ಕೇರಳದ ಲಾಟರಿ ಅಕ್ರಮವಾಗಿ ಮಾರಾಟ ಮಾಡಲು ಸಾಗಣೆ: ಇಬ್ಬರ ಬಂಧನ

ಕೊಳ್ಳೇಗಾಲ: ಕೇರಳದ ಲಾಟರಿಯನ್ನು ಅಕ್ರಮವಾಗಿ ಮಾರಾಟ ಮಾಡಲು ಕಾರಿನಲ್ಲಿ ಸುಮಾರು 2 ಲಕ್ಷ ಮೌಲ್ಯದ ಲಾಟರಿಗಳನ್ನು ಕೊಳ್ಳೇಗಾಲಕ್ಕೆ ತರುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪಟ್ಟಣದ ಮುಸ್ತಾಯಿಮ್(50) ಹಾಗೂ ನಾಗರಾಜು (55) ಎಂಬವರನ್ನು ಕೊಳ್ಳೇಗಾಲ ಪಟ್ಟಣದ ಮುಡಿಗುಂಡ ಬಸ್ ನಿಲ್ದಾಣದ ಬಳಿ ಬಂಧಿಸಲಾಗಿದೆ.

ಈ ಆರೋಪಿಗಳು ಕೇರಳ ರಾಜ್ಯದಿಂದ ಕೊಳ್ಳೇಗಾಲ ಪಟ್ಟಣದ ಕಡೆಗೆ ಕೇರಳದ ಲಾಟರಿಯನ್ನು ಮಾರಾಟ ಮಾಡುವ ಸಲುವಾಗಿ KA-05-MC-3045 ಇಂಡಿಗೋ ಕಾರಿನಲ್ಲಿ ಸುಮಾರು 2 ಲಕ್ಷ ಮೌಲ್ಯದ ಲಾಟರಿಗಳನ್ನು ಕೊಳ್ಳೇಗಾಲಕ್ಕೆ ತರುತ್ತಿದ್ದರು. ಶನಿವಾರ ರಾತ್ರಿ ಸುಮಾರು 10 ಗಂಟೆ ಸಮಯದಲ್ಲಿ ಖಚಿತ ಮಾಹಿತಿ ಮೇರೆಗೆ ಕೊಳ್ಳೇಗಾಲ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.

ದಾಳಿಯಲ್ಲಿ ಪಟ್ಟಣ ಪೊಲೀಸ್ ಠಾಣೆಯ ಪಿಎಸ್ಐ ವರ್ಷ, ತಖೀವುಲ್ಲಾ, ಬಿಳಿ ಗೌಡ, ಕಿಶೋರ್,  ವೆಂಕಟೇಶ್, ಶಿವಕುಮಾರ, ರವಿ, ರಾಜು, ಅನಿಲ ಹಾಗೂ ವೀರೇಂದ್ರ ಅವರುಗಳು ಭಾಗವಹಿಸಿದ್ದರು.

ಕೇರಳದ ಲಾಟರಿ ಅಕ್ರಮವಾಗಿ ಮಾರಾಟ ಮಾಡಲು ಸಾಗಣೆ: ಇಬ್ಬರ ಬಂಧನ Read More