ನ. 29 ರಂದು ಅಂಬೇಡ್ಕರ್ ಭವನ ಲೋಕಾರ್ಪಣೆ:ಆನಂದ್ ಮೂರ್ತಿ

ಕೊಳ್ಳೇಗಾಲ: ಇದೇ ನವಂಬರ್ 29 ರಂದು ಪಟ್ಟಣದ ಜನತೆಯ ಬಹುನಿರೀಕ್ಷಿತ ಅಂಬೇಡ್ಕರ್ ಭವನ ಲೋಕಾರ್ಪಣೆಗೊಳ್ಳಲಿದೆ ಎಂದು ಡಾ. ಅಂಬೇಡ್ಕರ್ ಸ್ಮಾರಕ ಸಂಘದ ಅಧ್ಯಕ್ಷ ಆನಂದ್ ಮೂರ್ತಿ ತಿಳಿಸಿದರು.

ಪಟ್ಟಣದ ನೂತನ ಅಂಬೇಡ್ಕರ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪಟ್ಟಣದ ಭೀಮನಗರದ ಬಹು ದಿನಗಳ ಕನಸು ಈ ತಿಂಗಳ ಅಂತ್ಯದಲ್ಲಿ ನನಸಾಗುವ ಕಾಲ ಕೂಡಿಬಂದಿದೆ. ಕಳೆದ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಅಂಬೇಡ್ಕರ್ ಭವನ ಉದ್ಘಾಟನೆ ಆಗುತ್ತಿರುವುದು ಸಮುದಾಯದ ಜನರಲ್ಲಿ ಹರ್ಷ ತಂದಿದೆ ಎಂದು ತಿಳಿಸಿದರು.

ಎಲ್ಲಾ ಕಾರ್ಯಕ್ರಮಗಳು ಕೊಳ್ಳೇಗಾಲ ಶಾಸಕ ಎ.ಆರ್ ಕೃಷ್ಣಮೂರ್ತಿ ಅವರ ಘನ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಚನ್ನಾಲಿಂಗನಹಳ್ಳಿ ಚೇತವನದ ಮನೋರಕಿತ ಬಂತೆ ಜಿ, ಮೈಸೂರಿನ ಉರಿಲಿಂಗಿ ಪೆದ್ದಿ ಮಠದ ಜ್ಞಾನ ಪ್ರಕಾಶ್ ಸ್ವಾಮೀಜಿಗಳು ದಿವ್ಯ ಸಾನ್ವಿಧ್ಯ ವಹಿಸಲಿದ್ದಾರೆ.

ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ನವರು ಭವನವನ್ನು ಉದ್ಘಾಟಿಸಲಿದ್ದಾರೆ, ಗೃಹ ಸಚಿವ ಜಿ ಪರಮೇಶ್ವರ್ ಅವರು ಮುಖ್ಯ ಭಾಷಣಕಾರರಾಗಿ ಆಗಮಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ, ಸಂಸದ ಸುನಿಲ್ ಬೋಸ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಬೆಳಿಗ್ಗೆ ಭೀಮನಗರದಿಂದ ಮೆರವಣಿಗೆ ಹೊರಟು ಅಂಬೇಡ್ಕರ್ ಪುತ್ತಳಿಗೆ ಮಾಲಾರ್ಪಣೆ ಮಾಡಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ, ಅಂಬೇಡ್ಕರ್ ಭವನ ತಲುಪಲಿದೆ. ನಂತರ ಭವನ ಉದ್ಘಾಟನೆ ಗೊಳ್ಳಲಿದ್ದು
ವೇದಿಕೆ ಕಾರ್ಯಕ್ರಮಗಳು ನಡೆಯಲಿದೆ. ಇದು ಭೀಮ ನಗರದ ಹೆಮ್ಮೆಯ ಕಾರ್ಯಕ್ರಮವಾಗಿದ್ದು ಸಮುದಾಯದ ಮುಖಂಡರು ಯಜಮಾನರು ಭವನ ಉದ್ಘಾಟನೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಉತ್ಸುಕರಾಗಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಹಾಲಿ ಹಾಗೂ ಮಾಜಿ ಶಾಸಕರುಗಳು ಚುನಾಯಿತ ಪ್ರತಿನಿಧಿಗಳು ವಿವಿಧ ಸಮುದಾಯಗಳ ಮುಖಂಡರು ಹಾಗೂ ಜಿಲ್ಲೆಯ ಎಲ್ಲಾ ಅಂಬೇಡ್ಕರ್ ಸಂಘಗಳ ಪದಾಧಿಕಾರಿಗಳು ಅಂಬೇಡ್ಕರ್ ಅನುಯಾಯಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಭೀಮನಗರದ ಯಜಮಾನರಾದ ಚಿಕ್ಕಮಾಳಿಗೆ ಮಾತನಾಡಿ ಅಂದಿನ ಕಾರ್ಯಕ್ರಮವನ್ನು ಜಿಲ್ಲಾಡಳಿತ ಅಚ್ಚುಕಟ್ಟಾಗಿ ನಡೆಸಲು ಮುಂದಾಗಿದ್ದು ಈಗಾಗಲೇ ಕಾರ್ಯಕ್ರಮಕ್ಕೆ ತಯಾರಿ ನಡೆಸುತ್ತಿದೆ ಎಂದು ತಿಳಿಸಿದರು.

