಕಿ ಮತ್ತು ಸಂಸ್ಥಾಪಕಿ ಸಂಧ್ಯಾ ರಾಣಿ, ಐಶ್ವರ್ಯ ಜಿ ಪ್ರಸಾದ್, ಹರ್ಷ, ರೂಪ ಮತ್ತಿತರರು ಹಾಜರಿದ್ದರು.

ಡಿ 29 ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ :ಪೋಸ್ಟರ್ ಬಿಡುಗಡೆ ಮಾಡಿದ ಡಾಲಿ Read More

4ನೆ ಮೈಸೂರು ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ಡಿಸೆಂಬರ್ ನಲ್ಲಿ

ಮೈಸೂರು: 4ನೇ ಮೈಸೂರು ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ಇದೇ ಡಿಸೆಂಬರ್ ನಲ್ಲಿ ನಡೆಯಲಿದೆ ಎಂದು ಫೆಸ್ಟಿವಲ್ ಸಂಸ್ಥಾಪಕಿ ಹಾಗೂ ನಿರ್ದೇಶಕಿ ರಂಜಿತಾ ಸುಬ್ರಹ್ಮಣ್ಯ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ರಂಜಿತಾ ಈ ವರ್ಷ ಸುಮಾರು 200 ಕ್ಕೂ ಹೆಚ್ಚು ದೇಶ ವಿದೇಶಗಳಿಂದ ಸಿನಿಮಾಗಳು ಭಾಗವಹಿಸಿತ್ತಿದೆ ಇದು ಹೆಮ್ಮೆಯ ವಿಚಾರ ಎಂದು ಹೇಳಿದರು.

ಇದೇ‌ ವೇಳೆ ವಿದ್ವಾತ್ ಇನ್ಫ್ರಾ ಪ್ರೈವೇಟ್ ಲಿಮಿಟೆಡ್ ಹಾಗೂ ಮೈಸೂರು ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ನ ಟೈಟಲ್ ಸ್ಫಾನ್ಸರ್ಸ್ ಹಾಗೂ ಇದರ ಮಾಲೀಕ ಸೋಮಶೇಖರ್ ನಾಯಕ್ ಕಾರ್ಯಕ್ರಮ ಯಶಸ್ವಿಯಾಗಿಲಿ ತಂಡದ ಜೊತೆ ಕಾರ್ಯ ನಿರ್ವಹಿಸುತ್ತಿರುವುದು ನಮಗೆ ಖುಷಿ ತಂದಿದೆ ಎಂದು ತಿಳಿಸಿದರು.

ತಂಡದ ನಿರ್ದೇಶಕರು ಹಾಗೂ ಸಹ ಸಂಸ್ಥಾಪಕ ದುರ್ಗ ಪ್ರಸಾದ್, ನಿರ್ದೇಶಕ ಇಂದ್ರ ನೈರ್ ಹಾಗೂ ಅಮರ್ ನಾರಾಯಣ್ ಉಪಸ್ಥಿತರಿದ್ದರು.

4ನೆ ಮೈಸೂರು ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ಡಿಸೆಂಬರ್ ನಲ್ಲಿ Read More