ಜಿಲ್ಲಾಡಳಿತ ನಡೆಸುವ ಕಾರ್ಯಕ್ರಮಕ್ಕೆ ಸಮುದಾಯದ ಮುಖಂಡರು ಯಜಮಾನರು ಸಾಥ್ ನೀಡಲಿದ್ದಾರೆ ನ.29 ರಂದು ಉದ್ಘಾಟನೆಯಾಗಲಿರುವ ಭವನದಲ್ಲಿ ಮುಂದುವರಿದ ಕಾಮಗಾರಿ ನಡೆಯಲಿದ್ದು ಕಾಮಗಾರಿ ಸಂಪೂರ್ಣ ಮುಗಿದ ಬಳಿಕ ಜನವರಿ ನಂತರ ಸಾರ್ವಜನಿಕರ ಸೇವೆಗೆ ದೊರಕಲಿದೆ ಎಂದು ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಅಂಬೇಡ್ಕರ್ ಸಂಘದ ಪ್ರಧಾನ ಕಾರ್ಯದರ್ಶಿ ಪಾಪಣ್ಣ, ಉಪಾಧ್ಯಕ್ಷ ಕಿರಣ್, ಸಹಕಾರ್ಯದರ್ಶಿ ಶಶಿಕುಮಾರ್, ಖಜಾಂಚಿ ರಾಜೇಶ್, ನಿರ್ದೇಶಕರುಗಳಾದ ಎಂ ಮರಿಸ್ವಾಮಿ, ಪಿ ಕೃಷ್ಣರಾಜು, ಮಣಿ, ಪುಟ್ಟಲಿಂಗಯ್ಯ, ಭೀಮನಗರದ ಯಜಮಾನರುಗಳಾದ ಮಹದೇವಸ್ವಾಮಿ, ಆನಂದ್ ಮುಖಂಡರುಗಳಾದ ನಾಗರಾಜು, ಲಿಂಗರಾಜು, ಯುವ ವಕೀಲ ಹರ್ಷ ಮತ್ತಿತರರು ಉಪಸ್ಥಿತರಿದ್ದರು.

ನ. 29 ರಂದು ಅಂಬೇಡ್ಕರ್ ಭವನ ಲೋಕಾರ್ಪಣೆ:ಆನಂದ್ ಮೂರ್ತಿ Read More

ದೈಹಿಕ, ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಬಹುಮುಖ್ಯ-ಶ್ರೀಕಂಠ ಸ್ವಾಮಿ

ನಂಜನಗೂಡು: ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಬಹುಮುಖ್ಯವಾಗಿದೆ ಹಾಗಾಗಿ ಎಲ್ಲ ಯುವಕರು ಕ್ರೀಡೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ನಂಜನಗೂಡು ನಗರಸಭೆ ಅಧ್ಯಕ್ಷ ಶ್ರೀಕಂಠ ಸ್ವಾಮಿ ಕರೆ ನೀಡಿದರು.

ನಂಜನಗೂಡು ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಧ್ವಜಾರೋಹಣ ಮಾಡಿದ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಎಂ ಎಸ್ ರಾಮಪ್ರಸಾದ್ ಅವರು ಮಾತನಾಡಿ, ಪ್ರಸ್ತುತ ಸನ್ನಿವೇಶದಲ್ಲಿ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸುವುದು ಕಡಿಮೆಯಾಗುತ್ತಿದೆ, ಕ್ರೀಡಾ ಸ್ಪೂರ್ತಿ ಇದ್ದರೆ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದಲ್ಲೂ ಕೂಡಾ ಪ್ರಗತಿ ಸಾಧಿಸಬಹುದು ಎಂದು ಹೇಳಿದರು.

ನಗರಸಭಾ ಸದಸ್ಯ ಮಹೇಶ್ ಅತ್ತಿಖಾನೆ ಅವರು ವಿದ್ಯಾರ್ಥಿಗಳಿಗೆ ಕ್ರೀಡಾ ಪ್ರತಿಜ್ಞಾ ವಿಧಿ ಬೋದಿಸಿ ಗೆಲುವು–ಸೋಲು ಸಾಮಾನ್ಯ, ಆದರೆ ಪ್ರತಿಯೊಂದು ಪಂದ್ಯವೂ ಹೊಸ ಪಾಠ ಕಲಿಸುತ್ತದೆ ಎಂದು ತಿಳಿಸಿದರು.

ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಿ.ಆರ್ ದಿನೇಶ್ ಅವರು ಅಧ್ಯಕ್ಷೀಯ ಭಾಷಣ ಮಾಡಿ,ಕ್ರೀಡೆ ಜೀವನದ ಒಂದು ಅವಿಭಾಜ್ಯ ಅಂಗ. ಕ್ರೀಡಾಂಗಣದಲ್ಲಿ ನೀವು ತೋರಿಸುವ ಪರಿಶ್ರಮ, ಶಿಸ್ತು, ಧೈರ್ಯ ಮತ್ತು ತಂಡಭಾವನೆಗಳು ಜೀವನದಲ್ಲಿಯೂ ನಿಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುತ್ತವೆ. ಗೆಲುವು–ಸೋಲು ಸಾಮಾನ್ಯ, ಆದರೆ ಪ್ರತಿಯೊಂದು ಪಂದ್ಯವೂ ಹೊಸ ಪಾಠ ಕಲಿಸುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಂಜನಗೂಡಿನ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಹಿರಿಯ ವ್ಯವಸ್ಥಾಪಕರಾದ ಸಂಜಯ್ ಪಂಗ,ಪ್ರಾಂಶುಪಾಲರಾದ ಚಂದ್ರಶೇಖರಬಾಬು,ಜಾರ್ಜ್,ಕೆಂಡಗಂಡಸ್ವಾಮಿ ,ರೇವಣ್ಣ,ಸೋಮಶೇಕರ್,ಪ್ರವೀಣ್,ನಾಗರಾಜು.ಬಿ.ಎಸ್,ಸರಳ,ಪ್ರಸಾದ್, ಚೆನ್ನಬಸಪ್ಪ ,ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷರಾದ ನಂಜಪ್ಪ,ಉಪನ್ಯಾಸಕರಾದ ಲಿಂಗಣ್ಣ ಸ್ವಾಮಿ, ರಂಗಸ್ವಾಮಿ,ಕ್ರೀಡಾ ಕಾರ್ಯದರ್ಶಿ ಸ್ವಾಮಿ ಗೌಡ, ಟಿ ಕೆ ರವಿ ,ಲೋಕೇಶ್, ವೃಷಭೇಂದ್ರ ಸ್ವಾಮಿ ,ಪ್ರಕಾಶ್,ಅದಿಲ್,ಇಂದ್ರ,ಮಹದೇವಯ್ಯ,ಮಾಲತಿ ಮುಂತಾದವರು ಉಪಸ್ಥಿತರಿದ್ದರು.

ದೈಹಿಕ, ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಬಹುಮುಖ್ಯ-ಶ್ರೀಕಂಠ ಸ್ವಾಮಿ Read More

ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ ಮೂರು ನೂತನ ಕಟ್ಟಡ ಉದ್ಘಾಟನೆ

ಮೈಸೂರು: ಮೈಸೂರಿನ ಶಾರದಾದೇವಿ ನಗರದಲ್ಲಿ ನೂತನವಾಗಿ ಮೈಸೂರು ಮಹಾನಗರ ಪಾಲಿಕೆಯ ವಲಯ ಕಚೇರಿ ಮೂರರ ನೂತನ ಕಟ್ಟಡ ಉದ್ಘಾಟನಾ ಸಮಾರಂಭವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಸಚಿವರುಗಳಾದ ಡಾ ಎಚ್. ಸಿ.ಮಾಹಾದೇವಪ್ಪ, ಬೈರತಿ ಸುರೇಶ್, ಕೆ ವೆಂಕಟೇಶ್, ಶಾಸಕರಾದ ಕೆ.ಹರೀಶ್ ಗೌಡ,
ಜಿ.ಟಿ.ದೇವೇಗೌಡ, ವಿಧಾನಪರಿಷತ್ ಸದಸ್ಯರ ಸಿ. ಎನ್.ಮಂಜೇಗೌಡ, ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ,ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಆಯುಬ್ ಖಾನ್, ಪಾಲಿಕೆ ಆಯುಕ್ತರದ ಶೇಕ್ ತನ್ವೀರ್ ಆಸಿಫ್, ಕೆಪಿಸಿಸಿ ಸದಸ್ಯರಾದ ನಜರ್ ಬಾದ್ ನಟರಾಜ್ ಮತ್ತು ಪಾಲಿಕೆ ಅಧಿಕಾರಿಗಳು ಸಿಬ್ಬಂದಿ ವರ್ಗ ಮತ್ತು ಪಕ್ಷದ ಮುಖಂಡರು ನಾಯಕರಗಳು ಹಾಜರಿದ್ದರು.

ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ ಮೂರು ನೂತನ ಕಟ್ಟಡ ಉದ್ಘಾಟನೆ Read More